ವಿಜಯ್ ಶೇಖರ್ ಶರ್ಮಾ
ವಿಜಯ್ ಶೇಖರ್ ಶರ್ಮಾ (ಜನನ ೧೯೭೮) ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿ ಮತ್ತು ಹಣಕಾಸು ತಂತ್ರಜ್ಞಾನ ಕಂಪನಿ ಪೇಟಿಯಮ್‍ನ ಸ್ಥಾಪಕ, ಮತ್ತು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ). [೧] ಅವರು ೨೦೧೭ ರಲ್ಲಿ ಬಿಡುಗಡೆಯಾದ ಫೋರ್ಬ್ಸ್ ನ ಪಟ್ಟಿಯಲ್ಲಿ $ ೧.೩ ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಎಂದು ಸ್ಥಾನ ಪಡೆದಿದ್ದಾರೆ. [೨] ಇವರು ೨೦೧೭ ರ ಟೈಮ್ ಮ್ಯಾಗಜೀನ್‌ನಲ್ಲಿ ವಿಶ್ವದ ೧೦೦ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. [೩] ಇವರು ಉತ್ತರ ಪ್ರದೇಶ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಗೌರವವಾದ ಯಶ್ ಭಾರತಿ ಪುರಸ್ಕಾರವನ್ನು [೪] ೨೦೨೦ ರಲ್ಲಿ ಪಡೆದುಕೊಂಡಿದ್ದಾರೆ ಇವರು ಫೋರ್ಬ್ಸ್ ನ ಪ್ರಕಾರ ಯುಎಸ್ $೨.೩೫ ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಭಾರತದಲ್ಲಿ #೬೨ ನೇ ಶ್ರೀಮಂತ ವ್ಯಕ್ತಿಯಾಗಿ ಸ್ಥಾನದಲ್ಲಿದ್ದಾರೆ. [೫] ಜನವರಿ ೨೦೨೦ ರಲ್ಲಿ ICANN- ಬೆಂಬಲಿತ ಯುನಿವರ್ಸಲ್ ಅಕ್ಸೆಪ್ಟೆನ್ಸ್ ಸ್ಟೀರಿಂಗ್ ಗ್ರೂಪ್ ಇವರನ್ನು ಭಾರತದಲ್ಲಿ ಯುಎ ರಾಯಭಾರಿಯಾಗಿ ನೇಮಿಸಿದೆ. [೬]
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ವಿಜಯ್ ಶೇಖರ್ ಅವರು ಉತ್ತರ ಪ್ರದೇಶದ ಅಲಿಗಢದಲ್ಲಿ ೭ ಜೂನ್ ೧೯೭೮ ರಂದು ಜನಿಸಿದರು, ಶಾಲೆಯ ಶಿಕ್ಷಕರಾದ ಸುಲೋಮ್ ಪ್ರಕಾಶ್ ಮತ್ತು ಆಶಾ ಶರ್ಮಾ ಅವರ ನಾಲ್ಕು ಮಕ್ಕಳಲ್ಲಿ ಇವರು ಮೂರನೆಯವರಾಗಿದ್ದಾರೆ. [೭]
ಇವರು ದೆಹಲಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ (ಈಗ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ) ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. [೮] ಅವರು ತಮ್ಮ ಶಾಲಾ ಶಿಕ್ಷಣವನ್ನು ಅಲಿಗಢ್ ಬಳಿಯ ಸಣ್ಣ ಪಟ್ಟಣವಾದ ಹರ್ದುವಾಗಂಜ್‌ನಲ್ಲಿರುವ ಹಿಂದಿ ಮಾಧ್ಯಮ ಶಾಲೆಯಲ್ಲಿ ಪೂರೈಸಿದ್ದಾರೆ. [೯]
ವೃತ್ತಿ
[ಬದಲಾಯಿಸಿ]೧೯೯೭ ರಲ್ಲಿ ಕಾಲೇಜಿನಲ್ಲಿದ್ದಾಗ ಇವರು ವೆಬ್‌ಸೈಟ್ indiasite.net ಅನ್ನು ಪ್ರಾರಂಭಿಸಿದರು ಮತ್ತು ಎರಡು ವರ್ಷಗಳ ನಂತರ ಅದನ್ನು $೧ ಮಿಲಿಯನ್‌ಗೆ ಮಾರಾಟ ಮಾಡಿದರು. [೧೦] ೨೦೦ರಲ್ಲಿ ಅವರು One97 ಕಮ್ಯುನಿಕೇಷನ್ಸ್ ಅನ್ನು ಪ್ರಾರಂಭಿಸಿದರು, ಇದು ಸುದ್ದಿ, ಕ್ರಿಕೆಟ್ ಸ್ಕೋರ್‌ಗಳು, ರಿಂಗ್‌ಟೋನ್‌ಗಳು, ಜೋಕ್‌ಗಳು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಒಳಗೊಂಡಂತೆ ಮೊಬೈಲ್ ವಿಷಯವನ್ನು ಒದಗಿಸಿತು. One97 ಪೇಟಿಯಮ್ ಮೂಲದ ಕಂಪನಿಯಾಗಿದೆ, ಇದನ್ನು ಶರ್ಮಾ ಅವರು ೨೦೧೦ ರಲ್ಲಿ [೧೦] ಪ್ರಾರಂಭಿಸಿದರು.
ಪೇಟಿಯಮ್ ೪೦೦ ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಇವರು ಪ್ರತಿದಿನ ೨೫ ಮಿಲಿಯನ್ ವಹಿವಾಟುಗಳನ್ನು ನಡೆಸುತ್ತಾರೆ. ೨೦೧೮ ರಲ್ಲಿ ಬರ್ಕ್‌ಷೈರ್ ಹ್ಯಾಥ್‌ವೇ ಅವರ ವಾರೆನ್ ಬಫೆಟ್ ಅವರು ಶರ್ಮಾ ಕಂಪನಿಯಲ್ಲಿ $೩೦೦ ಮಿಲಿಯನ್ ಹೂಡಿಕೆ ಮಾಡಿದರು. [೧೧]
ವೈಯಕ್ತಿಕ ಜೀವನ
[ಬದಲಾಯಿಸಿ]ಇವರು ಮೃದುಲಾ ಪರಾಶರ್ ಶರ್ಮಾ ಅವರನ್ನು ವಿವಾಹವಾದರು [೧೨] ಮತ್ತು ಇವರಿಗೆ ಒಂದು ಮಗುವಿದೆ. ಇವರ ತಂದೆ ಶಾಲಾ ಶಿಕ್ಷಕರಾಗಿದ್ದರು. [೧೩] ಇವರು ಅಲಿಬಾಬಾದ ಸಂಸ್ಥಾಪಕ ಜ್ಯಾಕ್ ಮಾ ಮತ್ತು ಸಾಫ್ಟ್‌ಬ್ಯಾಂಕ್‌ನ ಮಸಯೋಶಿ ಸನ್ ಅವರನ್ನು ತಮ್ಮ ಸ್ಫೂರ್ತಿ ಎಂದು ಉಲ್ಲೇಖಿಸಿದ್ದಾರೆ. [೧೪] ಫೆಬ್ರವರಿ ೨೦೨೨ ರಲ್ಲಿ ಶರ್ಮಾ ಅವರ ಕಾರು ಪೊಲೀಸ್ ಅಧಿಕಾರಿಯ ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕಾಗಿ ದೆಹಲಿ ಪೊಲೀಸರು ಬಂಧಿಸಿದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. [೧೫]
ಪ್ರಶಸ್ತಿಗಳು ಮತ್ತು ಮನ್ನಣೆ
[ಬದಲಾಯಿಸಿ]- ೨೦೧೭ ರಲ್ಲಿ ಇವರು $ ೧.೩ ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಭಾರತದಲ್ಲಿ ಕಿರಿಯ ಬಿಲಿಯನೇರ್ ಎಂದು ಹೆಸರಿಸಲ್ಪಟ್ಟರು. ಫೋರ್ಬ್ಸ್‌ನ 'ದಿ ವರ್ಲ್ಡ್ಸ್ ಬಿಲಿಯನೇರ್ಸ್' ಪಟ್ಟಿಯಲ್ಲಿ ಅವರು #೧೫೬೭ ನೇ ಸ್ಥಾನ ಪಡೆದರು. [೨]
- ಶರ್ಮಾ ಅವರು ೨೦೧೭ ರ [೧೬] ಟೈಮ್ ಮ್ಯಾಗಜೀನ್‌ನಲ್ಲಿ ೧೦೦ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿದ್ದರು.
