ವಿಷಯಕ್ಕೆ ಹೋಗು

ಕಾಂಗ್ಲಾ ಅರಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಫಾಲ್‍ನಲ್ಲಿನ ಕಾಂಗ್ಲಾ ಕೋಟೆಯ ಮುಖ್ಯ ಪ್ರವೇಶದ್ವಾರ.

ಕಾಂಗ್ಲಾ ಅರಮನೆಯು ಭಾರತದ ಮಣಿಪುರ ರಾಜ್ಯದ ಇಂಫಾಲನಲ್ಲಿರುವ ಒಂದು ಹಳೆಯ ಅರಮನೆಯಾಗಿದೆ. ಹಿಂದೆ ಇದು ಇಂಫಾಲ್ ನದಿಯ ದಡದ ಎರಡೂ ಕಡೆಗೆ (ಪಶ್ಚಿಮ ಮತ್ತು ಪೂರ್ವ) ಸ್ಥಿತವಾಗಿತ್ತು. ಆದರೆ ಈಗ ಇದು ಕೇವಲ ದಡದ ಪಶ್ಚಿಮ ಬದಿಯಲ್ಲಿ ಉಳಿದುಕೊಂಡಿದೆ. ಈಗ ಕೇವಲ ಅವಶೇಷಗಳು ಉಳಿದಿವೆ. ಹಳೆ ಮೀಟೇಯ್ ಭಾಷೆಯಲ್ಲಿ ಕಾಂಗ್ಲಾ ಎಂದರೆ "ಶುಷ್ಕ ಭೂಮಿ". ಇದು ಮಣಿಪುರ್‌ನ ಹಿಂದಿನ ಮೇಯ್ಟೇಯ್ ಅರಸರ ಸಾಂಪ್ರದಾಯಿಕ ಪೀಠವಾಗಿತ್ತು.

ಕಾಂಗ್ಲಾ ಮಣಿಪುರದ ಅತ್ಯಂತ ಮಹತ್ವದ ಐತಿಹಾಸಿಕ ಮತ್ತು ಪುರಾತತ್ವ ತಾಣವಾಗಿದೆ. ಮಣಿಪುರ ರಾಜ್ಯವನ್ನು ಕಾಂಗ್ಲಾದಲ್ಲಿ ಸ್ಥಾಪಿಸಿ ಅಭಿವೃದ್ಧಿಪಡಿಸಲಾಯಿತು.

ಕಾಂಗ್ಲಾ ಕೋಟೆಯ ಬೆಳವಣಿಗೆಯಲ್ಲಿನ ಪ್ರಧಾನ ಹೆಗ್ಗುರುತುಗಳನ್ನು ರಾಜ ಖಾಗೆಂಬಾ (ಕ್ರಿ.ಶ. 1597–1652) ನಿರ್ಮಿಸಿದನು. ಕ್ರಿ.ಶ. ೧೬೩೨ರಲ್ಲಿ, ಖಾಗೆಂಬಾ ಕಾಂಗ್ಲಾ ಕೋಟೆಯ ಪಶ್ಚಿಮ ದ್ವಾರದಲ್ಲಿ ಇಟ್ಟಿಗೆಯ ಒಂದು ಗೋಡೆಯನ್ನು ಕಟ್ಟಿಸಿದನು ಎಂದು ರಾಜವಂಶದ ಐತಿಹಾಸಿಕ ದಾಖಲೆಯು ಹೇಳುತ್ತದೆ. ಖಾಗೆಂಬಾನ ಮಗ ಖುಂಜಾವೋಬಾ ಕೋಟೆಯ ರಕ್ಷಣಾ ವ್ಯವಸ್ಥೆ ಮತ್ತು ಸುಂದರೀಕರಣ ಕಾರ್ಯವನ್ನು ಸುಧಾರಿಸಿದನು.

ಹೊರಗಿನ ಕೊಂಡಿಗಳು

[ಬದಲಾಯಿಸಿ]