ವಿಷಯಕ್ಕೆ ಹೋಗು

ನಟರಾಜ‌ ದೇವಾಲಯ, ಚಿದಂಬರಮ್

Coordinates: 11°23′58″N 79°41′36″E / 11.399444444444°N 79.693333333333°E / 11.399444444444; 79.693333333333
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಥಿಲ್ಲೈ ನಟರಾಜ ಪೆರುಮಾಲ್ ದೇವಸ್ಥಾನ, ಅಥವ ಚಿದಂಬರಂ ನಟರಾಜರ ದೇವಾಲಯ

ಹೆಸರು: ಥಿಲ್ಲೈ ನಟರಾಜ ಪೆರುಮಾಲ್ ದೇವಸ್ಥಾನ, ಅಥವ ಚಿದಂಬರಂ ನಟರಾಜರ ದೇವಾಲಯ
ಕಟ್ಟಿದ ದಿನ/ವರ್ಷ: 400 A.D.
ಪ್ರಮುಖ ದೇವತೆ: Nataraja (Shiva)
ವಾಸ್ತುಶಿಲ್ಪ: Dravidian architecture
ಸ್ಥಳ: Chidambaram, ತಮಿಳುನಾಡು

ಚಿದಂಬರಂ ದೇವಾಲಯ ವು (ತಮಿಳು:சிதம்பரம் கோயில்) ಭಗವಂತನಾದ ಶಿವನಿಗೆ ಸಮರ್ಪಿತವಾದ ಒಂದು ಪ್ರಸಿದ್ಧ ಹಿಂದೂ ದೇವಾಲಯ. ಇದು ಚಿದಂಬರಂ ಎಂಬ ನಗರದ ಹೃದಯ ಭಾಗದಲ್ಲಿದೆ. ಈ ನಗರವು ದಕ್ಷಿಣ ಭಾರತತಮಿಳುನಾಡು ರಾಜ್ಯದ ಪೂರ್ವ ಮಧ್ಯಭಾಗದಲ್ಲಿರುವ ಕಡಲೂರು, ಎಂಬ ಜಿಲ್ಲೆಗೆ ಸೇರಿದೆ. ಇದು ಕರೈಕಲ್‌ನ 60 ಕಿಮೀ ದೂರದ ಉತ್ತರಕ್ಕೂ ಮತ್ತು ಪಾಂಡಿಚೇರಿಯ 78ಕಿಮೀ ನ ದಕ್ಷಿಣಕ್ಕೂ ಇದೆ.

ಗೋಪುರದ ಮೇಲಿರುವ ಗೋಜಲಾದ ಕೆತ್ತನೆಗಳು.

ಸಂಗಮ ಸಾಹಿತ್ಯದ ಪ್ರಕಾರ ವಿದುವೆಲ್ವಿದುಗು ಪೆರುಮ್ಟಾಕ್ಕನ್ ಎಂಬ ವಿಶ್ವಕರ್ಮರ ಪರಂಪರೆಯ ಗುಂಪು ಈ ದೇವಾಲಯದ ಜೀರ್ಣೋದ್ಧಾರದ ಪ್ರಧಾನ ಶಿಲ್ಪಿಯಾಗಿದೆ. ಇದರ ಚರಿತ್ರೆಯಲ್ಲಿ ಹಲವಾರು ಹೊಸ ಬದಲಾವಣೆಗಳು ನಡೆದಿದ್ದು, ಇದು ವಿಶೇಷವಾಗಿ ಪಲ್ಲವ/ಚೋಳ ಅರಸರ ಕಾಲದಲ್ಲಿ ಮತ್ತು ಪೂರ್ವ-ಮಧ್ಯಕಾಲೀನ ಅವಧಿಗಳಲ್ಲಿ ಹೆಚ್ಚಾಗಿ ನಡೆದಿವೆ.

ಹಿಂದೂ ಸಾಹಿತ್ಯದಲ್ಲಿ, ಚಿದಂಬರಂ ಶಿವನ ಅತ್ಯಂತ ಐದು ಪವಿತ್ರ ದೇವಾಲಯಗಳಲ್ಲಿ ಒಂದಾಗಿದ್ದು, ಪ್ರತಿಯೊಂದು ದೇವಾಲಯವೂ ಪಂಚ ಭೂತಗಳಲ್ಲಿ ಒಂದನ್ನು ಸೂಚಿಸುತ್ತದೆ. ಇವುಗಳಲ್ಲಿ ಚಿದಂಬರಂ ದೇವಾಲಯವು ಆಕಾಶ (ಮೋಡರಹಿತ ಶುದ್ಧ ಆಕಾಶ)ವನ್ನು ಸೂಚಿಸುತ್ತದೆ. ಈ ವರ್ಗದ ಇತರೆ ನಾಲ್ಕು ದೇವಾಲಯಗಳೆಂದರೆ: ತಿರುವನಯ್‌ಕಾವಲ್ ಜಂಬುಕೇಶ್ವರ (ವರುಣ), ಕಂಚಿ ಏಕಾಂಬರೇಶ್ವರ (ಭೂಮಿ), ತಿರುವಣ್ಣಾಮಲೈ ಅರುಣಾಚಲೇಶ್ವರ (ಅಗ್ನಿ) ಮತ್ತು ಕಲಾಹಸ್ತಿ ನಾದರ್ (ವಾಯು).

ದೇವಾಲಯ

[ಬದಲಾಯಿಸಿ]

ನಗರದ ಹೃದಯ ಭಾಗದಲ್ಲಿ ಈ ದೇವಾಲಯ ಸಂಕೀರ್ಣವು 40 acres (160,000 m2) ಹರಡಿಕೊಂಡಿದೆ. ಚಿದಂಬರಂ ಎಂಬ ಪದವು ಚಿತ್, ಎಂದರೆ " ಅರಿವು" ಮತ್ತು ಅಂಬರಂ, ಎಂದರೆ "ಆಕಾಶ" ( ಆಕಾಸಂ ಅಥವಾ ಆಕಾಯಂ ಎಂಬ ಪದದಿಂದ); ಎಂಬ ಅರ್ಥವನ್ನು ಕೊಡುವ ಚಿದಾಕಾಸಂ, ಎಂಬ ಪದವನ್ನು ಸೂಚಿಸುತ್ತದೆ. ಇದರ ಅರ್ಥ "ಅರಿವಿನ ಆಗಸ" ಎಂದಾಗಿದ್ದು ಎಲ್ಲಾ ವೇದ ಮತ್ತು ಉಪನಿಷತ್ತುಗಳ ಪ್ರಕಾರ ಸಾಧಿಸಬೆಕಾಗಿರುವ ಅಂತಿಮ ಗುರಿಯಾಗಿದೆ.[]

ಶೈವ ಸಿದ್ಧಾಂತದ (ಸೈವ) ಅಥವಾ ಸೈವೈತ್ ಅನುಯಾಯಿಗಳಿಗೆ ಕೋಯಿಲ್ ಎಂಬ ಒಂದೇ ಪದವು ಚಿದಂಬರಂನ್ನು ಸೂಚಿಸುತ್ತದೆ. ಇದೇ ರೀತಿ ವೈಷ್ಣವರಿಗೆ ಇದು ಶ್ರೀರಂಗಂ ಅಥವಾ ತಿರುವರಂಗಂ ನ್ನು ಸೂಚಿಸುತ್ತದೆ.

ವ್ಯುತ್ಪತ್ತಿ

[ಬದಲಾಯಿಸಿ]

ಚಿದಂಬರಂ ಎಂಬ ಪದವು ಚಿತ್ , ಎಂದರೆ " ಅರಿವು" ಮತ್ತು ಅಂಬರಂ , ಎಂದರೆ "ಆಕಾಶ" ( ಆಕಾಸಂ ಅಥವಾ ಆಕಾಯಂ ಎಂಬ ಪದದಿಂದ); ಎಂಬ ಅರ್ಥವನ್ನು ಕೊಡುವ ಚಿದಾಕಾಸಂ , ಎಂಬ ಪದವನ್ನು ಸೂಚಿಸುತ್ತದೆ. ಇದರ ಅರ್ಥ "ಅರಿವಿನ ಆಗಸ" ಎಂದಾಗಿದ್ದು ಎಲ್ಲಾ ವೇದ ಮತ್ತು ಉಪನಿಷತ್ತುಗಳ ಪ್ರಕಾರ ಸಾಧಿಸಬೆಕಾಗಿರುವ ಅಂತಿಮ ಗುರಿಯಾಗಿದೆ.

ಇನ್ನೊಂದು ಸಿದ್ಧಾಂತವು ಚಿತ್ + ಅಂಬಾಲಂ ನಿಂದ ಬಂದದ್ದು. ಅಂಬಾಲಂ ಎಂದರೆ ಕಲೆಯನ್ನು ಪ್ರದರ್ಶಿಸುವ "ವೇದಿಕೆ". ಚಿದಾಕಾಸಂ ಎಂಬುದು ಪರಮ ಸಂತೋಷದ ಅಥವಾ ಆನಂದ ದ ಹಂತವಾಗಿದ್ದು, ಭಗವಂತನಾದ ನಟರಾಜನು ಈ ಪರಮ ಸಂತೋಷ ಅಥವಾ ಆನಂದ ನಟನಂ ನ ಸಂಕೇತವಾಗಿದ್ದಾನೆ. ಜೀವನದಲ್ಲಿ ಒಂದು ಸಾರಿ ಚಿದಂಬರಂಗೆ ಭೇಟಿ ನೀಡುವುದರಿಂದ ಮುಕ್ತಿ ದೊರೆಯುತ್ತದೆ ಎಂದು ಶೈವರು ನಂಬುತ್ತಾರೆ.

ಆದರೆ ಇನ್ನೊಂದು ಸಿದ್ಧಾಂತದ ಪ್ರಕಾರ ಈ ಪದವು ಚಿತ್ರಾಂಬಲಂ , ಎಂಬ ಪದದಿಂದ ಬಂದಿದ್ದು, ಚಿತು ಎಂದರೆ "ಆಟ ಅಥವಾ ದೇವರ ನಾಟ್ಯಗಳು" ಮತ್ತು ಅಂಬಲಂ ಎಂದರೆ " ವೇದಿಕೆ ಅಥವಾ ರಂಗ ಭೂಮಿ" ಎಂದರ್ಥ.

ವಿಶೇಷ ಗುಣಲಕ್ಷಣಗಳು

[ಬದಲಾಯಿಸಿ]

ಈ ದೇವಾಲಯದ ಅದ್ವಿತೀಯ ಲಕ್ಷಣವೆಂದರೆ ಆಭರಣಾಲಂಕೃತನಾದ ನಟರಾಜನ ವಿಗ್ರಹ. ಇದು ಭರತನಾಟ್ಯಂ ದೇವರಾದ ಭಗವಂತನಾದ ಶಿವನನ್ನು ಚಿತ್ರಿಸುತ್ತದೆ. ಶಿವನನ್ನು ಉತ್ಕೃಷ್ಟವಾದ ಲಿಂಗದ ರೂಪಕ್ಕೆ ಬದಲಾಗಿ ಮಾನವಾತಾರದ ಮೂರ್ತಿಯ ರೂಪದಲ್ಲಿರಿಸಿದ ಕೆಲವೇ ದೇವಾಲಯಗಳಲ್ಲಿ ಇದೂ ಒಂದಾಗಿದೆ. ನಟರಾಜನ ವಿಶ್ವ ನರ್ತನವು ಭಗವಂತನಾದ ಶಿವನು ವಿಶ್ವದ ಚಲನ ವಲನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವುದನ್ನು ಸೂಚಿಸುತ್ತದೆ. ದೇವಾಲಯವು ಐದು ಅಂಗಣಗಳನ್ನು ಒಳಗೊಂಡಿದೆ.

ಅರಗಲೂರ್ ಉದಯ ಇರರಾತೆವನ್ ಪೊಂಪಾರಪ್ಪಿನನ್ (ಅಲಿಯಾಸ್ ವನಕೋವರೈಯನ್) ಸುಮಾರು 1213 ADರಲ್ಲಿ ಚಿದಂಬರಂನ ಶಿವಾಲಯವನ್ನು ಪುನರ್ನಿಮಾಣ ಮಾಡಿದನು. ಇದೇ ಬಾಣ ನ ಮುಖ್ಯಾಧಿಕಾರಿ ತಿರುವನ್ನಾಮಲೈ ದೇವಾಲಯವನ್ನೂ ಸಹ ಕಟ್ಟಿಸಿದನು.

ಈ ದೇವಾಲಯವು ದೀಕ್ಷಿತಾರ್, ಎಂದು ಕರೆಯಲ್ಪಡುವ ತಮ್ಮ ಕುಲದಲ್ಲೇ ಮದುವೆ ಮಾಡಿಕೊಳ್ಳುವ ಶಿಯಾವೈತ್ ಎಂಬ ಒಂದು ಬ್ರಾಹ್ಮಣ ಪಂಗಡದವರ ಆಳಿಕೆಯಲ್ಲಿತ್ತು. ಅವರೇ ಇದರ ಪ್ರಧಾನ ಅರ್ಚಕರೂ ಸಹ ಆಗಿದ್ದರು.

ಈ ಕಾರಣದಿಂದಾಗಿ ದೀಕ್ಷಿತಾರ್ ಮತ್ತು ತಮಿಳು ನಾಡು ಸರ್ಕಾರದ ನಡುವೆ ನಡೆಯುತ್ತಿದ್ದ ದೀರ್ಘಕಾಲದ ಸಮರ ಪರಾಕಾಷ್ಟೆಯನ್ನು ತಲುಪಿತು. ಇದು ದೀಕ್ಷಿತರಲ್ಲದವರನ್ನು 'ಪವಿತ್ರ ಗರ್ಭಗುಡಿ' ಯಲ್ಲಿ ತೆವಾರಂ ಕೀರ್ತನೆಗಳನ್ನು ಹಾಡಲು ಸರ್ಕಾರ ಅನುಮತಿ ಕೊಡುವುದರ ಮೂಲಕ ಪ್ರಾರಂಭವಾಯಿತು.( ಸಂಸ್ಕೃತದಲ್ಲಿ ದೇವರ ಗರ್ಭಗೃಹ), ಇದನ್ನು ದೀಕ್ಷಿತರು ತೀವ್ರವಾಗಿ ಖಂಡಿಸುವುದರ ಮೂಲಕ ನಟರಾಜನ ಗರ್ಭಗುಡಿಯಲ್ಲಿ ಪೂಜೆಮಾಡಲು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾದರು.

ಚಿದಂಬರಂನ ಪುರಾಣಕಥೆ ಮತ್ತು ಅದರ ಪ್ರಾಮುಖ್ಯತೆ

[ಬದಲಾಯಿಸಿ]

ಪುರಾಣಪುರುಷ ಮಹಾಬಲಿ

[ಬದಲಾಯಿಸಿ]

ಭಗವಂತನಾದ ಶಿವನು ತಿಲೈ ವನಂ ನಲ್ಲಿ ವಿಹಾರ ಮಾಡುತ್ತಾ ಇರುವುದರೊಂದಿಗೆ ಚಿದಂಬರಂ ನ ಪೌರಾಣಿಕ ಕಥೆ ಪ್ರಾರಂಭಾಗುತ್ತದೆ. (ವನಂ ಎಂದರೆ ಕಾಡು ಮತ್ತು ತಿಲೈ ಮರಗಳು ಎಂದರೆ ಎಕ್ಸೋಸಿರಾ ಅಗಾಲ್ಲೋಕಾ , ಎಂಬ ವೈಜ್ಞಾನಿಕ ಹೆಸರುಳ್ಳ ಒಂದು ಪ್ರಬೇಧದ ಮ್ಯಾಂಗ್ರೂವ್ ಸಸ್ಯ. ಈಗ ಇವು ಚಿದಂಬರಂ ನ ಪಿಚಾವರಂ ಎಂಬ ಸ್ಥಳದ ತೇವಾಂಶ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆದಿರುವುದನ್ನು ಕಾಣಬಹುದು. ತಿಲೈ ಮರಗಳನ್ನು ಬಣ್ಣಿಸುವ ದೇವಾಲಯದ ಶಿಲ್ಪಕಲೆ 2 ಶತಮಾನದಷ್ಟು ಹಳೆಯದಾಗಿದೆ. ).

ಅಜ್ಞಾನದ ಪರಾಭವ

[ಬದಲಾಯಿಸಿ]

ತಿಲೈ ಅರಣ್ಯಗಳಲ್ಲಿ ಮಂತ್ರ-ತಂತ್ರಗಳ ಬಗ್ಗೆ ಅತೀವವಾದ ನಂಬಿಕೆಯಿದ್ದ ಸಂತರ ಅಥವಾ 'ಋಷಿಗಳ' ಗುಂಪು ಒಂದು ಇತ್ತು. ಇವರು ತಮ್ಮ ಪದ್ದತಿಗಳ ಮತ್ತು ಮಂತ್ರಗಳ ಅಥವಾ ಯಕ್ಷಿಣಿ ವಿದ್ಯೆಯ ಮೂಲಕ ದೇವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂಬ ನಂಬಿಕೆಯನ್ನು ಹೊಂದಿದ್ದರು. ಭಗವಂತನಾದ ಶಿವನು ತನ್ನ ತೇಜಸ್ಸಾದ ಸೌಂದರ್ಯ ಮತ್ತು ಪ್ರಕಾಶದಿಂದ, ಪಿಚಾಟನಾದರ್ ಎಂಬ ರೂಪಧರಿಸಿ ಒಬ್ಬ ಸರಳ ಭಿಕ್ಷುಕನಂತೆ ಭಿಕ್ಷಾಟನೆಯನ್ನು ಮಾಡುತ್ತಾ ಅರಣ್ಯದಲ್ಲಿ ವಿಹರಿಸುತ್ತಿದ್ದನು. ಭಗವಂತನಾದ ವಿಷ್ಣುವು ಮೋಹಿನಿಯ ರೂಪದಲ್ಲಿ ಆತನ ಹೆಂಡತಿಯಾಗಿ ಜೊತೆಯಲ್ಲಿದ್ದನು. ಋಷಿಗಳು ಮತ್ತು ಅವರ ಪತ್ನಿಯರು ಸುರದ್ರೂಪಿಯಾದ ಬಿಕ್ಷುಕ ಮತ್ತು ಆತನ ಹೆಂಡತಿಯ ರೂಪ ಮತ್ತು ತೇಜಸ್ಸಿಗೆ ಮರುಳಾಗುತ್ತಾರೆ.

ತಮ್ಮ ಹೆಂಡತಿಯರು ಮರುಳುಗೊಂಡದ್ದನ್ನು ಕಂಡ ಋಷಿಗಳು ರೋಷಗೊಂಡು ತಮ್ಮ ಯಕ್ಷಿಣಿ ವಿದ್ಯೆಗಳ ಮೂಲಕ ಸರ್ಪಗಳನ್ನು (ಸಂಸ್ಕೃತದಲ್ಲಿ ನಾಗ) ಆವಾಹನ ಮಾಡುತ್ತಾರೆ. ಆದರೆ ಬಿಕ್ಷುಕನ ವೇಶದಲ್ಲಿದ್ದ ಶಿವನು ಸರ್ಪಗಳನ್ನು ಎತ್ತಿ ತನ್ನ ಜಡೆ , ಕುತ್ತಿಗೆ ಮತ್ತು ಸೊಂಟದ ಸುತ್ತ ಆಭರಣಗಳನ್ನಾಗಿ ಧರಿಸುತ್ತಾನೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಋಷಿಗಳು ಒಂದು ಭಯಂಕರವಾದ ಹುಲಿಯನ್ನು ಆವಾಹನ ಮಾಡುತ್ತಾರೆ. ಶಿವನು ಅದರ ಚರ್ಮವನ್ನು ಸುಲಿದು ತನ್ನ ಸೊಂಟಕ್ಕೆ ಹೊದಿಕೆಯಾಗಿ ಧರಿಸುತ್ತಾನೆ.

