ಅಂತಾರಾಷ್ಟ್ರೀಯ ಶಾಂತಿ ದಿನ
ಅಂತಾರಾಷ್ಟ್ರೀಯ ಶಾಂತಿ ದಿನ, (ಕೆಲವೊಮ್ಮೆ ಅಧಿಕೃತವಾಗಿ ವಿಶ್ವ ಶಾಂತಿ ದಿನ ಎಂದು ಕರೆಯಲಾಗುತ್ತದೆ) ಇದನ್ನು ವಿಶ್ವಸಂಸ್ಥೆಯ ಘೋಷಣೆಯಂತೆ ವಾರ್ಷಿಕವಾಗಿ ಸೆಪ್ಟೆಂಬರ್ 21 ರಂದು ಆಚರಿಸಲಾಗುತ್ತದೆ. ಇದು ವಿಶ್ವ ಶಾಂತಿಗೆ , ನಿರ್ದಿಷ್ಟವಾಗಿ ಯುದ್ಧ ಮತ್ತು ಹಿಂಸೆಯ ಅನುಪಸ್ಥಿತಿಗೆ ಸಮರ್ಪಿತವಾಗಿದೆ- ಉದಾಹರಣೆಗೆ ಮಾನವೀಯ ನೆರವು ಒದಗಿಸಲು ಯುದ್ಧ ವಲಯದಲ್ಲಿ ತಾತ್ಕಾಲಿಕ ಕದನ ವಿರಾಮ ಉಂಟುಮಾಡಬಹುದು. ಈ ದಿನವನ್ನು ಮೊದಲು 1981 ರಲ್ಲಿ ಆಚರಿಸಲಾಯಿತು ಮತ್ತು ಇದನ್ನು ಅನೇಕ ರಾಷ್ಟ್ರಗಳು, ರಾಜಕೀಯ ಗುಂಪುಗಳು, ಮಿಲಿಟರಿ ಗುಂಪುಗಳು ಮತ್ತು ಜನರು ಆಚರಿಸಿದರು. [೧]
ದಿನವನ್ನು ಉದ್ಘಾಟಿಸಲು, ವಿಶ್ವಸಂಸ್ಥೆಯ ಶಾಂತಿಗಂಟೆಯನ್ನು ನ್ಯೂಯಾರ್ಕ್ ಸಿಟಿಯಲ್ಲಿ ಇರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಬಾರಿಸಲಾಗುತ್ತದೆ. ಈ ಗಂಟೆಯನ್ನು ಆಫ್ರಿಕಾವನ್ನು ಹೊರತುಪಡಿಸಿ ಎಲ್ಲಾ ಖಂಡಗಳ ಮಕ್ಕಳು ದಾನ ಮಾಡಿದ ನಾಣ್ಯಗಳಿಂದ ತಯಾರಿಸಲಾಗಿದ್ದು ಜಪಾನಿನ ವಿಶ್ವಸಂಸ್ಥೆಯ ಅಸೋಸಿಯೇಶನ್ ನಿಂದ "ಯುದ್ಧದ ಮಾನವ ವೆಚ್ಚದ ಜ್ಞಾಪಕಾರ್ಥ" ಕೊಡುಗೆಯಾಗಿದೆ; ಅದರ ಬದಿಯಲ್ಲಿ "ಸಂಪೂರ್ಣ ವಿಶ್ವ ಶಾಂತಿಯು ಚಿರಾಯುವಾಗಲಿ" ಎಂದು ಬರೆಯಲಾಗಿದೆ. [೨]
ಇತಿಹಾಸ
[ಬದಲಾಯಿಸಿ]1981– ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ನಿರ್ಣಯದ ಅಂಗೀಕಾರ
[ಬದಲಾಯಿಸಿ]ವಿಶ್ವಸಂಸ್ಥೆಯ ಸಾಮಾನ್ಯಸಭೆಯು , ಯುನೈಟೆಡ್ ಕಿಂಗ್ಡಮ್ ಮತ್ತು ಕೋಸ್ಟರಿಕಾ ಪ್ರಾಯೋಜಿಸಿದ ನಿರ್ಣಯದಲ್ಲಿ , [೩] ಅಂತರಾಷ್ಟ್ರೀಯ ಶಾಂತಿ ದಿನವನ್ನು , ಶಾಂತಿಯ ಆದರ್ಶಗಳನ್ನು ಸ್ಮರಿಸಲು ಮತ್ತು ಬಲಪಡಿಸಲು ಮೀಸಲಾಗಿಡುವುದಾಗಿ ಘೋಷಿಸಿತು. [೪] ಆರಂಭದಲ್ಲಿ ಆಯ್ಕೆ ಮಾಡಿದ ದಿನಾಂಕವು ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನಗಳ ನಿಯಮಿತ ಆರಂಭಿಕ ದಿನವಾದ , ಸೆಪ್ಟೆಂಬರ್ ಮೂರನೇ ಮಂಗಳವಾರವಾಗಿತ್ತು. [೫] (ಇದನ್ನು 2001 ರಲ್ಲಿ ಪ್ರಸ್ತುತ ವಾರ್ಷಿಕ ಆಚರಣೆಯಾದ 21 ಸೆಪ್ಟೆಂಬರ್ ಗೆ ಬದಲಾಯಿಸಲಾಯಿತು - ಈ ಕುರಿತು ಹೆಚ್ಚಿನ ಮಾಹಿತಿಗೆ ಕೆಳಗೆ 2001ರ ಅಡಿಯಲ್ಲಿ ನೋಡಿ. )
1983 ರಲ್ಲಿ ಆರಂಭಗೊಂಡು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಕೋರಿಕೆಯ ಮೇರೆಗೆ, ಶಾಂತಿ ಮಾರ್ಗದ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ, "ವಿ ದ ಪೀಪಲ್ಸ್(ನಾವು ಜನರು)" ಉಪಕ್ರಮ(ಇನಿಶಿಯೇಟಿವ್)ದ ವಾರ್ಷಿಕ ವರದಿಯನ್ನು ವಿಶ್ವಸಂಸ್ಥೆಗೆ ಸಲ್ಲಿಸಲಾಗುತ್ತಿದೆ. [೬] 2006 ರಲ್ಲಿ ಹೆಸರನ್ನು "ವಿ ದ ಪೀಪಲ್ಸ್" ಇನಿಶಿಯೇಟಿವ್ ನಿಂದ "ಕಲ್ಚರ್ ಆಫ್ ಪೀಸ್ ಇನಿಶಿಯೇಟಿವ್" ಎಂದು ಬದಲಾಯಿಸಲಾಯಿತು. [೭]
2001 ರಲ್ಲಿ ಸಾಮಾನ್ಯಸಭೆಯ ಆರಂಭದ ದಿನವನ್ನು ಸೆಪ್ಟೆಂಬರ್ 11 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಅದೇ ದಿನ ಬೆಳಿಗ್ಗೆ , ಸಾಮಾನ್ಯವಾಗಿ 9/11 ಎಂದು ಉಲ್ಲೇಖಿಸಲಾಗುವ, ಸೆಪ್ಟೆಂಬರ್ 11 ರ ದಾಳಿಯನ್ನು ಉಗ್ರಗಾಮಿ ಇಸ್ಲಾಮಿಸ್ಟ್ ಭಯೋತ್ಪಾದಕ ಗುಂಪಾದ ಅಲ್-ಖೈದಾ ಸಂಘಟನೆಯು ಅಮೇರಿಕಾ ಸಂಯುಕ್ತ ಸಂಸ್ಥಾನದ ವಿರುದ್ಧ ನಾಲ್ಕು ಸಂಘಟಿತ ಭಯೋತ್ಪಾದಕ ದಾಳಿಗಳನ್ನು ವಿಶ್ವಸಂಸ್ಥೆಯ ಕಚೇರಿಯಿಂದ ಸ್ವಲ್ಪ ದೂರದಲ್ಲಿ ಮಾಡಿತು. ಆ ವರ್ಷವೇ 2002 ರಲ್ಲಿ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಶಾಂತಿ ದಿನಯ ಆಚರಣೆಯನ್ನು ಮೂರನೆಯ ಮಂಗಳವಾರದಿಂದ ನಿರ್ದಿಷ್ಟವಾಗಿ ಸೆಪ್ಟೆಂಬರ್ ಇಪ್ಪತ್ತೊಂದನೇ ದಿನಕ್ಕೆ ಬದಲಾಯಿಸಲಾಯಿತು. ಮತ್ತು ಆ ದಿನವನ್ನು ಜಾಗತಿಕ ಕದನ ವಿರಾಮ ಮತ್ತು ಅಹಿಂಸೆಯ ದಿನ ಕೂಡ ಎಂದು ಘೋಷಿಸಲಾಯಿತು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "International Day of Peace Event Information". Secretary-General of the United Nations. Archived from the original on 25 June 2013. Retrieved 18 July 2013.
- ↑ "Secretary-General's Message on the International Day of Peace 21 September 2002". Archived from the original on 4 July 2007. Retrieved 6 January 2008.
- ↑ International Day of Peace
- ↑ International Year of Peace and International Day of Peace
- ↑ "International Day of Peace". SA News Channel (in ಅಮೆರಿಕನ್ ಇಂಗ್ಲಿಷ್). 2021-09-21. Retrieved 2021-09-21.
- ↑ 2005 “WE THE PEOPLES” INITIATIVE (celebration of the International Day of Peace) Archived at archive.org, Accessed 17 November 2019
- ↑ 2005 “WE THE PEOPLES” INITIATIVE (celebration of the International Day of Peace) Archived at archive.org, Accessed 17 November 2019