ವಿಷಯಕ್ಕೆ ಹೋಗು

ಬಿ.ಎಚ್.ಶ್ರೀಧರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿ. ಎಚ್. ಶ್ರೀಧರ
ಜನನ೨೪ ಏಪ್ರಿಲ್ ೧೯೧೮
ಬವಲಾಡಿ,ಬಿಜೂರು,ದಕ್ಷಿಣ ಕನ್ನಡ,ಕರ್ನಾಟಕ,ಭಾರತ
ಮರಣ೨೪ ಏಪ್ರಿಲ್ ೧೯೯೦
ಸಿರ್ಸಿ,ಉತ್ತರ ಕನ್ನಡ,ಕರ್ನಾಟಕ,ಭಾರತ
ವೃತ್ತಿಪತ್ರಕರ್ತ, ಪ್ರಾಧ್ಯಾಪಕ, ಲೇಖಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿವಿಮರ್ಶೆ,ಕವನ,ಇತಿಹಾಸ,ಸಂಸ್ಕೃತಿ

ಬಿ.ಎಚ್..ಶ್ರೀಧರ

ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ. ಬಿ.ಎಚ್..ಶ್ರೀಧರರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ ೨೪ ಏಪ್ರಿಲ್ ೧೯೧೮ ರಂದು ಜನಿಸಿದರು. []

ಕವಿ ದ.ರಾ. ಬೇಂದ್ರೆಯವರಿಂದ 11-10-1971 ರಂದು ಸನ್ಮಾನ. ಎಡದಿಂದ-ಪ್ರತಿಭಾ (ಮಗಳು), ರಮಾದೇವಿ (ಪತ್ನಿ), ಬಿ.ಎಚ್. ಶ್ರೀಧರ, ಗಣೇಶ ಹೆಗಡೆ ಹಾಗೂ ಕವಿ ದ.ರಾ. ಬೇಂದ್ರೆ. ಸ್ಥಳ: ಸಿದ್ದಾಪುರ (ಉ.ಕ.)

ತಂದೆ ಸೀತಾರಾಮ ಹೆಬ್ಬಾರ, ತಾಯಿ ನಾಗಮ್ಮ, ದೊಡ್ಡಪ್ಪಂದಿರು- ವೆಂಕಟರಮಣ ಹೆಬ್ಬಾರ, ಹಿರಿಯಣ್ಣ ಹೆಬ್ಬಾರ. ಪತ್ನಿ ರಮಾದೇವಿ (ಮದುವೆ- ಮೇ ೧೯೪೬). ಮಕ್ಕಳು- ಸುಮಾ, ಪ್ರತಿಭಾ, ವಿಜಯಾ, ರಾಜಶೇಖರ, ರಾಜೇಶ್ವರಿ. ಸಹೋದರಿಯರು – ರುಕ್ಮಿಣಿ, ಸುಶೀಲ, ಮತ್ತು ರಮಾ.[]

ಶಿಕ್ಷಣ

[ಬದಲಾಯಿಸಿ]

ಬಿಜೂರಿನ ಪ್ರಾಥಮಿಕ ಶಾಲೆಯಲ್ಲಿಯೂ, ಸೊರಬ ಹಾಗೂ ಸಾಗರದಲ್ಲಿ ಮಿಡಲ್ ಸ್ಕೂಲ್ ಶಿಕ್ಷಣ ಮುಗಿಸಿದರು. ಮುನಸಿಪಲ್ ಹೈಸ್ಕೂಲ್ ಸಾಗರದಲ್ಲಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಶಿವಮೊಗ್ಗದಲ್ಲಿ ಬರೆದರು.

ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಕಲಿತು ಬಿ.ಎ. (ಆನರ್ಸ್) ಮೈಸೂರಿನ ಮಹಾರಾಜ ಕಾಲೇಜಿನಲ್ಲಿ (೧೯೪೧) ರಲ್ಲಿ ರಾಜ್ಯಕ್ಕೆ ಮೊದಲಿಗನಾಗಿ ಉತ್ತೀರ್ಣರಾದರು. ಎಂ.ಎ. (ಆನರ್ಸ್) ಕೂಡ ಮಹಾರಾಜ ಕಾಲೇಜಿನಲ್ಲೆ ಮುಗಿಸಿದರು. ಪೂರ್ಣ ಕೃಷ್ಣರಾವ್ ಬಂಗಾರದ ಪದಕ, ನವೀನಂ ರಾಮಾನುಜಾಚಾರ್ಯ ಬಂಗಾರದ ಪದಕ ಗಳಿಸಿದರು. ಅವರ 'ಕವಿಯೂ ವಿಜ್ಞಾನಿಯೂ' ಪ್ರಬಂದಕ್ಕೆ ಹೊನ್ನಸೆಟ್ಟಿ ಬಹುಮಾನ ಲಭಿಸಿತು.


ಇವರು ೫೫ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಸಮ್ಮೇಳನದ ಪತ್ರಿಕಾ ಪ್ರದರ್ಶನದ ಉದ್ಘಾಟನೆ ಹಾಗೂ ಉ.ಕ. ಜಿಲ್ಲಾ ಮೂರನೇಯ ಜಿಲ್ಲಾ ಸಾಹಿತ್ಯ ಸಮ್ಮೇಳನದ(೧೯೭೪) ಅಧ್ಯಕ್ಷರಾಗಿದ್ದರು.

ವೃತ್ತಿ ಜೀವನ

[ಬದಲಾಯಿಸಿ]

೧.ಪುಣೆಯ ಫೀಲ್ಡ್ ಕಂಟ್ರೋಲರ್ ಆಫ್ ಮಿಲಿಟರಿ ಎಕೌಂಟ್ಸ್ ಆಫೀಸಿನಲ್ಲಿ ಒಂದು ವರ್ಷ 'ಗುಮಾಸ್ತಗಿರಿ' (೧೯೪೨-೪೨)

೨.ಭಟ್ಕಳದ ಇಸ್ಲಾಮಿಯ ಆಂಗ್ಲೋ ಉರ್ದು ಹೈಸ್ಕೂಲಿನಲ್ಲಿ ಸಹ ಶಿಕ್ಷಕರಾಗಿ ೪ ವರ್ಷ ಹಾಗೂ ಹೆಡ್ ಮಾಸ್ಟರ್ ಆಗಿ ಒಂದು ವರ್ಷ

೩.'ಕರ್ಮವೀರ' ವಾರಪತ್ರಿಕೆ (ಹುಬ್ಬಳ್ಳಿ)ಯ ಉಪಸಂಪಾದಕರಾಗಿ (೧೯೪೭-೫೧)

೪.ಕುಮಟಾದ ಕೆನರಾ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ(೧೯೫೧-೬೨)

೫.ಸಿರ್ಸಿಯ ಎಂ.ಎಂ. ಕಲಾ-ವಿಜ್ಞಾನ ಮಹಾವಿದ್ಯಾಲಯದಲ್ಲಿ ಉಪ ಪ್ರಾಚಾರ್ಯರಾಗಿ (೧೯೬೨-೬೯) ಸಂಸ್ಕೃತ ಮತ್ತು ಕನ್ನಡ ಪ್ರಾಧ್ಯಾಪಕರಾಗಿ.

೬.ಸಿದ್ದಾಪುರದ ಎಂ. ಜಿ. ಸಿ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ (೧೯೬೯-೭೬)

೭.ಸಿರ್ಸಿಯ ಮಾಡರ್ನ್ ಎಜ್ಯುಕೇಷನ್ ಸೊಸೈಟಿಯ ಆನರರಿ ಮೆನೇಜರ್ ರಾಗಿ ೧೫-೬-೧೯೮೨ ರವರೆಗೆ.

ಕುಮಟಾ (ಉ.ಕ.)ದ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾಗ, ಎಡದಿಂದ 3ನೇಯವರು ಬಿ.ಎಚ್.ಶ್ರೀಧರ 4ನೇಯವರು ಗೋಪಾಲಕೃಷ್ಣ ಅಡಿಗರು.

