ರಘುನಾಥ್ ಮಹತೋ
ರಘುನಾಥ್ ಮಹತೋ | |
---|---|
ಚಿತ್ರ:Raghunath mahato.jpg | |
Born | ೨೧ ಮಾರ್ಚ್ ೧೭೩೮ ಘುಟಿಯಡಿಹ್, ನಿಮ್ದಿಹ್ ಬ್ಲಾಕ್, ಸರೈಕೆಲಾ-ಖಾರ್ಸಾವನ್, ಬ್ರಿಟಿಷ್ ಭಾರತ (ಈಗ ಜಾರ್ಖಂಡ್) |
Died | ೫ ಎಪ್ರಿಲ್ ೧೭೭೮ (೪೯ ವರ್ಷ) ಸಿಲ್ಲಿ, ಜಾರ್ಖಂಡ್ |
Nationality | ಭಾರತೀಯರು |
Known for | ಚುವಾರ್ ದಂಗೆ ಭಾರತೀಯ ಸ್ವಾತಂತ್ರ್ಯ ಚಳುವಳಿ ಸಮಾಜ ಸೇವಕ |
ರಘುನಾಥ್ ಮಹತೋ (೨೧ ಮಾರ್ಚ್ ೧೭೩೮ - ೫ಏಪ್ರಿಲ್ ೧೭೭೮) ಒಬ್ಬ ಭಾರತೀಯ ಕ್ರಾಂತಿಕಾರಿ. ಇವರು ಕುಡ್ಮಿ ಮಹತೋ ಸಮುದಾಯದ ಚುವಾರ ದಂಗೆಯ ಪ್ರಮುಖ ನಾಯಕರಲ್ಲಿ ಒಬ್ಬರು. [೧] [೨] [೩] [೪] [೫] ಅವರು ೧೭೬೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ದಂಗೆಯನ್ನು ನಡೆಸಿದರು. [೬] [೭] [೮]
ಅವಲೋಕನ
[ಬದಲಾಯಿಸಿ]ರಘುನಾಥ್ ಮಹತೋ ಅವರು ೨೧ ಮಾರ್ಚ್ ೧೭೩೮ ರಂದು ಸೆರೈಕೆಲಾ ಖಾರ್ಸಾವನ ಜಿಲ್ಲೆ ನಿಮ್ಡಿಹ ಬ್ಲಾಕ್‌ನ ಘುಟಿಯಾಡಿಹ (ಬುಟ್ಪರ್ಸಾ ಘುಟಿಯಾಡಿಹ) ಗ್ರಾಮದಲ್ಲಿ ಜನಿಸಿದರು. [೯] [೧೦] [೧೧]
ಬ್ರಿಟಿಷರ ವಿರುದ್ಧದ ದಂಗೆಯನ್ನು ಚುವಾರ ದಂಗೆ ಎಂದು ಕರೆಯಲಾಗುತ್ತಿತ್ತು. ಚುವಾರ ಎಂದರೆ ಲೂಟಿಕೋರ ಎಂದರ್ಥ. ಬ್ರಿಟಿಷರು ೧೭೬೫ ರಲ್ಲಿ ಬಕ್ಸರ್ ಕದನವನ್ನು ಗೆದ್ದಾಗ ತೆರಿಗೆ ಸಂಗ್ರಹಿಸಲು ಪ್ರಾರಂಭಿಸಿದರು ಮತ್ತು ಬಿಹಾರ ಮತ್ತು ಬಂಗಾಳದಿಂದ ತೆರಿಗೆ ಸಂಗ್ರಹಿಸುವ ಹಕ್ಕು ಪಡೆದರು. [೧೨] ಆದರೆ ಬ್ರಿಟಿಷರು ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಜನರು ಭಾವಿಸಿದ್ದರಿಂದ ಜನರು ಅದನ್ನು ವಿರೋಧಿಸಿದರು. ಕೆಲವು ಜಮೀನ್ದಾರರು ಬ್ರಿಟಿಷರನ್ನು ಸೇರಿದರು, ಇತರರು ಅವರ ವಿರುದ್ಧ ಬಂಡಾಯವೆದ್ದರು. ೧೭೬೯ ರಲ್ಲಿ, ರಘುನಾಥ್ ಮಹತೋ ಬ್ರಿಟಿಷರ ವಿರುದ್ಧ ಕುಡ್ಮಿ ಮಹತೋ ಜನರನ್ನು ಮುನ್ನಡೆಸಿದರು. [೮] [೧೩] ಅವರ ಘೋಷಣೆ ಹೀಗಿತ್ತು:
... "ಅಪ್ನಾ ಗಾಂವ್, ಅಪ್ನಾ ರೈಜ್; ಧುರ್ ಖೇಡಾ ಬ್ರಿಟಿಷ್ ರೈಜ್. ''
