ವಿಷಯಕ್ಕೆ ಹೋಗು

ಜೈವಿಕ ವಿದ್ಯುತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೈವಿಕ ವಿದ್ಯುತ್ತು ಎಂದರೆ ಜೈವಿಕಕೋಶಗಳಲ್ಲಿರುವ ಸ್ಥಾಯೀ ವೋಲ್ಟೇಜ್ ಮತ್ತು ಊತಕಗಳಲ್ಲಿ ಹರಿಯುವ ವಿದ್ಯುತ್ತು (ಬಯೊಎಲೆಕ್ಟ್ರಿಸಿಟಿ).[][] ಉಪಾಪಚಯ ಶಕ್ತಿಯ ಶೇಖರಣೆಗೆ, ಕೆಲಸ ಮಾಡಲು, ಆಂತರಿಕ ಬದಲಾವಣೆಗಳನ್ನು ಉದ್ದೀಪಿಸಲು, ಸಂಜ್ಞೆಗಳನ್ನು ರವಾನಿಸಲು ಇದರ ಬಳಕೆ. ಅನೇಕ ಜೀವಿಗಳು ಸ್ವರಕ್ಷಣೆಗೂ ಈ ವಿದ್ಯುತ್ತನ್ನು ಬಳಸುತ್ತವೆ. ಉದಾ: ಸಾವಿರ ವೋಲ್ಟ್‌ನಷ್ಟು ಅಧಿಕ ವೋಲ್ಟೇಜಿನ ವಿದ್ಯುತ್ತನ್ನು ವಿದ್ಯುತ್ ಈಲ್ ಉತ್ಪಾದಿಸಬಲ್ಲುದು.

ಎಲ್ಲ ಬಗೆಯ ಜೀವಕೋಶಗಳು ಮತ್ತು ಊತಕಗಳು ವಿದ್ಯುತ್‍ರೀತ್ಯ ಸಂಪರ್ಕಿಸಲು ಅಯಾನು ಪ್ರವಾಹಗಳನ್ನು ಬಳಸುತ್ತವೆ. ಜೈವಿಕ ವಿದ್ಯುತ್ತಿನಲ್ಲಿ ಅಯಾನು (ಆವಿಷ್ಟ ಪರಮಾಣು) ಆವೇಶದ ವಾಹಕವಾಗಿರುತ್ತದೆ. ನಿವ್ವಳ ಅಯಾನು ಪ್ರವಾಹ ಸಂಭವಿಸಿದಾಗ ವಿದ್ಯುತ್ ಪ್ರವಾಹ ಮತ್ತು ಕ್ಷೇತ್ರದ ಸೃಷ್ಟಿಯಾಗುತ್ತದೆ. ಅಂತರ್ವರ್ಧಕ ವಿದ್ಯುತ್ ಪ್ರವಾಹಗಳು ಹಾಗೂ ಕ್ಷೇತ್ರಗಳು, ಅಯಾನು ಪ್ರವಾಹಗಳು, ಮತ್ತು ಊತಕಗಳ ಅಡ್ಡಡ್ಡಲಾಗಿ ಇರುವ ವಿರಾಮ ವಿಭವದಲ್ಲಿನ ವ್ಯತ್ಯಾಸಗಳು ಸಂಜ್ಞಾ ವ್ಯವಸ್ಥೆಯನ್ನು ರೂಪಿಸುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. "Bioelectricity ." Gale Encyclopedia of Nursing and Allied Health. . Encyclopedia.com. 22 Aug. 2023 <https://www.encyclopedia.com>.
  2. Britannica, The Editors of Encyclopaedia. "bioelectricity". Encyclopedia Britannica, 20 Nov. 2018, https://www.britannica.com/science/bioelectricity. Accessed 30 August 2023.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: