ನೋಹ್‍ಕಲಿಕಾಯ್ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೋಹ್‍ಕಲಿಕಾಯ್ ಜಲಪಾತವು ಭಾರತದಲ್ಲಿನ ಅತಿ ಎತ್ತರದ ಧುಮುಕು ಜಲಪಾತವಾಗಿದೆ.[೧] ಇದರ ಎತ್ತರ 1115 ಅಡಿಯಷ್ಟಾಗಿದೆ.[೨] ಈ ಜಲಪಾತವು ಭೂಮಿಯ ಮೇಲಿನ ಅತ್ಯಂತ ಒದ್ದೆ ಸ್ಥಳಗಳಲ್ಲಿ ಒಂದಾದ ಚಿರಾಪುಂಜಿ ಹತ್ತಿರ ಸ್ಥಿತವಾಗಿದೆ. ಒಂದು ತುಲನಾತ್ಮಕವಾಗಿ ಸಣ್ಣ ಪ್ರಸ್ಥಭೂಮಿಯ ಶಿಖರದ ಮೇಲೆ ಸಂಗ್ರಹಗೊಳ್ಳುವ ಮಳೆನೀರು ನೋಹ್‍ಕಲಿಕಾಯ್ ಜಲಪಾತಕ್ಕೆ ನೀರುಣಿಸುತ್ತದೆ. ಈ ನೀರು ಡಿಸೆಂಬರ್ - ಫ಼ೆಬ್ರುವರಿ ನಡುವಿನ ಶುಷ್ಕ ಋತುವಿನಲ್ಲಿ ಕಡಿಮೆಯಾಗುತ್ತದೆ. ಜಲಪಾತದ ಕೆಳಗೆ ಅಸಾಮಾನ್ಯ ಹಸಿರು ಬಣ್ಣದ ನೀರಿರುವ ಧುಮುಕು ಕೊಳವು ರೂಪಗೊಂಡಿದೆ.[೩]

ಉಲ್ಲೇಖಗಳು[ಬದಲಾಯಿಸಿ]

  1. "Nohkalikai Falls". World Waterfall Database. Archived from the original on 2012-07-26. Retrieved 2012-05-06.
  2. "Nohkalikai Falls". World Waterfall Database. Retrieved 2007-12-18.
  3. Gatis Pāvils (2010-08-28). "Nohkalikai Falls". Wondermondo. Retrieved 2010-08-29.