ಕೃತಿಗಳು

[ಬದಲಾಯಿಸಿ]
  • ಶ್ರೀಧರರ ಸಾಹಿತ್ಯದಲ್ಲಿ ಭಾವಗೀತೆಗಳು, ಪ್ರೌಢ ಪ್ರಬಂಧಗಳು ಹೆಚ್ಚು. ಕತೆ ನಾಟಕಗಳು ಕಡಿಮೆ. ಭಾವಗೀತೆಗಳಲ್ಲಿ ಸೌಂದರ್ಯ, ದೇಶಪ್ರೇಮ, ದೈವ ಪ್ರೇಮ, ಇಂದಿನ ಬಾಳಿನ ಆರ್ಥಿಕ, ಸಾಮಾಜಿಕ, ರಾಜಕೀಯ, ಬೌದ್ದಿಕ,ಭಾವನಾತ್ಮಕ ದುರವಸ್ಥೆಗಳ ಬಗೆಗಿರುವ ಸಂತಾಪವೂ ಭೂಮಿಕೆಯಾಗಿದೆ. ಪ್ರಬಂಧಗಳಲ್ಲಿ ರಸಭಾವ, ಶಿಕ್ಷಣ, ನೀತಿ ಉದ್ಯಮ, ತತ್ವಜ್ಞಾನ, ಕಲೆ , ರಾಜಕೀಯ, ಅರ್ಥವ್ಯವಸ್ಥೆ, ಕೃಷಿ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿವೇಚನೆ, ವಿಶ್ಲೇಷಣೆ, ವಿವರಣೆ, ವಿಮರ್ಶೆಗಳು ವ್ಯಕ್ತವಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ಶ್ರೀಧರರ ಸಾಹಿತ್ಯ ಕವನ-ಲೇಖನಗಳೇ ಹೆಚ್ಚು.

ಕವನ ಸಂಕಲನ

[ಬದಲಾಯಿಸಿ]

೧. ಮೇಘನಾದ ( ೧೯೪೫)

೨. ಕಿನ್ನರಗೀತ (೧೯೪೭)

೩. ಅಮೃತಬಿಂದು ( ೧೯೪೯)

೪. ಮಂಜುಗೀತ ( ೧೯೫೮)

೫. ರಸಯಜ್ಞ (೧೯೬೪)

೬. ಮುತ್ತು ರತ್ನ(೧೯೬೮ & ೧೯೭೮)

೭. ನೌಕಾಗೀತ (೧೯೬೮)

೮. ಕದಂಬ ವೈಭವ (೧೯೬೭)

೯. ಕಂಟಕಾರಿ ಮಹಾಕಾವ್ಯ (೧೯೮೧)

೧೦.ಜಾತವೇದ ( ೧೯೮೪)

೧೧.ಅಮೃತಬಿಂದು – ಆಯ್ದ ಕವನಗಳು -ಕ.ಸಾ.ಪ. - ಸಂ. ಡಾ. ಎಂ.ಜಿ. ಹೆಗಡೆ (೨೦೦೭)

ಯಕ್ಷಗಾನ

[ಬದಲಾಯಿಸಿ]
  • ಪಂಚರಾತ್ರ (೧೯೯೩) (ಸಮಗ್ರ ಸಾಹಿತ್ಯ ಸಂಪುಟದಲ್ಲಿ ಪ್ರಕಟಿತ)
ಪ್ರೊ. ಬಿ.ಎಚ್. ಶ್ರೀಧರ, ಪತ್ನಿ ರಮಾದೇವಿ ಮೊಮ್ಮಗ ಬ್ರಹ್ಮಾನಂದರೊಂದಿಗೆ.

