೨೦೦೭ರ ನೋಬೆಲ್ ಶಾಂತಿ ಪುರಸ್ಕಾರ
'೨೦೦೭ ರ, " ನೋಬೆಲ್ ಶಾಂತಿ ಪರಿತೋಷಕ, "ವನ್ನು, ಭಾರತ ಮತ್ತು ಅಮೆರಿಕ ಹಂಚಿಕೊಂಡಿವೆ !
ಭಾರತದ ಡಾ. ರಾಜೇಂದ್ರಕುಮಾರ್ ಪಚೌರಿ, ಹಾಗೂ ಅಮೆರಿಕದ ಮಾಜಿ ಉಪಾಧ್ಯಕ್ಷ, ಆಲ್ ಗೋರ್, ಪ್ರಸಕ್ತ ೨೦೦೭ ರ, ನೋಬೆಲ್ ಶಾಂತಿಪುರಸ್ಕಾರದ ಭಾಗಿದಾರರಾಗಿದ್ದಾರೆ.
ವಿಶ್ವದ ಪರಿಸರಪ್ರೇಮಿಗಳಿಗೆಲ್ಲಾ 'ಪಚೌರಿ,' ಹಾಗೂ, 'ಆಲ್ ಗೋರ್,' ರ ಮಾದರಿ ವ್ಯಕ್ತಿತ್ವದ ಪ್ರಭಾವೀಉದಾಹರಣೆ
[ಬದಲಾಯಿಸಿ]ಜಾಗತಿಕ ತಾಪಮಾನವೃದ್ಧಿ ಜಗತ್ತಿನ ಪ್ರಮುಖ ಸಮಸ್ಯೆಗಳಲ್ಲೊಂದು. ತುರ್ತು ಕ್ರಮ ತೆಗೆದುಕೊಳ್ಳಬೇಕೆಂಬ ಅಂತರರಾಷ್ಟ್ರೀಯ ಅಭಿಯಾನಕ್ಕೆ ಈ ಪ್ರತಿಷ್ಠಿತ ಪುರಸ್ಕಾರದಿಂದ ಉತ್ತೇಜನ ದೊರಕಿದಂತಾಗಿದೆ. ಹವಾಮಾನ ಬದಲಾವಣೆ, ಕುರಿತು ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡಿ ಅದನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಉತ್ತಮ ಪರಿಹಾರ ಕ್ರಮಗಳ ಚೌಕಟ್ಟನ್ನು ನಿರ್ಮಿಸಿದ ಶ್ಲಾಘನೀಯ ಪ್ರಯತ್ನಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಟಾಟಾ ಇಂಥನ-ಶಕ್ತಿ ಸಂಶೋಧನ ಸಂಸ್ಥೆ,"ಯ ಮಹಾನಿರ್ದೇಶಕರಾದ, ೬೭ ವರ್ಷದ ಹರೆಯದ ಡಾ. ರಾಜೇಂದ್ರಕುಮಾರ್ ಪಚೌರಿ, ನಿರಂತರವಾಗಿ ಪರಿಸರ ಸಂರಕ್ಷಣೆಯಬಗ್ಗೆ ವಿಶ್ವದಾದ್ಯಂತ ಜನರಿಗೆ ತಿಳಿಯಹೇಳುತ್ತಾ ಬಂದಿದ್ದಾರೆ. ವಿಶ್ವದಾದ್ಯಂತ ಹಲವಾರು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅದರ ಮಹತ್ವವನ್ನು ತಿಳಿಯಪಡಿಸಿ ಅದರ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ೫೯ ವರ್ಷದ ಆಲ್ ಗೌರ್ ರವರು ತಮ್ಮ ಹುದ್ದೆಗೆ ರಾಜೀನಾಮೆಯನ್ನು ಕೊಟ್ಟಮೇಲೆ,ಅವಿಶ್ರಾಂತವಾಗಿ ಹವಾಮಾನಬದಲಾವಣೆಯ ವೈಪರೀತ್ಯವನ್ನು ತಿಳಿಯುವುದು, ಮತ್ತು ಆ ನಿಟ್ಟಿನಲ್ಲಿ ಉಪಾಯಗಳನ್ನು ಹುಡುಕುವ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದಾರೆ. ಶಾಂತಿ ನೋಬೆಲ್ ಪ್ರಶಸ್ತಿಗೆ, ೧೮೧ ನಾಮಪತ್ರಗಳು ಬಂದಿದ್ದವು. ಈ ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ಅಡಿಯಲ್ಲಿ ೧೩೦ ದೇಶಗಳ ೩,೦೦೦ ಕ್ಕೂ ಹೆಚ್ಚು ಹವಾಮಾನ ತಜ್ಞರು, ಸಾಗರ ವಿಜ್ಞಾನಿಗಳು,ದುಡಿಯುತ್ತಿದ್ದಾರೆ.
