ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್
ಸಂಸ್ಥೆಯ ಪ್ರಕಾರಸರಕಾರಿ ಒಡೆತನದ, ಸಾರ್ವಜನಿಕ ರಂಗದ ಸಂಸ್ಥೆ
ಸ್ಥಾಪನೆ1940 (ಹಿಂದೂಸ್ತಾನ್ ಏರ್‌ಕ್ರಾಫ್ಟ್ ಲಿಮಿಟೆಡ್ ಹೆಸರಿನಲ್ಲಿ ಆರಂಭ)
ಮುಖ್ಯ ಕಾರ್ಯಾಲಯಬೆಂಗಳೂರು, ಕರ್ನಾಟಕ, ಭಾರತ
ಪ್ರಮುಖ ವ್ಯಕ್ತಿ(ಗಳು)
  • ಆರ್. ಮಾಧವನ್ (ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ)
  • ಅರೂಪ್ ಚಟರ್ಜಿ(ಇಂಜಿನಿಯರಿಂಗ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ)
  • ಎಂ ಎಸ್ ವೇಲ್ಪಾರಿ(ಕಾರ್ಯಾಚರಣಾ ವಿಭಾಗದ ನಿರ್ದೇಶಕ)
  • ಆಲೋಕ್ ವರ್ಮಾ(ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ)
  • ಸಿ ಬಿ ಅನಂತಕೃಷ್ಣನ್(ಹಣಕಾಸು ವಿಭಾಗದ ನಿರ್ದೇಶಕ)
ಉದ್ಯಮಯುದ್ಧ ವಿಮಾನಗಳು ಮತ್ತು ಅವುಗಳ ಬಿಡಿಭಾಗಗಳ ವಿನ್ಯಾಸ ಮತ್ತು ತಯಾರಿಕೆ, ಹೆಲಿಕಾಪ್ಟರ್‌ಗಳ ತಯಾರಿಕೆ, ತಂತ್ರಾಂಶಗಳ ತಯಾರಿಕೆ
ಆದಾಯIncrease ₹ ೨೨,೭೫೪ ಕೋಟಿ (೨೦೨೦-೨೧)[೧]
ಆದಾಯ(ಕರ/ತೆರಿಗೆಗೆ ಮುನ್ನ)Increase ₹ ೪,೨೭೦ ಕೋಟಿ(೨೦೨೦-೨೧)[೨]
ನಿವ್ವಳ ಆದಾಯIncrease ₹ ೩,೨೩೨ ಕೋಟಿ(೨೦೨೦-೨೧)[೩]
ಉದ್ಯೋಗಿಗಳು೨೬,೪೩೨(೨೦೨೦-೨೧ರ ವಾರ್ಷಿಕ ವರದಿಯ ಪ್ರಕಾರ)[೪]
ಜಾಲತಾಣhal-india.co.in

ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ರಕ್ಷಣಾ ಕ್ಷೇತ್ರದಲ್ಲಿ, ಸಾಮಾಗ್ರಿಗಳನ್ನು ಮತ್ತು ಬಿಡಿಭಾಗಗಳನ್ನು ತಯಾರಿಸುವ ಬೆಂಗಳೂರು ಮೂಲದ ಸಂಸ್ಥೆಯಾಗಿದೆ. ಭಾರತ ಸರ್ಕಾರದ ಅಧೀನದಲ್ಲಿರುವ ಈ ಸಂಸ್ಥೆ, ಅಂತರಿಕ್ಷ ಸಂಬಂಧಿ ಮತ್ತು ಮಿಲಿಟರಿ ಕ್ಷೇತ್ರಕ್ಕೆ ಸಂಬಂಧಪಟ್ಟ ಉಪಕರಣಗಳನ್ನು ತಯಾರಿಸುವ ವಿಶ್ವದ ಹಳೆಯ ಮತ್ತು ಪ್ರಮುಖ ಸಂಸ್ಥೆಯಾಗಿದೆ. ೧೯೪೦ರಲ್ಲಿ ಸ್ಥಾಪನೆಗೊಂಡ ಹೆಚ್ಎಎಲ್, ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯದ ಅಡಿಯಲ್ಲಿ ಕೆಲಸ ಮಾಡುತ್ತದೆ. ಸುಮಾರು ೩೦,೦೦೦ಕ್ಕೂ ಹೆಚ್ಚು ನೌಕರರನ್ನು ಹೊಂದಿದ್ದು, ಪ್ರಸ್ತುತ ಫೈಟರ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಜೆಟ್ ಎಂಜಿನ್ ಮತ್ತು ಸಾಗರ ಗ್ಯಾಸ್ ಟರ್ಬೈನ್ ಎಂಜಿನ್, ಏವಿಯಾನಿಕ್ಸ್, ಸಾಫ್ಟ್‌ವೇರ್ ಅಭಿವೃದ್ಧಿ, ಬಿಡಿಭಾಗಗಳ ತಯಾರಿಕೆ ಮತ್ತು ಪೂರೈಕೆ ಮತ್ತು ಭಾರತೀಯ ಸೇನಾ ವಿಮಾನಗಳ ನವೀಕರಣ ಮತ್ತು ವಿನ್ಯಾಸದಲ್ಲಿ ತೊಡಗಿದೆ.[೫]

ಮುಂಬಯಿ ಮೂಲದ ಉದ್ಯಮಿ ವಾಲ್‌ಚಂದ್ ಹೀರಾಚಂದ್ ಆಗಿನ ಮೈಸೂರು ಸರಕಾರದೊಂದಿಗೆ ಸೇರಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯನ್ನು ಹುಟ್ಟುಹಾಕಿದರು.

