ವಿಷಯಕ್ಕೆ ಹೋಗು

ರಜತ್ ಚೌಹಾಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಜತ್ ಚೌಹಾಣ್
ವೈಯುಕ್ತಿಕ ಮಾಹಿತಿ
ಜನನ (1994-12-30) ೩೦ ಡಿಸೆಂಬರ್ ೧೯೯೪ (ವಯಸ್ಸು ೨೯)
ರಾಜಸ್ಥಾನ, ಭಾರತ
Sport
ದೇಶ ಭಾರತ
ಕ್ರೀಡೆಬಿಲ್ಲುಗಾರಿಕೆ
Updated on 21 December 2017.

ರಜತ್ ಚೌಹಾಣ್ (ಜನನ ೩೦ ಡಿಸೆಂಬರ್ ೧೯೯೪) ಇವರು ಭಾರತೀಯ ಬಿಲ್ಲುಗಾರರು.[] ಕೋಪನ್ ಹ್ಯಾಗನ್ ನಲ್ಲಿ ನಡೆದ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ನಲ್ಲಿ ಚೌಹಾಣ್ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. [] ಅವರು ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ೨೦೧೪ ರಲ್ಲಿ ಪುರುಷರ  ಸಂಯುಕ್ತ ಬಿಲ್ಲುಗಾರಿಕೆಯ ಗುಂಪು ಪಂದ್ಯಾವಳಿಯಲ್ಲಿ ಅಭಿಷೇಕ್ ವರ್ಮಾ ಮತ್ತು ಸಂದೀಪ್ ಕುಮಾರ್ ಅವರೊಂದಿಗೆ ಚಿನ್ನದ ಪದಕವನ್ನು ಗೆದ್ದರು. ೨೦೧೪ ರಲ್ಲಿ ಅವರು ಬಿಲ್ಲುಗಾರಿಕೆಯಲ್ಲಿ ವಿಶ್ವಕಪ್‌ನ ಅಂತಿಮ ಹಂತಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಸಂಯುಕ್ತ ಬಿಲ್ಲುಗಾರರಾದರು ಮತ್ತು ೨೦೧೫ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ನ ಅಂತಿಮ ಘಟ್ಟಕ್ಕೆ ತಲುಪಿದರು. [] []

ಇತರ ಸಾಧನೆಗಳು

[ಬದಲಾಯಿಸಿ]

೨೦೧೫ ರ ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ - ಪುರುಷರ ವಿಭಾಗದಲ್ಲಿ []


ಪ್ರಶಸ್ತಿಗಳು

[ಬದಲಾಯಿಸಿ]
೨೯ ಆಗಸ್ಟ್ ೨೦೧೬ ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಬಿಲ್ಲುಗಾರಿಕೆಗಾಗಿ ರಜತ್ ಚೌಹಾಣ್ ಅವರಿಗೆ ೨೦೧೬ ರ ಅರ್ಜುನ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಉಲ್ಲೇಖಗಳು

[ಬದಲಾಯಿಸಿ]
  1. "Info System: Athletes / CHAUHAN Rajat". Archived from the original on 2024-04-10. Retrieved 2024-04-10.
  2. "India's Rajat Chauhan settles for Silver at World Archery Championships". News 18. 1 August 2015. Retrieved 17 March 2021.
  3. "Asian Games 2014: Indian men's compound team wins gold; women settle for bronze". 27 September 2014. Archived from the original on 27 September 2014. Retrieved 27 September 2014.
  4. "Asian Games LIVE: Indian men's compound archery team wins historic gold; women settle for bronze". Dattaraj Thaly. Zee News. 27 September 2014. Retrieved 27 September 2014.
  5. "19th Asian Championships + CQT Asia". World Archery. Retrieved 2015-11-07.