೧•ಮಯೂರ ಶರ್ಮ (೧೯೮೮)

೨•ಸೋಮಾರಿ ಕ್ಲಬ್ (೧೯೮೭) (ಸಮಗ್ರ ಸಾಹಿತ್ಯ ಸಂಪುಟದಲ್ಲಿ ಪ್ರಕಟಿತ)

ಆತ್ಮಕಥೆ

[ಬದಲಾಯಿಸಿ]

೧. ‘ಜೀವಯಾನ’ (೧೯೯೪)

ವಿಡಂಬನೆ

[ಬದಲಾಯಿಸಿ]
  1. • ಬೇತಾಳಗಳ ಕುಣಿತ (೧೯೫೧)
  2. • ಭಾಷಣ ಭೈರವರ ಒಡ್ಡೋಲಗ (೧೯೬೬)

ವಿಮರ್ಶೆ

[ಬದಲಾಯಿಸಿ]
  1. • ಬೇಂದ್ರೆ (೧೯೫೬)
  2. • ಹೊಸಗನ್ನಡ ಸಾಹಿತ್ಯ ಶೈಲಿ (೧೯೫೭)
  3. • ಕವೀಂದ್ರ ರವೀಂದ್ರ (೧೯೫೬)
  4. • ಕಾವ್ಯ ಸೂತ್ರ (೧೯೬೮)
  5. • ಪ್ರತಿಭೆ (೧೯೭೮)
  6. • ಸಂಸ್ಕೃತ ಕನ್ನಡ ಭಾಂಧವ್ಯ (೧೯೮೧)
  7. • ಪಸರಿಪ ಕನ್ನಡಕ್ಕೊಡಯನೀಗ ದರಾಂಕಿತ ಬೇಂದ್ರೆ (೧೯೮೭)
  8. • ಜನ್ನ(೧೯೭೫)

ವೈಚಾರಿಕ

[ಬದಲಾಯಿಸಿ]
  1. • ಭಾರತೀಯ ನಾಗರಿಕತೆಗೆ ಮನುವಿನ ಕೊಡುಗೆ (೧೯೫೬)
  2. • ವಿದೇಶದ ತಿಳುವಳಿಕೆಗಳು ( ೧೯೫೬)
  3. • ಜ್ಞಾನಸೂತ್ರ (೧೯೬೯)
  4. • ಮಾನಸ ದರ್ಪಣ (೧೯೭೩)
  5. • ರಾಷ್ಟ್ರ ಸೂತ್ರ (೧೯೭೪)
  6. • ವಿಚಾರ ವಿಜಯ (೧೯೮೧)
  7. • ಭಾರತೀಯ ಮೂರ್ತಿ ಶಿಲ್ಪ (೧೯೮೮)
  8. • ಭಾವನಾ ಸಮನ್ವಯ (೨೦೦೯)
  9. . ಪಂಚಮುಖಿ (೧೯೫೫,೨೦೨೦)

ಐತಿಹಾಸಿಕ

[ಬದಲಾಯಿಸಿ]
  1. • ಬನವಾಸಿಯ ಕದಂಬರು (೧೯೬೬)
  2. • ಬನವಾಸಿಯ ಕೈಪಿಡಿ (೧೯೭೧)
  3. • ಕದಂಬ ಇತಿಹಾಸ (೨೦೦೪)
  1. • ಮಯೂರ ಶರ್ಮ(೧೯೭೧)
  2. • ಕೌಶಿಕ ರಾಮಾಯಣ (೧೯೭೨)
  3. • ರಮಣ ಮಹರ್ಷಿ (೧೯೬೯)
  4. • ಉ.ಕ. ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು (೧೯೭೧)
  5. • ಸಾಹಿತ್ಯ ಚಿಂತನ (ಮಂಜುವಾಣಿ ಲೇಖನಗಳು)
  6. • ವೇದರಹಸ್ಯ ಸಾರ (೨೦೦೩)

ಅನುವಾದ (ಇಂಗ್ಲೀಷನಿಂದ ಕನ್ನಡಕ್ಕೆ)