ಇತಿಹಾಸ[ಬದಲಾಯಿಸಿ]

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿದ್ದು ಮುಂಬಯಿ ಮೂಲದ ಕೈಗಾರಿಕೋದ್ಯಮಿ ವಾಲ್‌ಚಂದ್ ಹಿರಾಚಂದ್ ಅವರು. ೨೩ನೇ ಡಿಸೆಂಬರ್ ೧೯೪೦ರಂದು ಬೆಂಗಳೂರಿನಲ್ಲಿ ಹಿರಾಚಂದ್ ಅವರು ಆಗಿನ ಮೈಸೂರು ಸರ್ಕಾರದ ಸಹಯೋಗದೊಂದಿಗೆ ಭಾರತದಲ್ಲಿ ಸ್ವದೇಶೀ ವಿಮಾನಗಳನ್ನು ತಯಾರಿಸುವ ಗುರಿಯೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಿದರು. ಆರಂಭದಲ್ಲಿ ಈ ಸಂಸ್ಥೆಗೆ ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಲಿಮಿಟೆಡ್ ಎಂಬ ಹೆಸರಿತ್ತು. ಬೆಂಗಳೂರಿನ ದೊಮ್ಮಲೂರು ರಸ್ತೆಯಲ್ಲಿ ಸಂಸ್ಥೆಯ ಕಛೇರಿಯು ತೆರೆಯಲ್ಪಟ್ಟಿತು.[೬]

ನ್ಯೂಯಾರ್ಕ್‌ ಮೂಲದ ಇಂಟರ್ ಕಾಂಟಿನೆಂಟಲ್ ಏರ್‌ಕ್ರಾಫ್ಟ್ ಕಾರ್ಪೊರೇಶನ್‌ನ ವಿಲಿಯಂ ಡಿ. ಪಾವ್ಲೆ ಅವರ ಸಹಾಯದಿಂದ ಕಾರ್ಖಾನೆಯಲ್ಲಿ ವಿಮಾನಗಳು ಮತ್ತು ಅವುಗಳ ಬಿಡಿಭಾಗಗಳನ್ನು ತಯಾರಿಸಲು ಬೇಕಾದ ಯಂತ್ರೋಪಕರಣಗಳನ್ನು ಸ್ಥಾಪಿಸಲಾಯಿತು. ಅಮೇರಿಕಾ ಮೂಲದ ಈ ಸಂಸ್ಥೆಯ ಸಹಾಯದಿಂದ ಹೆಚ್ಎಎಲ್, ಹಾರ್ಲೋ ತರಬೇತಿ ವಿಮಾನಗಳು, ಕರ್ಟಿಸ್ ಹಾಕ್ ಫೈಟರ್ ಮತ್ತು ವಲ್ಟೀ ಬಾಂಬರ್ ವಿಮಾನಗಳನ್ನು ತಯಾರಿಸಲು ಆರಂಭಿಸಿತು.[೭] ಮಾರ್ಚ್ ೧೯೪೧ ರಲ್ಲಿ, ಭಾರತ ಸರ್ಕಾರ(ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಸರ್ಕಾರ)ವು ಈ ಸಂಸ್ಥೆಯಲ್ಲಿ ರೂ. ೨೫ ಲಕ್ಷ ಹಣವನ್ನು ಹೂಡಿ ಸಂಸ್ಥೆಯ ೩/೧ ಭಾಗದಷ್ಟು ಶೇರುಗಳನ್ನು ಖರೀದಿಸಿತು. ೧೯೪೨ರಲ್ಲಿ ಈ ಸಂಸ್ಥೆಯ ಸಂಪೂರ್ಣ ನಿರ್ವಹಣೆಯನ್ನು ಬ್ರಿಟಿಷ್ ಸರ್ಕಾರವು ವಹಿಸಿಕೊಂಡಿತು.[೮]