- ೨೦೧೬ ರಲ್ಲಿ ದಿ ಎಕನಾಮಿಕ್ ಟೈಮ್ಸ್‌ನಿಂದ ಶರ್ಮಾ ಅವರು ವರ್ಷದ ಇಟಿ ವಾಣಿಜ್ಯೋದ್ಯಮಿ ಪ್ರಶಸ್ತಿಯನ್ನು ಪಡೆದರು. [೧೭]
- ಅವರು ೨೦೧೭ ರ ೫೦ ಅತ್ಯಂತ ಪ್ರಭಾವಿ ಯುವ ಭಾರತೀಯರ ಪಟ್ಟಿಯಲ್ಲಿ GQ ನಿಂದ [೧೮] ೪ ನೇ ಸ್ಥಾನದಲ್ಲಿದ್ದರು.
- ೨೦೧೭ ರಲ್ಲಿ ಇವರು ವರ್ಷದ ಡೇಟಾಕ್ವೆಸ್ಟ್ ಐಟಿ ಮ್ಯಾನ್ ಆದರು. [೧೯]
- ಇವರು ೨೦೧೬ ರಲ್ಲಿ ಗುರ್ಗಾಂವ್‌ನ ಅಮಿಟಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು. [೨೦]
- ಶರ್ಮಾ ಅವರಿಗೆ ೨೦೧೬ ರಲ್ಲಿ [೪] ಉತ್ತರ ಪ್ರದೇಶ ಸರ್ಕಾರದ ಅತ್ಯುನ್ನತ ರಾಜ್ಯ ನಾಗರಿಕ ಪ್ರಶಸ್ತಿಯಾದ ಯಶ್ ಭಾರತಿ ನೀಡಿ ಗೌರವಿಸಲಾಯಿತು.
- ಗೋ ಮೆನ್ ಆಫ್ ದಿ ಇಯರ್ ಅವಾರ್ಡ್ಸ್ ೨೦೧೬ ರಲ್ಲಿ ಇವರು ವರ್ಷದ ಉದ್ಯಮಿ ಎಂದು ಹೆಸರಿಸಲ್ಪಟ್ಟರು [೨೧]
- ಇವರಿಗೆ ೨೦೧೬ ರಲ್ಲಿ ಎನ್‍ಡಿಟಿವಿ ಇಂಡಿಯನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಲಾಯಿತು. [೨೨]
- ಇವರು ೨೦೧೬ ರಲ್ಲಿ ವರ್ಷದ ಪ್ರಭಾವಶಾಲಿ ವ್ಯಕ್ತಿ ಪ್ರಶಸ್ತಿಯನ್ನು ಪಡೆದರು. [೨೩]
- ೨೦೧೫ ರಲ್ಲಿ ದಿ ಎಕನಾಮಿಕ್ ಟೈಮ್ಸ್‌ನಿಂದ ೪೦ ವರ್ಷದೊಳಗಿನ ಭಾರತದ ಹಾಟೆಸ್ಟ್ ಬಿಸಿನೆಸ್ ಲೀಡರ್ ಎಂದು ಹೆಸರಿಸಲಾಯಿತು. [೨೪]
- ಸೆಪ್ಟೆಂಬರ್ ೨೦೧೫ ರಲ್ಲಿ, ವಿಜಯ್ ಶೇಖರ್ ಶರ್ಮಾ ಅವರನ್ನು SABER ಪ್ರಶಸ್ತಿಯಿಂದ ವರ್ಷದ ಸಿಇಒ ಎಂದು ಹೆಸರಿಸಲಾಯಿತು. [೨೫]
ಇತರೆ ಕಾರ್ಯಗಳು
[ಬದಲಾಯಿಸಿ]ಶರ್ಮಾ ಅವರನ್ನು ಯುಎನ್ ಎನ್ವಿರಾನ್‌ಮೆಂಟ್‌ನ 'ಪ್ಯಾಟ್ರಾನ್ ಫಾರ್ ಕ್ಲೀನ್ ಏರ್' ಎಂದು ಹೆಸರಿಸಲಾಗಿದೆ ಅಲ್ಲಿ ಇವರು ಪರಿಸರ ಕ್ರಮ ಮತ್ತು ಜಾಗೃತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತಾರೆ ಮತ್ತು ವಿಶ್ವಸಂಸ್ಥೆಯ ಪರಿಸರದ ಜಾಗತಿಕ ಬ್ರೀತ್ ಲೈಫ್ ಅಭಿಯಾನದ ಗುರಿಗಳಿಗಾಗಿ ಸಲಹೆ ನೀಡುತ್ತಾರೆ. [೨೬] [೨೭]
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Jog, Natasha (20 August 2015). "Began College at 15, Has Billion-Dollar Firm at 37". NDTV.com.
- ↑ Jump up to: ೨.೦ ೨.೧ Giri, Manish Kumar. "Paytm's Vijay Shekhar Sharma ranked India's youngest billionaire in Forbes's latest list | Forbes India". Forbes India (in ಅಮೆರಿಕನ್ ಇಂಗ್ಲಿಷ್). Retrieved 2017-11-29.
- ↑ "The 100 Most Influential People in the World". Time (in ಅಮೆರಿಕನ್ ಇಂಗ್ಲಿಷ್). Archived from the original on 2017-04-20. Retrieved 2020-04-02.
- ↑ Jump up to: ೪.೦ ೪.೧ "Paytm founder Vijay Shekhar Sharma goes to meet UP CM Akhilesh Yadav ... in a rickshaw!". The Economic Times. October 28, 2016.
- ↑ Arakali, Harichandan (November 10, 2020). "India's Richest: Paytm's Vijay Shekhar Sharma fights fierce competition". Forbes India.
- ↑ "Internet panel on languages ropes in Vijay Shekhar Sharma as ambassador". Business Standard. January 19, 2022.
- ↑ Tiwari, Mahesh. "Vijay Shekhar Sharma". newstrend.news. Newstrend. Retrieved 29 June 2021.
- ↑ "Began College at 15, Has Billion-Dollar Firm at 37". NDTV.com. Retrieved 2016-02-02.
- ↑ Sinha, Suveen (August 20, 2016). "How PayTM's Vijay Shekhar Sharma chased his dream instead of a degree". Scroll.in.
- ↑ Jump up to: ೧೦.೦ ೧೦.೧ "The king of cash". Calcutta: The Telegraph.
- ↑ "Vijay Shekhar Sharma". Forbes (in ಇಂಗ್ಲಿಷ್). Retrieved 2021-07-13.
- ↑ Upadhyay, Harsh; Tyagi, Gaurav (July 2, 2020). "Paytm founder floats 2 new entities for personal investments". Entrackr.
- ↑ Punj, Shwweta (January 4, 2021). "In college, I didn't understand what the teacher was saying: Paytm founder Vijay Shekhar Sharma". India Today.
- ↑ "Vijay Sharma, Paytm: an for India". Financial Times.
- ↑ IANS (2022-03-13). "Paytm CEO was released on bail in Feb after hitting police officer's car". Business Standard India. Retrieved 2022-03-14.
- ↑ "The 100 Most Influential People in the World". Time (in ಅಮೆರಿಕನ್ ಇಂಗ್ಲಿಷ್). Archived from the original on 2017-04-20. Retrieved 2020-04-02.
- ↑ "ET Awards for Corporate Excellence: Paytm's Vijay Shekhar Sharma chosen as Entrepreneur of the Year". Economic Times. Retrieved 3 October 2016.
- ↑ "GQ's Most Influential Young Indians 2017: Digital Disruptors". GQ (Indian edition). July 7, 2017.
- ↑ Sacchdeva, Malavika (March 6, 2017). "Vijay Shekhar Sharma to be awarded as DQ IT Person of the Year at Digital Economy Conclave". Dataquest.
- ↑ "Airtel's Sunil Mittal, Paytm's Vijay Shekar given honorary degrees by Amity University". DNA INDIA.com.
- ↑ "GQ Awards 2016 winners list". India.com. September 28, 2016.
- ↑ "NDTV confers Indian of the Year Award 2015". United News of India. February 3, 2016.
- ↑ "Vijay Shekhar Sharma wins IMPACT Person of The Year 2016 Award". Exchange4media. Dec 14, 2016.
- ↑ "India's Hottest Business Leaders under 40: Paytm's Vijay Shekhar Sharma was the youngest engineer from Delhi University". The Economic Times. June 19, 2015.
- ↑ "Sabre Awards South Asia". Bestmediainfo. September 21, 2015.
- ↑ "Paytm's Vijay Shekhar Sharma named UN Environment's Patron for Clean Air". The Economic Times. December 5, 2017.
- ↑ "Vijay Shekhar Sharma". Unep.org. 2021.