ಸದಾಚಾರ
ಗೋಚರ
ಲಿಂಗಾಯತ ಸಿದ್ದಾಂತದಲ್ಲಿ ಆಚಾರಗಳು ಐದು ವಿಧವಾಗಿವೆ. ಅವು ಪಂಚಾಚಾರಗಳು ಎಂದೇ ಪ್ರಸಿದ್ದಿ.
ಈ ಪಂಚಾಚಾರಗಳಲ್ಲಿ ಎರಡನೇ ಆಚಾರವೆ ಸದಾಚಾರ. ಸತ್ಪುರುಷರು ಆಚರಿಸುವ ಆಚಾರವೇ ಸದಾಚಾರವು ಅಥವಾ ಸದ್ರೂಪನಾದ ಪರಮಾತ್ಮನ ಪ್ರಾಪ್ತಿಗೊಸುಗ ಆಚರಿಸಲ್ಪಡುವ ಆಚರವೇ ಸದಾಚಾರವು.
ಈ ಸದಾಚಾರವು ಎಂಟು ವಿಧಗಳಾದ ಶೀಲಗಳನ್ನು ಒಳಗೊಂಡಿರುತ್ತದೆ. ಶೀಲೆವೆಂದರೆ ದೇವ ತತ್ವವನ್ನು ತಿಳಿದುಕೊಳ್ಳಬೇಕೆಂಬ ಉತ್ಕಟವಾದ ಬಯಕೆಯು. ಇದಕ್ಕೆ ಅನುಗುಣವಾದ ಎಂಟು ವಿಧ ಆಚಾರಗಳೇ ಅಷ್ಟಶೀಲಗಳೆಂದು ಕರೆಸಿಕೊಳ್ಳುತ್ತವೆ.
೧.ಅಂಕುರ ಶೀಲ ೨.ಉತ್ಪನ್ನ ಶೀಲ ೩.ದ್ವಿದಲ ಶೀಲ ೪.ಪ್ರವೃದ್ದ ಶೀಲ ೫.ಸಪ್ರಕಾಂಡ ಶೀಲ ೬.ಸಶಾಖಾ ಶೀಲ ೭.ಸಪುಷ್ಪ ಶೀಲ ೮.ಸಫಲ ಶೀಲ