ಇದರಿಂದ ಹತಾಶೆಗೊಂಡ ಋಷಿಗಳು ತಮ್ಮ ಎಲ್ಲಾ ಪಾರಮಾರ್ಥಿಕ ಶಕ್ತಿಯನ್ನು ಒಗ್ಗೂಡಿಸಿ ಮುಯಾಲಕನ್ ಎಂಬ ಅಹಂಕಾರದ ಮತ್ತು ಅಜ್ಞಾನದ ಸಂಕೇತವಾದ ಅತ್ಯಂತ ಬಲಿಷ್ಟವಾದ ಭೂತವೊಂದನ್ನು ಆವಾಹನ ಮಾಡುತ್ತಾರೆ. ಮುಗುಳ್ನಗೆ ನಕ್ಕ ಭಗವಂತನು , ಭೂತದ ಬೆನ್ನಮೇಲೆ ಏರಿ ಅವನನ್ನು ಅಚಲವಾಗಿರಿಸಿ ಆನಂದ ತಾಂಡವ (ನಿತ್ಯಾನಂದವನ್ನು ಕೊಡುವ ನಾಟ್ಯ)ವನ್ನಾಡುವುದರ ಮೂಲಕ ತನ್ನ ನಿಜ ಸ್ವರೂಪವನ್ನು ತೋರುತ್ತಾನೆ. ಭಗವಂತನು ತಮ್ಮ ಎಲ್ಲಾ ಯಕ್ಷಿಣಿ ಮತ್ತು ಮಂತ್ರಗಳಿಗಿಂತ ಮಿಗಿಲಾದವನು ಎಂಬುದನ್ನು ಅರಿತ ಋಷಿಗಳು ಶಿವನಿಗೆ ಶರಣಾಗುತ್ತಾರೆ.

ಆನಂದ ತಾಂಡವ ಭಂಗಿ

[ಬದಲಾಯಿಸಿ]

ಭಗವಂತನಾದ ಶಿವನ ಆನಂದ ತಾಂಡವ ಭಂಗಿಯು ಜಗತ್ತಿನ ಹಲವಾರು ಜನರು ಮೆಚ್ಚಿಕೊಳ್ಳುವ ಒಂದು ಪ್ರಸಿದ್ಧ ಭಂಗಿಯಾಗಿದೆ (ಇತರ ಧರ್ಮಕ್ಕೆ ಸೇರಿದ ಜನರೂ ಸಹ ಹಿಂದುತ್ವದಲ್ಲಿ ಇದನ್ನು ಪ್ರಶಂಸಿಸಿದ್ಡಾರೆ) ಈ ವಿಶ್ವ ನಾಟ್ಯವು ಒಬ್ಬ ಭರತ ನಾಟ್ಯಪಟು ಹೇಗೆ ನರ್ತಿಸಬೇಕು ಎಂಬುದನ್ನು ತೋರಿಸುತ್ತದೆ.

  • ನಟರಾಜನ ಪಾದದ ಅತಿಮಾನುಷ ಶಕ್ತಿಯು ಆತನ ಪಾದದಡಿಯಲ್ಲಿನ ಅಜ್ಞಾನದ ಲಕ್ಷಣವಾಗಿರುತ್ತದೆ
  • ಈ ಕೈಯಲ್ಲಿನ ಬೆಂಕಿ (ವಿನಾಶದ ಶಕ್ತಿ) ಎಂದರೆ ದುಷ್ಟಶಕ್ತಿಯ ನಾಶಮಾಡುವವ
  • ಎತ್ತಿರುವ ಕೈ ಯು ಅವನೇ ಜೀವನದ ಉದ್ಧಾರಕ ಎಂಬುದರ ಸಂಕೇತವಾಗಿದೆ.
  • ಹಿಂಬದಿಯ ಉಂಗುರಾಕಾರವು ವಿಶ್ವದ ಸಂಕೇತವಾಗಿದೆ.
  • ಆತನ ಕೈಯಲ್ಲಿನ ಡಮರು ಜೀವನದ ಮೂಲದ ಸಂಕೇತವಾಗಿದೆ.

ಇವು ನಟರಾಜ ವಿಗ್ರಹ ಮತ್ತು ವಿಶ್ವ ನಾಟ್ಯ ಬಣ್ಣಿಸುವ ಪ್ರಮುಖ ಅಂಶಗಳಾಗಿವೆ.

ಅತ್ಯಂತ ವಿರಳವಾದ ತಾಂಡವ ಭಂಗಿಯನ್ನು ಇಲ್ಲಿಂದ 32ಕಿಮೀ ದೂರದಲ್ಲಿರುವ ಮೆಲಾಕದಂಬೂರು ದೇವಾಲಯದಲ್ಲಿ ಕಾಣಬಹುದು. ಕರಾಕೊಯಿಲ್‌ನಲ್ಲಿ , ನಟರಾಜನು ನಂದಿಯ ಮೇಲೆ ನೃತ್ಯ ಮಾಡುವುದುಮತ್ತು ದೇವತೆಗಳು ಅದರ ಸುತ್ತ ಇರುವುದು ಪಾಲರ ಕಲೆಯನ್ನು ಬಿಂಬಿಸುತ್ತದೆ.

ಆನಂದ ತಾಂಡವ

[ಬದಲಾಯಿಸಿ]

ಭಗವಂತನು ವಿಷ್ಣುವಿನ ಅವತಾರದಲ್ಲಿರುವಾಗ ಹಾಸಿಗೆಯಾಗಿರುವ ಸರ್ಪವಾದ ಆದಿಶೇಷನು ಆನಂದ ತಾಂಡವದ ಬಗ್ಗೆ ಕೇಳಿ , ತಾನೂ ಸಹ ನೋಡಿ ಆನಂದಿಸಲು ಹಂಬಲಿಸಿದನು. ಭಗವಂತನು ಅವನನ್ನು ಆಶೀರ್ವದಿಸಿ ಪತಾಂಜಲಿ ಎಂಬ ಸಂತನ ರೂಪವನ್ನು ಧರಿಸುವಂತೆ ಹೇಳುತ್ತಾನೆ. ಪತಾಂಜಲಿಯನ್ನು ತಿಲೈ ಅರಣ್ಯಕ್ಕೆ ತೆರಳುವಂತೆ ಹೇಳಿ, ಅಲ್ಲಿ ತಾನು ತಕ್ಕ ಸಮಯದಲ್ಲಿ ನೃತ್ಯವನ್ನು ಪ್ರದರ್ಶಿಸುವೆನೆಂದು ತಿಳಿಸುತ್ತಾನೆ.

ಕ್ರಿತ ಕಾಲದಲ್ಲಿ ಹಿಮಾಲಯದಲ್ಲಿ ಧ್ಯಾನ ಮಾಡುತ್ತಿದ್ದ ಪತಂಜಲಿಯು ವ್ಯಾಗ್ರಪಥಾರ್ / ಪುಲಿಕಾಲ್ಮುನಿ ಎಂಬ ಇನ್ನೊಬ್ಬ ಋಷಿಯೊಂದಿಗೆ ಸೇರಿಕೊಂಡರು. (ವ್ಯಾಗ್ರ / ಪುಲಿ ಎಂದರೆ "ಹುಲಿ" ಮತ್ತು ಪಥಾ /ಕಾಲ್ ಎಂದರೆ "ಪಾದ" ಎಂದರ್ಥ- ಈ ಪದವು ಬೆಳಗಾಗುವುದಕ್ಕಿಂತ ಮುಂಚೆ ಭಗವಂತನಿಗಾಗಿ ಹೂವುಗಳನ್ನು ಕೀಳಲು ಯಾವ ರಿತಿಯಲ್ಲಿ ಆತನು ಹುಲಿಯ ಪಾದ ಮತ್ತು ಕಣ್ಣುಗಳನ್ನು ಹೊಂದಿಕೊಂಡನು ಎಂಬುದರ ಬಗ್ಗೆ ಇರುವ ಕಥೆಯನ್ನು ತಿಳಿಸುತ್ತದೆ.

ಋಷಿ ಮುನಿಯಾದ ಪತಾಂಜಲಿ ಮತ್ತು ಆತನ ಶಿಷ್ಯನಾದ ಉಪಮನ್ಯುವಿನ ಕಥೆ ವಿಷ್ಣು ಪುರಾಣ ಹಾಗೂ ಶಿವಪುರಾಣಗಳೆರಡರಲ್ಲೂ ಹೇಳಲಾಗಿದೆ. ಅವರಿಬ್ಬರೂ ತಿಲ್ಲೈ ಅರಣ್ಯಕ್ಕೆ ಬಂದು ಭಗವಂತನಾದ ಶಿವನನ್ನು ಶಿವಲಿಂಗದ ರೂಪದಲ್ಲಿ ಪೂಜೆ ಮಾಡುತ್ತಾರೆ. ಇಂದು ತಿರುಮೂಲಾತನೇಶ್ವರರ್ ಎಂಬ ದೇವರಾಗಿ ಪೂಜಿಸಲಾಗುತ್ತಿದೆ (ತಿರು - ಶ್ರೀ ಮೂಲಾತನಮ್ - ಪ್ರಥಮ ಸೃಷ್ಟಿ ಅಥವಾ ಸೃಷ್ಟಿಯ ಮೂಲ, ಈಶ್ವರರ್ - ಭಗವಂತ). ಪುರಾಣ ಕಥೆಗಳು ಹೇಳುವಂತೆ ಭಗವಂತನಾದ ಶಿವನು ತನ್ನ ಪರಮಾನಂದದ ನೃತ್ಯವನ್ನು (ಆನಂದ ತಾಂಡವಂ) ನಟರಾಜನಾಗಿ ತಯಿ ( ಜನವರಿ-ಫೆಬ್ರವರಿ) ಎಂಬ ತಮಿಳು ತಿಂಗಳಿನಲ್ಲಿ ಬರುವ ಪೂಸಮ್ ನಕ್ಷತ್ರದ ದಿನದಂದು ಈ ಇಬ್ಬರೂ ಋಷಿಗಳ ಸಮಕ್ಷಮದಲ್ಲಿ ಪ್ರದರ್ಶಿಸಿದನು.

ಮಹತ್ವ

[ಬದಲಾಯಿಸಿ]

ಚಿದಂಬರಂನ್ನು ತಿಲ್ಲೈ (ಹಿಂದಿನ ಕಾಲದ ತಿಲ್ಲೈ ಅರಣ್ಯ ಇಂದು ಇರುವ ದೇವಾಲಯದ ಸ್ಥಳವಾಗಿದೆ) ನಂತಹ ಹಲವಾರು ಕಾರ್ಯಗಳಲ್ಲೂ ಸಹ ಉಲ್ಲೇಖಿಸಲಾಗಿದೆ, ಪೆರುಂಪತ್ರಪುಲಿಯುರ್ ಅಥವಾ ವ್ಯಾಗ್ರಪುರಂ ் (ವ್ಯಾಗ್ರಪಥರ್ ಋಷಿಯ ಗೌರವಾರ್ಥ).

ಈ ದೇವಾಲಯವು ವಿಶ್ವದ ಹೃದಯ ಭಾಗದಲ್ಲಿದೆ ಎಂದು ಭಾವಿಸಲಾಗಿದೆ": ವಿರಾಟ್ ಹೃದಯ ಪದ್ಮ ಸ್ಥಲಂ ಭಗವಂತನು ಆನಂದ ತಾಂಡವಂ ಪ್ರದರ್ಶಿಸಿದ ಸ್ಥಳವು ಸರಿಯಾಗಿ "ತಿರುಮೂಲತಾನೇಶ್ವರ ದೇವಾಲಯ" ಇರುವ ದಕ್ಷಿಣ ಭಾಗವಾಗಿದೆ. ಇಂದು ಈ ಸ್ಥಳವು ಪೊನ್ನಾಂಬಲಂ / ಪೊರಸಬಾಯಿ ಆಗಿದೆ.(ಪೊನ್ ಎಂದರೆ ಬಂಗಾರ , ಅಂಬಾಲಂ / ಸಬಾಯಿ ಎಂದರೆ ವೇದಿಕೆ) ಇಲ್ಲಿ ಭಗವಂತನಾದ ಶಿವನನ್ನು ನಾಟ್ಯ ಸ್ವರೂಪದಲ್ಲಿ ಕಾಣಬಹುದು. ಆದ್ದರಿಂದ ಭಗವಂತನನ್ನು ರಂಗಭೂಮಿಯ ದೇವರು ಅಥವಾ ರಂಗನಾಥ ಎಂಬ ಅರ್ಥಕೊಡುವ ಸಭಾನಾಯಕರ್ , ಎಂದು ಕರೆಯಲಾಗುತ್ತದೆ.

ಈ ಚಿನ್ನದ ಮೇಲ್ಛಾವಣಿಯನ್ನು ಹೊಂದಿರುವ ವೇದಿಕೆಯು ಚಿದಂಬರಂ ದೇವಾಲಯದ ಪವಿತ್ರ ಗರ್ಭಗುಡಿಯಾಗಿದೆ. ಇದರಲ್ಲಿ ಭಗವಂತನ ಮೂರು ಸ್ವರೂಪಗಳಿವೆ.

  • ಅವತಾರ-ಸಕಲ ತಿರುಮೆನಿ ಎಂಬ ಹೆಸರಿನ ಮಾನವಾತಾರದಲ್ಲಿ ಭಗವಂತನಾದ ನಟರಾಜನು ಕಾಣಿಸಿಕೊಂಡಿದ್ದಾನೆ.
  • "ಅರೆ-ರೂಪ" – ಚಂದ್ರ ಮೌಳೇಶ್ವರನ ಸ್ಪಟಿಕ ಲಿಂಗ, ಸಕಲ ನಿಶ್ಕಲ ತಿರುಮೇನಿ .
  • "ರೂಪವಿಲ್ಲದ" – ಚಿದಂಬರ ರಹಸ್ಯಂನಲ್ಲಿರುವ ಸ್ಥಳದಂತೆ ದೇವಾಲಯದ ಗರ್ಭಗುಡಿಯ ಆವರಣದಲ್ಲಿರುವ ಖಾಲಿ ಸ್ಥಳ, ನಿಶ್ಕಲ ತಿರುಮೇನಿ .

ಪಂಚಭೂತ ಸ್ಥಳಗಳು

[ಬದಲಾಯಿಸಿ]

ಚಿದಂಬರಂ ಪಂಚಭೂತ ಸ್ಥಳಗಳಲ್ಲಿ ಒಂದಾಗಿದ್ದು, ಭಗವಂತನನ್ನು ಆಕಾಶ ಅಥವಾ ಆಗಯಂನ ರೂಪದಲ್ಲಿ ಪೂಜಿಸಲಾಗುತ್ತಿದೆ. ( "ಪಂಚ"-ಎಂದರೆ ಐದು, ಭೂತ - ಎಂದರೆ ಧಾತುಗಳಾದ: ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಹಾಗೂ ಸ್ಥಳ ಎಂದರೆ ಅವು ಇರುವ ತಾಣ).

ಇತರೆಯವೆಂದರೆ:

  • ಕಾಂಚಿಪುರಂ ದೇವಾಲಯದ ಏಕಾಂಬರೇಶ್ವರರ ದೇವಾಲಯ, ಇಲ್ಲಿ ಭಗವಂತನನ್ನು ಪೃಥ್ವಿಯೆಂದು ಪೂಜಿಸಲಾಗುತ್ತದೆ
  • ತಿರುಚನಾಪಳ್ಳಿಯ ತಿರುವನಯ್ಕಾವಲ್‌ನಲ್ಲಿರುವ ಜಂಬುಕೇಶ್ವರ ದೇವಾಲಯ, ಇಲ್ಲಿ ಭಗವಂತನನ್ನು ವರುಣ ದೇವನೆಂದು ಪೂಜಿಸಲಾಗುತ್ತದೆ
  • ತಿರುವಣ್ಣಾಮಲೈ‌ನಲ್ಲಿರುವ ಅಣ್ಣಾಮಲಾಯರ್ ದೇವಾಲಯ, ಇಲ್ಲಿ ಭಗವಂತನನ್ನು ಅಗ್ನಿದೇವನೆಂದು ಪೂಜಿಸಲಾಗುತ್ತದೆ
  • ಶ್ರೀಕಾಳಹಸ್ತಿಯಲ್ಲಿರುವ ಕಾಳಹಸ್ತಿ ದೇವಾಲಯದಲ್ಲಿ ಭಗವಂತನನ್ನು ವಾಯುವೆಂದು ಪೂಜಿಸಲಾಗುತ್ತದೆ.

ಭಗವಂತನಾದ ಶಿವನು ತನ್ನ ನೃತ್ಯಪ್ರದರ್ಶನವನ್ನು ಮಾಡಿದ ಐದು ಸ್ಥಳಗಳಲ್ಲಿ ಚಿದಂಬರಂ ಸಹ ಒಂದು ಎಂದು ಹೇಳಲಾಗುತ್ತದೆ. ಈ ಎಲ್ಲಾ ಸ್ಥಳಗಳಲ್ಲೂ ರಂಗಭೂಮಿ ಅಥವಾ ಸಭಾಯಿ ಗಳೆಂಬ ವೇದಿಕೆಗಳಿವೆ. ಪೊರ್ ಸಭಾಯಿ ಹೊಂದಿರುವ ಚಿದಂಬರಂ ಅಲ್ಲದೆ, ಇತರೆಯವೆಂದರೆ ತಿರುವಾಲಂಗಡುವಿನಲ್ಲಿರುವ ರತಿನಾ ಸಭಾಯಿ (ರತ್ನಂ – ರತ್ನ / ಕೆಂಪು) , ಕೋರ್ಟಲಂನಲ್ಲಿರುವ ಚಿತ್ರ ಸಭಾಯಿ (ಚಿತ್ರ – ವರ್ಣಚಿತ್ರ), ಮದುರೈ ಮೀನಾಕ್ಷಿ ಅಮ್ಮನ್ ದೇವಾಲಯದಲ್ಲಿರುವ ರಜತ ಸಭಾಯಿ ಅಥವಾ ವೆಲ್ಲಿ ಅಂಬಾಲಂ (ರಜತ / ವೆಲ್ಲಿ – ಬೆಳ್ಳಿ) ಮತ್ತು ತಿರುನೆಲ್ವೆಲಿಯ ನೆಲ್ಲಯಪ್ಪರ್ ದೇವಾಲಯದಲ್ಲಿರುವ ಥಾಮಿರ ಸಭಾಯಿ , (ಥಾಮಿರಂ – ತಾಮ್ರ).

