ಜಾಮಾ ಮಸೀದಿ, ಮಥುರಾ
ಗೋಚರ
ಜಾಮಾ ಮಸೀದಿ (ಹಿಂದಿ:जामा मस्जिद, ಉರ್ದು: جامع مسجد) ಭಾರತದ ಉತ್ತರ ಪ್ರದೇಶ ರಾಜ್ಯದ ಮಥುರಾದಲ್ಲಿದೆ. ಇದರ ಕೆಲಸವನ್ನು ಔರಂಗಜೇಬ್ನ ಪ್ರಾಂತಾಧಿಪತಿಯಾಗಿದ್ದ ಅಬ್ದ್-ಉನ್-ನಬಿ ೧೬೬೨ರಲ್ಲಿ ಪೂರ್ಣಗೊಳಿಸಿದನು.[೧]
ಅಬ್ದುನ್-ಉನ್-ನಬಿ ಖಾನ್ ಈ ಮಸೀದಿಯ ತಾಣವಾಗಿ ಆಯ್ಕೆ ಮಾಡಿದ ನೆಲವನ್ನು ಕೆಲವು ಕಟುಕರಿಂದ ಖರೀದಿಸಿದನು. ಉಳಿದದ್ದನ್ನು ಕಾಜ಼ಿಗಳ ಒಂದು ಕುಟುಂಬದಿಂದ ಪಡೆದನು. ಅವರ ವಂಶಸ್ಥರು ಈಗಲೂ ಕುಸ್ಕ್ ಮಹಲ್ಲಾ ಎಂದು ಕರೆಯಲ್ಪಡುವ ಪ್ರದೇಶದ ಸ್ವಾಧೀನ ಪಡೆದಿದ್ದಾರೆ.
ವಾಸ್ತುಕಲೆ
[ಬದಲಾಯಿಸಿ]ಮಸೀದಿಯಲ್ಲಿ ನಾಲ್ಕು ಸ್ತಂಭಗೋಪುರಗಳಿವೆ. ಪ್ರತಿಯೊಂದು 40 ಮೀ (132 ಅಡಿ) ಎತ್ತರವಿದೆ, ಮತ್ತು ಒಂದು ಪ್ರಾಂಗಣವು ರಸ್ತೆಯ ಮಟ್ಟಕ್ಕಿಂತ ಎತ್ತರಕ್ಕಿದೆ. ಮುಂಭಾಗವು ಎರಡೂ ಕಡೆಗಳಲ್ಲಿ ಪರ್ಷಿಯನ್ ಶಾಸನಗಳೊಂದಿಗೆ ಅಲ್ಲಾಹನ ತೊಂಬತ್ತೊಂಬತ್ತು ಹೆಸರುಗಳನ್ನು ಹೊಂದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Visiting the Jama Masjid". Times of India Travel. Retrieved 2019-11-05.