ಗವಿಸಿದ್ದೇಶ್ವರ ಮಠ
ಗವಿಮಠ
ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ | |
---|---|
ಮಠ | |
ಶ್ರೀ ಗವಿಸಿದ್ದೇಶ್ವರ ಮಠ | |
Founded by | ಶ್ರೀ ರುದ್ರಮುನಿ ಶಿವಯೋಗಿಗಳು |
Named for | ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು - ೧೧ ನೇ ಪೀಠಾಧೀಪತಿಗಳು |
ಶ್ರೀ ಗವಿಸಿದ್ದೇಶ್ವರ ಮಠ, ಕೊಪ್ಪಳ
[ಬದಲಾಯಿಸಿ]ಶ್ರೀ ಗವಿಸಿದ್ದೇಶ್ವರ ಮಠ ಅಥವಾ ಗವಿಮಠವು ಕೊಪ್ಪಳದ ಪೂರ್ವ ಬೆಟ್ಟದ ಮೇಲಿರುವ ಸುಮಾರು ಒಂದು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿ ಇಂದಿಗೂ ಜನಮಾನಸದಲ್ಲಿ ಭಕ್ತಿ, ಭಾವ, ಅಭಿಮಾನಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಮುನ್ನೇಡೆಯುತ್ತಿರುವ ಮಹಾಸಂಸ್ಥಾನ. ತ್ರಿವಿಧ ದಾಸೋಹದ (ಅನ್ನ, ಅರಿವು, ಆಧ್ಯಾತ್ಮ) ಗಂಗೋತ್ರಿ. ಕರ್ನಾಟಕದ ಅಗ್ರಮಾನ್ಯ ಮಠ ಪರಂಪರೆಯ ಸಂಸ್ಥಾನಗಳಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠವು ಒಂದು.
ಜಾತ್ರೆ
[ಬದಲಾಯಿಸಿ]ದಕ್ಷಿಣ ಭಾರತದ ಕುಂಭಮೇಳವೇಂದೆ ಖ್ಯಾತವಾಗಿರುವ ಜಾತ್ರ ಮಹೋತ್ಸವವು ದಾಸೋಹ, ಜಾಗೃತಿ ಮತ್ತು ಸರ್ವಧರ್ಮ ಸಮನ್ವಯದ ಸಮಾಗಮನ. ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಜಾತ್ರೆಯಲ್ಲಿಯು ಭಕ್ತರಲ್ಲಿ, ಅಭಿಮಾನಿಗಳಲ್ಲಿ ಹಾಗೂ ಜನರಲ್ಲಿ ವಿಶಿಷ್ಟ ರೀತಿಯ ಜಾಗೃತಿ ಮೂಡಿಸುತ್ತ ಜಾತ್ರೆಗೊಂದು ಹೊಸರೂಪ-ಹೊಸಮೆರುಗು ನೀಡುವ ಮೂಲಕ ಶ್ರೀ ಮಠವು ದೇಶ, ವಿದೇಶಗಳ ಗಮನ ಸೆಳೆದಿದೆ.
ಚಾಲನೆ
[ಬದಲಾಯಿಸಿ]ಪ್ರತಿ ವರ್ಷ ಪುಷ್ಯ ಬಹುಳ ಬಿದಿಗೆ[೧]ಯಂದು ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವವು ಆಚರಿಸಲ್ಪಡುತ್ತದೆ. ಸುಮಾರು ೪ ರಿಂದ ೮ ಲಕ್ಷ ಭಕ್ತಸಮೂಹವು ಈ ಉತ್ಸವಕ್ಕೆ ಸಾಕ್ಷಿಯಾಗಲು ರಾಜ್ಯ, ನೆರೆರಾಜ್ಯಗಳಿಂದ ಆಗಮಿಸುತ್ತದೆ. ಪ್ರತಿ ವರ್ಷವು ಬಸವ ಪಟ ಆರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಸಂಪ್ರದಾಯದಂತೆ ಬನದ ಹುಣ್ಣಿಮೆಯದಿನ ಪಲ್ಲಕ್ಕಿ ಮಹೋತ್ಸವ ನೆರವೇರುತ್ತದೆ. ಅದೇ ದಿನ ರಥದ ಮೇಲಿನ ಕಳಸವನ್ನು ಹಲಗೇರಿ ಗ್ರಾಮದ ಭಕ್ತ ಲಿಂಗೈಕ್ಯ ಶ್ರೀ ವೀರನಗೌಡ ಲಿಂಗನಗೌಡ ಪಾಟೀಲರ ಮನೆಯಿಂದ ಬರಮಾಡಿಕೊಳ್ಳಲಾಗುತ್ತದೆ.[೧]
ಮೆರವಣಿಗೆ
