ಸಿ. ಪಿ. ಟ್ಯಾಂಕ್, ಮುಂಬೈ
ಗೋಚರ
ಸಿ.ಪಿ.ಟ್ಯಾಂಕ್,[೧](C. P. Tank, Mumbai) ೧೭೭೫, ರಲ್ಲಿ 'ಕವಾಸ್ ಜಿ ರುಸ್ತಂಜಿ ಪಟೇಲ್',ರವರು, ಗಿರ್ ಗಾಮ್ ನಲ್ಲಿ, ನಿರ್ಮಿಸಲಾದ ಬೊಂಬಾಯಿನ ಅತ್ಯಂತ ಪುರಾತನವಾದ ಕೆರೆಗಳಲ್ಲೊಂದು. ಎಲ್ಲಾ ಇತರೆ ನಗರಗಳಂತೆ, ಬೊಂಬಾಯಿನ ಎಲ್ಲ ಕೆರೆಗಳೂ ನಿಧಾನವಾಗಿ ನಿವೇಶನಗಳಾಗಿ ಮಾರ್ಪಡ್ಡವು. ಅವುಗಳ ಜಾಗದಲ್ಲಿ ಭಾರಿ ಮ್ಯಾನ್ಶನ್ ಗಳು, ಮಾಲ್ ಗಳು, ವಾಣಿಜ್ಯ ಸಂಸ್ಥೆಗಳು, ಎದ್ದು ನಿಂತಿವೆ. 'ಬಂಗಾಂಗ ಕೆರೆ', ಇದಕ್ಕೆ ಅಪವಾದ." ಬಂಗಾಂಗ ಕೆರೆ ", ಅತಿಪುರಾತನ ಕಾಲದಿಂದಲೂ ಇದೆ. 'ಫ್ರಾಮ್ ಜಿ ಕವಾಸ್ ಜಿ ', ರವರು, "ಎಸ್ ಪ್ಲ ನೇಡ್ " ಗೆ, ತಗುಲಿದಂತೆ, ೧೮೩೧ ರಲ್ಲಿ ಒಂದು 'ಕೆರೆ', ಯನ್ನು ಕಟ್ಟಿಸಿದರು. ಈಗಲೂ, ಮುಂಬಯಿ ನ 'Metro Ad Lab', (ಹಿಂದಿದ್ದ ಪ್ರಖ್ಯಾತ, ' ಮೆಟ್ರೋ ಸಿನಿಮ', 'Metro Cinema'), ದ ಎದುರಿಗೆ, ಕೆರೆಯ ಹೆಸರಿನ, ಒಂದು ಹಳೆಯ ಫಲಕ ಕಾಣಿಸುತ್ತದೆ.