ವಿಷಯಕ್ಕೆ ಹೋಗು

ಕುಂದಾಪುರ ತಾಲೂಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಂದಾಪುರ ತಾಲೂಕು ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಒಂದು ತಾಲೂಕು . ಕುಂದಾಪುರ ಪಟ್ಟಣವು ಕುಂದಾಪುರ ತಾಲೂಕಿನ ತಾಲೂಕು ಕೇಂದ್ರವಾಗಿದೆ.

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

೨೦೧೧ ರ ಭಾರತದ ಜನಗಣತಿಯ ಪ್ರಕಾರ, ಕುಂದಾಪುರ ತಾಲೂಕು ೭೯೩೭೩ ಕುಟುಂಬಗಳನ್ನು ಹೊಂದಿದ್ದು, ೩೯೮೪೭೧ ಜನಸಂಖ್ಯೆಯನ್ನು ಹೊಂದಿದೆ ಅವರಲ್ಲಿ ೩೫೭೭೯೮ ಗ್ರಾಮೀಣ ಪ್ರದೇಶಗಳಿಂದ ಮತ್ತು ೪೦೬೭೩ ನಗರದಿಂದ ಬಂದವರು. ಜನಸಂಖ್ಯೆಯಲ್ಲಿ, ೨೯೫೬೬೪ ಜನರು ಸಾಕ್ಷರರಾಗಿದ್ದಾರೆ. []

ಭೂಗೋಳಶಾಸ್ತ್ರ

[ಬದಲಾಯಿಸಿ]

ಕುಂದಾಪುರ ತಾಲೂಕು ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ದಕ್ಷಿಣದಲ್ಲಿ ಬ್ರಹ್ಮಾವರ ತಾಲೂಕು, ಉತ್ತರದಲ್ಲಿ ಬೈಂದೂರು ತಾಲೂಕು ಮತ್ತು ಪೂರ್ವದಲ್ಲಿ ಪಶ್ಚಿಮ ಘಟ್ಟಗಳಿಂದ ಸುತ್ತುವರಿದಿದೆ.

ನದಿಗಳು

[ಬದಲಾಯಿಸಿ]

ಈ ತಾಲ್ಲೂಕು ಹಲವಾರು ನದಿಗಳನ್ನು ಹೊಂದಿದೆ ಮತ್ತು ಭಾರೀ ಮಳೆಯನ್ನು ಅನುಭವಿಸುತ್ತದೆ. ಮುಖ್ಯ ನದಿಗಳೆಂದರೆ ಚಕ್ರ, ಸೌಪರ್ಣಿಕಾ, ವಾರಾಹಿ, ಕುಬ್ಜಾ ಮತ್ತು ಖೇತಾ. ವಾಸ್ತವವಾಗಿ, ಕುಂದಾಪುರ ಮತ್ತು ಬೈಂದೂರು ನಡುವೆ ೩೬ಕಿ.ಮೀ ರ ಕಡಿಮೆ ಅಂತರದಲ್ಲಿ ಏಳು ನದಿಗಳಿವೆ. ಅವುಗಳೆಂದರೆ ಹಾಲಾಡಿ ನದಿ, ಕೊಲ್ಲೂರು ನದಿ, ಚಕ್ರ ನದಿ, ರಾಜಾಡಿ, ನೂಜಾಡಿ, ಯಡಮಾವಿನ ಹೊಳೆ ಮತ್ತು ಉಪ್ಪುಂದ ಹೊಳೆ.

ಉಲ್ಲೇಖಗಳು

[ಬದಲಾಯಿಸಿ]
  1. "Population Finder 2011". Registrar General & Census Commissioner, India. Retrieved 2022-10-19.