[ಬದಲಾಯಿಸಿ]
  1. • ಭಾರತೀಯ ರಾಜ್ಯಧರ್ಮದ ಸತ್ವ ಮತ್ತು ಸ್ವರೂಪ – ಭಾಗ ೧ (ಅರವಿಂದರ The Foundations of Indian Culture Part 1) (೧೯೫೫)
  2. • ಭಾರತೀಯ ವಾಙ್ಮಯ – ಭಾಗ ೨ (ಅರವಿಂದರ The Foundations of Indian Culture Part 2) (೧೯೫೭)
  3. • ಟಿ.ಎಸ್. ಈಲಿಯಟ್ (೧೯೫೭) (ಎ. ಸಿ. ಬ್ರಾಡ್ ಬ್ರೂಕ್ ಅವರ T. S. Eliot)
  4. • ಸ್ವಾತಂತ್ರ್ಯ ಮೀಮಾಂಸೆ ( ಜೆ. ಎಸ್. ಮಿಲ್ ಅವರ On Liberty)(೧೯೬೧)
  5. • ಮಾತೃಶ್ರೀ (ಪಶುಪತಿ ಭಟ್ಟಾಚಾರ್ಯರ On The Mother Divine) (೧೯೭೫)
  6. • ವೇದ ರಹಸ್ಯ (ಅರವಿಂದರ The Secret of The Veda) (೨೦೧೭)
  7. • ನೆಹರು ಉವಾಚ
  8. • ಶ್ರೀ ರಮಣಮಾರ್ಗ – ಭಾಗ ೧ & ೨ (ಶ್ರೀ ಸಾಧುಓಂ ಅವರ The Path of Sri Ramana Part One and Part Two)

ಅನುವಾದ(ಸಂಸ್ಕೃತದಿಂದ ಕನ್ನಡಕ್ಕೆ)

[ಬದಲಾಯಿಸಿ]
  1. • ಕಾಳಿದಾಸನ ಕಾವ್ಯ ಸೌರಭ (1962)
  2. • ಕುಂದಮಾಲೆ (1967) (ದಿಜ್ಮಾಂಗನ)
  3. • ರಾಜಧರ್ಮ (ಕ.ವಿ.ವಿ. ಧಾರವಾಡ) (1974)
  4. • ಶಿವಪುರಾಣ (ಮಂಜುವಾಣಿ ಲೇಖನಗಳು) (2018) (ಸಮಗ್ರ ಸಾಹಿತ್ಯ ಸಂ)

ಸಂಪಾದಿತ

[ಬದಲಾಯಿಸಿ]

1. ನವರತ್ನ

2.ಬಾನುಮತಿ ಕಲ್ಯಾಣ – ಹಿರಿಯಣ್ಣ ಹೆಬ್ಬಾರ (1958)

3.ರಸೋವೈಸಃ - ಹಿರಿಯಣ್ಣ ಹೆಬ್ಬಾರ (1987)

ಬಿ.ಎಚ್. ಶ್ರೀಧರರ ಬಗ್ಗೆ ಪುಸ್ತಕಗಳು

[ಬದಲಾಯಿಸಿ]
  1. ಪ್ರೊ. ಬಿ.ಎಚ್. ಶ್ರೀಧರ – ರಾಜಶೇಖರ ಹೆಬ್ಬಾರ ಮತ್ತು ಕಿರಣ ಭಟ್ (1992)
  2. ಪ್ರೊ. ಬಿ.ಎಚ್. ಶ್ರೀಧರ – ರಾಜಶೇಖರ ಹೆಬ್ಬಾರ (2007)
  3. ಶ್ರೀಧರ ಪ್ರಶಸ್ತಿ - ರಾಜಶೇಖರ ಹೆಬ್ಬಾರ ಮತ್ತು ಶ್ರೀಪಾದ ಭಟ್ (2010)
  4. ಪ್ರತಿಭಾ ಶಿಖರ ಬಿ.ಎಚ್. ಶ್ರೀಧರ – ಡಾ.ಆರ್.ಪಿ. ಹೆಗಡೆ (2016)
  5. ವಾತ್ಸಲ್ಯದ ಸಿರಿ, ಸಾಹಿತ್ಯದ ಗರಿ - ಬಿ.ಎಚ್. ಶ್ರೀಧರ – ಮೋಹನ ಬಿ. ಹೆಗಡೆ (2017)
  6. ಕಲ್ಲರಳಿದ ಹೂವು - ಬಿ. ಎಚ್. ಶ್ರೀಧರ - ರಮೇಶ ವೈದ್ಯ ಉಪ್ಪುಂದ.

