ಜೈ ವಿಲಾಸ್ ಮೆಹೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೈ ವಿಲಾಸ್ ಮೆಹೆಲ್ (ಹಿಂದಿ: जय विलास महल) ಗ್ವಾಲಿಯರ್‌ನಲ್ಲಿರುವ ಹತ್ತೊಂಭತ್ತನೇ ಶತಮಾನದ ಅರಮನೆಯಾಗಿದೆ. ಇದನ್ನು ಗ್ವಾಲಿಯರ್‌ನ ಮಹಾರಾಜ ಮಹಾರಾಜಾಧಿರಾಜ ಶ್ರೀಮಂತ್ ಜಯಾಜಿರಾವ್ ಸಿಂದಿಯಾ ಅಲಿಜಾ ಬಹಾದುರ್ ೧೮೭೪ರಲ್ಲಿ ಸ್ಥಾಪಿಸಿದರು.[೧] ಈಗ ಅರಮನೆಯ ಪ್ರಮುಖ ಭಾಗವು ೧೯೬೪ರಲ್ಲಿ ಸಾರ್ವಜನಿಕರಿಗೆ ತೆರೆದ "ಜೀವಾಜಿರಾವ್ ಸಿಂದಿಯಾ ಸಂಗ್ರಹಾಲಯ"ವಾಗಿದೆಯಾದರೂ, ಅದರ ಒಂದು ಭಾಗ ಈಗಲೂ ಹಿಂದಿನ ಮರಾಠಾ ಸಿಂದಿಯಾ ರಾಜವಂಶದ ವಂಶಸ್ಥರ ನಿವಾಸವಾಗಿದೆ.

ಇದು ಐರೋಪ್ಯ ವಾಸ್ತುಕಲೆಯ ಉತ್ತಮ ಉದಾಹರಣೆಯಾಗಿದೆ. ಇದನ್ನು ಸರ್ ಮೈಕಲ್ ಫ಼ಿಲೋಸ್ ವಿನ್ಯಾಸಗೊಳಿಸಿ ನಿರ್ಮಿಸಿದರು. ಇದು ವಾಸ್ತುಕಲಾ ಶೈಲಿಗಳ ಸಂಯೋಜನೆಯಾಗಿದೆ. ಮೊದಲ ಮಹಡಿಯು ಟಸ್ಕನ್ ಶೈಲಿಯದ್ದು, ಎರಡನೆ ಮಹಡಿಯು ಇಟ್ಯಾಲಿಯನ್-ಡೋರಿಕ್ ಶೈಲಿಯದ್ದು ಮತ್ತು ಮೂರನೆಯದ್ದು ಕೊರಿಂಥಿಯನ್ ಶೈಲಿಯದ್ದು. ಜೈ ವಿಲಾಸ್ ಅರಮನೆಯು ವಿಶೇಷವಾಗಿ ಅದರ ದೊಡ್ಡ ದರ್ಬಾರ್ ಹಜಾರಕ್ಕೆ ಪ್ರಸಿದ್ಧವಾಗಿದೆ. ದರ್ಬಾರ್ ಹಜಾರದ ಒಳಭಾಗವು ಗಿಲೀಟು ಮತ್ತು ಚಿನ್ನದ ಸಜ್ಜುಗಳಿಂದ ಅಲಂಕೃತವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]