ವಿಷಯಕ್ಕೆ ಹೋಗು

ಕೆ.ಟಿ.ವೇಣುಗೋಪಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ಟಿ.ವೇಣುಗೋಪಾಲ್ (೧೯೪೭-೨೦೦೯) ಖ್ಯಾತ ಪತ್ರಕರ್ತ ಮತ್ತು ಕಥೆಗಾರ.

ಇವರು ಕಾಸರಗೋಡಿನಲ್ಲಿ ೧೯೪೭ರಲ್ಲಿ ಜನಿಸಿದರು.ಕಾಸರಗೋಡಿನಲ್ಲಿಯೇ ವಿದ್ಯಾಭ್ಯಾಸ.

ಇವರು ಉದಯವಾಣಿ ಪತ್ರಿಕೆಯಲ್ಲಿ ಮುಂಬೈ ವರದಿಗಾರರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.ಇವರು ಉದಯವಾಣಿ ಪತ್ರಿಕೆಗೆ ಬರೆಯುತ್ತಿದ್ದ "ಮುಂಬಯಿ ಪತ್ರ"ಎಂಬ ಅಂಕಣ ಜನಪ್ರಿಯವಾಗಿತ್ತು. ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.ಇವರು ವೃತ್ತಿಪರ ಪತ್ರಕರ್ತರಾಗಿದ್ದರೂ ಉತ್ತಮ ಕಥೆಗಾರರೂ ಅಗಿದ್ದರು.ಇವರ ಬರವಣಿಗೆಯ ಮೇಲೆ ಕಥೆಗಾರ ನಿರಂಜನ ಹಾಗೂ ಮಲೆಯಾಳಂ ಭಾಷೆಯ ಲೇಖಕ ಎಂ.ಟಿ.ವಾಸುದೇವ ನಾಯರ್ ಇವರ ಪ್ರಭಾವ ಗಾಢವಾಗಿತ್ತು.

ಕೃತಿಗಳು

[ಬದಲಾಯಿಸಿ]

ಕಥಾಸಂಕಲನಗಳು

  • ದೇವಕಿಯಮ್ಮನ ತರವಾಡು ಮನೆ
  • ಜುಗಲಬಂದಿ
  • ಮುಂಬಯಿ ಪತ್ರ
  • ಬಾಳ್ ಠಾಕ್ರೆ ಮತ್ತು ಇತರ ಸಂದರ್ಶನಗಳು

ಇವರು ತಮ್ಮ ೬೨ನೆಯ ವರ್ಷದಲ್ಲಿ ಅನಾರೋಗ್ಯದಿಂದ ಮೇ ೧೯ ೨೦೦೯ ರಂದು ಪುಣೆಯ ಆಸ್ಪತ್ರೆಯಲ್ಲಿ ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. "Veteran Kannada Journalist K T Venugopal Passes Away". 9 may 2009. Retrieved 8 sept 2021. {{cite news}}: Check date values in: |access-date= and |date= (help)