ವಿಷಯಕ್ಕೆ ಹೋಗು

ನಾಗಬೆತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Calamus (palm) rotang
Scientific classification e
Unrecognized taxon (fix): Calamus (palm)
ಪ್ರಜಾತಿ:
C. rotang
Binomial name
Calamus rotang
Synonyms[]
  • Calamus monoecus Roxb.
  • Calamus roxburghii Griff.
  • Calamus scipionum Lam.
  • Draco rotang Crantz
  • Palmijuncus monoecus (Roxb.) Kuntze
  • Rotang linnaei Baill.
  • Rotanga calamus Crantz

ನಾಗಬೆತ್ತ (ಕ್ಯಾಲಮಸ್ ರೋಟಾಂಗ್) ಭಾರತ, ಶ್ರೀಲಂಕಾ ಮತ್ತು ಮ್ಯಾನ್ಮಾರ್ (ಬರ್ಮಾ) ಮೂಲದ ಸಸ್ಯ ಪ್ರಭೇದವಾಗಿದೆ. ಇದು ಮಲಕ್ಕಾ ಬೆತ್ತದ ಪೀಠೋಪಕರಣಗಳು, ಬುಟ್ಟಿಗಳು, ಊರುಗೋಲುಗಳು,ಛತ್ರಿಗಳು, ಟೇಬಲ್‌ಗಳು ಮತ್ತು ಸಾಮಾನ್ಯ ಬೆತ್ತದ ಪಿಠೋಪಕರಣ ತಯಾರಿಸಲು ಬಳಸುವ ಹಬ್ಬುವ ಬಳ್ಳಿ ಜಾತಿಯ ಬೆತ್ತಗಳಲ್ಲಿ ಒಂದಾಗಿದೆ ಮತ್ತು ಇದು ನೈಋತ್ಯ ಏಷ್ಯಾದಲ್ಲಿ ಕಂಡುಬರುತ್ತದೆ.

ಸಸ್ಯ ಲಕ್ಷಣಗಳು

[ಬದಲಾಯಿಸಿ]

ಸಸ್ಯದ ತಳದ ವಿಭಾಗವು 10 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಲಂಬವಾಗಿ ಬೆಳೆಯುತ್ತದೆ, ಅದರ ನಂತರ ಕೆಲವು ಸೆಂಟಿಮೀಟರ್ ವ್ಯಾಸದ ತೆಳ್ಳಗಿನ, ಕಠಿಣವಾದ ಕಾಂಡವು 200 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಕಾಲ ಅಡ್ಡಲಾಗಿ ಬೆಳೆಯುತ್ತದೆ. ಇದು ಅತ್ಯಂತ ಮೃದುವಾಗಿರುತ್ತದೆ ಮತ್ತು ದಪ್ಪದಲ್ಲಿ ಏಕರೂಪವಾಗಿರುತ್ತದೆ. ಪೊರೆಗಳು ಮತ್ತು ತೊಟ್ಟುಗಳು ಬೆನ್ನ ಭಾಗದಲ್ಲಿದ್ದು ಇದು ಇತರ ಸಸ್ಯಗಳ ಮೇಲೆ ಹಬ್ಬಲು ಅನುವು ಮಾಡಿಕೊಡುತ್ತದೆ. ಇದು 60-80 ಸೆಂ.ಮೀ ಉದ್ದದ ಗರಿ ತರಹದ, ಪರ್ಯಾಯ ಎಲೆಗಳನ್ನು ಹೊಂದಿದೆ.[] ಸಸ್ಯಗಳು ಭಿನ್ನಲಿಂಗಿಯಾಗಿರುತ್ತವೆ, ಮತ್ತು ಹೂವುಗಳನ್ನು ಆಕರ್ಷಕ ಹೂಗೊಂಚಲುಗಳಲ್ಲಿ ಜೋಡಣೆಗೊಂಡಿರುತ್ತವೆ. ತಿನ್ನಬಹುದಾದ ಹಣ್ಣುಗಳು ಹೊಳೆಯುವ, ಕೆಂಪು-ಕಂದು ಬಣ್ಣದ ಹೊದಿಕೆಯಲ್ಲಿ ಮುಚ್ಚಿರುತ್ತವೆ.

ಭಾರತದಲ್ಲಿ

[ಬದಲಾಯಿಸಿ]

ಇದು ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳ ಇಳಿಜಾರು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

ಉಪಯೋಗಗಳು

[ಬದಲಾಯಿಸಿ]

ಇದರ ಹಣ್ಣಿಗಳು ಮೇಲ್ಮೈಯಲ್ಲಿ ಸಂಗ್ರಹವಾಗುವ "ಡ್ರ್ಯಾಗನ್ ರಕ್ತ" ಎಂದು ಔಷಧೀಯವಾಗಿ ಮತ್ತು ವಾಣಿಜ್ಯಿಕವಾಗಿ ತಿಳಿದಿರುವ ಚೊಗರು ಕೆಂಪು ರಾಳವನ್ನು ಹೊರಹಾಕುತ್ತವೆ.[] ಬೆತ್ತವು ಬೇಡಿಕೆಯಿರುವ ಮತ್ತು ದುಬಾರಿಯಾಗಿದೆ,ಆದುದರಿಂದ ಬಿದಿರು,ಮತ್ತು ಇತರ ಸಸ್ಯಗಳಿಂದ ತಯಾರಿಸಿದ ಕೋಲುಗಳಿಂದ ಪ್ರತಿಸ್ಪರ್ಧೆಯನ್ನು ಎದುರಿಸುತ್ತಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "The Plant List, Calamus rotang". Archived from the original on 2021-01-14. Retrieved 2020-12-25.
  2. India Biodiversity Portal, Calamus rotang L., common rattan
  3. "Missouri Botanical Garden". Archived from the original on 2016-03-03. Retrieved 2008-11-26.
  4. "Rattan Palm". Archived from the original on 2008-12-27. Retrieved 2008-11-26.


ಛಾಯಾಂಕಣ

[ಬದಲಾಯಿಸಿ]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]