ವಿಷಯಕ್ಕೆ ಹೋಗು

ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠದ ೧೮ ನೇ ಪೀಠಾಧಿಪತಿಗಳು.


ಪೂರ್ವಾಶ್ರಮ

[ಬದಲಾಯಿಸಿ]

ಜನನ ಮತ್ತು ಬಾಲ್ಯ

[ಬದಲಾಯಿಸಿ]

೧೯೭೭ ಜೂನ್ ೧ರಂದು ಕಲಬುರ್ಗಿ ಜಿಲ್ಲೆ ಹಾಗರಗುಂಡಿಯಲ್ಲಿ ಜನನ. ಮೂಲ ಹೆಸರು ಪರುತಯ್ಯ.[೧] ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಹೇರಿ ಗ್ರಾಮದವರು

ವಿದ್ಯಾಭ್ಯಾಸ

[ಬದಲಾಯಿಸಿ]

ಇಂಗ್ಲೀಷ್ ತತ್ವಶಾಸ್ತ್ರ ಮತ್ತು ಸಂಸ್ಕೃತ ವಿಷಯದಲ್ಲಿ ಸ್ನಾತಕ ಪದವಿ ಪಡೆದಿದ್ದಾರೆ.[೨] ಗುಲಬುರ್ಗಾ ವಿವಿಯಿಂದ ಪದವಿಯಲ್ಲಿ ೬ನೇ ರ‍್ಯಾಂಕ್ ಪಡೆದಿರುವ ಇವರು, ಕನ್ನಡ ವಿಷಯದಲ್ಲಿಯೂ ಸ್ನಾತಕ ಪದವಿ ಪಡೆದಿದ್ದಾರೆ. [೧]

ಸನ್ಯಾಸ

[ಬದಲಾಯಿಸಿ]

ವಿದ್ಯಾಭ್ಯಾಸಕ್ಕಾಗಿ ಗವಿಮಠಕ್ಕೆ ಬಂದ ಇವರು ೧೭ನೇ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಗುತ್ತಾರೆ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಇವರಿಗೆ ಪರುತದೇವರು ಎಂದು ನಾಮಕರಣ ಮಾಡುವ ಮೂಲಕ ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಿಸುತ್ತಾರೆ. ಮುಂದೆ ಪಟ್ಟಾನಂತರ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಎಂದು ಕರೆದಿದ್ದಾರೆ.

೧೮ನೇ ಪೀಠಾಧಿಪತಿಗಳಾಗಿ ಶ್ರೀ ಅಭಿನವ ಗವಿಸಿದ್ದೇಶ್ವರರು

[ಬದಲಾಯಿಸಿ]

೨೦೦೨ರ ಡಿಸೆಂಬರ್ ೧೩ರಂದು ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿ ಪಟ್ಟಾಭೀಷೆಕ.[೧]

ಧಾರ್ಮೀಕ/ಆಧ್ಯಾತ್ಮಿಕ ಕಾರ್ಯಗಳು

[ಬದಲಾಯಿಸಿ]

ಶೈಕ್ಷಣಿಕ ಕಾರ್ಯಗಳು

[ಬದಲಾಯಿಸಿ]

ಸಮಾಜಿಕ ಕಾರ್ಯಗಳು

[ಬದಲಾಯಿಸಿ]
  • ಹಿರೇಹಳ್ಳ ಪುನಚ್ಸೇತನ ಟ್ರಸ್ಟ ಸ್ಥಾಪನೆಯೊಂದಿಗೆ 'ಜಲ ದೀಕ್ಷ' ಕಾರ್ಯದಲ್ಲಿ ಸಕ್ರೀಯ - ಜಲಋಷಿ ಎಂದೇ ಖ್ಯಾತಿ.[೧]
  • ತ್ರಿವಿಧ ದಾಸೋಹದೊಂದಿಗೆ ವೃಕ್ಷ ದಾಸೋಹ ಪ್ರಾರಂಭ[೧]
  • ಜಾತ್ರೆಗೊಂದು ಹೊಸರೂಪ-ಹೊಸಮೆರುಗು[೪]
  • ಇತ್ತೀಚಿಗೆ 5,000 ವಿದ್ಯಾರ್ಥಿಗಳಿಗೆ ವಸತಿ ಮತ್ತು ವಿದ್ಯಾಭ್ಯಾಸಕ್ಕಾಗಿ ಕಟ್ಟಡ ನಿರ್ಮಿಸಲಾಗಿದೆ

