ಒಂದನೆಯ ಮೈಸೂರು ಯುದ್ಧ
ಒಂದನೆಯ ಮೈಸೂರು ಯುದ್ಧ (೧೭೬೬-೧೭೬೯) ಮೈಸೂರು ರಾಜ್ಯ ಕ್ಕೂ ಬ್ರಿಟೀಷರಿಗೂ ನಡೆದ ಯುದ್ಧ. ಈ ಯುದ್ಧ ಸರಣಿಯಲ್ಲಿ ಮೊದಲನೆಯದು.
ಮೈಸೂರಿನ ಆಡಳಿತಾಧಿಕಾರಿ ಹೈದರಾಲಿಯ ಚಟುವಟಿಕೆಗಳನ್ನು ಮದರಾಸು ಪ್ರಾಂತದ ಬ್ರಿಟೀಷರು ಗಂಭೀರವಾಗಿ ಪರಿಗಣಿಸಿದರು. ೧೭೬೬ರಲ್ಲಿ ಬ್ರಿಟೀಷರು ಹೈದರಾಬಾದಿನ ನಿಜಾಮನೊಂದಿನ ಒಪ್ಪಂದ ಮಾಡಿಕೊಂಡು , ಅದರ ಪ್ರಕಾರ , ತಮ್ಮಿಬ್ಬರ ಸಮಾನ ಶತ್ರುವಾಗಿದ್ದ ಹೈದರಾಲಿಯ ವಿರುದ್ಧ ಬಳಸಲಿಕ್ಕಾಗಿ ಸೈನ್ಯವನ್ನು ಪೂರೈಸಿದರು. ಆದರೆ , ಈ ಒಪ್ಪಂದವಾದ ಸ್ವಲ್ಪ ಸಮಯದಲ್ಲಿಯೇ, ಹೈದರಾಲಿ ಮತ್ತು ನಿಜಾಮ ರಹಸ್ಯ ಒಪ್ಪಂದಕ್ಕೆ ಬಂದು , ಬ್ರಿಟೀಷರ ಕರ್ನಲ್ ಸ್ಮಿತ್ ನ ಸಣ್ಣ ಸೇನೆ ಯ ಮೇಲೆ ತಮ್ಮ ಒಕ್ಕೂಟದ ೫೦,೦೦೦ ಸಿಪಾಯಿಗಳು ಮತ್ತು ೧೦೦ ತುಪಾಕಿಗಳ ಸೇನೆಯನ್ನು ನುಗ್ಗಿಸಿದರು. ಸಂಖ್ಯೆಯಲ್ಲಿ ಸಣ್ಣದಿದ್ದರೂ, ಬ್ರಿಟೀಷ್ ಪಡೆಗಳು,ಶಿಸ್ತು ಮತ್ತು ಉತ್ತಮ ತರಬೇತಿಯಿಂದಾಗಿ, ಒಕ್ಕೂಟದ ಸೇನೆಯನ್ನು ಮೊದಲು ಚೆಂಗಮ್ ಎಂಬಲ್ಲಿಯೂ ( ಸೆಪ್ಟೆಂರ್ ೩, ೧೭೬೭)ಮತ್ತೆ , ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ತಿರುವಣ್ಣಾಮಲೈಯಲ್ಲಿಯೂ ಹಿಮ್ಮೆಟ್ಟಿಸಿದರು.
ಪಶ್ಚಿಮ ತೀರದ ತನ್ನ ನವೀನ ನೌಕಾಪಡೆ ಮತ್ತು ಕೋಟೆಗಳನ್ನು ಕಳೆದುಕೊಂಡ ನಂತರ ಹೈದರಾಲಿಯು ಸಂಧಾನಕ್ಕೆ ಬಂದನು. ಈ ಸಂಧಾನದ ಕೋರಿಕೆ ತಿರಸ್ಕೃತವಾಗಲು, ಹೈದರಾಲಿಯು ತನ್ನೆಲ್ಲ ಅಳಿದುಳಿದ ಸೈನ್ಯವನ್ನು ಒಗ್ಗೂಡಿಸಿ ಬ್ರಿಟೀಷರ ಮೇಲೇರಿ ಹೋದನು. ಕರ್ನಲ್ ಸ್ಮಿತ್ ಬೆಂಗಳೂರಿಗೆ ಹಾಕಿದ್ದ ಮುತ್ತಿಗೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದಲ್ಲದೆ, ತನ್ನ ಸೇನೆಯೊಡನೆ ಮದರಾಸು ನಗರದ ಐದು ಮೈಲಿಯಷ್ಟು ಸಮೀಪದವರೆಗೂ ಬಂದು ತಲುಪಿದನು. ಈ ಯುದ್ಧದ ಪರಿಣಾಮವಾಗಿ ಏಪ್ರಿಲ್ ೧೭೬೯ರಲ್ಲಿ , ಎರದೂ ಪಕ್ಷಗಳೂ ತಾವು ಆಕ್ರಮಿಸಿದ ಪ್ರದೇಶಗಳನ್ನು ವಾಪಸು ಮಾಡಬೇಕೆಂದು ಮತ್ತು ಯುದ್ಧಗಳಲ್ಲಿ ಪರಸ್ಪರರ ಸಹಾಯಕ್ಕೆ ಬರುವಂತೆಯೂ ಒಪ್ಪಂದವಾಯಿತು.[೧] [೨]
ನೋಡಿ
[ಬದಲಾಯಿಸಿ]- ಒಂದನೆಯ ಮೈಸೂರು ಯುದ್ಧ |
- ಎರಡನೆಯ ಮೈಸೂರು ಯುದ್ಧ |
- ಮೂರನೇ ಮೈಸೂರು ಯುದ್ಧ |
- ನಾಲ್ಕನೆಯ ಮೈಸೂರು ಯುದ್ಧ |
- ಟಿಪ್ಪು ಸುಲ್ತಾನ್ |
- ಲಾರ್ಡ್ ಕಾರ್ನ್ವಾಲಿಸ್
ಉಲ್ಲೇಖ
[ಬದಲಾಯಿಸಿ]