ಚರ್ಚೆಪುಟ:ಅನ್ನದಾನಯ್ಯ ಪುರಾಣಿಕ
ಈ ಲೇಖನದ ಮೌಲ್ಯವನ್ನು ಹೆಚ್ಚಿಸಲು ಛಾಯಾಚಿತ್ರವನ್ನು ಅಥವಾ ಛಾಯಾಚಿತ್ರಗಳನ್ನು ಸೇರಿಸಬೇಕೆಂದು ಕೋರಿಕೆ. |
POV
[ಬದಲಾಯಿಸಿ]POV ಎಂದು ಮಾರ್ಕ್ ಮಾಡಲಾಗುತ್ತಿದೆ. ಪುಟದ ಹೆಸರಿನಿಂದ ಹಿಡಿದು ಅದರಲ್ಲಿರುವ ಸಾಕಷ್ಟು ಮಾಹಿತಿ POV ತರಹ ಕಾಣುತ್ತಿದೆ. ಸಕಾರಣಗಳಿದ್ದಲ್ಲಿ ವಿವರಿಸಿ ಇಲ್ಲವಾದಲ್ಲಿ POV ಇಲ್ಲದಂತೆ ಲೇಖನವನ್ನು ಸರಿಪಡಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೨:೧೪, ೨೬ June ೨೦೦೬ (UTC)
Dear Shri Nadig
When writing about eminent personalities, their achievements or contribution to the society needs to be highlighted. As long as this is done without any controversial or derogatory remarks about others, I think we should accept it.
Personally I find this article is clean without such elements.
thanks Rajesh
- ರಾಜೇಶ್, ಕನ್ನಡ ವಿಕಿಪೀಡಿಯದ ಚರ್ಚಾ ಪುಟಗಳಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
- ವಿಕಿಪೀಡಿಯ ವಿಶ್ವಕೋಶವಾದ್ದರಿಂದ ಇಲ್ಲಿ ಹೊಗಳಿಕೆಯ ಮಾತು ಸಾಧ್ಯವಾದಷ್ಟು ದೂರವಿಡುವ ಪ್ರಯತ್ನ ಮಾಡಬೇಕಾಗುತ್ತದೆ. ಆದರೆ ಸಾಧನೆಗಳನ್ನು ಕಡೆಗಣಿಸಬೇಕೆಂದೇನಲ್ಲ - ಅದು ಸಂಪೂರ್ಣವಾಗಿ ಬೇರೆಯ ವಿಷಯ, ವಿಕಿಪೀಡಿಯ ಮಟ್ಟಿಗೆ. ಸಾಧನೆಯ ಪಟ್ಟಿಯಿಂದ ಹೊರಡಬೇಕಾದ ಅಭಿಪ್ರಾಯಗಳನ್ನು ನೀವೇ ಲೇಖನದಲ್ಲಿ ಬೆಸೆಯುವ ಪ್ರಯತ್ನ ವಿಕಿಪೀಡಿಯ ಪಾಲಿಸಿಯನ್ವಯ ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಹಾಗೂ ಅದನ್ನು ಓದುಗರ descretionಗೆ ಬಿಡಬೇಕು.
- ಉದಾ: ಸಾಹಿತ್ಯ ಸೇವೆ - ಸಾಹಿತ್ಯ ಎಂದಷ್ಟೆ ಸೇರಿಸಿ. POV ಬಗ್ಗೆ ಹೆಚ್ಚಿನ ಸಹಾಯ ಆಂಗ್ಲ ಪುಟದಲ್ಲಿ ಲಭ್ಯವಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೦೬, ೨೭ June ೨೦೦೬ (UTC)
NPOV and Cleanup
[ಬದಲಾಯಿಸಿ]ಇದೀಗ ಈ ಲೇಖನಕ್ಕೆ {{NPOV}}ಮತ್ತು {{cleanup}}}} ಟ್ಯಾಗುಗಳನ್ನು ಸೇರಿಸಿದ್ದೇನೆ.
