ವಿಷಯಕ್ಕೆ ಹೋಗು

ವಾಯುರೇಚಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಯ್ಲ್‌ನ ವಾಯುರೇಚಕ

ವಾಯುರೇಚಕ ಎಂದರೆ ವಾಯುಸಂಮರ್ದ ತತ್ತ್ವವನ್ನು ಆಧರಿಸಿ ಕೆಲಸ ಮಾಡುವ ರೇಚಕಗಳ ಪೈಕಿ ಒಂದು (ಏರ್ ಪಂಪ್). ಅಲ್ಪಸಂಮರ್ದ ಪ್ರದೇಶದಿಂದ ಅಧಿಕ ಸಂಮರ್ದ ಪ್ರದೇಶಕ್ಕೆ ವಾಯುವನ್ನು ಸ್ಥಳಾಂತರಿಸಲು ಇದನ್ನು ಬಳಸುವುದಿದೆ. ಎಲ್ಲ ವಾಯುರೇಚಕಗಳು ಚಲಿಸುವ ಒಂದು ಭಾಗವನ್ನು (ಗಾಳಿಕೋಳಿ, ಆಡುಬೆಣೆ, ಪ್ರಚೋದಕ, ಕಂಪನಫಲಕ ಇತ್ಯಾದಿ) ಹೊಂದಿರುತ್ತವೆ. ಇದು ಗಾಳಿಯ ಹರಿವನ್ನು ನಡೆಸುತ್ತದೆ. ವಾಯುವನ್ನು ಚಲಿಸಿದಾಗ, ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗುತ್ತದೆ. ಆ ಪ್ರದೇಶ ಮತ್ತಷ್ಟು ಗಾಳಿಯಿಂದ ತುಂಬಿಕೊಳ್ಳುತ್ತದೆ.[] ವಾಯುರೇಚಕದಲ್ಲಿ ಮೂರು ಪ್ರಕಾರಗಳಿವೆ:

  1. ವಾಯುಚೋಷಕ (ಸಕ್ಷನ್ ಪಂಪ್): ಇದರಿಂದ ಪಾತ್ರೆಯೊಳಗಿನ ವಾಯುವನ್ನು ಹೊರಗೆ ಹಾಕಿ ಅಲ್ಲಿಯ ಸಂಮರ್ದ ಕಡಿಮೆ ಮಾಡುವುದು ಸಾಧ್ಯ.
  2. ವಾಯುಸಂಪೀಡಕ (ಕಂಪ್ರೆಷನ್ ಪಂಪ್): ಇದರಿಂದ ಪಾತ್ರೆಯೊಳಗಡೆಗೆ ಹೊರಗಿನ ವಾಯುವನ್ನು ನೂಕಿ ಅಲ್ಲಿಯ ಸಂಮರ್ದ ಹೆಚ್ಚಿಸಬಹುದು.
  3. ಬ್ಲೋಯರ್ ಪಂಪ್: ಇದರಿಂದ ಸಂವೃತ ಪ್ರದೇಶದಲ್ಲಿಯ ವಾಯುವನ್ನು ವೇಗದಿಂದ ಬೇರೆ ಯಾವುದೇ ದಿಕ್ಕಿನಲ್ಲಾದರೂ ದೂಡಬಹುದು.

ಮೂರು ಪ್ರಕಾರದ ರೇಚಕಗಳಿದ್ದರೂ ವಾಯುಚೋಷಕವನ್ನೇ ಸಾಮಾನ್ಯವಾಗಿ ವಾಯುರೇಚಕ ಎಂದು ಕರೆಯುವುದು ರೂಢಿ. ಚಿತ್ರದಲ್ಲಿ ಬಾಯ್ಲ್‌ನ ವಾಯುರೇಚಕವನ್ನು ತೋರಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Pump Theory – Principles". powerequipment.honda.com. Archived from the original on 26 November 2018. Retrieved 26 November 2018.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: