ವಿಷಯಕ್ಕೆ ಹೋಗು

ವಿ. ಎಸ್. ನೈಪಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿ. ಎಸ್. ನೈಪಾಲ್

ಜನನ: ಆಗಸ್ಟ್ ೧೭, ೧೯೩೨
ಜನನ ಸ್ಥಳ:
ವೃತ್ತಿ: ಕಾದಂಬರಿಕಾರ, ಪ್ರಬಂಧಕಾರ
ಪ್ರಶಸ್ತಿಗಳು:ಸಾಹಿತ್ಯ ನೊಬೆಲ್ ಪ್ರಶಸ್ತಿ, ೨೦೦೧
ಮ್ಯಾನ್ ಬೂಕರ್ ಪ್ರಶಸ್ತಿ, ೧೯೭೧

ಸರ್ ವಿದ್ಯಾಧರ್ ಸೂರಜ್ ಪ್ರಸಾದ್ ನೈಪಾಲ್ (ಹುಟ್ಟು: ಆಗಸ್ಟ್ ೧೭, ೧೯೩೨)-,ಮರಣ, ಆಗಸ್ಟ್ ೧೧,೨೦೧೮) ಇವರು ಟ್ರಿನಿಡಾಡ್ ಮತ್ತು ಟೊಬ್ಯಾಗೊ ದೇಶದಲ್ಲಿ ಜನಿಸಿರುವ, ಭಾರತ-ಟ್ರಿನಿಡಾಡ್ ಮೂಲದ, ಬ್ರಿಟಿಷ್ ಲೇಖಕ. ಇವರು ಇಂಗ್ಲೆಂಡ್ ದೇಶದಲ್ಲಿ ನೆಲೆಸಿರುತ್ತಾರೆ. ಇವರು ೨೦೦೧ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ೧೯೯೦ರಲ್ಲಿ ಇಂಗ್ಲೆಂಡಿನ ರಾಣಿ ಎರಡನೆಯ ಎಲಿಜಬೆತ್ ಇವರಿಂದ ನೈಟ್‍ಹುಡ್ ಪದವಿಯನ್ನು ಪಡೆದಿದ್ದಾರೆ.

ಇವರ ತಂದೆ ಸಿಪರ್ಸಾದ್ ನೈಪಾಲ್, ಅಣ್ಣ ಶಿವಾ ನೈಪಾಲ್, ಚಿಕ್ಕಪ್ಪ ನೀಲ್ ಬಿಸ್ಸೊಂದಾತ್, ಮತ್ತು ಸಮೀಪದ ಬಂಧು ವಾಹ್ನಿ ಕಪಿಲ್ದೆವ್ ಇವರೆಲ್ಲರು ಲೇಖಕರಾಗಿದ್ದರು.

೧೯೭೧ರಲ್ಲಿ ಇನ್ ಎ ಫ್ರೀ ಸ್ಟೆಟ್ ಕೃತಿಗೆ ಇವರಿಗೆ ಮ್ಯಾನ್-ಬೂಕರ್ ಪ್ರಶಸ್ತಿ ದೊರಕಿತು, ಆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮೂಲದ ಲೇಖಕರು ನೈಪಾಲ್. ಇವರ ಕಾದಂಬರಿಗಳು ಅದರಲ್ಲೂ ಮುಖ್ಯವಾಗಿ ಇವರ ಪ್ರವಾಸ ಕಥನಗಳನ್ನು ತೃತೀಯ ಜಗತ್ತನ್ನು ಕೆಟ್ಟದಾಗಿ ಚಿತ್ರಿಸಿರುವದಕ್ಕೆ ಕಟುವಾಗಿ ಟೀಕಿಸಲಾಗಿದೆ.

ಪುಸ್ತಕಗಳ ಪಟ್ಟಿ

[ಬದಲಾಯಿಸಿ]
  • The Mystic Masseur novel - 1957
  • The Suffrage of Elvira - (1958)
  • Miguel Street - (1959)
  • A House for Mr Biswas - (1961)
  • Mr. Stone and the Knights Companion - (1963)
  • A Flag on the Island - (1967)
  • The Mimic Men - (1967)
  • In a Free State - (1971)
  • Guerrillas (novel) - (1975)
  • A Bend in the River - (1979)
  • Finding the Centre - (1984)
  • The Enigma of Arrival - (1987)
  • A Way in the World - (1994)
  • Half a Life - (2001)
  • Magic Seeds - (2004)

ನೈಪಾಲರು, ೧೧, ಆಗಸ್ಟ್, ೨೦೧೮ ರಂದು, ಲಂಡನ್ ನಲ್ಲಿ ಮೃತರಾದರು.[] ಅವರಿಗೆ ೮೫ ವರ್ಷ ವಯಸ್ಸಾಗಿತ್ತು.

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. V.S.Naipal Nobel Prize- winning British author, dies aged 85, The Guardian, Sat, 11, Aug, 2018