ಕರಂಗೋಲು ಕುಣಿತ
ಕರಂಗೋಲು ಒಂದು ಕುಣಿತದ ಹೆಸರು. ಏಪ್ರಿಲ್ ಮೊದಲ ವಾರ ಸುಗ್ಗಿಯ ಹುಣ್ಣಿಮೆಯ ಹಿಂದಿನ ದಿನದಂದು ಕರ್ಂಗೋಲು ಕುಣಿತ ನಡೆಸಲಾಗುತ್ತದೆ. ತುಳುನಾಡಿನ ಸುಳ್ಯ, ಪುಟ್ಟಾಪುರ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಈ ಕಾರ್ಂಗೊಲು ಕುಣಿತ ನಡೆಯುತ್ತದೆ. ಈ ನೃತ್ಯವನ್ನು ಆದಿದ್ರಾವಿಡರು ಮಾಡುತ್ತಾರೆ. ಅವರು ಪ್ರಾಚೀನ ಕಾಲದಿಂದಲೂ ಬೇಸಾಯ ಮಾಡುತ್ತಿದ್ದಾರೆ. ಆದ್ದರಿಂದ, ಕೃಷಿಯು ಈ ಜನರಿಗೆ ನಿಕಟ ಸಂಬಂಧ ಹೊಂದಿದೆ.
ಪದ ಅರ್ಥ
[ಬದಲಾಯಿಸಿ]'ಕರ್ಕೋ ಮತ್ತು ಕೋಲು' ಎಂಬ ಎರಡು ಪದಗಳು ಸೇರಿ ಕಾರಂಕೋಲು, ಕಾರಂಗೊಲು ಎಂಬುದಾಗಿದೆ. ಕರ್ಂ ಎಂದರೆ ಕಪ್ಪು. ಆದ್ದರಿಂದ ಕಪ್ಪು ಕೋಲು ಕರ್ಂಕೋಲು ಅಥವಾ ಕರ್ಂಗೋಲು ಆಗಿರಬೇಕು. ಕಾರ್ಂಗೊಲು ನರ್ತಕರ ಕೈಯಲ್ಲಿ ಕಪ್ಪು ಕೋಲು ಇರುತ್ತದೆ. ಕೋಲು ಹಿಡಿದು ಮಾಡಿವ ನೃತ್ಯವೇ ಕರಂಗೊಲು ಕುಣಿತ.
ಕಾರ್ಂಗೊಲು ಕುಣಿತದವರ ವೇಷಭೂಷಣ
[ಬದಲಾಯಿಸಿ]ಕಾರ್ಂಗೊಲು ಕುಣಿತದಲ್ಲಿ ನಾಲ್ಕು ಜನರು ತಮ್ಮ ಸೊಂಟಕ್ಕೆ ಬಿಳಿ ಬಟ್ಟೆಯನ್ನು ಸುತ್ತುತ್ತಾರೆ ಮತ್ತು ಅವರು ತಮ್ಮ ತಲೆಯ ಮೇಲೆ ಬಿಳಿ ಬಟ್ಟೆ ಅಥವಾ ಬೈರಾಸ್ ಅನ್ನು ಕಟ್ಟುತ್ತಾರೆ. ಜೇಡಿಮಣ್ಣನ್ನು ಬೆರೆಸಿ ರುಬ್ಬಿ ಮುಖ, ಎದೆ, ಬೆನ್ನು, ಹೊಟ್ಟೆ ಇತ್ಯಾದಿಗಳಿಗೆ ಹಚ್ಚುತ್ತಾರೆ. ಮುಖಕ್ಕೆ, ಬೆನ್ನಿಗೆ, ಹೊಟ್ಟೆಗೆ ಚುಕ್ಕಿ ಹಾಕಿ ನೇರ ವಾದ ಗೆರೆ ಹಾಕುತ್ತಾರೆ. ಇದನ್ನು ಗೆಂಟಿಕಟ್ಟುನೆ ಎಂದು ಕರೆಯುತ್ತಾರೆ. ಅದೇ ರೀತಿಯ ಚುಕ್ಕೆಗಳನ್ನು ಕೈಗಳಿಗೆ ಅನ್ವಯಿಸಲಾಗುತ್ತದೆ. [೧]
ಕಾರ್ಂಗೊಲುವಿನ ವೇಷಭೂಷಣದಲ್ಲಿ ವ್ಯತ್ಯಾಸಗಳು
[ಬದಲಾಯಿಸಿ]ಪುತ್ತೂರಿನ ಆಚೆಯಲ್ಲಿ ಗುಂಪಿನೊಂದಿಗೆ ಒರ್ವ ಹಿರಿಯ ವ್ಯಕ್ತಿ ಇರುತ್ತಾರೆ. ಅವರ ಸೊಂಟದಲ್ಲಿ ಮುಂಡು ಮತ್ತು ತಲೆಯಲ್ಲಿ ಮುಂಡಾಸು ಇರುತ್ತದೆ. ಹತ್ತಿಯ ಮೀಸೆಯನ್ನೂ ಅಂಟಿಸಲಾಗುತ್ತದೆ. ಅವರ ಮೈ ಗೆ ಬಣ್ಣ ಹಾಕಿರುವುದಿಲ್ಲ. ಒಂದಾ ಖಾಲಿ ಮೈಯಲ್ಲಿ ಅಥವಾ ಅಂಗಿ ಹಾಕಿ ಕೈಯಲ್ಲಿ ಬಿದಿರಿನ ಕೋಲನ್ನು ಹಿಡಿದುಕೊಂಡು ಇರುತ್ತಾರೆ.