[ಬದಲಾಯಿಸಿ]೧೧ ನೇ ಪೀಠಧೀಪತಿಗಳಾಗಿದ್ದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಗವಿಮಠಕ್ಕೆ ಬರುವ ಮುನ್ನ ಮಂಗಾಳಪುರದ ಸಮೀಪದ ಊರಗೌಡರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದು, ಗವಿಮಠಕ್ಕೆ ಹೊರಟು ನಿಂತಾಗ ತಮ್ಮ ಜಡೆಯನ್ನು ಕತ್ತರಿಸಿ ಆ ಮನೆಯ ಗೌಡಸಾನಿಗೆ ನೀಡುತ್ತಾರೆ. ಸಂತಾನವಿಲ್ಲದ ಆ ಗೌಡ ದಂಪತಿಗಳು ಆ ಜಡೆಯನ್ನು ಪೂಜಿಸಿದ ಫಲವಾಗಿ ಒಂದು ಗಂಡು ಸಂತಾನವನ್ನು ಪಡೆಯುತ್ತಾರೆ. ಆ ಮಗುವಿಗೆ ಜಡೇಗೌಡನೆಂದು ಹೆಸರಿಡುತ್ತಾರೆ ಹೀಗೆ ಆ ಕುಟುಂಬವು ಜಡೆಗೌಡ್ರ ಮನೆತನವೆಂದು ಹೆಸರು ಪಡೆಯುತ್ತದೆ. ಈ ಹಿನ್ನಲೆಯಲ್ಲಿ ಮಠದಲ್ಲಿ ಪೂಜೆಗೊಂಡ ಶ್ರೀ ಗವಿಸಿದ್ದೇಶ್ವರರ ಮೂರ್ತಿಯನ್ನು ತಂದು ಜಡೆಗೌಡ್ರ ಮನೆಯಲ್ಲಿ ಮೂಹುರ್ತಗಳಿಸಿ ಪೂಜಿಸಲ್ಪಟ್ಟ ನಂತರ ಸಕಲ ವಾದ್ಯಗಳೊಂದಿಗೆ ಕೊಪ್ಪಳ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯೊಂದಿಗೆ ನೆಡೆದು ಗವಿಮಠಕ್ಕೆ ಬರಮಾಡಿಕೊಳ್ಳಲಾಗುತ್ತದೆ.
ಉಚ್ಛಾಯ
[ಬದಲಾಯಿಸಿ]ಪ್ರತೀತಿಯಂತೆ, ಮಹಾರಥೋತ್ಸವವು ನಿರಾಂತಕವಾಗಿ, ನಿರ್ವಿಘ್ನತೆಯಿಂದ ಸಾಂಗವಗಿ ನೆಡೆಯಲೆಂದು ಮುನ್ನದಿನ ಲಘು ರಥೋತ್ಸವ ನೆರವೇರುತ್ತದೆ. ಈ ಲಘು ರಥೋತ್ಸವಕ್ಕೆ ಉಚ್ಛಾಯ ಎಂಬ ಹೆಸರಿದೆ.[೧]
ಜಾತ್ರೆಗೊಂದು ಹೊಸರೂಪ-ಹೊಸಮೆರುಗು
[ಬದಲಾಯಿಸಿ]ಪ್ರತಿವರ್ಷವು ಜಾತ್ರೆಯಲ್ಲಿ ಸಮಾಜಿಕ ಅರಿವು ಮೂಡಿಸಿ ಜನರನ್ನು ಜಾಗೃತಗೊಳಿಸುವ ವಿಶಿಷ್ಟ ಕಾರ್ಯಕ್ರಮ ನೆಡೆಯುತ್ತದೆ.
- ೨೦೧೬ ರಲ್ಲಿ ಬಾಲ್ಯವಿವಾಹ
- ೨೦೧೭ ರಲ್ಲಿ ಜಲದೀಕ್ಷೆ
- ೨೦೧೮ ರಲ್ಲಿ ಸಶಕ್ತ ಮನ - ಸಂತ್ರಪ್ತ ಜೀವನ
- ೨೦೧೯ ರಲ್ಲಿ ಕೃಪಾದೃಷ್ಠಿ - ನೇತ್ರದಾನ ಜಾಗೃತಿ
- ೨೦೨೦ ರಲ್ಲಿ ಲಕ್ಷ ವೃಕ್ಸೋತ್ಸವ
- ೨೦೨೧ ರಲ್ಲಿ ಸರಳ ಜಾತ್ರೆ - ಸಮಾಜಮುಖಿ ಜಾತ್ರೆ
- ೨೦೨೨ ರಲ್ಲಿ ಅಡವಿಹಳ್ಳಿ ಗ್ರಾಮ ದತ್ತು, ಕ್ಯಾನ್ಸರ್ ರೋಗ ತಪಾಸಣೆ, ಗಿಣಗೇರಿ ಕೆರೆ ಊಳೆತ್ತುವುದು
- ೨೦೨೩ ರಲ್ಲಿ ಅಂಗಾಂಗ ದಾನ ಜಾಗೃತಿ[೧]
ಜಾತ್ರೆಯಲ್ಲಿ ದಾಸೋಹ
[ಬದಲಾಯಿಸಿ]೨೦೨೩ ರ ಮಹಾರಥೋತ್ಸವಕ್ಕೆ ೫-೬ ಲಕ್ಷ ಜನ ಸೇರುವ ನಿರೀಕ್ಷೆಯಲ್ಲಿ ೪ ಲಕ್ಷ ಶೇಂಗಾ ಹೋಳಿಗೆ ಮತ್ತು ೨೭೫ ಕ್ವಿಂಟಾಲ್ ಮಾದಲಿಯನ್ನು ತಯಾರಿಸಲಾಗಿತ್ತು.[೨]
ಜಾತ್ರೆಯ ವಿಶೇಷ ದಾಸೋಹಕ್ಕಾಗಿ ಸುತ್ತಮತ್ತಲಿನ ಗ್ರಾಮಸ್ಥರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ದವಸ-ಧಾನ್ಯ, ಹಣ, ರೊಟ್ಟಿ, ಮೊದಲಾದ ರೂಪದಲ್ಲಿ ದಾನ ಹರಿದುಬರುತ್ತದೆ.