ಸ್ವಂತ ಅಭಿಪ್ರಾಯಗಳನ್ನು ತೆಗೆಯುವಲ್ಲಿ, ಮತ್ತು ಲೇಖನವನ್ನು ಶುದ್ಧೀಕರಿಸುವಲ್ಲಿ ನನ್ನ ಕೆಲವು ಸಲಹೆಗಳು:
- ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟ - ಈ ಭಾಗವನ್ನು ಒಂದು ಪ್ರತ್ಯೇಕ ಲೇಖನವನ್ನಾಗಿ ಮಾಡಬಹುದೇ, ನೋಡಿ.
- ಅನ್ನದಾನಯ್ಯ ಪುರಾಣಿಕ ಅವರ ಛಾಯಾಚಿತ್ರ ಹಾಕಿದಲ್ಲಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿನದು ಅಥವ ವಿಮೋಚನಾ ಹೋರಾಟದಲ್ಲಿರುವುದು, ಲೇಖನದ ಮೌಲ್ಯವರ್ಧನೆಯಾಗುವುದು.
- ಲೇಖನದಲ್ಲಿನ ಆಂಗ್ಲ ಸಂಖ್ಯೆಗಳು ಕನ್ನಡಕ್ಕೆ ಬದಲಾಯಿಸಿ
- ಲೇಖನದ ಹೆಸರನ್ನು ಅನ್ನದಾನಯ್ಯ ಪುರಾಣಿಕ ಎಂದು ಬದಲಾಯಿಸಲಾಗುವುದೇ, ನೋಡಿ.
- ಲೇಖನದಲ್ಲಿ ಬಹುತೇಕ ಆಂತರಿಕ ಸಂಪರ್ಕಗಳು ಇಲ್ಲವೇ ಇಲ್ಲ. ಒಂದು ಲೇಖನದ ಗುಣಮಟ್ಟ ಅಳೆಯುವುದರಲ್ಲಿ ಅದೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆಂತರಿಕ ಸಂಪರ್ಕದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ
- ಲೇಖನಕ್ಕೆ ಸಾಕಷ್ಟು ಉಲ್ಲೇಖಗಳ(references) ಅವಶ್ಯಕತೆಯಿದೆ. ಉದಾಹರಣೆಗೆ ಪತ್ರಿಕೆಯಲ್ಲಿನ ವರದಿ.
- ಕೊನೆಯದಾಗಿ, ಲೇಖನವನ್ನು ಮತ್ತೊಮ್ಮೆ ವಿಮರ್ಶಿಸಿ ಬರೆಯಿರಿ. ನಿಮ್ಮ ಸ್ವಂತ ಅಭಿಪ್ರಾಯವು ಲೇಖನದೊಳಗೆ ಬರದಂತೆ, ಮಾಹಿತಿಗೆ ಮಾತ್ರ ಒತ್ತು ಕೊಡುವಂತೆ ನೋಡಿಕೊಳ್ಳಿ.
ಧನ್ಯವಾದಗಳು, - ಮನ|Mana Talk - Contribs ೧೯:೨೨, ೧೪ ಆಗಸ್ಟ್ ೨೦೦೬ (UTC)
- ನಾಡಿಗ್,
- ನನಗೆ ಬಹಳ ಆಶ್ಚರ್ಯವಾಗುತ್ತಿದೆ.
