ನೆವಾಡಾ ಡೆಲ್ ಹುಯಿಲಾ
ಗೋಚರ
ನೆವಾಡಾ ಡೆಲ್ ಹುಯಿಲಾ ಇದು ಕೊಲಂಬಿಯಾ ದೇಶದಲ್ಲಿರುವ ಒಂದು ಜ್ವಾಲಾಮುಖಿ. ಇದು ೫,೩೬೫ ಮೀಟರ್[೧] ಎತ್ತರದಲ್ಲಿದ್ದು ಕೊಲಂಬಿಯಾ ದೇಶದಲ್ಲಿರುವ ಅತೀ ಎತ್ತರದ ಜ್ವಾಲಾಮುಖಿ ಎಂದು ಪ್ರಸಿದ್ಧವಾಗಿದೆ.ಇದು ಕಾಲಿ ನಗರದಿಂದ ಕಾಣಿಸುತ್ತದೆ.[೨] ಸುಮಾರು ೫೦೦ ವರ್ಷಗಳ ಕಾಲ ಶಾಂತವಾಗಿದ್ದ ಈ ಜ್ವಾಲಾಮುಖಿಯು ೨೦೦೭ ಮತ್ತು ೨೦೦೮ರಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ತೋರುತ್ತಿದೆ. ಏಪ್ರಿಲ್ ೨೦೦೭ರಲ್ಲಿ ಜ್ವಾಲಾಮುಖಿ ಎರಡು ಬಾರಿ ಸ್ಪೋಟಿಸಿತು,ಮತ್ತೆ ಏಪ್ರಿಲ್ ೨೦೦೮ ಮತ್ತು ನವೆಂಬರ್ ೨೦೦೮ ರಲ್ಲಿ ಸ್ಪೋಟಗೊಂಡಿತು.ಇಲ್ಲಿ ಯಾವುದೇ ಜ್ವಾಲಾಮುಖಿ ಸ್ಪೋಟಗೊಂಡರೂ ಸುತ್ತಮುತ್ತಲಿನ ಸಣ್ಣ ಹಳ್ಳಿಗಳ ಮೇಲೆ ಕೆಟ್ಟ ಪರಿಣಾಂ ಬೀರುತ್ತದೆ.ಅಲ್ಲಿನ ನಿವಾಸಿಗಳಿಗೆ ನೆವಾಡಾ ಡೆಲ್ ರುಯಿಜ್ ಸ್ಪೋಟಗೊಂಡು ಆರ್ಮೆರೊ ನಾಶವಾದ ನೆನಪು ಇನ್ನೂ ಹಸಿರಾಗಿಯೇ ಉಳಿದಿದೆ.