ವಿಕ್ಟೋರಿಯಾ ಸರೋವರ
ಗೋಚರ
ವಿಕ್ಟೋರಿಯಾ ಸರೋವರವು ಆಫ್ರಿಕಾದ ಮಹಾಸರೋವರಗಳಲ್ಲಿ ಒಂದಾಗಿದೆ. ಸುಮಾರು ೬೮೦೦೦ ಚದರ ಕಿ.ಮೀ.ಗಳಷ್ಟು ವಿಸ್ತಾರವಾಗಿರುವ ಈ ಸರೋವರವು ಜಗತ್ತಿನ ಎರಡನೆಯ ಅತಿ ಅಗಲವಾದ ಸಿಹಿನೀರಿನ ಸರೋವರವಾಗಿದೆ. ಈ ಗಾತ್ರದ ಹೊರತಾಗಿಯೂ ಸರೋವರದ ಆಳ ಬಲು ಕಡಿಮೆಯಿರುವುದರಿಂದಾಗಿ ಇದರಲ್ಲಿನ ನೀರು ಜಗತ್ತಿನ ೭ನೆಯ ಅತಿ ಹೆಚ್ಚು ಪ್ರಮಾಣದ್ದು. ವಿಕ್ಟೋರಿಯಾ ಸರೋವರದ ಸರಾಸರಿ ಆಳವು ೪೦ ಮೀಟರ್‌ಗಳಷ್ಟಿದ್ದರೆ ಗರಿಷ್ಠ ಆಳ ೮೪ ಮೀ. ಇದರಲ್ಲಿರುವ ನೀರಿನ ಒಟ್ಟು ಪ್ರಮಾಣ ಸುಮಾರು ೨೭೫೦ ಘನ ಕಿ.ಮೀ. ಗಳಷ್ಟು. ನೈಲ್ ನದಿಯ ಹಿರಿಯ ಅಂಗವಾದ ಬಿಳಿ ನೈಲ್ ನದಿಗೆ ವಿಕ್ಟೋರಿಯಾ ಸರೋವರವು ಮೂಲ. ಈ ಸರೋವರದ ಜಲಾನಯನ ಪ್ರದೇಶದ ವಿಸ್ತಾರ ೧೮೪೦೦೦ ಚದರ ಕಿ.ಮೀ.ಗಳು. ಸರಸ್ಸಿನ ಸುತ್ತಳತೆ ೩೪೪೦ ಕಿ.ಮೀ. ಗಳಾಗಿದ್ದು ಸರಸ್ಸಿನಲ್ಲಿ ೩೦೦೦ಕ್ಕೂ ಹೆಚ್ಚು ದ್ವೀಪಗಳಿವೆ. ವಿಕ್ಟೋರಿಯಾ ಸರೋವರದ ಮೇಲೆ ಟಾಂಜಾನಿಯ, ಉಗಾಂಡ ಮತ್ತು ಕೆನ್ಯಾ ರಾಷ್ಟ್ರಗಳ ಅಧಿಪತ್ಯವಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Lake Victoria ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- Decreasing levels of Lake Victoria Worry East African Countries
- Dams Draining Lake Victoria
- Lake Victoria Basin Information Resources Database
- Lake Victoria Development Programme Archived 2008-06-18 ವೇಬ್ಯಾಕ್ ಮೆಷಿನ್ ನಲ್ಲಿ.
- Lake Victoria Fisheries Organisation Archived 2012-02-13 ವೇಬ್ಯಾಕ್ ಮೆಷಿನ್ ನಲ್ಲಿ.