೨೦೨೬ರ ಮೈಸೂರು ದಸರಾ ಉದ್ಘಾಟನೆ

[ಬದಲಾಯಿಸಿ]

೨೦೨೬ರ ಮೈಸೂರು ದಸರಾ (ನಾಡಹಬ್ಬ) ಉತ್ಸವವನ್ನು ಕೊಪ್ಪಳದ ಗವಿಮಠದ ೧೮ನೇ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಅಧಿಕೃತ ಘೋಷಣೆಯನ್ನು ವಿಧಾನ ಸಭೆಯಲ್ಲಿ ಪ್ರಕಟಿಸಿದರು. ಉತ್ತರ ಕರ್ನಾಟಕದ "ನಡೆಯುವ ದೇವರು" ಎಂದೇ ಭಕ್ತರಿಂದ ಕರೆಸಿಕೊಳ್ಳಲ್ಪಡುವ ಶ್ರೀಗಳು, ೨೦೨೬ರ ಅಕ್ಟೋಬರ್ ೧೧ ರಂದು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ೧೧:೫೦ ರಿಂದ ಮಧ್ಯಾಹ್ನ ೧೨:೧೩ ರ ನಡುವಿನ ಶುಭ ಮುಹೂರ್ತದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಯುವ ಸಮುದಾಯದ ಪ್ರಮುಖ ಆಕರ್ಷಣೆಯಾದ ಯುವ ದಸರಾ ೨೦೨೬ ಉಪ-ಉತ್ಸವವನ್ನು ಭಾರತೀಯ ಖ್ಯಾತ ನೃತ್ಯ ಸಂಯೋಜಕ, ನಟ ಹಾಗೂ ಚಲನಚಿತ್ರ ನಿರ್ದೇಶಕ ಪ್ರಭುದೇವ ಅವರು ಉದ್ಘಾಟಿಸಲಿದ್ದಾರೆ. ಪ್ರಮುಖ ವಿವರಗಳು: • ದಸರಾ ಉದ್ಘಾಟಕರು: ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ (ಕೊಪ್ಪಳ ಗವಿಮಠದ ಶ್ರೀಗಳು) • ಯುವ ದಸರಾ ಉದ್ಘಾಟಕರು: ಪ್ರಭುದೇವ (ನಟ/ನಿರ್ದೇಶಕ) • ಉದ್ಘಾಟನಾ ದಿನಾಂಕ: ೧೧ ಅಕ್ಟೋಬರ್ ೨೦೨೬ • ಸಮಯ: ಬೆಳಿಗ್ಗೆ ೧೧:೫೦ ರಿಂದ ಮಧ್ಯಾಹ್ನ ೧೨:೧೩ ರವರೆಗೆ • ಸ್ಥಳ: ಚಾಮುಂಡಿ ಬೆಟ್ಟ, ಮೈಸೂರು

ಉಲ್ಲೇಖಗಳು

[ಬದಲಾಯಿಸಿ]
  1. 1 2 3 4 5 https://kannada.asianetnews.com/karnataka-districts/koppals-shri-gavisiddeshwara-swamiji-coronation-19-years-completed-grg-r41pyz
  2. ↑ "ಆರ್ಕೈವ್ ನಕಲು". Archived from the original on 2023-01-10. Retrieved 2023-01-10.
  3. 1 2 3 "ಆರ್ಕೈವ್ ನಕಲು". Archived from the original on 2023-09-25. Retrieved 2023-01-10.
  4. ↑ ಗವಿಸಿದ್ದೇಶ್ವರ ಮಠ#ಜಾತ್ರೆಗೊಂದು ಹೊಸರೂಪ-ಹೊಸಮೆರುಗು