ದೇವಸ್ಥಾನದ ಭಕ್ತರು

[ಬದಲಾಯಿಸಿ]

ಸಂತ ಸುಂದರರ್ ಥಿಲೈ ದೇವಸ್ಥಾನದ ಪೂಜಾರಿಗಳ ಬಗೆಗಿನ ತಮ್ಮ ಗೌರವವನ್ನು ಸೂಚಿಸುತ್ತಾ ಅವರ ಥಿರುಥೋಂದರ್ ಥೊಗೈ (ಭಗವಂತ ಶಿವನ 63 ಭಕ್ತರ ಪವಿತ್ರ ಪಟ್ಟಿ)ಯನ್ನು ಪ್ರಾರಂಭಿಸಿದರು. ಥಿಲೈ ಪೂಜಾರಿಗಳ ಭಕ್ತರಿಗೆ, ನಾನು ಒಬ್ಬ ಭಕ್ತ .

ದೇವಸ್ಥಾನ ಮತ್ತು ಭಗವಂತನನ್ನು ನಾಲ್ಕು ಸಂತ ಕವಿಗಳಿಂದ ಕಾವ್ಯಗಳಲ್ಲಿ ಅಮರಗೊಳಿಸಲಾಯಿತು - ಥಿರುಗ್‌ನನ ಸಂಬಂಥರ್, ಥಿರುನವುಕ್ಕರಸರ್, ಸುಂದರಮೂರ್ಥಿ ನಾಯನರ್, ಮತ್ತು ಮನಿಕ್ಕವಸಾಗರ್. ಮೊದಲ ಮೂವರ ಸಂಗ್ರಹಿತ ಕೆಲಸಗಳನ್ನು ಆಗಾಗ್ಗೆ ದೆವರಮ್ಸ್ ಎಂದು ಕರೆಯಲಾಗುತ್ತಿತ್ತು, ಆದರೆ ಇದು ಸರಿಯಲ್ಲ. ಕೇವಲ ಅಪ್ಪರ್’ರ (ಥಿರುನವುಕ್ಕರಸರ್) ಹಾಡುಗಳನ್ನು ದೆವರಮ್ ಎಂದು ಕರೆಯಲಾಗುತ್ತದೆ. ಸಂಬಂಥರ್'ರ ಹಾಡುಗಳನ್ನು ಥಿರುಕಡೈಕಪ್ಪು ಎಂದು ಕರೆಯಲಾಗುತ್ತದೆ. ಸುಂದರರ್'ರ ಹಾಡುಗಳನ್ನು ಥಿರುಪಾಟು ಎಂದು ಕರೆಯಲಾಗುತ್ತದೆ.

ಥಿರುಗ್ನನ ಸಂಬಂಥರ್ ಚಿದಂಬಂರಂನಲ್ಲಿನ ಭಗವಂತನನ್ನು ಪ್ರಶಂಸಿಸುವ 2 ಹಾಡುಗಳನ್ನು ರಚಿಸಿದರು , ಥಿರುನವುಕ್ಕರಸರ್ ಅಕ ಅಪ್ಪರ್ 8 ತೆವರಮ್ಸ್‌ನ್ನು ನಟರಾಜನನ್ನು ಪ್ರಶಣ್ಸಿಸುತ್ತಾ ರಚಿಸಿದರು, ಮತ್ತು ಸುಂದರರ್ ಭಗವಂತ ನಟರಾಜನ ಪ್ರಶಂಸೆಯಲ್ಲಿ 1 ಹಾಡನ್ನು ರಚಿಸಿದರು.

ಮನಿಕ್ಕವಸಾಗರ್ ಎರಡು ಹಾಡುಗಳನ್ನು ಬರೆದರು, ಮೊದಲನೆಯದು ತಿರುವಸಕಮ್ (ಪವಿತ್ರ ಉವಾಚಗಳು), ಇದನ್ನು ಚಿದಂಬರಂನಲ್ಲಿ ಹೆಚ್ಚಾಗಿ ಹಾಡಲಾಗುತ್ತದೆ ಮತ್ತು ಥಿರುಚಿತ್ರಂಬಲಕ್ಕೊವೈಯರ್ (ಅಕ ಥಿರುಕೊವೈಯರ್), ಇದನ್ನು ಸಂಪೂರ್ಣವಾಗಿ ಚಿದಂಬರಂನಲ್ಲಿ ಹಾಡಲಾಗಿದೆ. ಮನಿಕ್ಕವಸಾಗರ್ ಚಿದಂಬಂರಂನಲ್ಲಿ ಧಾರ್ಮಿಕ ಆಧ್ಯಾತ್ಮಿಕವನ್ನು ಸಾಧಿಸಿದ್ದರೆಂದು ಹೇಳಲಾಗುತ್ತಿದೆ.

ಮೊದಲ ಮೂವರು ಸಂತರು ರಚಿಸಿದ ಹಾಡುಗಳ ತಾಳೆಮರದ ಎಲೆಯ ಹಸ್ತ ಪ್ರತಿಗಳನ್ನು ದೇವಸ್ಥಾನದಲ್ಲಿ ಶೇಖರಿಸಿಡಲಾಗಿದೆ ಮತ್ತು ಇವನ್ನು ಚೋಳ ರಾಜ ಅರುನ್‌ಮೋಝಿವರ್ಮನ್ , ಹೆಚ್ಚು ಪ್ರಸಿದ್ದವಾಗಿ ಕರೆಯಲ್ಪಡುವ ಶ್ರೀ ರಾಜರಾಜ ಚೋಳ ಅವರಿಂದ ನಂಬೈಂದರ್‌ನಂಬಿ ಯವರ ಮಾರ್ಗದರ್ಶನದಲ್ಲಿ ಪುನಃಸ್ವಾದೀನ ಪಡಿಸಿಕೊಳ್ಳಲಾಯಿತು.

ದೇವಸ್ಥಾನದ ವಾಸ್ತುಕಲೆ ಮತ್ತು ಪ್ರಾಮುಖ್ಯತೆ

[ಬದಲಾಯಿಸಿ]

ಗೋಪುರಗಳು

[ಬದಲಾಯಿಸಿ]

ದೇವಸ್ಥಾನವು 9 ಮಹಾದ್ವಾರಗಳನ್ನು ಹೊಂದಿದ್ದು ಅವುಗಳಲ್ಲಿ ನಾಲ್ಕು ಗೋಪುರದ ಪವಿತ್ರ ಭವನಗಳನ್ನು ಅಥವಾ ಗೋಪುರಂಗಳನ್ನು ಹೊಂದಿದೆ, ಇವುಗಳಲ್ಲಿ ಪ್ರತಿಯೊಂದು ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರದಲ್ಲಿ 7 ಹಂತಗಳನ್ನು ಹೊಂದಿವೆ. ಪೂರ್ವದ ಪಗೊಡ ಭಾರತೀಯ ನಾಟ್ಯದ ಎಲ್ಲಾ 108 ಭಂಗಿಗಳನ್ನು (ಕರ್ನಮ್‌ಗಳನ್ನು ) ಹೊಂದಿದೆ – ಇದರಮೇಲೆ ಭರತನಾಟ್ಯಂನ್ನು ಕೆತ್ತಲಾಗಿದೆ.

ಐದು ಸಭಾಯಿಗಳು

[ಬದಲಾಯಿಸಿ]

5 ಸಭ ಗಳು ಅಥವಾ ಡಯಾಸ್‌ಗಳು ಅಥವಾ ಹಾಲುಗಳಿವೆ:

  • ಚಿತ್ ಸಭಾಯಿ , ಇದು ಭಗವಂತ ನಟರಾಜ, ಅವರ ಪತ್ನಿಯಾದ ದೇವತೆ ಶಿವಗಮಸುಂದರಿಯ ಪವಿತ್ರಸ್ಥಾನವಾಗಿದೆ.
  • ಕನಕ ಸಭಾಯಿ – ಚಿತ್‌ಸಭಾಯಿ ಎದುರು, ಇದರಿಂದ ಪ್ರತಿನಿತ್ಯದ ವಿಶಿವತ್ತಾದ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಲಾಗುತ್ತದೆ.
  • ಭಗವಂತ ದೇವತೆ ಕಾಳಿಯೊಂದಿಗೆ ನೃತ್ಯ ಮಾಡಿದ ಎಂದು ಹೇಳಲಾಗುವ ದೇವಸ್ಥಾನದ ದ್ವಜ ಸ್ತಂಭ (ಅಥವಾ ಕೊಡಿ ಮರಮ್ ಥವಾ ದ್ವಜ ಸ್ತಂಭಂ )ನ ದಕ್ಷಿಣ ದಿಕ್ಕಿನ, ನೃತ್ಯ ಸಭಾಯಿ ಅಥವಾ ನಾಟ್ಯ ಸಭಾಯಿ – ಒಂದು ಮೂರ್ತರೂಪ ಶಕ್ತಿ ಮತ್ತು ನೆಲೆಗೊಳಿಸಿದ ಅವರ ಮೇಲ್ಮೆ
  • ರಾಜ ಸಭಾಯಿ ಅಥವಾ 1000-ಸ್ತಂಭಗಳ ಹಾಲು, ಇದು ಸಾವಿರ ಸ್ತಂಭಗಳ ತಾವರೆಯ ಯೋಗಿಕ್ ಚಕ್ರ ಅಥವಾ ಸಹಸ್ರರಾಮ ವನ್ನು ಸೂಚಿಸುತ್ತದೆ (ಇದು ಯೋಗದಲ್ಲಿ ತಲೆಯ ಕಿರೀಟದಲ್ಲಿ 'ಚಕ್ರ' ಮತ್ತು ಆತ್ಮವು ಭಗವಂತನೊಂದಿಗೆ ಸೇರುವ ಸ್ಥಾನವಾಗಿದೆ. ಈ ಚಕ್ರವನ್ನು 1000-ದಳಗಳ ತಾವರೆಯಂತೆ ಪ್ರತಿಬಿಂಬಿಸಲಾಗಿದೆ. ಸಹಸ್ರರ ಚಕ್ರವನ್ನು ಕೇಂದ್ರೀಕರಿಸುತ್ತಾ ಧ್ಯಾನಮಾಡುವಿಕೆಯು ದೈವಿಕ ಶಕ್ತಿಯೊಂದಿಗೆ ಸೇರಿಸುತ್ತದೆ ಮತ್ತು ಇದು ಯೋಗಿಕ್ ಪದ್ಧತಿಯ ಪರಮೋತ್ಕರ್ಷ ಸ್ಥಿತಿ ಎಂದು ಹೆಳಲಾಗುತ್ತದೆ)
  • ದೆವ ಸಭಾಯಿ , ಇದು ಪಂಚಮೂರ್ತಿ ಗಳ ತಾಣವಾಗಿದೆ (ಪಂಚ - ಐದು, ಮೂರ್ತಿ ಗಳು - ದೇವರ ಮೂರ್ತಿಗಳು, ಮುಖ್ಯವಾಗಿ ಭಗವಾನ್ ಗನೇಷನ ಮೂರ್ತಿಗಳು - ವಿಘ್ನ ನಿವಾರಕ, ಭಗವಾನ್ ಸೊಮಸ್ಕಂದ, ಭಗವಂತ ಅವನ ಅನುಗ್ರಹ ಮತ್ತು ಪತ್ನಿಯೊಂದಿಗೆ ಆಸೀನನಾದ ಭಂಗಿಯ ರಚನೆ, ಭಗವಂತನ ಪತ್ನಿ ಸಿವನಂದ ನಾಯಕಿ , ಭಗವಾನ್ ಮುರುಗ ಮತ್ತು ಚಂದಕೇಶ್ವರ ರ ಮೂರ್ತಿ - ಭಗವಂತನ ಭಕ್ತರ ಪ್ರಮುಖ ಮತ್ತು ಮುಖ್ಯಸ್ಥ).

ಇತರೆ ಗೋಪುರಗಳು

[ಬದಲಾಯಿಸಿ]

ಐದು ಸಭಾಯಿ ಗಳಲ್ಲದೆ:

  • ಪತಂಜಲಿ ಮತ್ತು ವ್ಯಾಗ್ರಪತರ್ ಮುನಿಗಳಿಂದ ಪೂಜಿಸಲ್ಪಡುತ್ತಿದ್ದ ಮೂಲ ಶಿವಲಿಂಗಗಳ ಗೋಪುರಗಳು – ತಿರು ಆದಿಮೂಲನಾಥರ್ ಎಂದು ಕರೆಯಲಾಗುತ್ತದೆ ಹಾಗೂ ಆತನ ಪತ್ನಿ ಉಮಾಯಮ್ಮಯಿ (உமையம்மை) ಅಥವಾ ಉಮೈಯಾ ಪಾರ್ವತಿ
  • ಭಗವಾನ್ ಶಿವನ 63 ಪ್ರಧಾನ ಭಕ್ತರಿಗಾಗಿ ನಿರ್ಮಿಸಿರುವ ಕಲಶಗಳು – ಅಥವಾಅರುಬತ್ತು ಮೂವರ್
  • ಶಿವಗಾಮಿ ಯ ಗೋಪುರಗಳು – ಜ್ಞಾನಶಕ್ತಿ ಅಥವಾ ಜ್ಞಾನದ ಮೂರ್ತೀಕರಣ
  • ಭಗವಾನ್ ಗಣೇಶನಿಗಾಗಿ – ಕಷ್ಟಗಳನ್ನು ತಡೆಯುವ ಆತನ ಪ್ರಕಟನದಲ್ಲಿ
  • ಭಗವಾನ್ ಮುರುಗ ಅಥವಾ ಪಾಂಡ್ಯ ನಾಯಕನ್ – ಶಕ್ತಿಯ ಮೂರು ರೂಪಗಳನ್ನು ಹೊಂದಿದ ಆತನ ಮೂರ್ತೀಕರಣ – ಇಚ್ಚಾಯಿ ಅಥವಾ "ಆಸೆ"ಗಳನ್ನು ಪ್ರತಿನಿಧಿಸುವ ಆತನ ಪತ್ನಿ ವಲ್ಲಿ, ಕ್ರಿಯಾ ಅಥವಾ "ಕ್ರಿಯೆ"ಯನ್ನು ಪ್ರತಿನಿಧಿಸುವ ಆತನ ಹೆಂಡತಿ ದೇವಯಾನಿ ಮತ್ತು ಜ್ಞಾನ ಅಥವಾ "ಅರಿವ"ನ್ನು ಪ್ರತಿನಿಧಿಸುವಂತಹ ಪುರುಷ, ಅಜ್ಞಾನವನ್ನು ನಾಶಪಡಿಸುವಂತವನು.

ದೇವಾಲಯದ ಸಂಕೀರ್ಣದಲ್ಲಿ ಇನ್ನೂ ಹಲವಾರು ಸಣ್ಣ ಗೋಪುರಗಳು ಇವೆ.

ದೇವಾಲಯದ ಸುತ್ತಮುತ್ತ ಇರುವ ನೀರಿರುವ ಸ್ಥಳಗಳು

[ಬದಲಾಯಿಸಿ]

ಮೂರ್ತಿ (ವಿಗ್ರಹ), ಸ್ಥಳಂ (ಸ್ಥಳ) ಮತ್ತು ತೀರ್ಥಂ (ನೀರಿರುವ ಸ್ಥಳಗಳು) ಇವುಗಳು ದೇವಾಲಯದ ಪಾವಿತ್ರ್ಯತೆಯನ್ನು ತೋರುತ್ತವೆ. ಚಿದಂಬರಂ ದೇವಾಲಯದ ಒಳಗೆ ಹೊರಗೆ ನೀರಿನಿಂದ ಕೂಡಿರುವ ಸ್ಥಳಗಳನ್ನು ಹೊಂದಿದೆ.

  • ದೇವಾಲಯದ ಸಂಕೀರ್ಣವು 40 acres (160,000 m2) ನೀರಿನ ತೊಟ್ಟಿಯ ಮೇಲಿದೆ – ಇದನ್ನು ಶಿವಗಂಗಾ ಎಂದು ಕರೆಯುವರು (சிவகங்கை). ದೇವತೆ ಶಿವಗಾಮಿ ಕಲಶದ ಎದುರಿಗಿರುವ ದೇವಾಲಯದ ಮೂರನೆಯ ಮಾರ್ಗದಲ್ಲಿ ಈ ತೊಟ್ಟಿ ಇದೆ.
  • ದೇವಾಲಯದಲ್ಲಿ ಪೂಜೆಗೆ ನೀರು ತೆಗೆದುಕೊಳ್ಳುವಂತಹ ಪೂರ್ವಭಾಗದಲ್ಲಿರುವ ಚಿತ್‌ಸಭಾಯಿ ಪರಮಾನಂದ ಕೂಭಂ .
  • ಬಂಗಾಳ ಕೊಲ್ಲಿಯ ಬಳಿ ಇರುವ ಈಶಾನ್ಯ ಚಿದಂಬರಂನ ಕಿಲ್ಲಾಯಿಯಲ್ಲಿರುವ ಕುಯ್ಯ ತೀರ್ಥಂ , ಇದು ಪಾಶಮಾರುಥಂತುರಾಯಿ ತೀರದಲ್ಲಿದೆ.
  • ಚಿದಂಬರಂ‌ನ ದಕ್ಷಿಣಕ್ಕೆ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಪುಲಿಮಡು .
  • ಚಿದಂಬರಂ ದೇವಾಲಯದ ಪಶ್ಚಿಮಕ್ಕೆ ಹಾಗೂ ಭಗವಂತ ಇಲಮಾಯಿ ಅಕ್ಕಿನಾರ್ ದೇವಾಲಯದ ಎದುರಿಗೆ ಇರುವ ವ್ಯಾಗ್ರಪಥ ತೀರ್ಥಂ .
  • ಅನಂತೇಶ್ವರ ದೇವಾಲಯದ ಎದುರು ಚಿದಂಬರ ದೇವಾಲಯದ ಪಶ್ಚಿಮಕ್ಕೆ ಇರುವ ಅನಂತ ತೀರ್ಥಂ .
  • ಅನಂತ ತೀರ್ಥಂ‌ನ ಪಶ್ಚಿಮದಲ್ಲಿರುವ ನಾಗಸೇರಿ ತೊಟ್ಟಿ.
  • ತಿರುಕಲಾಂಜೆರಿ ಯ ಬಳಿ ಚಿದಂಬರ ದೇವಾಲಯ ವಾಯುವ್ಯಕ್ಕಿರುವ ಬ್ರಹ್ಮ ತೀರ್ಥಂ .
  • ಬ್ರಹ್ಮ ಚಾಮುಂಡೇಶ್ವರಿ ಎದುರಿಗಿರುವ ಶಿವ ಪಿರಿಯಾಯಿ ತೊಟ್ಟಿ (ಅಕಾ ತಿ ಥಿಲ್ಲಾಯಿ ಕಾಳಿ ದೇವಾಲಯ).
  • ಶಿವ ಪಿರಿಯಾಯಿ ಆಗ್ನೇಯಭಾಗದಲ್ಲಿರುವ ತಿರುಪರ್ಕಡಲ್ .