ಬಂಡುಕೋರರ ಗುರುತಿನ ಬಗ್ಗೆ ಬ್ರಿಟಿಷರು ಜಮೀನ್ದಾರರನ್ನು ಕೇಳಿದಾಗ, ದಂಗೆಕೋರರು ಚುವಾರ ಎಂದರೆ ಲೂಟಿಕೋರರು, ಕಳ್ಳರು, ಅಸಹ್ಯ ಜನರು, ಅನಾಗರಿಕರು, ಮತ್ತು ಸೊಕ್ಕಿನವರು ಎಂದು ಜಮೀನ್ದಾರರು ಹೇಳಿದರು. [೧೪] [೧೫] [೧೬] ಬಂಡಾಯವೆದ್ದ ಜನರು ಕುಡ್ಮಿ ಮಹತೋ, ಭೂಮಿಜ, ಬಗ್ದಿ, ಬೌರಿ, ಮತ್ತು ಇತರ ಅನೇಕ ಜನಾಂಗೀಯ ಗುಂಪುಗಳಿಗೆ ಸೇರಿದವರಾಗಿದ್ದರು. [೧೭] [೧೮] [೧೯] [೨೦]
೫ ಏಪ್ರಿಲ್ ೧೭೭೮ ರಂದು, ಕಾಡಿನಲ್ಲಿ ಬ್ರಿಟಿಷ್ ಪಡೆಗಳಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ರಘುನಾಥ್ ಮಹತೋ ಮತ್ತು ಅವರ ತಂಡ ಯೋಜಿಸುತ್ತಿದ್ದರು. ಈ ಚಕಮಕಿಯಲ್ಲಿ ರಘುನಾಥ್ ಮಹತೋ ಮತ್ತು ಹಲವಾರು ಇತರ ಬಂಡುಕೋರರು ಬ್ರಿಟಿಷ್ ಪಡೆಗಳ ವಿರುದ್ಧ ಹೋರಾಡಿ ಮಡಿದರು. [೨೧] [೨೨]
ಉಲ್ಲೇಖಗಳು
[ಬದಲಾಯಿಸಿ]- ↑ Singh, Kumar Suresh (1992). People of India: West Bengal (in ಇಂಗ್ಲಿಷ್). Anthropological Survey of India. ISBN 978-81-7046-300-9.
- ↑ Mahalik, Dr Satyapriya; Kumar, Mr Bhawesh (2023-09-01). Freedom Fighters of Jharkhand (in English). Shashwat Publication. ISBN 978-81-19517-33-6.
{{cite book}}
: CS1 maint: unrecognized language (link) - ↑ IPS, Sanjay Singh (2021-11-29). JPSC GENERAL STUDIES PRELIMS EXAM GUIDE – SANJAY SINGH, IPS (HINDI) (in ಹಿಂದಿ). Prabhat Prakashan. ISBN 978-93-5488-002-5.
- ↑ Singh, Kumar Suresh (2008). People of India: Bihar, including Jharkhand (2 pts) (in ಇಂಗ್ಲಿಷ್). Anthropological Survey of India. ISBN 978-81-7046-303-0.
- ↑ Pandey, Binay Kumar (2022-03-19). Jharkhand Ke Veer Shaheed (in ಹಿಂದಿ). Prabhat Prakashan. ISBN 978-93-5562-010-1.
- ↑ "277th birth anniversary of Rev. Shahid Raghunath Mahato, the great leader of Chuaad Uprising". Prabhatkhabar.com. Retrieved 24 November 2018.
- ↑ "ST status to Kurmis". telegraphindia. 18 April 2006. Retrieved 4 December 2019.
- ↑ ೮.೦ ೮.೧ झारखंड। लेखकः डाॅ अनुज कुमार धान एवं मंजू ज्योत्स्ना। प्रकाशकः प्रकाशन विभाग सूचना और प्रसारण मंत्रालय। भारत सरकार। प्रकाश कालः 2008। पृष्ठाः 113।
- ↑ "अंग्रेजी सत्ता के खिलाफ चुहाड़ विद्रोह के नायक रघुनाथ महतो". hatakshep. 22 March 2021. Retrieved 3 October 2022.
- ↑ "चुआड़ विद्रोह के नायक थे वीर शहीद रघुनाथ महतो". livehindustan. 22 March 2021. Retrieved 3 October 2022.
- ↑ Mahto, Shailendra (2021-01-01). Jharkhand Mein Vidroh Ka Itihas (in ಹಿಂದಿ). Prabhat Prakashan. ISBN 978-93-90366-63-7.
- ↑ Ranendra (2014-04-30). Gayab Hota Desh (Hindi) (in ಹಿಂದಿ) (Hindi ed.). Penguin UK. ISBN 978-93-5118-748-6.
- ↑ Luhar, Sahdev (2023-02-25). Folklore Studies in India: Critical Regional Responses (in ಇಂಗ್ಲಿಷ್). N. S. Patel (Autonomous) Arts College, Anand. ISBN 978-81-955008-4-0.
- ↑ Pfeffer, Georg; Behera, Deepak Kumar (1997). Contemporary Society: Tribal Studies : Professor Satya Narayana Ratha Felicitation Volumes (in ಇಂಗ್ಲಿಷ್). Concept Publishing Company. ISBN 978-81-8069-534-6.
- ↑ Singh, Kumar Suresh (1985). Tribal Society in India: An Anthropo-historical Perspective (in ಇಂಗ್ಲಿಷ್). Manohar. ISBN 978-81-85054-05-6.
- ↑ Encyclopaedia of Scheduled Castes and Scheduled Tribes (in ಇಂಗ್ಲಿಷ್). Institute for Sustainable Development. 2000. ISBN 978-81-261-0655-4.
- ↑ Burman, B. K. Roy (1994). Tribes in Perspective (in ಇಂಗ್ಲಿಷ್). Mittal Publications. ISBN 978-81-7099-535-7.
- ↑ "Adivasi Resistance in Early Colonial India (Comprising the Chuar Rebellion of 1799 By J.C. Price and Relevant Midnapore District Collectorate Records from the Eighteenth Century) | Exotic India Art". www.exoticindiaart.com (in ಇಂಗ್ಲಿಷ್). Retrieved 2022-12-07.
- ↑ Bayley, H.V. (1902). Memoranda of Midnapore. Calcutta. pp. 10–12.
{{cite book}}
: CS1 maint: location missing publisher (link) - ↑ Das, Narendranath (1956). History of Midnapore. Vol. 1. Midnapore. pp. 20–21.
{{cite book}}
: CS1 maint: location missing publisher (link) - ↑ "चुआड़ विद्रोह के नायक थे वीर शहीद रघुनाथ महतो". livehindustan. 22 March 2021. Retrieved 3 October 2022."चुआड़ विद्रोह के नायक थे वीर शहीद रघुनाथ महतो". livehindustan. 22 March 2021. Retrieved 3 October 2022.
- ↑ Mahto, Shailendra (2021-01-01). Jharkhand Mein Vidroh Ka Itihas (in ಹಿಂದಿ). Prabhat Prakashan. ISBN 978-93-90366-63-7.Mahto, Shailendra (1 January 2021). Jharkhand Mein Vidroh Ka Itihas (in Hindi). Prabhat Prakashan. ISBN 978-93-90366-63-7.