ಬೆಳ್ತಂಗಡಿಯ ಆಚೆ ಕುಣಿತದ ಗುಂಪಿನೊಟ್ಟಿಗೆ ಒರ್ವ ಕೊರಗ ಇರುತ್ತಾನೆ. ಅವನ ಮೈ ಗೆ ಕಪ್ಪು ಬಣ್ಣವನ್ನು ಬಲಿಯಲಾಗುತ್ತದೆ. ಮುಖಕ್ಕೆ ಜೇಡಿ ಮಣ್ಣಿನಿಂದ ಚುಕ್ಕಿ ಇಡುತ್ತಾರೆ, ತಲೆಗೆ ಅಡಿಕೆ ಮರದ ಎಲೆಯ ಹಾಳೆಯಿಂದ ಮಾಡಿದ ಮುಟ್ಟಾಲೆ ಇಟ್ಟು ಕೈಯಲ್ಲಿ ಕೋಲು ಹಿಡಿದುಕೊಂಡು ಇರುತ್ತಾರೆ. ಸೊಂಟಕ್ಕೆ ಕಪ್ಪು ಬಟ್ಟೆ ಅದರ ಮೇಲೆ ಗೆಜ್ಜೆ ಮತ್ತು ಕುತ್ತಿಗೆಯಲ್ಲಿ ಒಂದು ಹೂವಿನ ಮಾಲೆ ಇರುತ್ತದೆ.
ಸುಳ್ಯ ದ ಆಚೆ ಕುಣಿತದ ಗುಂಪಿನ ಒಟ್ಟಿಗೆ ವಧು ವರರ ವೇಷ ಇರುತ್ತದೆ. ತಲೆಗೆ ಮುಂಡಾಸು, ಸೊಂಟಕ್ಕೆ ಮುಂಡು ಕಟ್ಟಿ ಉದ್ದ ಕೈಯ ಅಂಗಿ ಹಾಕಿದ ಮಧುಮಗನ ವೇಷ. ಸೀರೆ ರವಕೆ ಹಾಕಿ, ಕೂದಲು ನೇಯ್ದು, ಹೂ ಮುಡಿದು ಆಭರಣ ಹಾಕಿದ ಮಧುಮಗಳ ವೇಷ ಇರುತ್ತದೆ.
ಕುಣಿತದ ಕ್ರಮ
[ಬದಲಾಯಿಸಿ]ಗ್ರಾಮ ಸಂಚಾರದ ಹೊತ್ತಿಗೆ ಕುಣಿತದ ಎಲ್ಲಾ ಸದಸ್ಯರು ಶುದ್ದದಲ್ಲಿ ಇರುತ್ತಾರೆ. ಗುಂಪಿನ ಮುಖ್ಯಸ್ಥ ಮನೆಯ ಅಂಗಳದಲ್ಲಿ ನಿಂತು 'ಪೊಲಿದೆತ್ತೊಂದು ಬತ್ತೋ' ಅಂತ ಹೇಳುತ್ತಾನೆ, ಅವಗ ಮನೆಯವರು ಅವರಿಗೆ ಬೆಳಕಿನ ವ್ಯವಸ್ತೆ ಮಾಡಿ ಕುಣಿಯಲು ಅನುಮತಿ ಕೊಡುತ್ತಾರೆ. ಗಂಟೆಮಣಿಯನ್ನು ಜೊರಾಗಿ ಹೊಡೆದು ಪದ್ಯದ ಜೊತೆಗೆ ಕುಣಿತ ಪ್ರಾರಂಭಿಸುತ್ತಾರೆ. ಕುಣಿತದವರು ಎರಡು ಸಾಲಿನಲ್ಲಿ ನಿಂತು ಒಂದು ಹೆಜ್ಜೆ ಮುಂದೆ ಮತ್ತು ಒಂದು ಹೆಜ್ಜೆ ಹಿಂದೆ ಇಟ್ಟು, ಎರಡೂ ಕೈಯಲ್ಲಿ ನೆಕ್ಕಿಯ ಗೊಂಚಿಲನ್ನು ಹಿಡಿದು, ಹಿಂದೆ ಮುಂದೆ ಬೀಸಿಕೊಂಡು ನಡೆಯುತ್ತಾರೆ. ಮುಂದೆ ಹೋಗಿ ದಿಕ್ಕು ಬದಲಿಸಿದಾಗ ಕೂಡಾ ಅದುವೇ ಕ್ರಮದಲ್ಲಿ ಇರುತ್ತದೆ. ಒರ್ವ ಪದ್ಯ ಹಾಡಿಕೊಂಡು ಡೋಲುಬಡಿದುಕೊಂಡು ಇರುತ್ತಾನೆ. ಅಥಾವ ಕೆಲವೊಮ್ಮೆ ಡೋಲು ಬಡಿಯಲು ಬೇರೆ ಜನರೂ ಇರುತ್ತಾರೆ. ಹಿರಿಯ ವ್ಯಕ್ತಿಯ ವೇಸದವರು ಕೋಲನ್ನು