ಐ.ಪಿ.ಸಿ.ಸಿ, ಇಂತಹ ಒಂದು ಪ್ರಮುಖ ಸಂಸ್ಥೆ. ವಿಶ್ವದಹವಾಮಾನ ಬದಲಾವಣೆ,ಅಂದರೆ ಹೆಚ್ಚುತ್ತಿರುವ ಉಷ್ಣತೆ ಹೇಗೆ ವಿಶ್ವದ ಭೂಮಿ, ಸಾಗರ, ಮತ್ತು ಕೃಷಿ ಕ್ಷೇತ್ರಗಳ ಮೇಲೆ ಈಗಾಗಲೇ ಪರಿಣಾಮ ಬೀರಿವೆ ಎನ್ನುವುದನ್ನು ಸುನಿಶ್ಚಿತಗೊಳಿಸುವ ನಿಟ್ಟಿನಲ್ಲಿ ಅದು ದುಡಿಯುತ್ತಿವೆ.ಸೋನಾಮಿ, ಯಂತಹ ಪಿಡುಗನ್ನು ನಾವು ಈಗಾಗಲೇ ಅನುಭವಿಸಿದ್ದೇವೆ. ಇದು ಹವಾಮಾನವೈಪರೀತ್ಯದ ದುಷ್ಪರಿಣಾಮವೆಂದು ವಿಶೇಷಜ್ಞರ ತೀರ್ಮಾನ. ಟಾಟಾ ಇಂಥನ-ಶಕ್ತಿ ಸಂಶೋಧನಾಲಯ ಸಂಸ್ಥೆ ಮಹಾನಿರ್ದೇಶಕರಾದ ಪಚೌರಿಯವರು, ಹವಾಮಾನಬದಲಾವಣೆ ಅಷ್ಟು ಮಹತ್ವದ ಸಂಗತಿಯಾಗಿರುವುದರಿಂದ, ಆ ಅಭಿಯಾನದಲ್ಲಿ ದುಡಿದ ಪ್ರತಿಸದಸ್ಯರೂ ನೋಬೆಲ್ ಶಾಂತಿಪ್ರಶಸ್ತಿಗೆ ಭಾಜನರೆಂಬ ಸಂಗತಿ ನೈಜವಾದದ್ದು. ವಿಜೇತರು, ೫.೪೦ ಲಕ್ಷ ಡಾಲರ್, ಅಂದರೆ, ಸುಮಾರು ೬ ಕೋಟಿ ರುಪಾಯಿ ನಗದು ಪಡೆಯಲಿದ್ದಾರೆ. ಈರ್ವರಿಗೂ ಇದರಲ್ಲಿ ಸಮಪಾಲು.