ಶ್ರೀ ಗೋವಿಂದರಾಜ ಸ್ವಾಮಿ ಸಮಾಧಿ

[ಬದಲಾಯಿಸಿ]

ಚಿದಂಬರಂ ದೇವಾಲಯದ ಸಂಕೀರ್ಣ ಕಟ್ಟಡವು ಭಗವಂತನಾದ ಗೋವಿಂದರಾಜ ಪೆರುಮಾಳ್ ಮತ್ತು ಆತನ ಹೆಂಡತಿಯಾದ ಪುಂಡರೀಗವಳ್ಳಿತಾಯರ್ ಇವರ ಪವಿತ್ರ ಗುಡಿಯಾಗಿದೆ. ಈ ಪವಿತ್ರ ಗುಡಿಯು ತಿಲ್ಲೈ ತಿರುಚಿತ್ರ ಕೂಟಮ್ ಎಂದಾಗಿದ್ದು, 108 ದಿವ್ಯದೇಶಗಳಲ್ಲಿ ಇದೂ ಒಂದಾಗಿದೆ-ಅಥವಾ ಭಗವಂತನಾದ ವಿಷ್ಣುವಿನ ಪ್ರಧಾನ ಭಕ್ತರು (ಆಳ್ವರ್‌ಗಳು) ಕೀರ್ತನೆಗಳನ್ನು ( ನಾಲಯಿರ ದಿವ್ಯ ಪ್ರಭಾಂತಂ) ಹಾಡಿ ಪವಿತ್ರಗೊಳಿಸಿದ (ಮಂಗಳಸಾಸನಂ) ವಿಷ್ಣುವಿನ ಪ್ರಮುಖ ಗುಡಿಗಳಲ್ಲಿ ಒಂದಾಗಿದೆ. ತಿಲ್ಲೈ ಚಿತ್ರಕೂಟಂ (ಈಗ ಇರುವ ಗೋವಿಂದರಾಜ ದೇವಾಲಯವಲ್ಲ)ನ್ನು ಕುಲಶೇಖರ ಆಳ್ವರ್ ಮತ್ತು ತಿರುಮಂಗೈ ಮನ್ನನ್ ಆಳ್ವರ್ ಎಂಬ ಇಬ್ಬರು ಗಾಯಕರು ಹಾಡಿದ್ದಾರೆ. ಚಿದಂಬರಂ ಬ್ರಾಹ್ಮಣರು (ದೀಕ್ಷಿತರು) ಚಿತ್ರಕೂಟಂನಲ್ಲಿ ಭಗವಂತನಿಗೆ ಸೂಕ್ತ ಪೂಜೆ ( ತಮಿಳಿನಲ್ಲಿ " ಮುರೈಯಾಹ") ಮತ್ತು ವೈದಿಕಗಳನ್ನು ಮಾಡುತ್ತಿದರು ಎಂದು ಈ ಇಬ್ಬರೂ ಆಳ್ವರೂ ದಾಖಲಿಸಿದ್ಡಾರೆ. ಆದರೆ ಇದರ ಬಗ್ಗೆ ಹಲವಾರು ವಿವಾದಗಳಿದ್ದು, ಹಲವರ ಅಭಿಪ್ರಾಯದಂತೆ ಆಳ್ವರು ಹೇಳಿರುವ ಚಿತ್ರಕೂಟಂ ರಾಮನು ತನ್ನ ಸಮಯವನ್ನು ವಿಶ್ವಾಮಿತ್ರ ಮತ್ತು ಅತ್ರಿಯಂತಹ ಮುನಿಗಳೊಂದಿಗೆ ಕಳೆದ ಉತ್ತರ ಪ್ರದೇಶ ಒಂದು ಸ್ಥಳ ಎನ್ನಲಾಗಿದೆ. ಆದರೆ ಈ ಅಭಿಪ್ರಾಯಗಳು ಬೇಗನೇ ಬಿದ್ದುಹೋಗಿವೆ. ಏಕೆಂದರೆ ಆಜ್ವಹಾರಗಳ ಮಂಗಲಾಸನಮ್‌ನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದಾಗ ಈ ಎಲ್ಲಾ ಪವಿತ್ರ ಗುಡಿಗಳು ಒಂದು ಭೌಗೋಳಿಕ ಕ್ರಮದಲ್ಲಿ ಇರುವುದು ಕಂಡುಬಂದಿದೆ. ಮಹಾಬಲಿಪುರಂ (ಮಮ್ಮಲಾಪುರಂ) , ತಿವಾಯಿಂದ್ರಪುರಂ (ಕಡಲೂರಿನ ಹತ್ತಿರ), ಚಿದಂಬರಂ (ತಿಲ್ಲೈ ತಿರುಚಿತ್ರಕೂಟಂ), ಸೀರ್ಗಾಜಿ (ಕಾಜಿ ಚಿರಾಮ ವಿನ್ನಾಗರಂ) ತಿರುನಗರ್ ಇವೇ ಮೊದಲಾದವು. ಐತಿಹಾಸಿಕವಾಗಿ ವೈಷ್ಣವರ ಅಭಿಪ್ರಾಯದಂತೆ ಈ ದೇವಾಲಯವು ಭಗವಂತನಾದ ಶೀ ಗೋವಿಂದರಾಜ ಸ್ವಾಮಿಯ ನಿವಾಸವಾಗಿದ್ದು, ಭಗವಂತನಾದ ಶಿವನು ತನ್ನ ಹೆಂಡತಿ ಮತ್ತು ತನ್ನ ನಡುವೆ ನಡೆಯುವ ನಾಟ್ಯ ಸ್ಪರ್ಧೆಗೆ, ತೀರ್ಪುಗಾರನಾಗಿ ಸ್ವಾಮಿಯು ಬರುವಂತೆ ಇಲ್ಲಿ ಬಂದು ಬೇಡಿಕೊಂಡನು. ಭಗವಂತನಾದ ಗೊವಿಂದರಾಜ ಸ್ವಾಮಿ ಇದಕ್ಕೆ ಒಪ್ಪುತ್ತಾನೆ. ನಂತರ ಶಿವ ಮತ್ತು ಪಾರ್ವತಿಯರ ಮಧ್ಯೆ ನಾಟ್ಯ ಸ್ಪರ್ಧೆ ಮುಂದುವರೆದು ಇಬ್ಬರೂ ಅತ್ಯತ್ತಮ ಪ್ರದರ್ಶನ ನೀಡುತ್ತಾ ಒಬ್ಬರಿಗೊಬ್ಬರು ಸೋಲದೇ ಇರುವ ಸಮಯದಲ್ಲಿ , ಶಿವನು ಗೋವಿಂದ ರಾಜ ಸ್ವಾಮಿ ಬಳಿ ಬಂದು ತಾನು ಗೆಲ್ಲುವ ಮಾರ್ಗೊಪಾಯವನ್ನು ಕೇಳುತ್ತಾನೆ. ಅದಕ್ಕೆ ಆತನು ಶಿವನು ತನ್ನ ಕಾಲನ್ನು ಮೇಲೆತ್ತಿ ಹಿಡಿದಿಟ್ತುಕೊಳ್ಳುವಂತೆ ಸಲಹೆ ನೀಡುತ್ತಾನೆ. ನಾಟ್ಯಶಾಸ್ತ್ರದ ಪ್ರಕಾರ ಸ್ತ್ರೀಯರು ಇಂತಹ ಭಂಗಿಯನ್ನು ಅನುಸರಿಸುವುದನ್ನು ನಿಷೇಧಿಸುವುದರಿಂದ ಅಂತಿಮವಾಗಿ ಶಿವನು ಈ ಭಂಗಿಯನ್ನು ಅನುಸರಿಸಿ, ಪಾರ್ವತಿ ಶರಣಾಗತಳಾಗುವಂತೆ ಮಾಡುತ್ತಾನೆ. ಆದ್ದರಿಂದ ಇದು ಶಿವನ ನೃತ್ಯ ಭಂಗಿಯ ಸ್ಥಳವಾಗಿದೆ. ನೃತ್ಯ ವೇದಿಕೆ ಅಥವಾ ತೆರೆದ ಮೈದಾನವನ್ನು ಸಾಮಾನ್ಯವಾಗಿ ಅಂಬಾಲಂ ಎಂದು ಕರೆಯಲಾಗುವುದು. ಭಗವಂತನಾದ ಗೋವಿಂದರಾಜ ಸ್ವಾಮಿಯೇ ಈ ಪಂದ್ಯಕ್ಕೆ ತೀರ್ಪುಗಾರನಾಗಿಯೂ ಹಾಗೂ ಸಾಕ್ಷಿಯಾಗಿಯೂ ಇರುವನು. ಆದರೆ ಕಾಲಾಂತರದಲ್ಲಿ ಶೈವ ಮತಾಂಧ ರಾಜರುಗಳಾದ ಕಿರುಮಿ ಕಂಡ ಚೋಳ (2ನೇ ಕುಲೋತ್ತುಂಗನೆಂದೂ ಕರೆಯುವರು) ಮುಂತಾದವರು ಈ ಸ್ಥಳವನ್ನು ಶೈವ ದೇವಾಲಯವಾಗಿ ಜನಪ್ರಿಯಗೊಳಿಸಿದರು. ದೀಕ್ಷಿತರನ್ನು ಬಲವಂತವಾಗಿ ಶೈವರ ಪಂಥಕ್ಕೆ ಸೇರಿಸಲಾಯಿತು (ಅಲ್ಲಿಯವರೆಗೂ ದೀಕ್ಷಿತರು ವೈದಿಕ ಪದ್ದತಿಗಳನ್ನು ಅನುಸರಿಸುತ್ತಿದ್ದರು. ಶೈವ ಆಗಮವು ವೈದಿಕ ಪದ್ದತಿಯಲ್ಲಿರದೇ ಇದ್ದದರಿಂದ, ಬ್ರಾಹ್ಮಣರಾಗಿ ವೈದಿಕ ಪದ್ದತಿಯನ್ನು ಬಿಡಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ದೀಕ್ಷಿತರು ಶಿವನ ಆಲಯದಲ್ಲಿ ವೈದಿಕ ಪದ್ದತಿಗಳನ್ನು ಅನುಸರಿಸುವ ಏಕೈಕ ಬ್ರಾಹ್ಮಣ ಪಂಗಡವಾಗಿದೆ).

ದೇವಾಲಯದ ವಿನ್ಯಾಸದ ಅರ್ಥ

[ಬದಲಾಯಿಸಿ]

ದೇವಾಲಯದ ಶಿಲ್ಪಕಲೆ ಮತ್ತು ಪ್ರಾದರ್ಶಿಕೆ ತಾತ್ವಿಕ ಅರ್ಥಗಳಿಂದ ತುಂಬಿದೆ.

  • ಪಂಚಭೂತ ಸ್ಥಳ ದೇವಾಲಯಗಳಲ್ಲಿ ಮೂರು ದೇವಾಲಯಗಳಾದ, ಕಾಳಹಸ್ತಿ, ಕಂಚಿಪುರಂ ಮತ್ತು ಚಿದಬಂರಂ ಇವು ಮೂರೂ ಸಹ ವಾಸ್ತವವಾಗಿ , ಜೋತಿಷ್ಯ ಶಾಸ್ತ್ರ, ಭೂಗೋಳ ಮತ್ತು ವಾಸ್ತು ಶಿಲ್ಪ ಶಾಸ್ತ್ರಕ್ಕೆ ಅಚ್ಚರಿ ಮೂಡಿಸುವಂತೆ ಸರಿಯಾಗಿ 79' 43" ಪೂರ್ವ ರೇಖಾಂಶಕ್ಕೆ ಒಂದೇ ಸರಳ ರೇಖೆಯಲ್ಲಿವೆ.

ಇತರ ಎರಡು ದೇವಾಲಯಗಳಲ್ಲಿ, ತಿರುವನೈಕವಲ್ ದಕ್ಷಿಣದ 3 ಡಿಗ್ರಿಯಲ್ಲೂ ಮತ್ತು ಈ ದೈವಿಕ ಕಕ್ಷೆ , ಯ ಉತ್ತರ ತುದಿಯ ಪಶ್ಚಿಮಕ್ಕೆ ಸರಿಯಾಗಿ 1 ಡಿಗ್ರಿಯಲ್ಲೂ ಇದೆ. ಆದರೆ ತಿರುವನ್ನಾಮಲೈ ಹೆಚ್ಚು ಕಡಿಮೆ ಮಧ್ಯಭಾಗದಲ್ಲಿದೆ (ದಕ್ಷಿಣಕ್ಕೆ 1.5 ಡಿಗ್ರಿ ಮತ್ತು ಪಶ್ಚಿಮಕ್ಕೆ 0.5 ಡಿಗ್ರಿಯಲ್ಲಿದೆ).

  • 9 ಮಹಾದ್ವಾರಗಳು ಮಾನವನ ಶರೀರದ ನವರಂದ್ರಗಳನ್ನು ಪ್ರತಿಬಿಂಬಿಸುತ್ತವೆ.
  • ಚಿತ್ಸಾಬಯಿ ಅಥವಾ ಪೊನ್ನಂಬಲಂ ಗರ್ಭಗುಡಿಯು ಹೃದಯಕ್ಕೆ ಹೋಲಿಕೆಯಾಗಿದ್ದು, ಪಂಚಾತ್ ಚರ ಪದಿ ಎಂಬ ಐದು ಮೆಟ್ಟಿಲಿಗಳ ಮೇಲಿರುವ ಒಂದು ಸ್ಥಳವಾಗಿದೆ-ಪಂಚಾ ಎಂದರೆ ಐದು, ಆಚರ - ಅವಿನಾಶವಾದ ಅಕ್ಷರಗಳು- "ಶಿ ವಾ ಯ ನ ಮ"ವನ್ನು ಕನಕಸಬಯಿ ಎಂಬ ಮೇಲಿನ ವೇದಿಕೆಯಲ್ಲಿರಿಸಲಾಗಿದೆ.

ರಂಗಭೂಮಿಯ ಪಾರ್ಶ್ವಗಳಿಂದ ಸಭಾಯಿಗೆ ಪ್ರವೇಶ ದ್ವಾರಗಳಿವೆ (ಬಹಳಷ್ಟು ದೇವಾಲಯಗಳಲ್ಲಿ ಮುಂಭಾಗದಲ್ಲಿದ್ದಂತೆ ಇಲ್ಲ).

  • ಪೊನ್ನಾಂಬಲಂ ಅಥವಾ ಪವಿತ್ರ ಗರ್ಭಗುಡಿಯು 28 ಸ್ತಂಭಗಳ ಮೇಲೆ ನಿಂತಿದೆ-ಇವು 28 ಆಗಮ ಗಳನ್ನು ಅಥವಾ ಭಗವಂತನಾದ ಶಿವನನ್ನು ಪೂಜಿಸುವ ವಿಧಿ ವಿಧಾನಗಳ ಬಗ್ಗೆ ತಿಳಿಸುತ್ತವೆ.

ಮೇಲ್ಛಾವಣಿಯನ್ನು 64 ತೊಲೆಗಳು ಹಿಡಿದಿಟ್ಟುಕೊಂಡಿದ್ದು, ಇವು 64 ವಿಧದ ಕಲೆಗಳನ್ನು ಪ್ರತಿಬಿಂಬಿಸುತ್ತವೆ. ಅಷ್ಟೇ ಅಲ್ಲದೆ ಇದಕ್ಕೆ ಇರುವ ಅಡ್ಡ ತೊಲೆಗಳು ಮಾನವನ ದೇಹದಲ್ಲಿರುವ ಅಸಂಖ್ಯಾತ ರಕ್ತನಾಳಗಳನ್ನು ಸೂಚಿಸುತ್ತವೆ. ಮೇಲ್ಛಾವಣಿಯನ್ನು 21600 ಚಿನ್ನದ ಹೆಂಚುಗಳಿಂದ ಹೊದಿಸಲಾಗಿದ್ದು ಶಿವಾಯನಮಃ ಎಂಬ ಪದವನ್ನು ಇವುಗಳ ಮೇಲೆ ಕೆತ್ತಲಾಗಿದೆ. ಈ ಹೆಂಚುಗಳು 21600 ಜೀವರಾಶಿಗಳನ್ನು ಸೂಚಿಸುತ್ತವೆ. ಚಿನ್ನದ ಹೆಂಚುಗಳನ್ನು 72000 ಚಿನ್ನದ ಮೊಳೆಗಳಿಂದ ಬಿಗಿಗೊಳಿಸಲಾಗಿದ್ದು, ಇವು ಮಾನವನ ದೇಹದ ನಾಡಿಗಳನ್ನು ಸೂಚಿಸುತ್ತವೆ. ಮೇಲ್ಛಾವಣಿಯ ಮೇಲ್ಬಾಗದಲ್ಲಿ 9 ಕುಂಭ ಅಥವಾ ಕಳಸ ಗಳನ್ನು ಇಡಲಾಗಿದ್ದು, ಇವು ಶಕ್ತಿಯ 9 ರೂಪಗಳನ್ನು ಸೂಚಿಸುತ್ತವೆ (ಉಮಾಪತಿ ಶಿವನ ಕುಂಚಿತಾಂಗ್ರಿಸ್ತವಂ ಅನ್ನು ಸೂಚಿಸುತ್ತದೆ)

  • ಸತಾರ ದಲ್ಲಿರುವ ಶ್ರೀ ನಟರಾಜ ಮಂದಿರ ವು ಈ ದೇವಾಲಯದ ಪ್ರತಿರೂಪದಂತಿದೆ.

ದೇವಾಲಯದ ರಥ

[ಬದಲಾಯಿಸಿ]

ಚಿದಂಬರಂ ದೇವಾಲಯದಲ್ಲಿರುವ ರಥವು, ಪ್ರಾಯಶಃ ತಮಿಳುನಾಡಿನಲ್ಲಿರುವ ಯಾವುದೇ ದೇವಾಲಯದಲ್ಲಿರುವ ರಥಕ್ಕೆ ಒಂದು ಅತ್ಯಂತ ಸುಂದರವಾದ ಉದಾಹರಣೆಯಾಗಿದೆ. ಈ ರಥದಮೇಲೆ, ವರ್ಷಕ್ಕೆ ಎರಡು ಸಾರಿ ಭಗವಂತನಾದ ನಟರಾಜನನ್ನು ಕುಳ್ಳಿರಿಸಿ ಹಬ್ಬದ ದಿನಗಳಂದು ಸಾವಿರಾರು ಭಕ್ತಾದಿಗಳು ಈ ತೇರನ್ನು ಎಳೆಯುತ್ತಾರೆ.

ಶಿವ ದೇವಾಲಯದ ರಚನೆ - ಚಿತ್ & ಅಂಬರಂ ವಿವರಣೆ

[ಬದಲಾಯಿಸಿ]

ಆಗಮ ವಿಧಿ ವಿಧಾನಗಳ ಪ್ರಕಾರ ಒಂದು ಶ್ರೇಷ್ಟವಾದ ಶಿವನ ದೇವಾಲಯವು ಐದು ಪ್ರಕಾರಗಳನ್ನು ಅಥವಾ ಪ್ರತ್ಯೇಕ ಗೋಡೆ ಇರುವ ಮಂಡಲಗಳನ್ನು ಹೊಂದಿರಬೇಕಾಗುತ್ತದೆ. ಅತ್ಯಂತ ಒಳ ಪ್ರಕಾರವೊಂದನ್ನು ಹೊರತುಪಡಿಸಿ ಉಳಿದವು ತೆರೆಯಲ್ಪಟ್ಟಿರುತ್ತವೆ. ಅತ್ಯಂತ ಒಳ ಪ್ರಕಾರದಲ್ಲಿ ಪ್ರಮುಖ ದೇವತೆ ಹಾಗೂ ಇತರ ದೇವತೆಗಳನ್ನು ಇಡಲಾಗಿದೆ. ಪ್ರಧಾನ ದೇವತೆಗೆ ನೇರವಾಗಿ ಒಂದು ಭಾರವಾದ ಮರದ ಅಥವಾ ಕಲ್ಲಿನ ಧ್ವಜ ಸ್ತಂಭ ಇರುತ್ತದೆ.

