ಸಾಗರ ಭೂವಿಜ್ಞಾನ
ಗೋಚರ
ಸಾಗರ ಭೂವಿಜ್ಞಾನ ಅಥವಾ ಭೂವೈಜ್ಞಾನಿಕ ಸಮುದ್ರಶಾಸ್ತ್ರವು ಸಮುದ್ರ ತಳದ ಇತಿಹಾಸ ಮತ್ತು ರಚನೆಯ ಅಧ್ಯಯನವಾಗಿದೆ. ಇದು ಸಮುದ್ರ ತಳ ಮತ್ತು ಕರಾವಳಿ ವಲಯದ ಭೂಭೌತಶಾಸ್ತ್ರ, ಭೂರಾಸಾಯನಿಕ, ಕೆಸರಿನ ಕಣಗಳ ಮತ್ತು ಪಳೆಯುಳಿಕೆ ವಿಜ್ಞಾನದ ತನಿಖೆಗಳನ್ನು ಒಳಗೊಂಡಿರುತ್ತದೆ. ಸಾಗರ ಭೂವಿಜ್ಞಾನವು ಭೂಭೌತಶಾಸ್ತ್ರ ಮತ್ತು ಭೌತಿಕ ಸಮುದ್ರಶಾಸ್ತ್ರದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ.[೧]
ಎರಡನೇ ಮಹಾಯುದ್ಧದ ನಂತರದ ವರ್ಷಗಳಲ್ಲಿ ಸಮುದ್ರ ತಳದ ಹರಡುವಿಕೆ ಮತ್ತು ಭೂಫಲಕದ ಚಲನೆಗೆ ಸಂಬಂಧಿಸಿದ ನಿರ್ಣಾಯಕ ಪುರಾವೆಗಳನ್ನು ಒದಗಿಸುವಲ್ಲಿ ಸಾಗರ ಭೂವೈಜ್ಞಾನಿಕ ಅಧ್ಯಯನಗಳು ಅತ್ಯಂತ ಮಹತ್ವದ್ದಾಗಿದ್ದವು. ಆಳವಾದ ಸಾಗರ ತಳದ ಬಹುಪಾಲು ಭಾಗವು ಈ ತನಕ ಅನ್ವೇಷಣೆಯಾಗಿಲ್ಲ. ಪೆಟ್ರೋಲಿಯಂ ಮತ್ತು ಇತರೆ ಖನಿಜಗಳ ಇರುವಿಕೆಯು ಸಾಗರದ ಆರ್ಥಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. .
ಉಲ್ಲೇಖಗಳು
[ಬದಲಾಯಿಸಿ]- ↑ Erickson, Jon (1996). Marine geology : undersea landforms and life forms. New York: Facts on File. ISBN 0-8160-3354-4. OCLC 32626212.