ನೆಲಕ್ಕೆ ಬಡಿದುಕೊಂಡು ಕುಣಿಯುವವರ ಆಚೆ ಈಚೆ ಹೋಗುತ್ತಾ ಇರುತ್ತಾರೆ. ಕೊರಗ ಮತ್ತು ವಧು ವರರ ವೇಸದವರು ಕೂಡಾ ಹೀಗೆಯೇ ಸುತ್ತು ಬಂದು ನಲಿಯುತ್ತಾರೆ. ಪದ್ಯ ಹೇಳುವವರು ಒಂದು ಸಾಲು ಹೇಳಿದ ನಂತರ ಉಳಿದವರು, ' ಪೊಲಿಯೋ ಪೊಲ್ಯರೆಪೋ ಪುವ್ವೆ ಪೋಂಡುಲ್ಲಯಾ ' ಅಂತ ಹೇಳುತ್ತಾರೆ. ಹೀಗೆ ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ಇವರಿಗೆ ಅಕ್ಕಿ, ಭತ್ತ, ಮತ್ತು ಸ್ಡಲ್ಪ ಹಣವೂ ಸಿಗುತ್ತದೆ. ಮನೆ ಮನೆಗೆ ಹೋಗಿ ಕುಣಿಯುವ ಕುಣಿತ ಆದ ಕಾರಣ, ಮನೆಯವರೇ ಪ್ರೇಕ್ಷಕರಾಗುತ್ತಾರೆ . ಹೆಚ್ಚಾಗಿ ಈ ಕುಣಿತ ಗ್ರಾಮ ಮಟ್ಟದಲ್ಲಿ ಮಾತ್ರ ನಡೆಯುತ್ತದೆ.
ಕರ್ಂಗೋಲುನ ತುಳು ಪಾರ್ದನ ಅಥಾವ ಪದ್ಯ
[ಬದಲಾಯಿಸಿ]ಡಾ.ವಾಮನ ನಂದಾವರದಾರ್ ಪಾಲ್ತಾಡಿ ರಾಮಕೃಷ್ಣ ಆಚಾರ್ ಆರ್ ಸಂಪಾದನೆ ಮಾಡಿದ ಕರ್ಂಗೋಲುನ ಕುಣಿತದ ಪಾರ್ದನ ಅಥಾವ ಪದ್ಯ ಈ ರೀತಿಯಾಗಿದೆ.
ಓ ಪೊಲಿಯೇ ಪೊಲ್ಯರೆ ಪೋ ಪುವ್ವೆ ಪೊಂಡುಲ್ಲಯ
ಓ ಮಾಯಿತ ಪುಣ್ಣಮೆ ಮಾಯಿಡೇ ಪೋತುಂಡೇ
ಓ ಸುಗ್ಗಿದ ಪುಣಮೆ ಸುಗ್ಗಿಢೇ ಪೋತುಂಡೇ
ಕರಂಗೋಲು ಪುಟ್ಟುನೇ ಕಡಲಾ ಬರಿಟ್ ಗೆ
ಕರಂಗೋಲು ಪುಟ್ಟುನೇ ಪೊಯ್ಯೆತ ನಡುಟೇ
ಪೊಯ್ಯೆತುಲಯ ಕುವ್ವೆತನೆ ನಡುಟೇ
ಕರಂಗೋಲು ಕೊಂಡ್ಪುನಾ ಕುಸಲೆನ್ ಪಿನಯೆರೆ
ಕೊಟ್ಟೆತಾ ಮುಳ್ಳುಟೋ ಕೂತೂತು ಕೊಂಡ್ರೊಡೆ
ಕರೆಯನೆ ಮಾದೇರಿಟಿ ಪೊದಿತೇ ಕೇಂಡ್ರೋಡೇ
ಕಂಚಿನೇ ತಡ್ಪೇಡ್ ಗಾಳ್ತದೇ ಕೊಂಡ್ರೊಡ್
ಉಳ್ಳಯನ್ ಮೆನ್ಪಿಯರ್ ಕುಸಲೆನ್ ಪಿನಯೆರೆ
ಗಿಂಡ್ಯಟೇ ಪೇರ್ ಪತ್ತ ಉಳ್ಳಯನ್ ಮೆನಿಪು
ಏರಜೇ ಕಾಂತಗಾ ಅಜ್ಜರೇನ್ ಮೆನಿಪು
ಅಜ್ಜರೆನ್ ಮೆನ್ಪಿಯೆರ ಕುಸಲ್ ನ ಪಿನಯನೆ
ಎರಜೇ ಕಾಂತಗಾ ಬಾಲೆನ್ ಮೆನಿಪು
ಬಾಲೆನ್ ಮೆನ್ಪಿಯರೆ ಕುಸಲ್ ನ ಎಯೆನ್
ಬಾಲೆದ ಕೈತಲ್ ಪುರ್ಗೊದೀದ್ ಬಾಲೆನ್ ಮೆನಿಪು