- NPOV - ಇದನ್ನು ಮತ್ತೆ ಮತ್ತೆ ಈ ಲೇಖನವನ್ನು ಮಾತ್ರ ಗುರಿಯಾಗಿರಿಸಿ ಕೊಂಡು, ನೀವು ಮಾಡುವಾಗ ನಿಮ್ಮ ವೈಯಕ್ತಿಕ ಅಭಿಪ್ರಾಯ ಅಥವಾ ದೃಷ್ಟಿಕೋನಕ್ಕೆ ಪ್ರಾಮುಖ್ಯತೆ ನೀಡಿರುವಿರಿ ಎಂದು ಭಾವಿಸಬೇಕಾಗುತ್ತದೆ. ವಿಕಿಪೀಡಿಯಾ ಸಮುದಾಯದಿಂದ ಬೆಳೆಯಬೇಕಾದರೆ, ಇಂತಹ ತಪ್ಪುಗಳಾಗಬಾರದು ಎಂದು ನನ್ನ ಅಭಿಪ್ರಾಯ.
- ನಿಮಗೆ ಅನ್ನದಾನಯ್ಯ ಪುರಾಣಿಕರ ಲೇಖನ ವಿಕಿಪೀಡಿಯಾದಲ್ಲಿ ಇರುವುದು ಬೇಡವೆಂದರೆ, ತಗೆದುಬಿಡಿ. ಹೀಗೆ ಸಂದೇಹ ವ್ಯಕ್ತಪಡಿಸಿ, ಅಂತಹ ಹಿರಿಯರಿಗೆ ಅವಮಾನವಾಗುವಂತೆ ನೆಡೆದು ಕೊಳ್ಳುವುದು ಬೇಡ.
61.95.225.98ರಾಜೇಶ
- ಸ್ವಾಮಿ. ನನ್ನೊಬ್ಬನನ್ನೇ ದ್ವೇಷ ತಂದುಕೊಂಡು ಗುರಿಯಾಗಿಸಿ ಬರೆಯಬೇಡಿ. ಇಲ್ಲಿ ಸಮುದಾಯವೇ ಕೆಲಸ ಮಾಡುತ್ತಿರುವುದು. ಪುಟದ ಇತಿಹಾಸ ನೋಡಿ ಖಾತರಿಪಡಿಸಿಕೊಳ್ಳಿ. ಇಲ್ಲಿ ವೈಯಕ್ತಿಕ ಅಭಿಪ್ರಾಯ ಅಥವಾ ವೈಯಕ್ತಿಕವಾದುದು ಏನೂ ಇಲ್ಲ. ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನಾವೆಲ್ಲ ಇಲ್ಲಿ ವಿಕಿಪೀಡಿಯ ಬೆಳೆಸಲು ಕೂಡಿಕೊಂಡಿರುವುದರಿಂದ ಯಾವುದು ವಿಕಿಪೀಡಿಯದಲ್ಲಿ ಸರಿಯಲ್ಲವೆಂದು ಹೇಳುವುದು ನಮ್ಮ ಕರ್ತವ್ಯ. ಕೆಲವೊಮ್ಮೆ ಕೆಲವು ಸದಸ್ಯರಿಗೆ ಇದು ಇಷ್ಟವಾಗದು - ಅದು ಸಹಜ. ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ, ಅಷ್ಟೆ.
- ವಿಕಿಪೀಡಿಯದ ಕಾರ್ಯನೀತಿಯನ್ವಯ Neutral point of view ಇಲ್ಲದಿದ್ದಲ್ಲಿ NPOV ಟ್ಯಾಗ್ ಸೇರಿಸಲೇಬೇಕಾಗುತ್ತದೆ. ಅದಕ್ಕೆ ಯಾವ ಲೇಖನವೂ ಹೊರತಲ್ಲ.
- ಮತ್ತೊಂದು ವಿಷಯ. ವಿಕಿಪೀಡಿಯದಲ್ಲಿ ನೊಂದಾಯಿಸಿ ಲಾಗಿನ್ ಆಗಿ ಬರೆಯಿರಿ. ಅನಾಮಿಕ ಕಾಮೆಂಟುಗಳಿಗೆ ಹೆಚ್ಚು ಒತ್ತು ನೀಡಲಾಗುವುದಿಲ್ಲ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೨೭, ೩೦ ಆಗಸ್ಟ್ ೨೦೦೬ (UTC)