ಚಾರಿವಾರಿ (ಅಲಂಕಾರಿಕ ಸರ)
ಚಾರಿವಾರಿ ಎಂಬುದು ಜರ್ಮನಿಯ ಬವೇರಿಯಾದಲ್ಲಿ ಜನಪ್ರಿಯವಾಗಿರುವ ಒಂದು ಆಭರಣವಾಗಿದೆ. ಘನವಾದ ಬೆಳ್ಳಿಯ ಅಥವಾ ಬೆಳ್ಳಿಯ ಲೇಪಿತ ಸರಪಳಿಯಿಂದ ತಯಾರಿಸಲ್ಪಟ್ಟ ಇದನ್ನು ರತ್ನದ ಕಲ್ಲುಗಳು, ನಾಣ್ಯಗಳು, ಪದಕಗಳು, ಕೊಂಬು ಮತ್ತು ವಿವಿಧ ಪ್ರಾಣಿಗಳ ದೇಹದ ಸಣ್ಣ ಸಣ್ಣ ಭಾಗಗಳನ್ನು ಬಳಸಿ ಮಾಡಲಾಗುತ್ತದೆ.[೧][೨]
ಮೂಲ ಮತ್ತು ಬಳಕೆ
[ಬದಲಾಯಿಸಿ]ಚಾರಿವಾರಿ ಎಂಬ ಹೆಸರು ಲ್ಯಾಟಿನ್ನ ಕ್ಯಾರಿಬೇರಿಯಾ ಎಂಬ ಪದದಿಂದ ಬಂದಿದೆ. ಇದರರ್ಥ "ಅವ್ಯವಸ್ಥೆ" ಅಥವಾ "ಹುಚ್ಚು". "ಪೆಂಡೆಮೋನಿಯಂ" ಅಥವಾ "ಗದ್ದಲ" ಎಂದೂ ಇದು ಅರ್ಥವನ್ನು ನೀಡುತ್ತದೆ.[೩][೪]
ಬವೇರಿಯಾದ ಪುರುಷರು ಚಾರಿವಾರಿಯ ಬೆಲ್ಟ್ ಅನ್ನು ತಮ್ಮ ಲೆಡರ್ಹೋಸನ್ನಲ್ಲಿ ಧರಿಸುತ್ತಾರೆ. ಚಾರಿವಾರಿಯು ಸಾಂಪ್ರದಾಯಿಕ ಆಭರಣವಾಗಿ ಅಥವಾ ಯಶಸ್ವಿ ಬೇಟೆಗೆ ತಾಯಿತವಾಗಿ ಉಪಯೋಗಿಸಲ್ಪಡುತ್ತಿತ್ತು. ಇದು ಬಹುಶಃ ಒಂದು ಸರದಿಂದ ಅಭಿವೃದ್ಧಿಗೊಂಡಿದೆ, ಅದರಿಂದ ಬೇಟೆಯಾಡುವ ವಸ್ತುಗಳ ಜೊತೆ ಅದನ್ನು ನೇತುಹಾಕಲಾಗುತಿತ್ತು.[೫] ಇದನ್ನು ಖರೀದಿಸಲು ಸಾಧ್ಯವಿಲ್ಲ. ಅದಕ್ಕಾಗಿ ಇದನ್ನು ಎಚ್ಚರಿಕೆಯಿಂದ ಸಂರಕ್ಷಿಸಲಾಯಿತು ಮತ್ತು ಒಂದೇ ಕುಟುಂಬದಲ್ಲಿ ತಲೆಮಾರುಗಳಿಂದ ವರ್ಗಾಯಿಸಲಾಯಿತು. ಕೆಲವು ಹಳೆಯ ಚಾರಿವಾರಿಗಳು ೧೦,೦೦೦ ಯುರೋಗಳಷ್ಟು (ಸುಮಾರು £೮,೭೭೦) ಮೌಲ್ಯವನ್ನು ಹೊಂದಿವೆ. ಮಹಿಳೆಯರ ಸರವನ್ನು ಸಾಮಾನ್ಯವಾಗಿ "ಎರ್ಬ್ಸ್ಕೆಟೆನ್" ನಿಂದ ತಯಾರಿಸಲಾಗುತ್ತದೆ ಮತ್ತು ತಾಲಿಸ್ಮೆನ್ ನಿಂದ ಅಲಂಕರಿಸಲಾಗುತ್ತದೆ.
-
ಸಾಂಪ್ರದಾಯಿಕ ಚಾರಿವಾರಿ - ಪೆಂಡೆಂಟ್ಗಳೊಂದಿಗೆ ಬೆಳ್ಳಿ ಸರಪಳಿ
-
ಅನೇಕ ಅಲಂಕಾರಗಳಿಂದ ಕೂಡಿದ ಚಾರಿವಾರಿ
-
ಬವೇರಿಯಾ,ಬಾಡೆನ್ ಮತ್ತು ಪ್ರಶ್ಯ ೧೯ ನೇ ಮತ್ತು ೨೦ ನೇ ಶತಮಾನದ ಆರಂಭದಲ್ಲಿ ಬೆಳ್ಳಿ ನಾಣ್ಯದೊಂದಿಗೆ ಚಾರಿವಾರಿ. ಇದನ್ನು ಬವೇರಿಯಾದ ರಾಜ ಲುಡ್ವಿಗ್ IIರ ಸ್ಮರಣಾರ್ಥ ಅಲ್ಲಿನ ನಾಣ್ಯಗಳನ್ನು ಬಳಸಿ ತಯಾರಿಸಲಾಗಿದೆ.
-
ಜೀನ್ಸ್ ಮೇಲೆ ಧರಿಸಿರುವ ಆಧುನಿಕ ಚಾರಿವಾರಿ
ಉಲ್ಲೇಖಗಳು
[ಬದಲಾಯಿಸಿ]- ↑ "German Hunting Amulets (Charivari) | R·Seitz: Talisman". Rseitz.com. 28 July 2014. Archived from the original on 5 March 2016. Retrieved 28 February 2016.
- ↑ "A South German Luxurious Charivari, 19th/20th Century Heavy Silver Stock Photo, Picture And Royalty Free Image. Pic. 51538727". Alamy.com. 21 April 2011. Archived from the original on 5 ಮಾರ್ಚ್ 2016. Retrieved 28 February 2016.
- ↑ "charivari - Wiktionary". En.wiktionary.org. 25 January 2016. Retrieved 28 February 2016.
- ↑ "charivari - definition of charivari in English from the Oxford dictionary". Oxforddictionaries.com. Archived from the original on July 6, 2012. Retrieved 28 February 2016.
- ↑ "Our Tracht". Alpenlandtaenzer.com. Retrieved 28 February 2016.