ಬಟ್ಟಲ್ಢ್ ಪೇರ್ ಪತ್ತ್ ಬಾಲೆನ್ ಮೆನಿಪು
ಉಳ್ಳಾಳ್ತಿನ ಮೆನ್ಪಿಯರೆ ಕುಸಲ್ ನ ಪಿನಯನೆ
ಗಿಂಡ್ಯಡ್ ನೀರ್ ಪತ್ತ್ ಉಳ್ಳಾಳ್ತಿನ್ ಮೆನಿಪು
ಎರೆಗೆ ಕಾಂತಗಾ ಉಳ್ಳಾಳ್ತಿನ್ ಮೆನಿಪು
ಉಳ್ಳಾಳ್ತಿನ ಮೆನಿಪಯರೆ ಕುಸಲ್ ನ ಪಿನಯನೆ
ಒರ್ಕರನೆ ಮೊಟ್ಟುಲೆಯೆ ಓರಂಗಡಿ ಓದಲೆ
ಓ ಪೊಲಿಯೇ ಪೊಲಿಯರೆ ಪೋ ಪೂವೆ ಪೊಂಡುಲ್ಲಾಯ
ಓ ಎರಗಾಲಂಗಾರ ನಾಲೆರು ಕಟ್ಟ್ ನಾ
ನಾಲೆರು ಕಟ್ಟರನೆ ನಾಯರಲಬ್ಯಾಂಡ್
ಕಾಯೆರ್ತ ನಾಯೆರ ನನ ಬೇಕಾಲಾವೊಂದೆ
ಎರಗಾಲಂಗಾರ ನಾಲೆಯ ಮಾದಲಾ
ನಾಲೆರುಮಾದಯರೆ ನುಗೋನೆ ಇದ್ದಿಂಡೆ
ಪೆಲ ಕಡ್ತೆರುಳ್ಳಯ ನುಗೊಲೊಂಜಿ ತೀರುಂಡೆ
ಎರಗಾಲಂಗಾರಾ ನಾಲೆರು ಮಾದಲಾ
ನಾಲೆರು ಮಾದವರೆ ಪನೊರೊಂಬಿಲಾವೋ
ಪಾವೆರಿ ಪತ್ಯರುಳ್ಳಾಯ ಪನೊರೊಂಜಿ *ತೀರ್ತೆರೆ
ಏರಗಸಲಂಗಾರ ನಾಲೆರು ಮಾದಲಾ
ನಾಲೆರು ಮಾದಯರೆ ಪೊಸಕೆತ ಬಲ್ಲ್ದ್ಯಾಂಡೆ
ಕೇರಿನ್ ಪತ್ತ್ ದ್ ಪೊಸಕೆತ ಬಲ್ಲ್ ಮಲ್ತೆರೇ
ಏರಗಾಲಂಗಾರ ನಾಲೆರು ಮಾದಲಾ
ನಾಲೆರು ಮಾದವೆರೆ ಬಡೂನೆ ಆವೋಡೇ
ಬಡೂನೇ ಮಲ್ತೆರ್ ಪಿಲಿಯುಗುರು ಬಡೂನೇ
ಓಲಾಯರೇ ಕಂಡೊನು ಈಯರೆ ಕಂಡೋನು
ಕಾರಿ ಕಬಿಲನೆ ಎರು ರಡ್ಡ್ ಮಲ್ತೆರೇ
ಕೊಂಕಣಿ ಮಾಂಕಣಿ ಕಂಡೋ ರಡ್ಡ್ ಮಲ್ತೆರ
ಲಾಯೆರೆ ಕಂಬುಲನೇ ಒರ್ಲನೇ ಮಲ್ತ್ ರೇ
ಇರ್ವಲಟ ಅಡತಡ್ ಮೂವ್ವಲಟ್ ಕೋರುಂಡೆ
ಎರಗಾಲಂಗಾರ ನೀರ್ ನ ಕಟ್ಟಲಾ
ಓ ಪೊಲಿಯೆ ಪೊಲಿಯರೆ ಪೋ ಪುಲೆ ಪೊಂಡುಲ್ಲಾಯ
[೨]
ಕನ್ನಡದಲ್ಲಿ ಕರ್ಂಗೋಲು ಕುಣಿತದ ಪಾರ್ದನ ಅಥಾವ ಪದ್ಯ
[ಬದಲಾಯಿಸಿ]ತುಳು ಭಾಷೆಯ ಸೊಗಡಿನಿಂದ ತುಂಬಿರುವ ಕರಂಗೋಲು ಪಾರ್ದನವನ್ನು ಕನ್ನಡದ ಓದುಗರಿಗೂ ಅರ್ಥವಾಗಲಿ ಮತ್ತು ತೌಲನಿಕ ಅಧ್ಯಯನದ ಹಿನ್ನೆಲೆಯಲ್ಲಿ ಕರಂಗೋಲು ಹಾಡಿನ ಕನ್ನಡ ರೂಪವನ್ನು ಡಾ.ಕೆ. ಚಿನ್ನಪ್ಪ ಗೌಡರು ಸಂಪಾದಿಸಿದ್ದಾರೆ. ಅದು ಈ ಕೆಳಗಿನಂತಿದೆ.
'ಪೊಲಿ ಪೊಲಿ' ಎಂದು ಕರೆವೆವು ಕರ್ಂಗೋಲ ಹುಟ್ಟಿದ
ಕರಂಗೋಲು ಹುಟ್ಟಿದ್ದು ಎಲ್ಲಿ ಕಾಂತಕ್ಕ
ಮೂಡುದಿಕ್ಕಿನಲ್ಲಿ ಗದ್ದೆಯ ಗಡಿಯಲ್ಲಿ
ಪಡುದಿಕ್ಕಿನಲ್ಲಿ ಹೊಳೆಬದಿ ನಡುವಿನಲ್ಲಿ
ಎಲ್ಲಿ ಕಾಂತಕ್ಕ ಏಳು ಕಡಲು ಆ ಬದಿಯಲ್ಲಿ
'ಮಾದೆರು'ವಿನ ದೊಡ್ಡ ಕಾಡು ತಿರುಗಿಸಿ ತರಬೇಕು
'ಕೊಟ್ಟೆ'ಯ ಮುಳ್ಳಿಯಲ್ಲಿ ಸಿಕ್ಕಿಸಿ ತರಬೇಕು
'ಸೂರಿ'ಯ ಮುಳ್ಳಿನಲ್ಲಿ ಹೆಣೆದು ತರಬೇಕು
'ಈಂಬುಳ' ಮುಳ್ಳಿನಲ್ಲಿ ತಿರುಗಿಸಿ ತರಬೇಕು
'ಇಟ್ಟೆಯದ' ಸೊಪ್ಪಿನಲ್ಲಿ ಹೊದ್ದಿಸಿ ತರಬೇಕು
'ಬೈದ್ಯರ' ಕೋವಿಯಲ್ಲಿ ಗುಂಡು ಹಾರಿಸಿ ತರಬೇಕು
ಕೈಯ ಬಿಲ್ಲಿನಲ್ಲಿ ಸಿಕ್ಕಿಸಿ ತರಬೇಕು
ನೆಕ್ಕಿ ಸೊಪ್ಪಿನಲ್ಲಿ ಬೀಸಿ ತರಬೇಕು
ಗೆರಟೆಯ ನೀರಿನಲ್ಲಿ ಮುಳುಗಿಸಿ ತರಬೇಕು
ಮರದ ಪಾತ್ರೆಯ ನೀರಿನಲ್ಲಿ ಈಜಿಸಿ ತರಬೇಕು
ಆ ಕರ್ಂಗೋಲು ತರಲು ಯಾರು ಬಲ್ಲರು?
ಮಂಗಾರ ಮಾನಿಗ ಅವಳಾದರೆ ಬಲ್ಲಳು
ಕಾಂತಾರ ಕರಿಯ ಕುರೋವು ಅವನಾದರೆ ಬಲ್ಲನು
'ಕಟ್ಟಿದ' ಮಕ್ಕಳು ಅವರಾದರೆ ಬಲ್ಲರು
ಯಾರು ಮದುಮಗಳೆ (ಹೆಂಗಸು) ಬಾಗಿಲು ತೆಗೆಯಿರಿ
ಬಾಗಿಲು ತೆಗೆಯುವ ಉಪಾಯವನ್ನು ತಿಳಿಯೇನು
ಬೀಗದ ಕೈ ಹಿಡಿದು ಚಿಲಕವನ್ನು ಜಾರಿಸಿರಿ
ಯಾರು ಒಡತಿಯೆ ಒಡೆಯನನ್ನು ಎಚ್ಚರಿಸಿರಿ
ಒಡೆಯನನ್ನು ಎಚ್ಚರಿಸುವ ಉಪಾಯವನ್ನು ತಿಳಿಯೆನು
ಗಿಂಡ್ಯೆ ನೀರು ಕೊಂಡು ಹೋಗಿ ಒಡೆಯನನ್ನು ಎಚ್ಚರಿಸಿರಿ
ಯಾರು ಒಡತಿಯೆ ಮಗುವನ್ನು ಎಚ್ಚರಿಸಿರಿ
ಮಗುವನ್ನು ಎಚ್ಚರಿಸುವ ಉಪಾಯವನ್ನು ತಿಳಿಯೆನು
ಬಟ್ಟಲು ಹಾಲು ಕೊಂಡು ಹೋಗಿ ಮಗುವನ್ನು ಎಬ್ಬಸಿರಿ
ಒಡೆಯ ಇದ್ದಾರೊ ಇಲ್ಲವೋ ದೇಯಿ ಮದುಮಗಳೇ
ಕರೆದರೆ ಕೂಗಿದರೆ 'ಕೂಟಕ್ಕೆ' ಹೋದರು
ಕೂಟದಲ್ಲಿ ಒಡೆಯ ಏನು ಮಾಡಿದರು?
ಹಂಡೆ ಕೊಂಡು ಹೋಗಿ (ಹಾಲು) ಕರೆಯಲು ಎಮ್ಮೆ ತಂದರು
ಗಿಂಡ್ಯೆ ಕೊಂಡು ಹೋಗಿ ಹಾಲು ಕರೆಯಲು ದನ ತಂದರು
ಕಾರಿ ಕಬಿಲ ಎಂಬ ಎತ್ತುಗಳನ್ನು ತಂದರು
- ಕಾಣದ ಕಟದ ಎಂಬ ಆಳುಗಳನ್ನು ನೇಮಿಸಿದರು
- ಕೊಂಕಣ' 'ಬಂಕಣ' ಎಂಬ ಗದ್ದೆ ಮಾಡಿದರು
ಕಟ್ಟೆ ಹುಣಿಯ ಮೇಲೆ ತೆಂಗು ನೆಡಿಸಿದರು
ಬಳ್ಳಿಗೆ ಮೇಲಾದ ಬಾಳೆ ಬೆಳೆಸಿದರು
ಬೆಟ್ಟಿನಲ್ಲಿ ಮೇಲಾದ ಹಲಸು ಬೆಳೆಸಿದರು
ಕಾಡಿಗೆ ಮೇಲಾದ 'ಶಾಂತಿ' ಮರ ಬೆಳೆಸಿದರು
ಪಡು 'ಪದೋಳಿ'ಯಲ್ಲಿ ಕಂಚಿಯ ಗಂಟೆ ಜೊಡಿಸಲು
ಕಂಚಿಯ ಗಂಟೆ ಜೋಡಿಸಲು 'ನಾಲಗೆ' ತುಂಡಾಯಿತು
ಮೂಡು 'ಪದೊಳಿ' ಮುತ್ತಿನ ಗಂಟೆ ಜೊಡಿಸಲು
ಮುತ್ತಿನ ಗಂಟೆ ಜೋಡಿಸಲು ಮುರಿದು ಹೋಯಿತು
ನಾಲ್ಕೆತ್ತು ತಿರುಗಿಸಲು ಕಾಣದ ಕಟದ
ನಾಲ್ಕೆತ್ತು ತಿರುಗಿಸಲು (ಹೂಡಲು) ನೇಗಿಲು ಇರಲಿಲ್ಲ
ಕಾಸರಕನ ಮರ ಕಡಿದು ನೇಗಿಲು ಮಾಡಿಸಬೇಕು
ನಾಲ್ಕೆತ್ತು ಹೂಡು ಕಾಣದ ಕಟದ
ನಾಲ್ಕೆತ್ತು ಹೂಡಲು ನೊಗ ಇರಲಿಲ್ಲ
ಹಲಸಿನ ಮರಕಡಿದು ನೊಗವೊಂದು ಕೆತ್ತಿಸಬೇಕು
ನಾಲ್ಕೆತ್ತು ಹೂಡಲು 'ಗುಂಡಲ' ಇರಲಿಲ್ಲ
'ಪಾವೊರಿ'ಯನ್ನು ಹಿಡಿದು 'ಗುಂಡಲ' ಹಾಕಬೇಕು
ನಾಲ್ಜೆತ್ತು ಹೂಡಲು ಕೊರಳ ಹಗ್ಗ ಇರಲಿಲ್ಲ
ಕೇರೆಯನ್ನು ಹಿಡಿದು ಕೊರಳ ಹಗ್ಗ ತೊಡಿಸಬೇಕು
ನಾಲ್ಕೆತ್ತು ಹೂಡಲು ಕೋಂಟು ಹಗ್ಗ ಇರಲಿಲ್ಲ
ಸರ್ಪವನ್ನು ಹಿಡಿದು ಕೋಂಟು ಹಗ್ಗ ಹಾಕಬೇಕು
ನಾಲ್ಕೆತ್ತು ಹೂಡಲು ಕಟ್ಟುವ ಹಗ್ಗ ಇರಲಿಲ್ಲ
ಒಳ್ಳೆ ಹಾವನ್ನು ಹಿಡಿದು ಕಟ್ಟುವ ಹಗ್ಗ ಹಾಕಬೇಕು
ನಾಲ್ಕೆತ್ತು ಹೂಡಲು ಬೆತ್ತವೂ ಇರಲಿಲ್ಲ
ಬುಳೆಕ್ಕರಿ ಹಾವನ್ನು ಹಿಡಿದು ಪೀಲಿ ಬೆತ್ತ ನೆಯ್ಯಬೇಕು
ನಾಲ್ಕೆತ್ತು ಹೂಡಲು ಪಣೊರು ಇರಲಿಲ್ಲ
