ಸದಸ್ಯ:ಮಂಜಯ್ಯ ಚಾವಡಿ
ಮಂಜಯ್ಯ ಚಾವಡಿ | |
---|---|
ವೈಯಕ್ತಿಕ ಮಾಹಿತಿ | |
ಜನನ | 14 ಜನವರಿ 1990 ಸಣ್ಣಸಂಗಾಪುರ, ರಾಣೆಬೆನ್ನೂರು , ಹಾವೇರಿ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ಅನಿತಾ ಮಂಜಯ್ಯ ಚಾವಡಿ |
ಮಕ್ಕಳು | ವಿಸ್ಮಯಿ ಮತ್ತು ಭವಿಷ್ |
ವೃತ್ತಿ | Social Worker
Businessman |
ಮಂಜಯ್ಯ ಚಾವಡಿ ಅವರು 1990 ರ ಜನವರಿ 14ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸಣ್ಣಸಂಗಾಪುರ ಚಾವಡಿ ಕುಟುಂಬ ಒಂದರಲ್ಲಿ ಜನಿಸಿದರು. ತಂದೆ ಮಹೇಶ್ವರಯ್ಯ ಹಾಗೂ ತಾಯಿ ಸುಮಿತ್ರಾ ಪ್ರೀತಿಯ ಆಸರೆಯಲ್ಲಿ ಬೆಳೆದರು.
ಶಿಕ್ಷಣ
[ಬದಲಾಯಿಸಿ]1 ರಿಂದ 5ನೇ ತರಗತಿಯವರೆಗೆ ಸ್ವಗ್ರಾಮ ಸಣ್ಣಸಂಗಾಪುರ ಗ್ರಾಮದಲ್ಲಿ, 6 ರಿಂದ 7 ನೇ ತರಗತಿಯವರೆಗೆ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ, 8 ರಿಂದ 10 ನೇ ತರಗತಿಯವರೆಗೆ ನಂದಿಗುಡಿಯ ಬೃಹನ್ಮಠದಲ್ಲಿ, ಪಿಯುಸಿ ಶಿಕ್ಷಣವನ್ನು ಹೊನ್ನಾಳಿಯ ಹಿರೇಕಲ್ಲಠದಲ್ಲಿದ್ದು ಪೂರೈಸಿದ್ದಾರೆ. ಬಿಎ (ಪತ್ರಿಕೋದ್ಯಮ) ಶಿಕ್ಷಣವನ್ನು ಬೆಂಗಳೂರಿನ ಕೆ.ಆರ್. ಪುರಂನ ಸರಕಾರಿ ಪದವಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಬಡತನದ ಹಿನ್ನೆಲೆಯಲ್ಲಿ ಪಿಯುಸಿ ಓದುತ್ತಿರುವಾಗಲೇ ಡಾಭಾ, ಹೋಟೆಲ್, ಲಾಡ್ಜ್, ಬಂಕ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ ಬೆಂಗಳೂರಿನಲ್ಲಿ ಗ್ಯಾಸ್ ಲೈಟರ್ ಮಾರಾಟ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಅಯೋಧ್ಯೆ ಪಾದಯಾತ್ರೆ
[ಬದಲಾಯಿಸಿ]2019 ಆಗಸ್ಟ್ನಲ್ಲಿ ಬೆಂಗಳೂರಿನ ಹೂಡಿ ಗ್ರಾಮದಿಂದ ಉತ್ತರ ಪ್ರದೇಶದ ಅಯೋಧ್ಯೆವರೆಗೆ ತಲೆಯ ಮೇಲೆ ಇಟ್ಟಿಗೆ ಹೊತ್ತು ಪಾದಯಾತ್ರೆ ಮಾಡಿದ್ದ ರಾಮಭಕ್ತ ಮಂಜಯ್ಯ ಚಾವಡಿ ಮತ್ತವರ ತಂಡ. ಅಯೋಧ್ಯೆಯಲ್ಲಿ 500 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮರ ಮಂದಿರ ನಿರ್ಮಾಣ ಆಗಬೇಕು ಎಂದು ಒತ್ತಾಯಿಸಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಹಾಗೂ ಉತ್ತರ ಪ್ರದೇಶದ ಮೂಲಕ 66 ದಿನಗಳಲ್ಲಿ 2,060 ಕಿ.ಮೀ. ಪಾದಯಾತ್ರೆ ಮಾಡಿದ್ದರು ಮಂಜಯ್ಯ ಚಾವಡಿ ಅವರು ಯಾತ್ರೆ ಮುಗಿಸಿದ 18 ದಿನಗಳಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿತ್ತು. ಹಿಂದುಗಳ ಪರ ಬಂದಿದ್ದ ತೀರ್ಪು ಕೋಟ್ಯಾನುಕೋಟಿ ಜನರನ್ನು ಸಂತೋಷದಲ್ಲಿ ತೇಲಿಸಿತ್ತು.
ಪವಿತ್ರ ಕೆಲಸಕ್ಕೆ ಜತೆಯಾದವರು: ಅಯೋಧ್ಯೆವರೆಗೆ ಪಾದಯಾತ್ರೆ ಮಾಡಬೇಕು ಎಂಬ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ನಂತರ ಮಂಜಯ್ಯ ಚಾವಡಿಗೆ ಸಾಥ್ ನೀಡಿದ್ದು ಕೇಬಲ್ ಮಂಜುನಾಥ್, ಕೆ.ಡಿ. ವೆಂಕಟೇಶ್, ಆರ್. ವೇಣು, ಮುನಿಕೃಷ್ಣ, ಆಂಜಿ, ರಕ್ಷಿತ್, ಜಯಮ್ಮ, ಪ್ರೇಮಮ್ಮ, ರಾಜೇಶ್ವರಿ ಅಮ್ಮ, ಚೈತ್ರಾ, ಶೋಭಕ್ಕ ಸಹಕಾರ ನೀಡಿದರು. ನಗರಾಭಿವೃದಿಟಛಿ ಸಚಿವ ಬೈರತಿ ಬಸವರಾಜ್ ಪತ್ನಿ ಪದ್ಮಾವತಿ ಕೂಡ ಒಂದು ದಿನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಾಜಪಾಳ್ಯ ಮತ್ತು ತಿಗಳರಪಾಳ್ಯದ ಗ್ರಾಮಸ್ಥರು ಮತ್ತು ಹರಿಕೃಷ್ಣ ಯಾದವ್, ಶ್ರೀನಿವಾಸರಾಜು
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ]- ಕರುನಾಡ ಭೂಷಣ ಪ್ರಶಸ್ತಿ (2019) ಗೋವಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿರುವ ಹೊರನಾಡು ಕನ್ನಡಿಗರ ಸಾಂಸ್ಕೃತಿಕ ಸಂಭ್ರಮ ಕಾಠ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಶಿಕ್ಷಣ, ಧಾರ್ಮಿಕ, ಸಾಮಾಜಿಕ ಸೇವೆ ಮಾಡುವ ಮೂಲಕ ಗುರುತಿಸಿಕೊಂಡಿದ್ದರು.ರಾಮಮಂದಿರ ನಿರ್ಮಾಣದ ಸಲುವಾಗಿಬೆಂಗಳೂರಿನಿಂದ ಅಯೋಧ್ಯೆವರೆಗೆ 2500 ಕಿಮೀ ಪಾದಯಾತ್ರೆ ಕೈಗೊಂಡಿದ್ದರು.
- ರಾಜ್ಯೋತ್ಸವ ಪ್ರಶಸ್ತಿ(2020)ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಜಾಗೃತಿ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನಿಡಲಾಯಿತು.