ಅತುಲ್ ಸೇನ್
ಅತುಲ್ ಸೇನ್ | |
---|---|
Born | ಸೇನಾಹತಿ, ಖುಲ್ನಾ ಜಿಲ್ಲೆ, ಬ್ರಿಟಿಷ್ ಭಾರತ |
Died | ಆಗಸ್ಟ್ 5, 1932 ಕೋಲ್ಕತ್ತಾ, ಬ್ರಿಟಿಷ್ ಇಂಡಿಯಾ |
Cause of death | ಆತ್ಮಹತ್ಯೆ |
Occupation | ಭಾರತೀಯ ಸ್ವಾತಂತ್ರ್ಯ ಚಳುವಳಿ ಕಾರ್ಯಕರ್ತ |
Organization | ಜುಗಾಂತರ್ |
ಅತುಲ್ ಸೇನ್ (೫ ಆಗಸ್ಟ್, ೧೯೩೨) ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ, ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಹೋರಾಡಿದ ಬಂಗಾಳಿ ಕ್ರಾಂತಿಕಾರಿಯಾಗಿದ್ದರು. ಅವರು ಸಂಭು ಮತ್ತು ಕುಟ್ಟಿ ಎಂಬ ಉಪನಾಮಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. [೧]
ಆರಂಭಿಕ ಜೀವನ
[ಬದಲಾಯಿಸಿ]ಅತುಲ್ ಸೇನ್ ಬ್ರಿಟಿಷ್ ಭಾರತದ ಖುಲ್ನಾ ಜಿಲ್ಲೆಯ ಸೆನಾಹತಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಅಶ್ವಿನಿ ಕುಮಾರ್ ಸೇನ್. ಅವರು ವಿದ್ಯಾರ್ಥಿಯಾಗಿದ್ದಾಗ ಅವರು ಕ್ರಾಂತಿಕಾರಿ ಪಕ್ಷವನ್ನು ಸೇರಿದರು. ವಿದ್ಯಾರ್ಥಿಯಾಗಿದ್ದಾಗ ಅವರು ಗ್ರಾಮದ ಪ್ರಸಿದ್ಧ ಕ್ರಾಂತಿಕಾರಿಗಳಾದ ರಸಿಕ್ಲಾಲ್ ದಾಸ್, ಅನುಜಾಚರಣ್ ಸೇನ್, ರತಿಕಾಂತ ದತ್ ಮತ್ತು ಕಿರಣ್ ಚಂದ್ರ ಮುಖರ್ಜಿಯವರ ಸಂಪರ್ಕಕ್ಕೆ ಬಂದರು ಮತ್ತು ಕ್ರಾಂತಿಯ ಮಂತ್ರಕ್ಕೆ ನಾಂದಿ ಹಾಡಿದರು.
ಕ್ರಾಂತಿಕಾರಿ ಚಟುವಟಿಕೆಗಳು
[ಬದಲಾಯಿಸಿ]ಅವರು ಜಾದವ್‌ಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ಜುಗಂತರ ಪಕ್ಷದ ಸಕ್ರಿಯ ಸದಸ್ಯರಾಗಿದ್ದರು. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ, ಪತ್ರಿಕೆಯಾದ ಸ್ಟೇಟ್ಸ್‌ಮನ್ ಕ್ರಾಂತಿಕಾರಿಗಳ ವಿರುದ್ಧ ಪ್ರಚಾರ ಮಾಡುತ್ತಿರುವುದನ್ನು ಗಮನಿಸಿದರು. ಅದನ್ನು ತಡೆಯುವ ಸಲುವಾಗಿ ಕ್ರಾಂತಿಕಾರಿಗಳು ಪತ್ರಿಕೆಯ ಸಂಪಾದಕ ವ್ಯಾಟ್ಸನ್ ಅವರನ್ನು ಕೊಲ್ಲಲು ನಿರ್ಧರಿಸಿದರು. ೫ ಆಗಸ್ಟ್ ೧೯೩೨ ರಂದು, ಅವರು ಸರ್ ಆಲ್ಫ್ರೆಡ್ ವ್ಯಾಟ್ಸನ್ ಅವರ ಮೇಲೆ ಗುಂಡು ಹಾರಿಸಿದರು. [೨] ಆದರೆ ಅವರು ವ್ಯಾಟ್ಸನ್ ಅವರನ್ನು ಕೊಲ್ಲಲು ವಿಫಲರಾದರು ಮತ್ತು ತಕ್ಷಣವೇ ಬಂಧಿಸಲ್ಪಟ್ಟರು. ನಂತರ ಇವರು ಪೊಟಾಶಿಯಂ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು.
ಉಲ್ಲೇಖಗಳು
[ಬದಲಾಯಿಸಿ]- ↑ Dictionary of Martyrs of India's Freedom Struggle (1857-1947) (PDF). New Delhi: Ministry of Culture, Government of India & Indian Council of Historical Research. 2016. p. 29. ISBN 978-81-938176-0-5.
- ↑ Dictionary of Martyrs of India's Freedom Struggle (1857-1947) (PDF). New Delhi: Ministry of Culture, Government of India & Indian Council of Historical Research. 2016. p. 263. ISBN 978-81-938176-0-5.