ವಿಷಯಕ್ಕೆ ಹೋಗು

ಚೈತ್ರ ಮಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಮೊದಲನೇ ಮಾಸ.ಬಂಗಾಳಿ ಪಂಚಾಂಗದಲ್ಲಿ ಇದು ಕೊನೆಯ ಮಾಸವಾಗಿದೆ ಅಲ್ಲಿ ಇದನ್ನು ಚೊಯಿತ್ರೊ ಎನ್ನುತ್ತಾರೆ.ನೇಪಾಳೀ ಪಂಚಾಂಗದಲ್ಲಿಯೂ ಸಹ ಇದು ಕೊನೆಯ ಮಾಸವಾಗಿದೆ ಇದು ಮಾರ್ಚ್ ತಿಂಗಳ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಇದನ್ನು ಚೈತ್ರ ಅಥವಾ ಚೈತ್ ಎನ್ನುತ್ತಾರೆ.ತಮಿಳ್ ಪಂಚಾಂಗದಲ್ಲಿ ಇದು ಮೊದಲ ಮಾಸವಾಗಿದ್ದು ಇದನ್ನಿ ಚಿತ್ತಿರೈ ಎಂದು ಕರೆಯುತ್ತಾರೆ.ವೈಷ್ಣವ ಪಂಚಾಂಗದಲ್ಲಿ ವಿಷ್ಣು ಈ ತಿಂಗಳನ್ನು ಆಳುತ್ತಾರೆ. ಸಾಂಪ್ರದಾಯಿಕವಾಗಿ ಈ ಮಾಸವು ಗ್ರೆಗೊರಿಯನ್ ಪಂಚಾಂಗದ ಮಾರ್ಚ್ ಅಥವಾ ಏಪ್ರಿಲ್ ನಿಂದ ಶುರುವಾಗುತ್ತದೆ.ಹಿಂದೂ ಹೊಸ ವರ್ಷಾರಂಭ ಎಂದರೆ ಚೈತ್ರ ಮಾಸದ ಮೊದಲ ದಿನಾಂಕವು ಗ್ರೆಗೊರಿಯನ್ ಪಂಚಾಂಗದಲ್ಲಿ ನಿಗದಿತವಾಗಿರುವುದಿಲ್ಲ. ಈ ಮಾಸವನ್ನು ಅನೇಕ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ,ದೇವನಾಗರಿ:चैत्र ಚೈತ್ರ; ಗುಜರಾತಿ:ચૈત્ર ಚೈತ್ರ; ರಾಜಸ್ಥಾನಿ:चेत ಚೇತ್; ಪಂಜಾಬಿ:ਚੇਤ ಸೇತ್; ಬೆಂಗಾಲಿ:চৈত্র ಚೊಯಿತ್ರೊ; ಅಸ್ಸಾಮೀಸ್::চ'ত ; ಕನ್ನಡ:ಚೈತ್ರ; ತೆಲುಗು:చైత్రము ಚೈತ್ರಮು; ತಮಿಳು:சித்திரை ಚಿತ್ತಿರೈ; ಮಲಯಾಳಂ:ചൈത്രം ಚೈತ್ರಂ

ಈ ಮಾಸದ ಪ್ರಮುಖ ಹಬ್ಬಗಳು

[ಬದಲಾಯಿಸಿ]
  • ಯುಗಾದಿ, ಶ್ವೇತ ವರಾಹ ಕಲ್ಪಾರಂಭ (ಶುಕ್ಲ ಪಾಡ್ಯ )
  • ಶ್ರೀ ರಾಮ ನವಮಿ (ಶುಕ್ಲ ನವಮಿ)
  • ಕಾಮದಾ ಏಕಾದಶಿ (ಶುಕ್ಲ ಏಕಾದಶಿ)
  • ಹನುಮ ಜಯಂತಿ; ವೈಶಾಖ ಸ್ನಾನಾರಂಭ (ಹುಣ್ಣಿಮೆ)
  • ಮತ್ಸ್ಯ ಜಯಂತಿ (ಕೃಷ್ಣ ಪಂಚಮಿ)
  • ವರೂಥಿನಿ ಏಕಾದಶಿ (ಕೃಷ್ಣ ಏಕಾದಶಿ)
  • ವರಾಹ ಜಯಂತಿ (ಕೃಷ್ಣ ತ್ರಯೋದಶಿ)

[]

ಉಲ್ಲೇಖಗಳು

[ಬದಲಾಯಿಸಿ]



ಚಾಂದ್ರಮಾನ ಮಾಸಗಳು
ಚೈತ್ರವೈಶಾಖಜ್ಯೇಷ್ಠಆಷಾಢಶ್ರಾವಣಭಾದ್ರಪದಆಶ್ವಯುಜಕಾರ್ತಿಕಮಾರ್ಗಶಿರಪುಷ್ಯಮಾಘಫಾಲ್ಗುಣ