ರಾಜೇಂದ್ರ ಕುಮಾರ್ ಪಚೌರಿಯವರ ಜನನ ಹಾಗೂ ವಿದ್ಯಾಭ್ಯಾಸ
[ಬದಲಾಯಿಸಿ]ಡಾ. ರಾಜೇಂದ್ರ ಕುಮಾರ್ ಪಚೌರಿಯವರು ಜನಿಸಿದ್ದು, ನೈನಿತಾಲ್ ನಲ್ಲಿ ೨೦, ಆಗಸ್ಟ್, ೧೯೪೦, ರಲ್ಲಿ. ಲಕ್ನೊ ನಗರದಲ್ಲಿ, ಲ ಮಾರ್ಟಿನೇರ್ ಹುಡುಗರ ಹೈಸ್ಕೂಲು ಮತ್ತು ಕಾಲೇಜ್ ಶಿಕ್ಷಣ. ೧೯೭೨ ರಲ್ಲಿ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ನಲ್ಲಿ ಮತ್ತು Ph.D; ಅದೆ ವಿಷಯದಲ್ಲಿ. ಕೊನೆಯದಾಗಿ ಎಕೊನಾಮಿಕ್ಸ್ ನಲ್ಲಿ Ph.D; ಯನ್ನು, ಅಮೆರಿಕದ, North Carolina State ವಿಶ್ವವಿದ್ಯಾಲಯದಲ್ಲಿ.
ಡಾ. ಪಚೌರಿಯವರು, ವಾರಣಾಸಿಯ ಲೋಕೋಮೋಟಿವ್ ಕಾರ್ಖಾನೆಯಲ್ಲಿ ಮ್ಯಾನೇಜರ್ ಆಗಿ ಕೆಲಕಾಲ ದುಡಿದರು. ಅಲ್ಲಿಂದ ಅಮೆರಿಕದ North Carolina State ವಿಶ್ವವಿದ್ಯಾಲಯದಲಿ, M.S; ಹಾಗೂ Ph.D; Industrial Engineering ಸಂಪಾದಿಸಿದರು. Economics ನಲ್ಲಿ ಮತ್ತೊಂದು Ph.D; ೧೯೮೧ ರಲ್ಲಿ ,ಪಡೆದರು. ಭಾರತಕ್ಕೆ ವಾಪಸ್ಸದ ತರುವಾಯ, ೨೦೦೧ ರಲ್ಲಿ ಟಾಟಾ ಇಂಥನ-ಶಕ್ತಿ ಸಂಶೋಧನಾಲಯ ಸಂಸ್ಥೆಗೆ ಪಾದಾರ್ಪಣೆಮಾಡಿದರು. ಪ್ರಾರಂಭದಲ್ಲಿ ನಿರ್ದೆಶರಾಗಿ, ನಂತರ ಮಹಾನಿರ್ದೇಶಕರಾಗಿ ಕೆಲಸಮಾಡುತ್ತಿದ್ದಾರೆ. ಪಚೌರಿಯವರ ಹೆಂಡತಿ, ಡಾ.ಸರೋಜ್. ಜನಸಂಖ್ಯಾ ಸಂಸ್ಥಾನ, ನವ ದೆಹಲಿಯಲ್ಲಿ ಕ್ಷೇತ್ರೀಯ ನಿರ್ದೇಷಿಕ, ಹುದ್ದೆಯಲ್ಲಿ ಕೆಲಸಮಾಡುತ್ತಿದ್ದಾರೆ ; ಆಕೆಯ ಸಂಸ್ಥೆ, ಪತಿಯ ಆಫೀಸಿನ ಟೆರಿ ಪಕ್ಕದಲ್ಲೇ , ಇದೆ. "ನೋಬೆಲ್ ಪ್ರಶಸ್ತಿ," ಘೋಷಣೆಯಾದ ಸಮಯದಲ್ಲಿ ಮಗಳು ರಷ್ಮಿ, ಪಚೌರಿಯವರ ಪಕ್ಕದಲ್ಲೇ ಇದ್ದಳು. ಮಗ ಆಶ್, ಪತ್ನಿ ಸರೋಜ್, ಈ ಸುವಾರ್ತೆ ತಿಳಿಯುತ್ತಿದ್ದಂತೆಯೇ ಹರ್ಷಿಸಿ, ಪಚೌರಿಯವರನ್ನು ಅಭಿನಂದಿಸಿದರು.
ನೋಬೆಲ್ ಶಾಂತಿಪುರಸ್ಕಾರಕ್ಕೆ ವಿಶ್ವದಾದ್ಯಂತ ಒಟ್ಟು ೧೮೧ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಬೌದ್ಧ ಬಿಕ್ಷು ರಿಚ್, ಕ್ವಾಂಗ್ ದು, ಫಿನಿಶ ನಮಾಜಿ ಅಧ್ಯಕ್ಷ ಮರ್ಡಿ ಅಹತ್ಸಿ ಸಾರಿ, ಮತ್ತು ಮಾನವತಾವಾದಿ ಸಮೂಹ ಉಳಿಸಿ, ಮಕ್ಕಳ ಸಂಘಟನೆಗಳು ಸೇರಿವೆ. ೫೯ ವರ್ಷದ ಗೋರ್ ಕಳೆದ ವರ್ಷ ಒಂದು ಪುಸ್ತಕವನ್ನು ಪ್ರಕಟಿಸಿದ್ದರು. " An Inconvenient Truth" on climate change," ಎಂಬ ವೃತ್ತ ಚಿತ್ರವನ್ನು ಹೆಚ್ಚುತ್ತಿರುವ ಜಾಗತಿಕ ಉಷ್ಣತೆಯನ್ನು ಕುರಿತು ಜನಜಾಗೃತಿ ಮೂಡಿಸುವುದಕ್ಕಾಗಿ, ತಯಾರಿಸಿದ್ದರು. ಅದಕ್ಕೆ ಆಸ್ಕರ್ ಪ್ರಶಸ್ತಿ ದೊರೆತಿತ್ತು. IPCC ಪ್ರಾಮುಖ್ಯತೆಯ ಬಗ್ಗೆ ನಿಧಾನವಾಗಿ ಜನರಿಗೆ ಅರ್ಥವಾಯಿತು. ಚಿಕ್ಕ ದ್ವೀಪದ, 'ತಿವಲ್ಲು,' ವಿನಿಂದ 'ಅಮೆರಿಕ'ದವರೆಗೆ. ಡಾ. ರಾಜೇಂದ್ರಕುಮಾರ್ ಪಚೌರಿಯವರಿಗೆ ದೊರೆತ ಪ್ರಶಸ್ತಿ ಸನ್ಮಾನಗಳು ಅಪಾರ. ಅದನ್ನೆಲ್ಲಾ ದಾಖಲುಮಾಡಲು ಬಹಳ ಕಷ್ಟ.
ಕೆಲವು ಮುಖ್ಯವಾದವುಗಳು ಹೀಗಿವೆ
[ಬದಲಾಯಿಸಿ]- ವಿಶ್ವ ಬ್ಯಾಂಕ್ ಫೆಲೊ.
- ಭಾರತ ಮತ್ತು ಅನೇಕ ವಿಶ್ವ ವಿಶ್ವವಿದ್ಯಾಲಯಗಳಲ್ಲಿ, " ಕಾಡು ಸಂರಕ್ಷಣೆ ಮತ್ತು ಅದರ ಯೋಗಕ್ಷೇಮ ಮತ್ತು ನಿರ್ವಹಣೆ," ಯನ್ನು ಯೇಲ್ ವಿಶ್ವವಿದ್ಯಾಲಯದಲ್ಲಿ ಕಲಿಸಿದರು.
- ಭಾರತದ ನವರತ್ನ ಕಂಪೆನಿಯಾದ ONGC ಯಿಂದ ಹಿಡಿದು, ಪ್ರಧಾನಿಯವರ ಸಲಹೆಗಾರನ ತನಕಾ, ಮತ್ತು ಹವಾಮಾನ ಬದಲಾವಣೆಯ ಸಂಸ್ಥಾನ,ಅಧಿಕಾರಿ.
- ವಿಶ್ವ ಸಂಪನ್ಮೂಲಗಳ ಸಂಸ್ಥಾನ, ದಲ್ಲೂ ದುಡಿದಿದ್ದಾರೆ.
- ಸರ್ಕಾರದ ಬಹಳ ಪ್ರಭಾವಿ ಸಮಿತಿಗಳಲ್ಲಿ ಸದಸ್ಯರಾಗಿ, ಎನರ್ಜಿ ಬೋರ್ಡ್, ರಾಷ್ತ್ರೀಯ ಪರಿಸರ ಸಂಸ್ಥಾನ,
- ತೈಲೋದ್ಯಮ ಪುನರ್ನಿಮಾಣ ಸಂಸ್ಥೆ,.