ಗಂಗಾರತಿ
[ಬದಲಾಯಿಸಿ]೨೦೨೩ರ ಜಾತ್ರೆಯಲ್ಲಿ ಪ್ರಥಮ ಬಾರಿಗೆ ಗವಿಮಠದ ಪರಂಪರೆಯಲ್ಲಿ ಕೆರೆಯ ಮಧ್ಯಭಾಗದಲ್ಲಿರುವ ಈಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಶಿಸ್ತುಬದ್ಧವಾಗಿ ನಿಂತಿದ್ದ ಐದು ಜನ ಭಕ್ತರತ್ತ ಮುಖ ಮಾಡಿ ಸಂಭ್ರಮದಿಂದ ಗಂಗೆಗೆ ಆರತಿ ಮಾಡುವ ಮೂಲಕ ಗಂಗಾರತಿ ನೇರವೆರಿದೆ.[೨]
ಕ್ರ.ಸಂ | ಹೆಸರು | ಕಾಲ | ಪ್ರಮುಖ ಕಾರ್ಯಗಳು |
---|---|---|---|
೧ | ಶ್ರೀ ರುದ್ರಮುನಿ ಶಿವಯೋಗಿಗಳು | ||
೨ | ಶ್ರೀ ಸಂಗನಬಸವ ಮಹಾಸ್ವಾಮಿಗಳು | ||
೩ | ಶ್ರೀ ಶಿವಲಿಂಗ ಮಹಾಸ್ವಾಮಿಗಳು | ||
೪ | ಶ್ರೀ ಚನ್ನವೀರ ಮಹಾಸ್ವಾಮಿಗಳು | ||
೫ | ಶ್ರೀ ಕಾಶಿ ಕರಿಬಸವ ಮಹಾಸ್ವಾಮಿಗಳು | ||
೬ | ಶ್ರೀ ಶಿವಲಿಂಗ ಮಹಾಸ್ವಾಮಿಗಳು | ||
೭ | ಶ್ರೀ ಪುಟ್ಟ ಸುಚನ್ನವೀರ ಮಹಾಸ್ವಾಮಿಗಳು | ||
೮ | ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು | ||
೯ | ಶ್ರೀ ಸಂಗನಬಸವ ಮಹಾಸ್ವಾಮಿಗಳು | ||
೧೦ | ಶ್ರೀ ಚನ್ನಬಸವ ಮಹಾಸ್ವಾಮಿಗಳು | ||
೧೧ | ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು | ||
೧೨ | ಶ್ರೀ ಹಿರಿಶಾಂತವೀರ ಮಹಾಸ್ವಾಮಿಗಳು | ||
೧೩ | ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು | ||
೧೪ | ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು | ||
೧೫ | ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು | ||
೧೬ | ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು |
| |
೧೭ | ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು | ||
೧೮ | ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು | ಪಟ್ಟಾಭಿಷೇಕ: ೧೩ನೇ ಡಿಸೆಂಬರ್ ೨೦೦೨[೪] |
|
ಭೂಪಟ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ "ಆರ್ಕೈವ್ ನಕಲು". Archived from the original on 2023-01-10. Retrieved 2023-01-10.
- ↑ ೨.೦ ೨.೧ https://tv9kannada.com/karnataka/koppal/koppal-gavisiddeshwara-matha-festival-275-quintal-madali-sweet-ready-for-devotees-koppal-news-in-kannada-vkb-au55-497143.html
- ↑ ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ "SGVVT Founder – Shri Gavisiddeshwara College of Education". Shri Gavisiddeshwara College of Education – Gavimath Campus, Gavimath Road, Koppal. Archived from the original on 2023-09-25. Retrieved 2023-08-04.
- ↑ ೪.೦ ೪.೧ ೪.೨ https://kannada.asianetnews.com/karnataka-districts/koppals-shri-gavisiddeshwara-swamiji-coronation-19-years-completed-grg-r41pyz
- Pages using the JsonConfig extension
- Short description with empty Wikidata description
- Pages using infobox settlement with bad settlement type
- Pages using infobox settlement with missing country
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕರ್ನಾಟಕದ ಮಠಗಳು
- ಕರ್ನಾಟಕ
- ಕರ್ನಾಟಕ ರಾಜ್ಯ
- ನಕ್ಷೆಗಳಿರುವ ಪುಟಗಳು