ಅತ್ಯಂತ ಒಳಪ್ರಕಾರದಲ್ಲಿ ಪವಿತ್ರವಾದ ಗರ್ಭಗುಡಿ ಇದೆ ( ತಮಿಳಿನಲ್ಲಿ ಕರುವರೈ) ಇದರಲ್ಲಿ, ಪರಮಶ್ರೇಷ್ಠ ಭಗವಂತನಾದ ಶಿವನು ಆಸೀನನಾಗಿದ್ದಾನೆ.

ಶಿವ ದೇವಸ್ಥಾನ ವಿನ್ಯಾಸದ ಹಿಂದಿನ ಸಾಂಕೇತ

  1. ದೇವಸ್ಥಾನವನ್ನು ಎಲ್ಲಾ ಸೂಕ್ಷ್ಮತೆಗಳೊಂದಿಗಿನ ಮಾನವ ದೇಹವನ್ನು ಪ್ರತಿಬಿಂಬಿಸುವಂತೆ ನಿರ್ಮಿಸಲಾಗಿದೆ.
  2. ಒಂದನ್ನೊಂದು ಸುತ್ತುವರೆದ ಐದು ಗೋಡೆಗಳು ಮಾನವ ನಿಲುವಿನ ಕೋಶಗಳಾಗಿವೆ (ರಕ್ಷಣಾ ಕವಚಗಳು):
    • ಅತ್ಯಂತ ಹೊರಗಿನದು ಅನ್ನಮಯ ಕೋಶವಾಗಿದ್ದು , ಭೌತಿಕ ದೇಹದ ಸಾಂಕೇತಿಕವಾಗಿದೆ.
    • ಎರಡನೆಯದು ಪ್ರನಮಯ ಕೋಶ , ಇದು ಪರಮೋಚ್ಚ ಶಕ್ತಿಯ ಅಥವಾ ಪ್ರಾಣದ ರಕ್ಷಣಾ ಕವಚದ ಸಾಂಕೇತಿಕವಾಗಿದೆ.
    • ಮೂರನೆಯದು ಮನೋಮಯ ಕೋಶ, ಇದು ಆಲೋಚನೆಗಳ, ಮನದ ರಕ್ಷಣಾ ಕವಚದ ಸಂಕೇತ
    • ನಾಲ್ಕನೆಯದು ವಿಜ್ಞಾನ ಮಯ ಕೋಶ, ಬುದ್ಧಿಶಕ್ತಿಯ ರಕ್ಷಣಾ ಕವಚದ ಸಂಕೇತ
    • ಐದನೆಯ ಮತ್ತು ಅತ್ಯಂತ ಒಳಗಿನದು ಆನಂದ ಮಯ ಕೋಶ, ಪರಮಾನಂದ (ಸ್ವರ್ಗ ಸುಖ)ದ ರಕ್ಷಣಾ ಕವಚ ಸಂಕೇತ.
  3. ಆನಂದ ಮಯ ಕೋಶ ರಕ್ಷಣಾ ಕವಚದ ಸಂಕೆತವಾದ ಪ್ರಕಾರದಲ್ಲಿನ ಪವಿತ್ರ ಸ್ಥಳ, ನಮ್ಮೊಳಗಿನ ಜೀವವಂತೆ ಆಸೀನನಾದ, ಭಗವಂತನ ತಾಣವಾಗಿದೆ. ಪವಿತ್ರ ಸ್ಥಳವು ಎಲ್ಲಾ ಬದಿಗಳು ಮುಚ್ಚಲಾದ ಹೃದಯದ ಒಳಗೆ ಇದ್ದ ರೀತಿಯ, ಬೆಳಕಿಲ್ಲದ ಸ್ಥಳವಾಗಿದೆ ಎಂಬುದನ್ನು ಗಮನಿಸಬೇಕಾಗಿದೆ.
  4. ಮುಖದ್ವಾರದ ಗೋಪುರಗಳನ್ನು ಪಾದಕ್ಕೆ ಹೋಲಿಸಲಾಗಿದ್ದು, ಕಾಲ್ಬೆರಳುಗಳನ್ನು ಮೆಲಕ್ಕೆತ್ತಿ ಹಿಂಬದಿಯಲ್ಲಿ ಮಲಗಿರುವುದನ್ನು ಸೂಚಿಸುತ್ತದೆ.
  5. ದ್ವಜ ಸ್ತಂಭವು ಮೂಲಾಧಾರದಿಂದ (ಬೆನ್ನೆಲುಬಿನ ಆಧಾರ) ಸಹಸ್ರಾರ್‌ ವರೆಗೂ ( ತಲೆಯಲ್ಲಿನ ತುದಿ) ಉದ್ಭವಿಸುವ ಸುಶುಮ್ನ ನಾಡಿಯನ್ನು ವರ್ಣಿಸುತ್ತದೆ.
  6. ಕೆಲವು ದೇವಸ್ಥಾನಗಳು ಮೂರು ಪ್ರಕಾರಗಳನ್ನು ಹೊಂದಿವೆ. ಅಲ್ಲಿ ಅವು ಮಾನವನ ಸ್ಟೂಲ, ಸುಕ್ಶುಮಾಂದ್ ಕರಣ ಶರೀರಗಳನ್ನು ಪ್ರತಿಬಿಂಬಿಸುತ್ತವೆ, ಕೆಲವು ದೇವಸ್ಥಾನಗಳು ಕೇವಲ ಒಂದನ್ನು ಹೊಂದಿರುತ್ತವೆ ಮತ್ತು ಅವು ಎಲ್ಲಾ ಐದನ್ನು ಪ್ರತಿಬಿಂಬಿಸುತ್ತವೆ.

ಚಿದಂಬರಂ ದೇವಾಲಯ ಮತ್ತು ಅದರ ಸಂಕೇತ

ಸಂತ ತಿರುಮೂಲಾರ್, ಅವರ ದಂತೆಕಥೆಯನ್ನು ಚಿದಂಬರಂದೊಂದಿಗೆ ಜಠಿಲವಾಗಿ ರಚಿಸಲಾಗಿದೆ ಎಂದು ಅವರ ಥಿರುಮಂತಿರಂನಲ್ಲಿ ಹೇಳಲಾಗಿದೆ.

திருமந்திரம்

  • மானுடராக்கை வடிவு சிவலிங்கம்
  • மானுடராக்கை வடிவு சிதம்பரம்
  • மானுடராக்கை வடிவு சதாசிவம்
  • மானுடராக்கை வடிவு திருக்கூத்தே

ಕನ್ನಡದಲ್ಲಿ ಲಿಪ್ಯಂತರಿಸಿ ಓದಿದರೆ ಹೀಗಿದೆ:

  • ಮಾನುದರಾಕ್ಕೈ ವದಿವು ಶಿವಲಿಂಗಂ
  • ಮಾನುದರಾಕ್ಕೈ ವದಿವು ಚಿದಂಬರಂ
  • ಮಾನುದರಾಕ್ಕೈ ವದಿವು ಸದಾಶಿವಂ
  • ಮಾನುದರಾಕ್ಕೈ ವದಿವು ತಿರುಕ್ಕೂತೆ

ಅರ್ಥ:“ಶಿವಲಿಂಗಂ ಮಾನವ ದೇಹದ ಆಕಾರ; ಅದರಂತೆಯೆ ಚಿದಂಬಂರಂ ; ಅದರಂತೆಯೆ ಸದಾಶಿವಂ ; ಮತ್ತು ಹಾಗೆಯೇ ಅವರ ದೈವದತ್ತ ನೃತ್ಯ”.

  1. ದೇವಸ್ಥಾನವು ರಕ್ಷಣಾ ಕೋಶಗಳ ಹೋಲಿಕೆಯ, ಮೇಲಿನ ಐದು ಪ್ರಕಾರಗಳನ್ನು ಹೊಂದಿದೆ.
  2. ಚಿನ್ನದ ಮೇಲ್ಛಾವಣಿಯ ಚಿತ್ ಸಭ ಎಂದು ಕರೆಯಲ್ಪಡುವ ಪವಿತ್ರ ಸ್ಥಳದಿಂದ ನಟರಾಜ ಧರ್ಶನ ನೀಡುತ್ತಾನೆ.
  3. ಮೇಲ್ಛಾವಣಿಯು 26,000 ಚಿನ್ನದ ಹೆಂಚುಗಳನ್ನು (ಚಿತ್ರವನ್ನು ನೋಡಿ) ಹೊಂದಿದ್ದು, ದಿನದಲ್ಲಿನ ಜೀವರಾಶಿಗಳ ಸಂಖ್ಯೆಯನ್ನು ಸೂಚಿಸುತ್ತದೆ.
  4. ಈ ಹೆಂಚುಗಳನ್ನು ಮರದ ವೇಲ್ಛಾವಣಿಗೆ 72,000 ಆಣಿಗಳ ಸಹಾಯದಿಂದ ಜೋಡಿಸಲಾಗಿದ್ದು, ಇದು ನಾಡಿಗಳ ಸಂಖ್ಯೆಯನ್ನು ಸೂಚಿಸುತ್ತದೆ (ದೇಹದ ವಿವಿಧ ಭಾಗಗಳಿಗೆ ಶಕ್ತಿಯನ್ನು ಶರಬರಾಜು ಮಾಡುವ ಅಗೋಚರ ನಾಳಗಳು)
  5. ಹೃದಯವು ಶರೀರದ ಎಡಭಾಗದಲ್ಲಿರುವುದರಿಂದ, ಚಿದಂಬರಂನಲ್ಲಿನ ಪವಿತ್ರಸ್ಥಳವನ್ನು ಸಹ ಸ್ವಲ್ಪಮಟ್ಟಿಗೆ ಎಡಭಾಗಕ್ಕೆ ಹೊಂದಿಸಲಾಗಿದೆ.
  6. ಚಿತ್ ಸಭ ಮೇಲ್ಛಾವಣಿಯ ಮೆಲ್ಭಾಗದಲ್ಲಿ, ಒಂಬತ್ತು ಶಕ್ತಿಗಳನ್ನು ಸೂಚಿಸುವ, ಒಂಬತ್ತು ಕಲಶಗಳನ್ನು (ತಾಮ್ರದಲ್ಲಿ ಮಾಡಿದ) ನಾವು ನೋಡುತೇವೆ
  7. ಮೇಲ್ಛಾವಣಿಯು 64 ಕಲೆಗಳನ್ನು ಸೂಚಿಸುವ 64 ಅಡ್ಡ ಮರದ ಅಡ್ಡ ರೀಪುಗಳನ್ನು ಹೊಂದಿದೆ.
  8. ಆರ್ಥ ಮಂಡಪ ಆರು ಸ್ತಂಭಗಳನ್ನು ಹೊಂದಿದ್ದು, ಅವು ಆರು ಶಾಸ್ತ್ರಗಳನ್ನು ಸೂಚಿಸುತ್ತವೆ
  9. ಆರ್ಥ ಮಂಡಪ ನಂತರದ ಮಂಡಪ ಹದಿನೆಂಟು ಪುರಾಣಗಳ ಸಾಂಕೇತಿಕವಾಗಿ ಹದಿನೆಂಟು ಸ್ತಂಭಗಳನ್ನು ಹೊಂದಿದೆ.
  10. ಕನಕ ಸಭದಿಂದ ಚಿತ್ ಸಭ ವರೆಗೂ ಐದು ಹಂತಗಳ ವರ್ಣನೆಯಿದೆ
    ಐದು ಅಕ್ಷರಗಳ ಪಂಚಾಕ್ಷರ ಮಂತ್ರ ( ನ ಮ ಸಿ ವ ಯ)
  11. ಚಿತ್ ಸಭ ನಾಲ್ಕು ವೇದಗಳ ಸಾಂಕೇತಿಕವಾಗಿ ನಾಲ್ಕು ಸ್ತಂಭಗಳ ಆಧಾರವನ್ನು ಹೊಂದಿದೆ.

ನಟರಾಜ ಸ್ವಾಮಿಯ ಸಂಕೇತ

ಚಿದಂಬರಂ‌ನಲ್ಲಿರುವ ಚಿತ್ಸಾಭಾಯಿಯಲ್ಲಿರುವ ಭಗವಾನ್ ನಟರಾಜ.ಭಗವಂತನ ವಿಗ್ರಹದ ಎಡಭಾಗದಲ್ಲಿರುವುದು ಚಿದಂಬರ ರಹಸ್ಯ - ಚಿನ್ನದ ಬಿಲ್ವ ಪತ್ರೆಗಳನ್ನು ವರ್ಣಿಸುತ್ತದೆ. ಬಲಕ್ಕೆ ಶಿವಗಾಮಸುಂದರಿಯ ವಿಗ್ರಹವಿದೆ
  1. ನಟರಾಜ’ನ ನೃತ್ಯ ಐದು ಪವಿತ್ರವಾದ ಕರ್ಯಗಳನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ ಅವುಗಳೆಂದರೆ:
    • ಸೃಷ್ಟಿ ನಟರಾಜ ಅವನ ಬಲದ ಕೈಗಳ ಒಂದರಲ್ಲಿ ಡಮರುಕ ಎಂದು ಕರೆಯಲ್ಪಡುವ ಚಿಕ್ಕ ಡೋಲಿನೊಂದಿಗೆ ನೃತ್ಯ ಮಾಡುತ್ತಾನೆ. ಈಸ್ವರ ನಾಡ ಭ್ರಹ್ಮಂ. ಅವನು ಎಲ್ಲಾ ಶಬ್ದಗಳ (ನಾಡಂ) ಮೂಲ. ಇದು ವಿಶ್ವ ಹೊರಹೊಮ್ಮಿದ ಮರದಿಂದ ಬಂದ ಬೀಜ (ವಿಂದು).
    • ರಕ್ಷಣೆ (ಕಾರ್ಯ)- ಅವನ ಮತ್ತೊಂದು ಬಲದ ಕೈಯಲ್ಲಿ, ಅವನು‘ಅಭಯಮುದ್ರವನ್ನು’ ತೋರಿಸುತ್ತಾನೆ, ಇದರ ಅರ್ಥ ಅವನು ಕರುಣಾಳು ರಕ್ಷಕ .
    • ವಿನಾಶ; ಅವನ ಎಡದ ಕೈಗಳಲ್ಲಿ ಒಂದರಲ್ಲಿ ಬೆಂಕಿಯನ್ನು ಹೊಂದಿರುತ್ತಾನೆ, ಇದು ವಿನಾಶದ ಸಂಕೇತವಾಗಿದೆ.ಬೆಂಕಿಯಿಂದ ಎಲ್ಲವು ವಿನಾಶವಾದಗ, ಭಗವಂತ ತನ್ನ ಮೈಮೇಲೆ ಲೇಪಿಸಿಕೊಂಡ ಬೂದಿ ಮಾತ್ರ ಉಳಿಯುತ್ತದೆ.
    • ನೆಲದ ಮೆಲೆ ಊರಿದ ಪಾದವು ಮುಚ್ಚಿಡುವ ಕೃತ್ಯವನ್ನು ತೋರಿಸುತ್ತದೆ.
    • ಮೇಲಕ್ಕೆತ್ತಿದ ಪಾದವು ಅನುಗ್ರಹಿಸುವ ಕಾರ್ಯವನ್ನು ತೋರಿಸುತ್ತದೆ.
  2. ನಟರಾಜ ಸ್ವಾಮಿ ಎಡ ಬದಿಯಲ್ಲಿ ದೇವಿ ಸಿವಕಾಮ ಸುಂದರಿಯ ವಿಗ್ರಹ (ಮೂರ್ಥಿ)ಯನ್ನು ಹೊಂದಿರುತ್ತಾನೆ. ಇದು ಅರ್ಧನಾರೇಶರನನ್ನು ಸಾಂಕೆತಿಸುತ್ತದೆ, ‘ ಅವನ ಎಡ ಅರ್ಧದಲ್ಲಿ ಹೆಣ್ಣನ್ನು ಹೊಂದಿದ ಭಗವಂತ’. ಅವನ ಬಲ ಬದಿಯಲ್ಲಿ ಪರದೆ ಇರುತ್ತದೆ. ದೀಪಾರಾಧನ ಸಮಯದಲ್ಲಿ – ದೀಪಗಳನ್ನು ಎಡಬದಿಗೆ ತಿರುಗಿಸುತ್ತಾ ಸ್ವಾಮಿಗೆ ತೋರಿಸಲಾಗುವುದು, ಆಗ ಪರದೆಯನ್ನು ತೆಗೆಯಲಾಗುತ್ತದೆ ಮತ್ತು ನಾವು ಲಂಬವಾಗಿ ಜೋತಾಡುವ ಐದು ಉದ್ದನೆಯ ಚಿನ್ನದ ವಿಲ್ವ ಎಲೆಗಳನ್ನು ನೋಡಬಹುದಾಗಿದೆ. ಅದರ ಹಿಂದೆ ಏನನ್ನೂ ಕಾಣಲಾಗುವುದಿಲ್ಲ. ಸಿವಕಾಮಿ ಸುಗುನ ಬ್ರಾಹ್ಮನ್‌ನ್ನು ತೋರಿಸುತ್ತದೆ (ಸ್ವರೂಪವನ್ನೊಂದಿದ ಭಗವಂತ) ಅದೇ ನಟರಾಜ . ಸಗುನ ಬ್ರಾಹ್ಮನ್ ನಿರ್ಗುನ ಬ್ರಾಹ್ಮನ್ ಆಗುತ್ತದೆ (ಆಕಾರವಿಲ್ಲದ ದೇವರು ಅಥವಾ ಸ್ವರೂಪವನ್ನು ಹೊಂದಿಲ್ಲದ ಭಗವಂತ). ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜಾರಿಗಳಾದ, ದಿಕ್ಷಿತರರು ಇದನ್ನು ‘ಚಿದಂಬರ ರಹಸ್ಯಂ’ ಎಂದು ಹೇಳಿದ್ದರು.
  3. ಶಿವ’ನ ವೃತ್ಯವನ್ನು ಬಹುತೇಕ ಪಂಡಿತರು ಕಾಸ್ಮಿಕ್ ನೃತ್ಯ ಎಂದು ಕರೆಯುತ್ತಿದ್ದರು. ಚಿದಂಬರಂನಲ್ಲಿ, ಈ ನೃತ್ಯವನ್ನು ‘ಆನಂದ ತಾಂಡವ’ ಎಂದು ಕರೆಯಲಾಗುತ್ತದೆ.
  4. ಭಗವಾನ್ ಮಹಾ ವಿಷ್ಣು ಸಹ ದಿವ್ಯ ನೃತ್ಯವನ್ನು ನೋಡಿದ್ದಾನೆ. ಚಿತ್ರಕೂಟ ಎಂದು ಕರೆಯಲ್ಪಡುವ ಹತ್ತಿರದ ಮಂಟಪದಲ್ಲಿ, ಮಹಾ ವಿಷ್ಣು ಹಾವಿನ ಹಾಸಿಗೆಯ ಮೇಲೆ ಪೂರ್ಣವಾಗಿ ಒರಗಿದ ಯೋಗ ನಿದ್ರ ಭಂಗಿಯಲ್ಲಿ ದರ್ಶನ ನೀಡುತ್ತಾನೆ. ಯಾರಾದರೂ ನಾರಾಯಣನ ಎದುರಿನಲ್ಲಿ ನೆಲದ ಚಪ್ಪಡಿಯಮೇಲೆ ಕೆತ್ತಿದ ಚಿಕ್ಕ ತಾವರೆಯ ಮೇಲೆ ನಿಂತರೆ, ಅವರು ಅದೇ ಸಮಯದಲ್ಲಿ ನಟರಾಜನನ್ನು ಅವನ ಬಲ ಬದಿಯಲ್ಲಿ ಕಾಣಬಹುದಾಗಿದೆ.
  5. ಮುನಿಗಳಾದ ಪತಾಂಜಲಿ ಮತ್ತು ಥಿರುಮೂಲರ್ ಸಹ ಚಿದಂಬರಂನಲ್ಲಿ ನಟರಾಜ’ನ ನೃತ್ಯವನ್ನು ನೋಡಿದ್ದರು. ಚಿತ್ ಸಭದ ಬೆಳ್ಳಿಯ ಬಾಗಿಲುಗಳ ಮೇಲೆ ಅವರ ಬೆರಳುಗಳ ಉಬ್ಬಚ್ಚುಗಳನ್ನು ಕೆತ್ತಲಾಗಿದೆ.

ಚಿದಂಬರ ರಹಸ್ಯಂ

[ಬದಲಾಯಿಸಿ]

ನಿರಾಕಾರನಾದ ಭಗವಂತನಾದ ಶಿವನನ್ನು ಚಿದಂಬರಂನಲ್ಲಿ ಪೂಜಿಸಲಾಗುತ್ತದೆ. ಭಗವಂತನಾದ ಶಿವನು ತನ್ನ ಹೆಂಡತಿಯಾದ ಶಕ್ತಿ ಅಥವಾ ಶಿವಗಾಮಿ ಯೊಂದಿಗೆ ನಿರಂತರ ಸಂತೋಷವಾದ "ಆನಂದ ತಾಂಡವ" ನೃತ್ಯದಲ್ಲಿ ತೊಡಗಿದ್ದಾನೆ ಎಂದು ನಂಬಲಾಗಿದೆ. ಈ ಸ್ಥಳವನ್ನು ಒಂದು ಪರದೆಯಿಂದ ಮುಚ್ಚಲಾಗಿದೆ. ಇದನ್ನು ಎಳೆದಾಗ ಭಗವತನ ಸನ್ನಿಧಾನವನ್ನು ಸೂಚಿಸುವ ಚಿನ್ನದ "ಬಿಲ್ವ" ಎಲೆಗಳ ತೋರಣವನ್ನು ತೂಗುಬಿಟ್ಟಿರುವುದನ್ನು ಕಾಣಬಹುದು. ಪರದೆಯ ಹೊರಭಾಗವು ಕಪ್ಪುಬಣ್ಣದಿಂದ ಕೂಡಿದ್ದು (ಅಜ್ಞಾನದ ಸಂಕೇತವನ್ನು ಸೂಚಿಸುತ್ತದೆ),ಅದರ ಒಳಭಾಗವು ಪ್ರಕಾಶಮಾನವಾದ ಕೆಂಪು ಬಣ್ಣವನ್ನು ಹೊಂದಿದೆ (ಅರಿವು ಮತ್ತು ಆನಂದದ ಸೂಚಕ)

ಪ್ರತಿದಿನದ ಪೂಜೆಗಳಲ್ಲಿ, ಪ್ರಧಾನ ಅರ್ಚಕನೊಬ್ಬನು, ಒಬ್ಬ ದೈವಿಕ ಪುರುಷನಂತೆ - ಶಿವೋಹಂಭವ (ಶಿವ - ಭಗವಂತ ತನ್ನ ಸಂಧಿ ರೂಪದಲ್ಲಿ-ಶಿವೋ- , ಅಹಂ -ನಾನು/ನಾವು , ಭವ - ಮನಸ್ಸಿನ ಸ್ಥಿತಿ) ಪರದೆಯನ್ನು ಸರಿಸುವುದರ ಮೂಲಕ, ಅಂಧಕಾರವನ್ನು ಹೋಗಲಾಡಿಸಿ, ಭಗವಂತನ ಸಾನಿಧ್ಯವನ್ನು ಪ್ರಕಟಪಡಿಸುವುದನ್ನು ಸಾಂಕೇತಿಕವಾಗಿ ತೋರಿಸಲಾಗುತ್ತದೆ.

ಚಿದಂಬರ ರಹಸ್ಯವನ್ನು ಆ ಸಂದರ್ಭದಲ್ಲಿ ಪ್ರತಿಬಿಂಬಿಸಲಾಗುತ್ತದೆ. ಒಬ್ಬ ವ್ಯಕ್ತಿ ಸಂಪೂರ್ಣವಾಗಿ ತಾನು ಭಗವಂತನಿಗೆ ಶರಣಾಗಿ, ಆತನನ್ನು ತನ್ನ ಜೀವನದಲ್ಲಿ ಆಗಮಿಸಲು ಅನುವು ಮಾಡಿಕೊಡುವಾಗ, ನಮ್ಮಲಿರುವ ಅಜ್ಞಾನವನ್ನು ಹೋಗಲಾಡಿಸಿ, ಆತನ ಸನ್ನಿಧಾನವನ್ನು ಅನುಭವಿಸುತ್ತಾ, ತನ್ಮೂಲಕವಾಗಿ ಪರಮಾರ್ಥಿಕ ಸುಖವನ್ನು ಹೊಂದಲು ಸಾಧ್ಯ.

ದೇವಾಲಯದ ಆಡಳಿತ ಮತ್ತು ದಿನನಿತ್ಯದ ಆಚಾರಗಳು

[ಬದಲಾಯಿಸಿ]

ದೇವಾಲಯದ ಆಡಳಿತ ಮತ್ತು ನಿರ್ವಹಣೆಯನ್ನು ಪಾರಂಪರೆಯಿಂದ ಬಂದ ಚಿದಂಬರಂದೀಕ್ಷಿತಾರ್ ಒಂದು ವೈದಿಕ ಬ್ರಾಹ್ಮಣರ ಪಂಗಡ ನಡೆಸಿಕೊಂಡು ಬರುತ್ತಾ ಇದೆ. ಪುರಾಣ ಹೇಳುವಂತೆ, ಚಿದಂಬರಂ ದೇವಾಲಯದ ಪ್ರತಿದಿನದ ಪೂಜಾವಿಧಿಗಳು ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ಪತಾಂಜಲಿ ಎಂಬ ಋಷಿಯು ಈ ಜನರನ್ನು ಕೈಲಾಸ ಪರ್ವತದಿಂದ ಕರೆಸಿದನು.

ಈ ದೀಕ್ಷಿತಾರ್‌ಗಳು ಸುಮಾರು 3000 ಜನರಷ್ಟಿದ್ದು (ವಾಸ್ತವವಾಗಿ 2999, ಭಗವಂತನನ್ನೂ ಕೂಡಿಸಿ 3000) ಇವರನ್ನು ತಿಲ್ಲೈ ಮೂವಾಯರಂ ಎನ್ನುವರು. ಇಂದು ಸುಮಾರು 360 ಇವೆ. ದೀಕ್ಷಿತಾರ್‌ಗಳು ವೈದಿಕ ಧರ್ಮಾಚರಣೆಗಳನ್ನು ಪಾಲಿಸುವವರು. ಆದರೆ ಶಿವಚಾರಿಯರ್ ಗಳು ಅಥವಾ ಆದಿಶೈವರ್ ಗಳು ಶಿವನನ್ನು ಪೂಜಿಸಲು ನಿರ್ಲಿಂಗ ಪೂಜಾವಿಧಾನಗಳನ್ನು ಅನುಸರಿಸುವವರಾಗಿದ್ದಾರೆ. ದೇವಾಲಯದ ಶಾಸ್ತ್ರೋಕ್ತಗಳನ್ನು ವೇದಗಳಿಂದ ಪಡೆಯಲಾಗಿದ್ದು,ಪತಾಂಜಲಿಯು ಇವುಗಳನ್ನು ಮಂಡಿಸಿದ್ದಾನೆ ಎನ್ನಲಾಗಿದೆ.ಈತನೇ ಭಗವಂತನಾದ ಶಿವನನ್ನು ನಟರಾಜನ ರೂಪದಲ್ಲಿ ಪೂಜಿಸಲು ದೀಕ್ಷಿತಾರ್‌ಗಳಿಗೆ ನಿರ್ದೇಶಿಸಿದನು ಎಂಬ ನಂಬಿಕೆಯೂ ಇದೆ.

ಒಟ್ಟಾರೆ ಹೇಳುವುದಾದರೆ ದೀಕ್ಷಿತಾರ್ ಕುಟುಂಬದ ಪ್ರತಿಯೊಬ್ಬ ವೈವಾಹಿಕ ಸದಸ್ಯನೂ, ದೇವಸ್ಥಾನದಲ್ಲಿ ಪೂಜೆಗಗಳನ್ನು ಸಲ್ಲಿಸಲು ಮತ್ತು ಪ್ರಧಾನ ಅರ್ಚಕನಾಗಿ ಕೆಲಸ ಮಾಡಲು ಯೋಗ್ಯನಾಗಿದ್ದಾನೆ. ವೈವಾಹಿತ ದೀಕ್ಷಿತಾರ್‌ಗಳು ದೇವಾಲಯದ ಕಂದಾಯದ ಪಾಲನ್ನು ಪಡೆಯಲೂ ಸಹ ಅರ್ಹನಾಗಿದ್ದಾನೆ. ಹಲವಾರು ಶತಮಾನಗಳಿಂದ ಅನೆಕ ರಾಜರುಗಳ ಮೂಲಕ ಅಭಿವೃದ್ಧಿ ಹೊಂದುತ್ತಾ ಬಂದಿರುವ5,000 acres (20 km2) ಫಲವತ್ತಾದ ಭೂಮಿ ಈ ದೇವಾಲಯಕ್ಕೆ ದತ್ತಿಯಾಗಿ ಕೊಡಲ್ಪಟ್ಟಿದ್ದರೂ, ಇಂದು ಖಾಸಗಿ ದತ್ತಿ ಸಂಸ್ಥೆಗಳು ಇದನ್ನು ನಿರ್ವಹಿಸುತ್ತಿವೆ.

ಪ್ರಧಾನ ಅರ್ಚಕನು, ತನ್ನನ್ನು ಪವಿತ್ರಗೊಳಿಸಿಕೊಳ್ಳಲು ಬೇಕಾದ ಪೂಜಾ ವಿಧಾನಗಳನ್ನು ನೆರವೇರಿಸುವುದರ ಮೂಲಕ ದಿನವು ಪ್ರಾರಂಭವಾಗುತ್ತದೆ. ಅರ್ಚಕನು ತನ್ನ ಪಾವಿತ್ರತೆಯಿಂದ ಶಿವೋಹಂ ಸ್ವರೂಪವನ್ನು ಧರಿಸಿಕೊಂಡ ನಂತರ ದೈನಂದಿನ ಧರ್ಮಾಚರಣೆಗಳನ್ನು ನಡಿಸಲು ದೇವಸ್ಥಾನವನ್ನು ಪ್ರವೇಶಿಸುತ್ತಾನೆ. ಪ್ರತಿದಿನ ಭಗವಂತನ ಪಾದರಕ್ಷೆಗಳನ್ನು (ಪಾದುಕೆಗಳನ್ನು) ಬೆಳಿಗ್ಗೆ 7:00 ಗಂಟೆಗೆ ಪಾಳ್ಳಿಯರೈ (ಶಯನ ಕೊಠಡಿ)ಯಿಂದ ಭಕ್ತಾದಿಗಳು ಪಲ್ಲಕಿಯಲ್ಲಿಟ್ಟು ಝಲ್ಲರಿ, ಘಂಟೆ ಮತ್ತು ಮದ್ದಳೆಗಳೊಂದಿಗೆ ಪವಿತ್ರ ಗರ್ಭಗುಡಿಗೆ ತರುತ್ತಾರೆ. ನಂತರ ಒಂದು ಯಜ್ಞ ಮತ್ತು "ಗೋ ಪೂಜೈ" (ಗೋವು ಮತ್ತು ಅದರ ಕರುವಿನ ಪೂಜೆ) ಯೊಂದಿಗೆ ಅರ್ಚಕನು ತನ್ನ ದೈನಂದಿನ ಧಾರ್ಮಿಕ ವಿಧಿಗಳನ್ನು ಪ್ರಾರಂಭಿಸುತ್ತಾನೆ.

ಪೂಜೆಯನ್ನು ದಿನಕ್ಕೆ 6 ಬಾರಿ ಮಾಡಲಾಗುತ್ತದೆ. ಪ್ರತಿ ಪೂಜೆಗೆ ಮೊದಲು, ಸ್ಪಾದಿಕ ಲಿಂಗ (ಸ್ಪಟಿಕ ಲಿಂಗ)ವಾದ "ಆರು ಉರುವ" ಅಥವಾ ಭಗವಂತನಾದ ಶಿವನ ಅರೆಸ್ವರೂಪವನ್ನು ತುಪ್ಪ, ಹಾಲು, ಮೊಸರು, ಅಕ್ಕಿ, ಗಂಧ ಮತ್ತು ಪವಿತ್ರ ಭಸ್ಮದಿಂದ ಅಭಿಷೇಕ ಮಾಡಲಾಗುತ್ತದೆ. ಇದರ ನಂತರ, ನೈವೇದ್ಯ ಅಥವಾ ಆಗ ತಾನೆ ತಯಾರಿಸಿದ ತಾಜಾ ಆಹಾರ ಪದಾರ್ಥಗಳು ಮತ್ತು ಸಿಹಿ ತಿನಿಸುಗಳನ್ನು ಭಗವಂತನಿಗೆ ಅರ್ಪಿಸಲಾಗುತ್ತದೆ.ಇದರೊಂದಿಗೆ ವಿವಿಧ ದೀಪಗಳಿಂದ ಅಲಂಕೃತಗೊಂಡ ದೀಪಾರಾಧನ ಎಂಬ ಶಾಸ್ತ್ರವನ್ನು ನೆರವೇರಿಸಲಾಗುತ್ತದೆ. ಸಂಸ್ಕೃತದಲ್ಲಿ ವೇದಗಳ ಮತ್ತು ಪಂಚಪುರಾಣಗಳ (ತಮಿಳಿನ ಪನ್ನೀರು ತಿರುಮುರೈ ಎಂಬ12 ಪದ್ಯ ಸಂಗ್ರಹದ 5 ಪದ್ಯಗಳ ಒಂದು ಭಾಗ) ಪಠಣವನ್ನು ಮಾಡಲಾಗುತ್ತದೆ. ಅರ್ಚಕನು ಪರದೆಯನ್ನು ಪವಿತ್ರ ಗರ್ಭಗುಡಿಯ ಎಳೆಯುವುದರ ಮೂಲಕ ಚಿದಂಬರ ರಹಸ್ಯವನ್ನು ಪ್ರಕಟಿಸುವುದರೊಂದಿಗೆ ಪೂಜೆಯು ಅಂತ್ಯಗೊಳ್ಳುತ್ತದೆ.

ಎರಡನೇ ಪೂಜೆಗಿಂತ ಮುಂಚೆ, ಸ್ಪಟಿಕ ಲಿಂಗದ ಅಭಿಷೇಕದೊಂದಿಗೆ, ಪದ್ಮರಾಗದ ನಟರಾಜನ ವಿಗ್ರಹವನ್ನೂ ಸಹ (ರತಿನ ಸಭಾಪತಿ) ಅಭಿಷೇಕಿಸಲಾಗುತ್ತದೆ. ಮೂರನೇ ಪೂಜೆಯು ಮಧ್ಯಾಹ್ನ ಸುಮಾರು 12.00 ಗಂಟೆಗೆ ನಡೆದು, ಅದರ ನಂತರ ಸಂಜೆ 4:30 ರವರೆಗೆ ದೇವಸ್ಥಾನವನ್ನು ಮುಚ್ಚಲಾಗಿರುತ್ತದೆ. ನಾಲ್ಕನೇ ಪೂಜೆಯನ್ನು ಸಂಜೆ 6.00 ಗಂಟೆಗೆ ಮತ್ತು ಐದನೇ ಪೂಜೆಯನ್ನು ರಾತ್ರಿ 8:00 ಗಂಟೆಗೆ ಮತ್ತು ಅಂತಿಮ ಪೂಜೆಯನ್ನು ಭಗವಂತನ ಪಾದರಕ್ಷೆಗಳನ್ನು ಮೆರವಣಿಗೆಯ ಮೂಲಕ ವಿಶ್ರಾಂತಿ ಗೃಹಕ್ಕೆ ತೆಗೆದುಕೊಂಡು ಹೋದನಂತರ ರಾತ್ರಿ 10:00 ಗಂಟೆಗೆ ನೆರವೇರಿಸಲಾಗುತ್ತದೆ. ರಾತ್ರಿ ಐದನೇ ಪೂಜೆಗಿಂತ ಮುಂಚೆ ಅರ್ಚಕನು ಚಿದಂಬರ ರಹಸ್ಯ ಸ್ಥಳದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾನೆ. ನಂತರ ಅಲ್ಲಿ ಯಂತ್ರವನ್ನು ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ, ನೈವೇದ್ಯವನ್ನು ಅರ್ಪಿಸುತ್ತಾನೆ.

ಚಿದಂಬರಂನ ಕೊನೆಯ ಪೂಜೆಯಾದ ಅರ್ಥಜಾಮ ಪೂಜೆಯನ್ನು ವಿಶೇಷ ಸಂಬ್ರಮದಿಂದ ಆಚರಿಸಲಾಗುತ್ತದೆ. ಭಗವಂತನು ರಾತ್ರಿಯ ವೇಳೆ ವಿಶ್ರಾಂತಿ ಪಡೆಯಲು ಹೊರಟಾಗ ಇಡೀ ವಿಶ್ವದ ದೈವಿಕ ಶಕ್ತಿಯೇ ಆತನಲ್ಲಿ ಲೀನವಾಗುತ್ತದೆ ಎಂದು ನಂಬುತ್ತಾರೆ.

ಟಿ.ಎಸ್. ಎಚ್‌ಆರ್ & ಸಿಇ ಕಾಯಿದೆಯ ಪರಿಚ್ಛೇದ 45 ರ ಅಡಿಯಲ್ಲಿ ಈಗ ದೇವಾಲಯವು ತಮಿಳು ನಾಡು ಸರ್ಕಾರದ ಅಧೀನದಲ್ಲಿದೆ.

ಹೇಗೂ, ಇದನ್ನು ಪೋದು ದೀಕ್ಷಿತಾರ್‌ಗಳು ಒಂದು ಸವಾಲಾಗಿ ಸ್ವೀಕರಿಸಿದ್ದಾರೆ. 1951ರಲ್ಲಿ ಮದ್ರಾಸ್‌ನ ಉಚ್ಚ ನ್ಯಾಯಾಲಯವು ಹೇಳಿರುವಂತೆ ಪೋದು ದೀಕ್ಷಿತಾರ್‌ಗಳು ಧಾರ್ಮಿಕ ಪ್ರಭುತ್ವವನ್ನು ಹೊಂದಿರುವ ಒಂದು ಪಂಗಡವಾಗಿದೆ. ಭಾರತದ ಸಂವಿಧಾನದ ವಿಧಿ 26 ಮತ್ತು ಟಿ.ಎಸ್. ಎಚ್‌ಆರ್ & ಸಿಇ ನಿಯಮ 107 ಪರಿಚ್ಛೇದದ ಪ್ರಕಾರ, ಸರ್ಕಾರವು ಯಾವುದೇ ಪಂಗಡಗಳ ಅಡಳಿತದಲ್ಲಿ ಮಧ್ಯಸ್ಥಿಕೆ ವಹಿಸುವುದನ್ನು ನಿಷೇಧಿಸುವುದರಿಂದ, ದೇವಸ್ಥಾನದ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುವುದಕ್ಕೆ ಇವರಿಗೆ ಅಧಿಕಾರ ನೀಡಲಾಗಿದೆ. ಈ ಪ್ರಕರಣವನ್ನು ಈಗ (ಏಪ್ರಿಲ್ 2010) ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಕಾದಿರಿಸಲಾಗಿದೆ. ಪೋಧು ದೀಕ್ಷಿತಾರ್‌ಗಳು ಎಚ್‌ಆರ್ ಮತ್ತು ಸಿಇ ಆಯುಕ್ತರಿಂದ ನೇಮಕಾತಿ ಹೊಂದಿದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಭಾರವನ್ನು ಹಸ್ತಾಂತರಿಸಲು ನಿರಾಕರಿಸಿದ್ದಾರೆ. ಕಾರ್ಯಕಾರಿ ಅಧಿಕಾರಿಯು ದೇವಾಲಯದ ಸಂಪ್ರದಾಯಕ್ಕೆ ವಿರುದ್ಧವಾಗಿ ಹುಂಡಿಗಳನ್ನು ಪ್ರತಿಷ್ಠಾಪನೆ ಮಾಡಿದ್ದಾನೆ. ಇಷ್ಟೇ ಅಲ್ಲದೆ ಈತನು ಈ ಪಾರಂಪರೆಯ ಸ್ಥಳದಲ್ಲಿ ಆಧುನಿಕ ದೊಡ್ಡ ದೀಪ ಸ್ತಂಭಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದಾನೆ. ಅರ್ಚನೆಯ ಟಿಕೆಟ್‌‍ಗಳನ್ನು ಮತ್ತು ದರ್ಶನದ ಟಿಕೆಟ್‌ಗಳನ್ನು ಮಾಡುವುದಕ್ಕೆ ಈತನ ಸಲಹೆಯನ್ನು ತೆಗೆದು ಕೊಳ್ಳಬೇಕಾಗಿದೆ ಈ ಎಲ್ಲಾ ಕಾರ್ಯಗಳನ್ನು ಪೋಧು ದೀಕ್ಷಿತರ್‌ಗಳು ಮತ್ತು ಭಕ್ತರು ವಿರೋಧಿಸಿದ್ದಾರೆ. ಹೇಗೂ, ಈ ಎಲ್ಲಾ ಶಾಸ್ತ್ರೋಕ್ತಗಳ ವಿಧಾನಗಳನ್ನು ಈಗಲೂ ದೀಕ್ಷಿತಾರ್‌ಗಳೇ ನಿರ್ವಹಿಸುತ್ತಿದ್ದಾರೆ.

ಉತ್ಸವಗಳು

[ಬದಲಾಯಿಸಿ]

ಮಾನವರಿಗಿರುವ ಒಂದು ಸಂಪೂರ್ಣ ವರ್ಷವು ದೇವತೆಗಳಿಗೆ ಒಂದು ದಿನಕ್ಕೆ ಸಮ ಎಂದು ಹೇಳಲಾಗುತ್ತದೆ. ಪವಿತ್ರ ಗರ್ಭಗುಡಿಯಲ್ಲಿ ಪ್ರತಿ ದಿನದಂದು ಕೇವಲ ಆರು ಪೂಜೆಗಳನ್ನು ನಡೆಸಲಾಗುತ್ತದೆ. ವರ್ಷಕ್ಕೆ ಒಂದು ಸಾರಿ ಪ್ರಧಾನ ದೇವತೆಯಾದ -ಭಗವಂತನಾದ ನಟರಾಜನಿಗೆ ಆರು ಅಭಿಷೇಕಗಳನ್ನು ನಡೆಸಲಾಗುತ್ತದೆ.

ಮೊದಲನೇ ಪೂಜೆಯಾದ ಮಾರ್ಗಜಿಃ ತಿರುವಾಧಿರೈ (ಡಿಸೆಂಬರ್-ಜನವರಿಯಲ್ಲಿ), ಅಮವಾಸ್ಯೆಯ ನಂತರ ಹದಿನಾಲ್ಕು ದಿನಗಳಾದ ಮೇಲೆ (ಚತುರ್ದಶಿ) ಬರುವ ಮಾಸಿ ತಿಂಗಳಿನಲ್ಲಿ ( ಫೆಬ್ರವರಿ-ಮಾರ್ಚ್) ನಲ್ಲಿ ಎರಡನೇ ಪೂಜೆ, ಚಿತ್ತಿರೈ ತಿರುಓಣಂ (ಏಪ್ರಿಲ್ -ಮೇ) ಅಥವಾ ಉಚಿಕಾಲಂ ಎಂಬ ಮೂರನೇ ಪೂಜೆ, ಆಣಿ ತಿರುಮಂಜನಂ ಎಂದೂ ಕರೆಯಲಾಗುವ ಆಣಿಯ ಉತ್ತಿರಂ (ಜೂನ್-ಜುಲೈ) ನಂದು ನಡೆಯುವ ನಾಲ್ಕನೇ ಪೂಜೆ, ಅವಾಣಿಯ ಚತುರ್ದಸಿ (ಆಗಸ್ಟ್- ಸೆಪ್ಟಂಬರ್)ನಲ್ಲಿ ಐದನೆ ಪೂಜೆ ಮತ್ತು ಪುರಾತಸಿಯ ತಿಂಗಳಿನ (ಅಕ್ಟೋಬರ್-ನವಂಬರ್) ಚತುರ್ದಶಿಯಲ್ಲಿ ಅರ್ಥ ಜಾಮ ಎಂಬ ಆರನೇ ಪೂಜೆ ನಡೆಯುತ್ತದೆ.

ಇವುಗಳಲ್ಲಿ ಮಾರ್ಗಜಿಃ ತಿರುವಾಧಿರೈ (ಡಿಸೆಂಬರ್-ಜನವರಿಯಲ್ಲಿ) ಮತ್ತು ಆಣಿ ತಿರುಮಂಜನಂ (ಜೂನ್-ಜುಲೈ) ಬಹಳ ಪ್ರಾಮುಖ್ಯವಾದವು. ಪ್ರಧಾನ ಮೂರ್ತಿಯನ್ನು ಪವಿತ್ರ ಗರ್ಭಗುಡಿಯ ಹೊರಗೆ ತರುವುದರೊಂದಿಗೆ, ಸುಧೀರ್ಘವಾದ ಅಭಿಷೇಕದ ಆಚರಣೆಯ ನಂತರ ದೇವಾಲಯದ ತೇರನ್ನು ಮೆರವಣಿಗೆ ಮಾಡುವುದರ ಮೂಲಕ ಇವುಗಳನ್ನು ಪ್ರಮುಖ ಹಬ್ಬಗಳನ್ನಾಗಿ ಆಚರಿಸಲಾಗುತ್ತದೆ. ಅಭಿಷೇಕವನ್ನು ಮತ್ತು ಭಗವಂತನನ್ನು ಪವಿತ್ರ ಗರ್ಭಗುಡಿಗೆ ಹಿಂದೊಯ್ಯುವಾಗ ನಡೆಸಲಾಗುವ ಶಾಸ್ತ್ರೀಯ ನೃತ್ಯವನ್ನು ವೀಕ್ಷಿಸಲು ನೂರಾರು, ಸಾವಿರಾರು ಜನರು ದೇವಸ್ಥಾನದಲ್ಲಿ ನೆರೆದು ಬರುತ್ತಾರೆ.

ಮಾಸಿ ಹಬ್ಬದಲ್ಲಿ ಭಗವಂತನನ್ನು ಮೆರವಣಿಗೆಯ ಮೂಲಕ ಹೊರತರುವುದರ ಕುರಿತು ಉಮಾಪತಿ ಶಿವಂನ, "ಕುಂಚಿತಾಂಗ್ರಿಸ್ತವಂ" ನಲ್ಲಿ ಆಧಾರಗಳಿವೆ. ಹೇಗೂ, ಈ ದಿನಗಳಲ್ಲಿ ಈ ಪದ್ಧತಿಯು ರೂಡಿಯಲ್ಲಿಲ್ಲ.

ಐತಿಹಾಸಿಕ ಆಕರಗಳು

[ಬದಲಾಯಿಸಿ]

ಹುಟ್ಟು

[ಬದಲಾಯಿಸಿ]

ದಕ್ಷಿಣ ಭಾರತದ ಅನೇಕ ದೇವಾಲಯಗಳು "ಸಜೀವ" ಸ್ಮಾರಕಗಳಾಗಿವೆ. ಏಕೆಂದರೆ ಈ ಸ್ಥಳಗಳಲ್ಲಿ ಆರಂಭದಿಂದಲೂ ಸತತವಾದ ಪ್ರಾರ್ಥನೆ, ನಿರಂತರವಾದ ಭಕ್ತರ ಭೇಟಿ ಮತ್ತು ನಿಯಮಿತವಾದ ನಿರ್ವಹಣೆ ನಡೆಯುತ್ತಲೇ ಬಂದಿದೆ.

ಪುರಾಣಗಳು (ಮೌಖಿಕವಾಗಿ ನಂತರ ಬರಹ ರೂಪದಲ್ಲಿಡಲ್ಪಟ್ಟ ಚರಿತ್ರೆ) ಹೇಳುವಂತೆ ಋಷಿಯಾದ ಪುಲಿಕಾಲ್ ಮುನಿವರ್ ರಾಜನಾದ ಸಿಂಹವರ್ಮನ ಮುಖಾಂತರ ದೇವಾಲಯದ ಅತಿ ಪ್ರಮುಖವಾದ ಕೆಲಸಗಳನ್ನು ಮಾಡಿಸಿದನು. ಪಲ್ಲವರ ಅರಸರಲ್ಲಿ, ಮೂರು ರಾಜರುಗಳ ಹೆಸರು ಸಿಂಹವರ್ಮ ಎಂದಿದೆ. (275-300 ಸಿಇ, 436-460 ಸಿಇ, 550-560 ಸಿಇ ಯಲ್ಲಿ ). ಕವಿ-ಸಂತನಾದ ತಿರುನಾವುಕ್ಕುರಸರ್ನ ಕಾಲದಲ್ಲಿ (ಹೆಚ್ಚು ಕಡಿಮೆ 6ನೇ ಶತಮಾನ ಎಂದು ಅಂದಾಜು ಮಾಡಲಾಗಿದೆ) ಈ ದೇವಾಲಯವು ಪ್ರಖ್ಯಾತಿಯನ್ನು ಪಡೆದಿದ್ದರಿಂದ , ಸುಮಾರು 430-458CE ಕಾಲದಲ್ಲಿ ವಾಸಮಾಡಿದ ಸಿಂಹವರ್ಮ II ಈತನಿರಬಹುದು ಎಂದು ತಿಳಿಯಲಾಗಿದೆ. ಪಟ್ಟಾಯಂ ಅಥವಾ ಕೊಟ್ರಾವಂಕುಡಿಯಲ್ಲಿನ ತಾಮ್ರದ ತಗಡುಗಳ ಮೇಲೆ ಬರೆಯಲಾಗಿರುವ ಘೋಷಣೆಗಳು ಇದನ್ನು ಖಾತ್ರಿಪಡಿಸುತ್ತವೆ. ಹೇಗೂ, ಪಲ್ಲವರ ಕಾಲದ ತಾಂಡನ್ತೋಟ್ಟ ಪಟ್ಟಾಯಂ ಮತ್ತು ಇತರ ಪಟ್ಟಾಯಂ‌ಗಳು ಸಿಂಹವರ್ಮನಿಗೆ ಚಿದಂಬರಂ ದೇವಾಲಯದೊಂದಿಗಿದ್ದ ಸಂಬಂಧವನ್ನು ಸೂಚಿಸುತ್ತವೆ. ಆದ್ದರಿಂದ ಪಲ್ಲವರ ರಾಜಕುಮಾರನಾದ ಸಿಂಹವರ್ಮನು ತನ್ನ ಎಲ್ಲಾ ಅಧಿಕಾರಗಳನ್ನು ತೊರೆದು, ಚಿದಂಬರಂನಲ್ಲಿ ವಾಸಿಸಲು ಬಂದನೆಂದು ನಂಬುತ್ತಾರೆ. ಪುಲಿಕಾಲ್ ಮುನಿವರ್ ಮತ್ತು ಸಿಂಹವರ್ಮನ್ ಸಮಕಾಲೀನರಾದ್ದರಿಂದ, ಇವರ ಕಾಲದಲ್ಲಿ ದೇವಾಲಯವನ್ನು ನಿರ್ಮಿಸಿರಬಹುದು ಎಂಬ ಅಭಿಪ್ರಾಯವಿದೆ.

ಹೇಗೂ, ಕವಿ- ಸಂತನಾದ ತಿರುನಾವುಕ್ಕರಸರ್ಗಿಂತ ಬಹಳ ಹಿಂದೆ ವಾಸಿಸಿದ್ದ ಕವಿ-ಸಂತನಾದ ಮಣಿಕ್ಕಾವಸಾಗರ್ ಚಿದಂಬರಂನಲ್ಲಿ ಪಾರಮಾರ್ಥಿಕ ಸುಖವನ್ನು ಪಡೆದಿದನು ಎಂದು ನಂಬಲಾಗಿದೆ. ಭಗವಂತನಾದ ನಟರಾಜನ ಮೂರ್ತಿ ಮತ್ತು ಅದರ ಭಂಗಿ ಆ ಕಾಲದ ಪಲ್ಲವರ ಶಿಲ್ಪಕಲೆಗೆ ಹೋಲದೇ ಇರುವುದರಿಂದ, ನಂತರದಲ್ಲಿ ಜೀವಿಸಿದ ಪುಲಿಕಾಲ್‌ಮುನಿವರ್ ಎಂಬ ಸಂತನ ಕಾಲದಲ್ಲಿ, ಸಿಂಹವರ್ಮನಿಂದ ಈ ದೇವಸ್ಥಾನವು ಅಸ್ತಿತ್ವಕ್ಕೆ ಬಂತು ಎಂದು ಭಾವಿಸಲಾಗಿದೆ.

ನಿಯತಕಾಲಾಂತರಗಳಲ್ಲಿ (ಪ್ರತಿ 12ವರ್ಷಕ್ಕೊಮ್ಮೆ), ಪ್ರಮುಖ ದುರಸ್ಥಿ ಮತ್ತು ಜೀರ್ಣೊದ್ದಾರದ ಕೆಲಸಗಳನ್ನು ಮಾಡಲಾಗುತ್ತದೆ. ಇದರೊಂದಿಗೆ ನೂತನ ಸೌಲಭ್ಯಗಳನ್ನು ಸೇರಿಸಿ, ಪಾವನಗೊಳಿಸಲಾಗುತ್ತದೆ. ಕಾಲಾಂತರದಲ್ಲಿ ಅನೇಕ ದೇವಾಲಯಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಅವುಗಳನ್ನು ಅಭಿವೃದ್ದಿ ಪಡಿಸಲಾಗಿದೆ. ದೇವಾಲಯವನ್ನು ಪೋಷಿಸಿ ಬೆಳೆಸಿದ ಅನೇಕ ಅರಸರುಗಳು ಅದಕ್ಕೆ ಹೆಚ್ಚಿನ ಹೊರಾಂಗಣ ಮತ್ತು ಗೋಪುರ ಗಳನ್ನು (ಪಗೋಡಗಳು) ನಿರ್ಮಿಸಿಕೊಟ್ಟಿದ್ದಾರೆ. ಈ ಪದ್ದತಿಯು ಪೂಜಾ ಸ್ಥಳಗಳು ಇನ್ನೂ "ಜೀವಂತ"ವಾಗಿರಲು ಸಹಾಯಮಾಡಿದೆ. ಆದರೆ ವಸ್ತುಶಿಲ್ಪ ಅಥವಾ ಚಾರಿತ್ರಿಕ ದೃಷ್ಟಿಕೋನದಲ್ಲಿ ಈ ಜೀರ್ಣೋದ್ದಾರಗಳು ಉದ್ದೇಶವಿಲ್ಲದೆಯೇ ಮೂಲ ಕಲೆಯನ್ನು ಹಾಳು ಮಾಡಿವೆ. ದೇವಸ್ಥಾನದ ಯೋಜನೆಗಳ ಮಹತ್ವವವನ್ನು ಕೆಡಿಸಿವೆ.

ಈ ಸಾಮಾನ್ಯವಾದ ಅಭಿಪ್ರಾಯಕ್ಕೆ ಚಿದಂಬರಂ ದೇವಾಲಯವು ಹೊರತಾಗಿಲ್ಲ. ಆದ್ದರಿಂದ ದೇವಾಲಯದ ಉಗಮ ಮತ್ತು ಬೆಳವಣಿಗೆಗೆಳ ಬಗ್ಗೆ, ಇದಕ್ಕೆ ಸಂಬಂಧಿಸಿದ ಸಾಹಿತ್ಯ, ಕಾವ್ಯಗಳು ಮತ್ತು ದೀಕ್ಷಿತಾರ್‌ಗಳ ಸಮುದಾಯದಿಂದ ಜನಾಂಗಗಳಿಗೆ ವರ್ಗಾವಣೆಯಾದ ಮೌಖಿಕ ಮಾಹಿತಿಗಳು, ಇಂದು ಶಿಲಾ ಶಾಸನಗಳಿಂದ ಮತ್ತು ಹಸ್ತಪ್ರತಿಗಳಿಂದ ದೊರೆತ ಅಲ್ಪ ಮಾಹಿತಿಗಿಂತ ಹೆಚ್ಚಾದ ಆಧಾರಗಳನ್ನು ಒದಗಿಸುತ್ತವೆ.

ಸಂಗಮ ಸಾಹಿತ್ಯದಿಂದ ನಮಗೆ ತಿಳಿದು ಬರುವುದೇನೆಂದರೆ ಚೋಳರು ಈ ಪ್ರಾಚೀನ ದೇವಾಲಯದ ಅತಿ ದೊಡ್ಡ ದೈವ ಭಕ್ತರು ಎನ್ನುವುದು. ಚೋಳರ ಅರಸನಾದ ಕೊಚೆಂಗಾನ್ನನ್ ರಾಜನಾದ ಸುಭಾದೇವನ್‌ನ ನಂತರ ಹುಟ್ಟಿದನು ಎನ್ನಲಾಗಿದ್ದು, ಕಮಲಾದೇವಿಯು ತಿಲ್ಲೈನ ಬಂಗಾರದ ಸಭಾಂಗಣದಲ್ಲಿ ಪೂಜೆ ಸಲ್ಲಿಸುತ್ತಿದ್ದಳು . ಆದ್ದರಿಂದ ಚಿನ್ನದ ಸಭಾಂಗಣವನ್ನು ಹೊಂದಿರುವ ಈ ದೇವಸ್ಥಾನವು ಈಗಿನ ಕಾಲಕ್ಕಿಂತಲೂ ಸಾವಿರಾರು ವರ್ಷಗಳ ಹಿಂದಿನದು ಎಂದು ಭಾವಿಸಲಾಗಿದೆ.

ದೇವಾಲಯದ ವಾಸ್ತು ಶಿಲ್ಪ ವಿಶೇಷವಾಗಿ ಪವಿತ್ರ ಗರ್ಭಗುಡಿಯು ಚೋಳ, ಪಾಂಡ್ಯ ಅಥವಾ ಪಲ್ಲವರ ಯಾವುದೇ ದೇವಾಲಯಗಳ ಮಾದರಿಯಂತೆ ನಿರ್ಮಿತವಾಗಿಲ್ಲ. ಸ್ವಲ್ಪ ಮಟ್ಟಿಗೆ, ದೇವಾಲಯವು ಚೇರರ ದೇವಸ್ಥಾನಗಳ ಮಾದರಿಯನ್ನು ಹೋಲುತ್ತವೆಯಾದರೂ, ಕವಿ ಹಾಗೂ ಸಂತರಾದ ಸುಂದರಾರ್ (ಸಿರ್ಕಾ 12 ಶತಮಾನ) ಕಾಲದಲ್ಲಿ ಚೇರ ಸಾಮ್ರಾಜ್ಯದೊಂದಿಗೆ ಸಂಪರ್ಕವಿರಬಹುದು ಎಂದು ಭಾವಿಸಲಾಗಿದೆ. ದುರ್ದೈವವಶಾತ್ ಚಿದಂಬರಂ ದೇವಾಲಯದ ಒಳ ಮತ್ತು ಹೊರ ಕೆಲಸಗಳ ಬಗ್ಗೆ 10ಶತಮಾನದ ನಂತರ ಪುರಾವೆಗಳು ದೊರೆತಿವೆ.

ಶಿಲಾಶಾಸನಗಳು

[ಬದಲಾಯಿಸಿ]

ದೇವಸ್ಥಾನದಲ್ಲಿ ಅನೇಕ ಶಿಲಾಶಾಸನಗಳು ಲಭ್ಯವಿವೆ ಮತ್ತು ಅವು ನೆರೆ ಪ್ರದೇಶಗಳಲ್ಲಿ ಚಿದಂಬರಂ ದೇವಸ್ಥಾನವನ್ನು ಉಲ್ಲೇಖಿಸುತ್ತವೆ.

ಲಭ್ಯವಿರುವ ಬಹುತೇಕ ಶಿಲಾಶಾಸನಗಳು ಸಂಬಂಧಪಟ್ಟ ಅವಧಿಗಳು:

ನಂತರದ ಚೋಳ ದೊರೆಗಳು

[ಬದಲಾಯಿಸಿ]
  • ರಾಜರಾಜ ಚೋಳ I 985-1014 ಸಿಇ, ತಂಜಾವೂರಿನಲ್ಲಿ ದೊಡ್ಡ ದೇವಾಲಯವನ್ನು ಕಟ್ಟಿಸಿದರು
  • ರಾಜೇಂದ್ರ ಚೋಳ I 1012-1044 ಸಿಇ, ಜಯಂಕೊಂಡಂ‌ನಲ್ಲಿರುವ ಗಂಗೈಕೊಂಡಚೋಳಪುರಂ ದೇವಾಲಯವನ್ನು ಕಟ್ಟಿಸಿದರು
  • ಕುಲೋತುಂಗ ಚೋಳ I 1070-1120 ಸಿಇ
  • ವಿಕ್ರಮ ಚೋಳ 1118-1135 ಸಿಇ
  • ರಾಜಾಧಿರಾಜ ಚೋಳ II 1163 -1178 ಸಿಇ
  • ಕುಲೋತುಂಬ ಚೋಳ III 1178-1218 ಸಿಇ
  • ರಾಜರಾಜ ಚೋಳ III 1216-1256 ಸಿಇ

ಪಾಂಡ್ಯ ರಾಜರು

[ಬದಲಾಯಿಸಿ]
  • ತ್ರಿಭುವನ ಚಕ್ರವರ್ತಿ ವೀರಪಾಂಡ್ಯನ್
  • ಜತವರ್ಮನ್ ತ್ರಿಭುವನ ಚಕ್ರವರ್ತಿ ಸುಂದರಪಾಂಡ್ಯನ್ 1251-1268 ಸಿಇ
  • ಮಾರವರ್ಮನ್ ತ್ರಿಭುವನ ಚಕ್ರವರ್ತಿ ವೀರಕೇರಲಾಂಗೀಯ ಕುಲಶೇಖರ ಪಾಂಡ್ಯನ್ 1268-1308 ಸಿಇ

ಪಲ್ಲವ ರಾಜರು

[ಬದಲಾಯಿಸಿ]
  • ಅವನಿ ಆಲ ಪಿರಂಧಾನ್ ಕೊ-ಪ್ಪಿರಂ-ಸಿಂಘ 1216-1242 ಸಿಇ

(ವಿಶ್ವವನ್ನಾಳುವುದಕ್ಕೇ ಜನಿಸಿರುವುದು, ಮಹಾ-ರಾಜ-ಸಿಂಹದಂತಹ ದೊರೆ)

ವಿಜಯನಗರ ರಾಜರು

[ಬದಲಾಯಿಸಿ]
  • ವೀರಪ್ರತಾಪ ಕಿರುತ್ತಿನ ಥೇವ ಮಹಾರಾಯರ್ 1509-1529 ಸಿಇ
  • ವೀರಪ್ರತಾಮ ವೆಂಕಟ ದೇವ ಮಹಾರಾಯರ್
  • ಶ್ರೀ ರಂಗ ಥೇವ ಮಹಾರಾಯರ್
  • ಅಚ್ಯುತ ದೇವ ಮಹಾರಾಯರ್(1529-1542 ಸಿಇ)
  • ವೀರ ಭೂಪತಿರಾಯರ್

<bg=red>

ಚೇರರು

[ಬದಲಾಯಿಸಿ]
  • ಚೇರಮಾನ್ ಪೆರುಮಲ್ ನಾಯನರ್‌ನ ಸಂತತಿಯವನಾದ ರಾಮವರ್ಮ ಮಹಾರಾಜ.

ಗೋಪುರಗಳು

[ಬದಲಾಯಿಸಿ]

ದಕ್ಷಿಣದ ಗೋಪುರ ವನ್ನು ಒಬ್ಬ ಪಾಂಡ್ಯ ರಾಜನು ನಿರ್ಮಿಸಿದನು ಮೇಲ್ಛಾವಣಿಯ ಒಳಭಾಗದಲ್ಲಿ ಕೆತ್ತಲಾಗಿರುವ ಪಾಂಡ್ಯರ ರಾಜಮುದ್ರೆಯಾದ ಮೀನು ಇದಕ್ಕೆ ಸಾಕ್ಷಿಯಾಗಿದೆ. ಚಾರಿತ್ರಿಕವಾಗಿ ಪಾಂಡ್ಯರು ಗೋಪುರವನ್ನು ಪೂರ್ಣಗೊಳಿಸಿದಾಗ ಎರಡು ಮೀನುಗಳು ಎದರು ಬದರು ಇರುವಂತೆ ಕೆತ್ತನೆ ಮಾಡಿಸುತ್ತಿದ್ದರು (ಒಂದು ವೇಳೆ ಗೋಪುರವು ಅಪೂರ್ಣಗೊಂಡಲ್ಲಿ ಒಂದೇ ಮೀನನ್ನು ಕೆತ್ತಿಸುತ್ತಿದ್ದರು). ದಕ್ಷಿಣ ಗೋಪುರದಲ್ಲಿರುವ ಎರಡು ಮೀನುಗಳು ಪಾಂಡ್ಯರ ಲಾಂಛನವಾಗಿದೆ.

ಈ ಗೋಪುರವನ್ನು ಸೊಕ್ಕಸೀಯನ್ ತಿರುನಿಲಯಿ ಎಝುಗೋಪುರಂ ಎಂದು ಕರೆಯುವರು.

ಪಶ್ಚಿಮದ ಗೋಪುರ ವನ್ನು ನಿರ್ಮಿಸಿದವರು ಜಾದವರ್ಮನ್ ಸುಂದರ ಪಾಂಡ್ಯನ್ I 1251-1268 ಸಿಇ.

ಉತ್ತರ ಗೋಪುರ ವನ್ನು ನಿರ್ಮಿಸಿದವರು ವಿಜಯನಗರ ರಾಜ ಕೃಷ್ಣದೇವರಾಯ 1509-1529 ಸಿಇ.

ಪೂರ್ವ ಗೋಪುರ ವನ್ನು ಮೊದಲು ಪಲ್ಲವ ದೊರೆ ಕೊಪೆರುನ್‌ಸಿಂಗನ್ II ಅವರು ನಿರ್ಮಿಸಿದರು 1243-1279 ಸಿಇ.

ಪ್ರಸಿದ್ಧ ಮಾನವತಾವಾದಿಯಾದ ಪಾಚಿಯಪ್ಪ ಮುದಲಿಯಾರ್ನ ಅತ್ತೆಯಾದ ಸುಬ್ಬಮ್ಮಾಳ್ , ಎಂಬಾಕೆಯು ನಂತರದಲ್ಲಿ ಅನೇಕ ದುರಸ್ತಿ ಕಾರ್ಯಗಳನ್ನು ಮಾಡಿಸಿದಳು. ಪೂರ್ವ ಭಾಗದ ಗೋಪುರದಲ್ಲಿ ಪಾಚಿಯಪ್ಪ ಮತ್ತು ಆತನ ಹೆಂಡತಿಯಾದ ಐಯಮ್ಮಾಳ್ ರ ವಿಗ್ರಹಗಳನ್ನು ಕೆತ್ತಲಾಗಿದೆ. ಈ ದಿನದವರೆಗೂ ಪಾಚಿಯಪ್ಪ ಟ್ರಸ್ಟ್ ದೇವಾಲಯದಲ್ಲಿ ನಡೆಯುವ ಹಲವಾರು ಕಾರ್ಯಕಲಾಪಗಳ ಜವಾಬ್ದಾರಿ ಮತ್ತು ದೇವಸ್ಥಾನದ ತೇರಿನ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದೆ.

ಚಿತ್ಸಭಾ ದ ಚಿನ್ನದ ಹೆಂಚುಗಳ ಮೇಲ್ಛಾವಣಿಯನ್ನು ಚೋಳರ ಅರಸನಾದ ಪರಾಂತಕ I ಮಾಡಿಸಿದನು ಎಂದು ನಂಬಲಾಗಿದೆ.(907-950 ಸಿಇ) ("ತಿಲ್ಲಯಂಬಾಲಥುಕ್ಕು ಪೊನ್ ವೆಯಿಂತ ಥೇವನ್") . ಅರಸರುಗಳಾದ ಪರಾಂತಕ II, ರಾಜರಾಜ ಚೋಳ I, ಕುಲೋತ್ತುಂಗ ಚೋಳ I ದೇವಸ್ಥಾನಕ್ಕೆ ಗಣನೀಯವಾದ ಕಾಣಿಕೆಗಳನ್ನು ನೀಡಿದ್ದಕ್ಕೆ ದಾಖಲೆಗಳಿವೆ. ರಾಜರಾಜಚೋಳನ ಮಗಳಾದ ಕುಂದವೈ II ಸಹ ಈ ದೇವಾಲಯಕ್ಕೆ ಚಿನ್ನ ಮತ್ತು ಇತರ ಬೆಲೆಬಾಳುವ ಕಾಣಿಕೆಗಳನ್ನು ನೀಡಿದಳು ಎನ್ನಲಾಗಿದೆ. ನಂತರ ಚೋಳರ ಅರಸನಾದ ವಿಕ್ರಮ ಚೋಳನು (ಎಡಿ 1118-1135) ಇಲ್ಲಿನ ದೈನಂದಿನ ಧಾರ್ಮಿಕ ಆಚರಣೆಗಳಿಗೆ ಅನೇಕ ಕಾಣಿಕೆಗಳನ್ನು ಸಲ್ಲಿಸಿದನು ಎಂದು ಹೇಳಲಾಗುತ್ತದೆ.

ಪುದುಕೋಟ್ಟೈನ ಮಹಾರಾಜನಾದ ಶ್ರೀ ಸೇತುಪತಿ (ಈಗಲೂ ದೇವತೆಯ ವಿಗ್ರಹವು ಪಚ್ಚೆಯಿಂದ ಅಲಂಕೃತಗೊಂಡಿದೆ) ಬ್ರಿಟೀಷರು ಮುಂತಾದವರು ಸೇರಿದಂತೆ ಅನೇಕ ಅರಸರು, ಅಧಿಕಾರಿಗಳು, ದಾನಿಗಳು ಚಿನ್ನ ಮತ್ತು ಆಭರಣಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ಆಕ್ರಮಣಗಳು

[ಬದಲಾಯಿಸಿ]

ಉತ್ತರ ಭಾರತದ ಬಹುತೇಕ ದೇವಾಲಯಗಳು ಅನೇಕ ಪರಕೀಯರ ದಾಳಿಗೆ ಸಿಲುಕಿ ಹಾಳಾದಂತೆ, ದಕ್ಷಿಣ ಭಾರತದ ದೇವಸ್ಥಾನಗಳು ಯಾವುದೇ ರೀತಿಯ ದಾಳಿಗೆ ಒಳಗಾಗದೆ ಹಲವಾರು ವರ್ಷಗಳಿಂದ ತಮ್ಮ ಶಾಂತಿಯುತ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ. ಈ ಕಾರಣದಿಂದ ದಕ್ಷಿಣ ಭಾರತದಲ್ಲಿ ದೇವಾಲಯಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದರೂ, ಶಾಂತಯುತವಾದ ಈ ಚರಿತ್ರೆಯು ಯಾವುದೇ ಕದನಗಳ ಹೊರತಾಗಿಲ್ಲ. 1597 ಸಿ.ಇ.ಯಲ್ಲಿ ವಿಜಯನಗರ ಸಾಮ್ರಾಜ್ಯದ ಸೇನಾನಾಯಕನು ಗೋವಿಂದರಾಜ ದೇವಾಲಯವನ್ನು ವಿಸ್ತರಿಸಲು ದೀಕ್ಷಿತಾರ್‌ಗಳ ಮೇಲೆ ಒತ್ತಡವನ್ನು ಹಾಕಿದನು. ತಮ್ಮ ಪವಿತ್ರವಾದ ಮತ್ತು ಪ್ರಿಯವಾದ ದೇವಾಲಯವನ್ನು ಕೆಡವುದನ್ನು ನೋಡುವುದಕ್ಕಿಂತ ಸಾಯುವುದೇ ಮೇಲು ಎಂದು ತೀರ್ಮಾನಿಸಿದ ಅನೇಕ ದೀಕ್ಷಿತಾರ್‌ಗಳು ಎತ್ತರವಾದ ಪಗೋಡ ಗೋಪುರಗಳಿಂದ ಹಾರಿ ಪ್ರಾಣ ಅರ್ಪಿಸಿದರು. ಈ ಘಟನೆಗೆ ಅನೇಕ ಚಾರಿತ್ರಿಕ ಆಧಾರಗಳು ದೊರೆತಿವೆ. ಒಬ್ಬ ಕ್ರೈಸ್ತ ಪಾದ್ರಿ ಮತ್ತು ಪ್ರಯಾಣಿಕನಾದ, ಫಾದರ್ ಪಿಮೆಂಟಾ ಎಂಬುವವರು ಇದನ್ನು ದಾಖಲಿಸಿದ್ದಾರೆ.

ಬಹಳಷ್ಟು ಸಂದರ್ಭಗಳಲ್ಲಿ , ದಾಳಿಗಳಿಂದ ತಪ್ಪಿಸಿಕೊಳ್ಳಲು, ದೀಕ್ಷಿತಾರ್‌ಗಳು ದೇವಾಲಯಕ್ಕೆ ಬೀಗ ಹಾಕಿ ದೇವತೆಗಳ ವಿಗ್ರಹಗಳನ್ನು ಅತ್ಯಂತ ಸುರಕ್ಷಿತವಾಗಿ ಕೇರಳದ ಅಲಾಪುಜಾಃ ಗೆ ತಂದರು ಎಂದು ನಂಬಲಾಗಿದೆ. ದಾಳಿಯ ಭಯ ಬಿಟ್ಟುಹೋದ ತಕ್ಷಣವೇ ಅವರು ಹಿಂದಿರುಗಿದರು.

ಉಲ್ಲೇಖಗಳು, ಟಿಪ್ಪಣಿಗಳು, ಸಂಬಂಧಿತ ಕೊಂಡಿಗಳು

[ಬದಲಾಯಿಸಿ]
  1. "Chidambaram temple". Archived from the original on 2010-09-04. Retrieved 2006-09-11.
  • ಚಿದಂಬರಂ ದೇವಾಲಯಮತ್ತು ಭಗವಂತನಾದ ನಟರಾಜನ ವಿಚಾರಗಳ ಸಾರಾಂಶವು ಸಂಗ್ರಹಪುಸ್ತಕವಾದ "ನಟರಾಜಸ್ಥಾವಮಂಜರಿ" ಯಲ್ಲಿ ವಿವರವಾಗಿರುವಂತೆ, ತಾತ್ವಿಕ ಆಧಾರಗಳು ಮತ್ತು ವಾಸ್ತುಶಿಲ್ಪದ ವಿವರಗಳನ್ನು ಶ್ರೀ ಉಮಾಪತಿ ಶಿವಂನ "ಕುಂಚಿತಾಂಗ್ರಿಸ್ಥವಂ" ನಿಂದ ಪಡೆಯಲಾಗಿದೆ.
  • ಚಿದಂಬರಂನಲ್ಲಿ ವಿಶ್ವ ನಾಟ್ಯಕಾರನಾಗಿ ಕಂಡು ಬರುವ ಭಗವಂತನಾದ ಶಿವ ಮತ್ತು ಚರಿತ್ರೆಯ ಆಧಾರಗಳನ್ನು ಆದಲ್‌ವಲ್ಲನ್-ಪುರಾಣಗಳಲ್ಲಿನ ಆದಲ್‌ವಲ್ಲನ್ ವಿಶ್ವಕೋಶ-ಅಧೀನ ಮಹಾವಿದ್ವಾನ್ ಶ್ರೀ ದಂಡಪಾಣಿ ದೇಸಿಕಾರ್ ರವರು ರಚಿಸಿದ ಮತ್ತು ತಿರುವಾವದುತುರೈ ಅಧೀನಂ ಪ್ರಕಾಶನದ, ಯಂತ್ರ, ಪೂಜಾ-ಶಿಲ್ಪ ಮತ್ತು ನಾಟ್ಯಶಾಸ್ತ್ರ , ಸರಸ್ವತಿ ಮಹಲ್ ಗ್ರಂಥಾಲಯ ಮತ್ತು ಸಂಶೋಧನ ಕೇಂದ್ರ, ತಿರುವಾವದುತುರೈ, ತಮಿಳುನಾಡು, ಭಾರತ 609803 ಇವುಗಳಿಂದ ಪಡೆಯಲಾಗಿದೆ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Famous Shiva temples

11°23′58″N 79°41′36″E / 11.399444444444°N 79.693333333333°E / 11.399444444444; 79.693333333333