ಸ್ಮರಣ ಸಂಚಿಕೆ

[ಬದಲಾಯಿಸಿ]

• ಶ್ರೀಧರ ಸ್ಮರಣೆ – ಸಂ. ಡಾ.ಎಂ.ಜಿ. ಹೆಗಡೆ (1999)

ಬಹುಮಾನಗಳು.

[ಬದಲಾಯಿಸಿ]

1.ಕಾವ್ಯಸೂತ್ರ – ಕರ್ನಾಟಕ ರಾಜ್ಯ ಸಾಹಿತ್ಯ ಅಕೆಡೆಮಿ ಬಹುಮಾನ, ತೀ.ನಂ.ಶ್ರೀ. ಸ್ಮಾರಕ ಬಹುಮಾನ, ಮೈಸೂರು ವಿ.ವಿ. ಸ್ವರ್ಣಮಹೋತ್ಸವ ಬಹುಮಾನ.

2.ಜ್ಞಾನಸೂತ್ರ - ಕರ್ನಾಟಕ ಸರ್ಕಾರದ ಅನುದಾನ. ಲೋಕಶಿಕ್ಷಣ ಟ್ರಸ್ಟ್ ಬಹುಮಾನ.

3. ರಾಷ್ಟ್ರಸೂತ್ರ - ಕರ್ನಾಟಕ ಸರ್ಕಾರದ ಅನುದಾನ, ಮೂರುಸಾವಿರ ಮಠ, ಹುಬ್ಬಳ್ಳಿ ಪ್ರಶಸ್ತಿ.

4.ಮಾನಸ ದರ್ಪಣ – ಮದ್ರಾಸ್ ಕ್ರಿಶ್ಚಿಯನ್ ಟೆಕ್ಸ್ಟ್ ಬುಕ್ ಕಮಿಟಿ ಬಹುಮಾನ.

5.ನೌಕಾಗೀತ – ಭಾರತ ಸರಕಾರದ ರಕ್ಷಣಾಖಾತೆ ಪ್ರಶಸ್ತಿ.

6.ರಸಯಜ್ಞ – ದೇವರಾಜ ಬಹಾದ್ದೂರ ಬಹುಮಾನ.

7. ಮನುಸ್ಮೃತಿ – ಕ.ವಿ.ವಿ. ಪದವಿ ವರ್ಗದ ಪಠ್ಯ ಪುಸ್ತಕ.

ಬಿ.ಎಚ್‍. ಶ್ರೀಧರ ಸಮಗ್ರ ಸಾಹಿತ್ಯ

[ಬದಲಾಯಿಸಿ]

ಬಿ. ಎಚ್. ಶ್ರೀಧರ ಅವರ ಸಮಗ್ರ ಸಾಹಿತ್ಯವನ್ನು ಡಿಜಿಟಲೀಕರಿಸಿ ಇಂಟರ್ನೆಟ್ ಆರ್ಕೈವ್ ನಲ್ಲಿ ಲಭ್ಯವಾಗಿಸಲಾಗಿದೆ. ಈ ಡಿಜಿಟಲ್ ಆವೃತ್ತಿಗಳು ಕ್ರಿಯೇಟೀವ್ ಕಾಮನ್ಸ್ ಪರವಾನಗಿ ಅಡಿಯಲ್ಲಿ ವಾಣಿಜ್ಯೇತರ ಉದ್ದೇಶಗಳಿಗೆ ಲಭ್ಯವಿವೆ (CC-by-NC-SA).