೧೯೪೩ನೇ ಇಸವಿಯಲ್ಲಿ ಹೆಚ್‍ಎ‍ಎಲ್‍ನ ಬೆಂಗಳೂರಿನ ಕಾರ್ಖಾನೆಯನ್ನು ಅಮೇರಿಕಾದ ಸೈನ್ಯಕ್ಕೆ ಹಸ್ತಾಂತರಿಸಲಾಯಿತು. ಆದರೆ ಕಾರ್ಖಾನೆಯ ಆಡಳಿತ ಮತ್ತು ನಿರ್ವಹಣೆಯನ್ನು ಹೆಚ್‍ಎ‍ಎಲ್‍ ಉಳಿಸಿಕೊಂಡಿತು. ಇದೇ ಹೊತ್ತಿಗೆ, ಸಂಸ್ಥೆಯಲ್ಲಿ ಮೂರು ಪಾಳಿಯನ್ನು ಪರಿಚಯಿಸಲಾಯಿತು. ಕಾರ್ಖಾನೆಯ ನೌಕರರ ಸಂಖ್ಯೆ ೧೫,೦೦೦ಕ್ಕೇರಿತು. ಈ ವರ್ಷದಲ್ಲಿ ಭಾರತ ಸರ್ಕಾರವು ವಿಮಾನ ನಿರ್ವಹಣೆ ಮತ್ತು ದುರಸ್ತಿಗಳ ಮಹಾನಿರ್ದೇಶನಾಲಯವನ್ನು ರಚಿಸಿ, ಸರ್ ಜೇಮ್ಸ್ ಪಿಟ್‌ಕೆಥ್ಲಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿತು[೯].

ಹೆಚ್ಎಎಲ್ ಉತ್ಪನ್ನಗಳು[ಬದಲಾಯಿಸಿ]

ಎಪ್ರಿಲ್ ೫, ೧೯೪೨ರಂದು ಹೆಚ್ಎಎಲ್ ಮೊತ್ತಮೊದಲ ವಿಮಾನ ಹಾರ್ಲೊ ಪಿಸಿ೫ ತರಬೇತಿ ವಿಮಾನವನ್ನು ತನ್ನ ಘಟಕದಲ್ಲಿ ತಯಾರಿಸಿ ಬಿಡುಗಡೆ ಮಾಡಿತು. ಹೆಚ್ಎಎಲ್, ಅಮೇರಿಕಾ ಮೂಲದ ಹಾರ್ಲೋ ಏರ್‌ಕ್ರಾಫ್ಟ್ ಕಂಪೆನಿಯ ಪರವಾನಗಿಯನ್ನು ಪಡೆದು ಭಾರತದ ತನ್ನ ತಯಾರಿಕಾ ಘಟಕದಲ್ಲಿ ಹಾರ್ಲೊ ಪಿಸಿ-೫ ತರಬೇತಿ ವಿಮಾನವನ್ನು ಪುನರ್ ಸಂಯೋಜಿಸಿ ಭಾರತೀಯ ವಾಯುದಳ(ರಾಯಲ್ ಇಂಡಿಯನ್ ಏರ್‌ಫೋರ್ಸ್)ಕ್ಕೆ ಪೂರೈಸಿತು[೧೦]

ಸರಿಯಾಗಿ ಒಂದು ವರ್ಷದ ಅಂತರದಲ್ಲಿ, ಅಂದರೆ ಜುಲೈ ೩೧, ೧೯೪೨ರಂದು ಹೆಚ್ಎಎಲ್ ಇನ್ನೊಂದು ವಿಮಾನವಾದ ಕರ್ಟಿಸ್ ಪಿ-೩೬ ಹಾಕ್(ಅಮೇರಿಕಾ ಮೂಲದ ಕರ್ಟಿಸ್ ರೈಟ್‌ ಕಾರ್ಪೋರೇಷನ್ ತಯಾರಿಕೆ) ವಿಮಾನವನ್ನು ತನ್ನ ಘಟಕದಲ್ಲಿ ಸಂಯೋಜಿಸಿ ಭಾರತೀಯ ವಾಯುದಳ(ಬ್ರಿಟಿಷ್ ಆಡಳಿತದ ರಾಯಲ್ ಏರ್‌ಫೋರ್ಸ್)ಕ್ಕೆ ಪೂರೈಸಿತು.[೧೧]

ಉಲ್ಲೇಖಗಳು[ಬದಲಾಯಿಸಿ]

  1. https://hal-india.co.in/Common/Uploads/Finance/Audited%20Financial%20Results%20June%202021.pdf
  2. https://hal-india.co.in/Common/Uploads/Finance/Audited%20Financial%20Results%20June%202021.pdf
  3. https://hal-india.co.in/Common/Uploads/Finance/Audited%20Financial%20Results%20June%202021.pdf
  4. https://hal-india.co.in/Common/Uploads/Finance/AR%2020-21.pdf
  5. "Our History". hal-india.co.in. HAL. Retrieved 23 October 2021.
  6. "Our History". hal-india.co.in. HAL. Retrieved 23 October 2021.
  7. "Our History". hal-india.co.in. HAL. Retrieved 23 October 2021.
  8. "Our History". hal-india.co.in. HAL. Retrieved 23 October 2021.
  9. - 2391.PDF "No Title" (PDF). flightglobal.com. flightglobal. Retrieved 31 October 2021. {{cite web}}: Check |url= value (help)
  10. "Hindustan aircraft limited" (PDF). Archive.org. Archive.org. Archived from the original on 10 ಮೇ 2013. Retrieved 24 October 2021.{{cite web}}: CS1 maint: bot: original URL status unknown (link)
  11. "Hindustan aircraft limited" (PDF). Archive.org. Archive.org. Archived from the original on 10 ಮೇ 2013. Retrieved 24 October 2021.{{cite web}}: CS1 maint: bot: original URL status unknown (link)