ಅರಣೆಯನ್ನು ಹಿಡಿದು ಪಣೊರು ಬಡಿಯಬೇಕು
ನಾಲ್ಕೆರು ಹೂಡಲು ಪತ್ತೊಂಜಾನಿ ಇರಲಿಲ್ಲ
ಉಂಬುಳು ಹಿಡಿದು ಸಣ್ಣ ಮೊಳೆ ಹೊಡೆಯಬೇಕು
ನಾಲ್ಕೆತ್ತು ಹೂಡು ಕಾಣದ ಕಟದ
ಪಡುದಿಕ್ಕಿಗೊಮ್ಮೆ ಹೂಡು ಕಾನದ ಕಾಟದ
ಮೂಡುದಿಕ್ಕಿಗೊಮ್ಮೆ ಹೂಡು ಕಾಣದ ಕಾಟದ
ಎರಡು ಸಾಲು ಹೂಡಿಸಿದ ಕಿನ್ನಿ ಮಾನಿ ಒಡೆಯ
ಎರಡನೆಯ ಸಾಲಿಗೆ ಹಟ್ಟಿಗೊಬ್ಬರ ಹಾಕಿಸಿದರ ಒಡೆಯ
ಐದು ಸಾಲು ಹೂಡಿಸಿದ ನಾರಾಯಣ ಬ್ರಾಹ್ಮಣ
ಐದು ಸಾಲಿಗೆ ಆಢಿ ಗೊಬ್ಬರ ಹಾಕಿಸಿದರು ಒಡೆಯ
ಮೂಡಣಕ್ಕೆ ಹೋಗಬೇಕು ಬಿಳಿ 'ಕಯಮೆ' ತರಬೇಕು
ಪಡುವಣಕ್ಕೆ ಹೋಗಬೇಕು ಕಪ್ಪು 'ಕಯಮೆ' ತರಬೇಕು
ಒಂದು ಗದ್ದೆಗೆ ಒಂದು ತಳಿ ಬಿತ್ತಬೇಕು
ಮತೋಂದು ಗದ್ದೆಗೆ ಮತ್ತೊಂದು ತಳಿ ಬಿತ್ತಬೇಕು
ಮೂರರಲ್ಲಿ ಮೂರನೆಯ ನೀರು ಇಳಿಸಿದ್ದಾರೆ ಒಡೆಯ
ಏಳರಲ್ಲಿ ಏಳನೇ ನೀರು ನಿಲ್ಲಿಸಿದ್ದಾರೆ ಒಡೆಯ
ಅದೊಂದು ಮೊಳಕೆಯಾಯಿತು ಸೂಜಿ ಮೊಳಕೆಯಾಯ್ತು
ಅದೊಂದು ಚಿಗುರಿತು ಹಿಂಗಾರ ಮಾಲೆ ಚಿಗುರಿತು
ಭತ್ತ ಹಣ್ಣಾಯಿತು ಹಳದಿ ವರ್ಣವಾಯಿತು
ಪೈರು ಹಣ್ಣಾಯಿತು ಕೇದಗೆ ವರ್ಣವಾಯಿತು
ನಿಂತು ಬೆಳೆಯಲು ಗಿಳಿಯಣ್ಣ ಬಿಡಲಿಲ್ಲ
ಗಿಳಿಯಣ್ಣ ನನ್ನು ಹಿಡಿದು ಪಂಜರದಲ್ಲಿ ಹಾಕಬೇಕು
ಪಂಜರದಲ್ಲಿ ಗಿಳಿಯಣ್ಣ ಓದಿದಂತೆ ಕೇಳಿಸುತ್ತದೆ
ನೆಲ ಹಿಡಿದು ಬೆಳೆಯಲು ಹಂದಿಯಣ್ಣ ಬಿಡಲಿಲ್ಲ
ಹಂದಿಯಣ್ಣ ನನ್ನು ಹಿಡಿದು ಗೂಡಿನಲ್ಲಿ ಹಾಕಬೇಕು
ಗೂಡಿನಲ್ಲಿ ಹಂದಿಯಣ್ಣ ಜಿಗಿದಂತೆ ಆಗುತ್ತದೆ
ಕೆಯ್ ಕೊಯ್ಯಲು 'ಪರುಕತ್ತಿ' ತರಬೇಕು
ಕೆಯ್ ಕಟ್ಟಲು 'ಸೋಣಬಳ್ಳಿ' ತರಬೇಕು
ಕೆಯ್ ಹೊರಬೇಕು ಅಂಗಳಕ್ಕೆ ತರಬೇಕು
ಕೆಯ್ ಹೊಡೆಯಲು ಕಲ್ಲಿನ ಮಂಚ ತರಬೇಕು