  1. ಕಾವ್ಯ (2013)[]
  2. ವಿಮರ್ಶೆ (2013)[]
  3. ವಿಚಾರ (2014)[]
  4. ಸಂಕೀರ್ಣ (2017)[]
  5. ಅನುವಾದ 1 (2018)[]
  6. ಅನುವಾದ 2 (2019)[]

ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ

[ಬದಲಾಯಿಸಿ]

ಶ್ರೀಧರರು 24-4-1990 ರಂದು ನಿಧನರಾದ ನಂತರ ಅವರ ನೆನಪನ್ನು ಚಿರಂತನವಾಗಿರಿಸಲು ಅವರ ಕುಟುಂಬ ಹಾಗೂ ಮಿತ್ರರು 1990 ರಲ್ಲಿ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯನ್ನು ರಚಿಸಿ 1991 ರಿಂದ (30 ವರ್ಷಗಳು ಕಳೆದಿದೆ) ಇಲ್ಲಿಯವರೆಗೆ ಕನ್ನಡದ ಶ್ರೇಷ್ಠ ಸಾಹಿತಿಗಳ ಅತ್ಯುತ್ತಮ ಕೃತಿಗೆ ಹಾಗೂ ಜೀವಿತ ಸಾಧನೆಗೆ ಪ್ರಶಸ್ತಿ ನೀಡುತ್ತಾ ಪುರಸ್ಕಾರ ಸಮಾಂಭವನ್ನು ಸಿರ್ಸಿಯಲ್ಲಿ ಬಿ.ಎಚ್. ಶ್ರೀಧರರ ಜನ್ಮದಿನದಂದು ಸಡೆಸುತ್ತಿದ್ದಾರೆ. ಸಮಿತಿಯಲ್ಲಿ ಡಾ. ಟಿ. ನಾರಾಯಣ ಭಟ್ (ಅಧ್ಯಕ್ಷರು), ರಾಜಶೇಖರ ಹೆಬ್ಬಾರ (ಕಾರ್ಯಾಧ್ಯಕ್ಷರು), ಮತ್ತು ಎಚ್. ಆರ್. ಅಮರನಾಥ, ಕಿರಣ ಭಟ್, ವಿಷ್ಣು ಹೆಗಡೆ, ಜಗದೀಶ ನಾ, ಸಿ.ಎನ್. ಹೆಗಡೆ, ಸಿ. ಆರ್. ಶಾನಭಾಗ, ಶ್ರೀಪಾದ ಭಟ್, ವಿಠಲ ಭಂಡಾರಿ, ಯಶವಂತ ನಾಯಕ, ಯು.ಎ. ಐತಾಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಎಂ. ಜಿ. ಹೆಗಡೆ, ಡಾ. ಶ್ರೀಪಾದ ಭಟ್, ರಾಜಶೇಖರ ಹೆಬ್ಬಾರ ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸನ್ಮಾನಗಳು

[ಬದಲಾಯಿಸಿ]
  1. ವರಕವಿ ದ.ರಾ. ಬೇಂದ್ರೆಯವರಿಂದ ಸಿದ್ದಾಪುರ (ಉ.ಕ.)ಹಾಗೂ ಶಿವಮೊಗ್ಗದಲ್ಲಿ ಸನ್ಮಾನ(11-10-1971)
  2. ಡಾ. ಶಿವರಾಮ ಕಾರಂತರಿಂದ ಸಿದ್ದಾಪುರ ಸಾಲಿಗ್ರಾಮಗಳಲ್ಲಿ 1970ರ ಹಾಗೂ 1988ರಲ್ಲಿ ಸನ್ಮಾನ
  3. ಕುಂದಾಪುರದ ಜೇಸಿಯವರಿಂದ 1980
  4. ಸಿರ್ಸಿ (ಉ.ಕ.) ರೊಟರಿ ಕ್ಲಬ್ ನಿಂದ 1987
  5. ಸಿರ್ಸಿಯ ರಂಗಸಂಗ ಮತ್ತು ಕಲಾರಂಗದಿಂದ 1987
  6. ಯುಗಪುರುಷ (ಕಿನ್ನಿಗೋಳಿಯಲ್ಲಿ) 1988 ಇತ್ಯಾದಿ.

ಉಲ್ಲೇಖಗಳು

[ಬದಲಾಯಿಸಿ]