ಕುಂಟು ಪೊರಕೆಯಲ್ಲಿ ಗುಡಿಸಿ ತರಬೇಕು
ಗಾಳಿಸುವ ಗೆರಸೆಯಲ್ಲಿ ಗಾಳಿಸಿ ತರಬೇಕು
ರಾಶಿ ಮಾಡಿದ ಭತ್ತ ಮಾಳಿಗೆ ಮನೆ ಇರಬೇಕು
ಮಾಯಿ ತಿಂಗಳಲ್ಲಿ ಭತ್ತ ತೋಡಿಸಿದ್ದಾರೆ ಒಡೆಯ
ಕರ್ಂಗೋಲಿನ ಮಕ್ಕಳಿಗೆ ಗೆರಸೆ ತುಂಬಿಕೊಡಬೇಕು
ಒಡೆಯ ಒಡತಿ ಗುಣುಗುಣು ಹೇಳುತ್ತಾರೆ
ಐವರಿಗೆ ಐದು ಪಡಿ ಬೇರೆಯೇ ಆಳೆಯಿರಿ
ಐವರಿಗೆ ಐದು ವೀಳ್ಯ ಬೇರೆಯೇ ಹಿಡಿಯಿರಿ
ಹಾಗೆ ಹೇಳುವುದಾದರೆ ಮುಂಜಾನೆಯವರೆಗಿದೆ.
[೨]
ವೇಷ ತೆಗೆಯುವ ಕ್ರಮ
[ಬದಲಾಯಿಸಿ]ಒಂದು ರಾತ್ರಿಯ ಸಂಚಾರ ಮುಗಿಸಿ ಕರಂಗೋಲು ಕುಣಿತದ ಗುಂಪು ಒಂದು ಕಾಸರ್ಕ ಮರದ ಬುಡದ ಬಳಿ ಬರುತ್ತಾರೆ. ಬಣ್ಣ ತೆಗೆದು, ವೇಷವನ್ನು ಕಳಚುವ ವಿಧಿಯೂ ಇದೇ ಮರದ ಬುಡದಲ್ಲಿ ಆಗುತ್ತದೆ. ಬಣ್ಣ ತೆಗೆದು ಮತ್ತು ವೇಷವನ್ನು ಕಳಚಿ, ಕಾಸರ್ಕ ಮರದ ಏಳು ಎಲೆಗಳನ್ನು ತೆಗೆದು ನೆಲದ ಮೇಲೆ ಸಾಲಾಗಿ ಇಟ್ಟು ಒಂದು ಮುಷ್ಟಿ ಅಕ್ಕಿಯನ್ನು ಹಾಕಿ ಕೈ ಮುಗಿದು ನೆಕ್ಕಿಯ ಸೊಪ್ಪುಗಳನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಇದೆಲ್ಲಾ ಮುಗಿದ ನಂತರ ಸ್ನಾನ ಮಾಡಿ ಉಪಹಾರ ಸೇವಿಸುತ್ತಾರೆ. ಹೀಗೆಯೇ ಒಂದು ವಾರ ಈ ಕುಣಿತ ನಡೆಯುತ್ತದೆ.
ಪ್ರಸಾದದ ಊಟ ಹಂಚುವಿಕೆ
[ಬದಲಾಯಿಸಿ]ಕರಂಗೋಲು ಕುಣಿತದ ಕೊನೆಯ ದಿನದಂದು ಕಾನದ ಮತ್ತು ಕಾಟದ ಕುಲದೈವಗಳಿಗೆ ಅಗೇಲು ಬಡಿಸಿ ಪ್ರಾರ್ಥನೆ ಸಲ್ಲಿಸುವ ಪದ್ಧತಿಯೂ ಇದೆ. ಸಂಗ್ರಹಿಸಿದ ಅಕ್ಕಿ, ಭತ್ತ, ಹಣವನ್ನು, ರೊಟ್ಟಿ ಮತ್ತು ಕೋಳಿ ಆಡುಗೆ ಮಾಡಲು ಬಳಸಲಾಗುತ್ತದೆ ಮತ್ತು ಕರಂಗೋಲು ನೃತ್ಯದ ಪ್ರದರ್ಶನದ ನಂತರ ಅಂಗಳದಲ್ಲಿ ಚಾಪೆ ಹಾಸಿ ಎಲ್ಲರೂ ಹಂಚಿ ಬಡಿಸಿಕೊಂಡು ತಿನ್ನುತ್ತಾರೆ.