ವಿಷಯಕ್ಕೆ ಹೋಗು

ಪ್ರೀತಿ ಶುಭಚಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೀತಿ ಶುಭಚಂದ್ರ
ಜನನ
ಪ್ರೀತಿ

1 ಸೆಪ್ಟೆಂಬರ್, 1957
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಪ್ರಾಧ್ಯಾಪಕಿ, ಕವಯತ್ರಿ, ಲೇಖಕಿ, ವಿಮರ್ಶಕಿ

ಡಾ. ಪ್ರೀತಿ ಶುಭಚಂದ್ರ (ಆಂಗ್ಲ:Preeti Shubhachandra - 1 ಸೆಪ್ಟೆಂಬರ್, 1957), ವಿಮರ್ಶಕಿಯಾಗಿ, ಲೇಖಕಿಯಾಗಿ, ಮಹಿಳಾವಾದಿಯಾಗಿ ಹೆಸರು ಮಾಡಿದವರು. ವರ್ತಮಾನದ ಮಹಿಳಾ ಸಂವೇದನೆ ಅವರ ಬರಹಗಳ ಮೂಲಸೆಲೆ. ವಚನ ಸಾಹಿತ್ಯ ಮತ್ತು ಜೈನ ಸಾಹಿತ್ಯ ಅವರ ಆಸಕ್ತಿ. ಕಾವ್ಯಾನಂದ ಪುರಸ್ಕಾರ, ಜೈನ ಮಹಾಸಮ್ಮೇಳನದ ಉನ್ನತಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಪ್ರೀತಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ 50 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದವರು ಪ್ರೀತಿ.[]

ಸಾಹಿತ್ಯ ವಲಯದಲ್ಲಿ

[ಬದಲಾಯಿಸಿ]

ಪ್ರಾಧ್ಯಾಪಕರಾಗಿ 'ಪ್ರೀತಿ ಶ್ರೀಮಂಧರ್ ಕುಮಾರ್' ಎನಿಸಿದ್ದರೆ, ಸಾಹಿತ್ಯ ಲೋಕದಲ್ಲಿ 'ಪ್ರೀತಿ ಶುಭಚಂದ್ರ' ಎಂದೇ ಪರಿಚಿತರು. ಸೃಜನಶೀಲ ಬರಹಗಳಷ್ಟೇ ಅಲ್ಲದೆ, ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಸ್ತ್ರೀಸಮಾನತೆ, ಸ್ತ್ರೀಪರ ಜೀವನಪ್ರೀತಿ ಅವರ ಬರಹಗಳ ಪ್ರಮುಖ ಕಾಳಜಿ.[][] ಸ್ತ್ರೀವಾದವನ್ನು ಅವರು ಹೀಗೆ ಅರ್ಥೈಸುತ್ತಾರೆ:

"ಸ್ತ್ರೀವಾದ ಎನ್ನುವುದು ಕೇವಲ ನಿರ್ದಿಷ್ಟ ತಾತ್ತ್ವಿಕ ಆಕಾರದೊಳಗೆ ಮಿತಿಗೊಳಿಸಿ ಇಡಲಾಗದು. ಸ್ತ್ರೀವಾದವು ಎಲ್ಲ ಕಾಲ, ದೇಶ, ಸಂಸ್ಕೃತಿಯ ಸ್ತ್ರೀಯರಿಗೆ ಏಕರೂಪವಾಗಿ ಅನ್ವಯಿಸುವಂತಹ ಅಮೂರ್ತ ತತ್ವವಲ್ಲ. ಸ್ತ್ರೀವಾದವು ನವ್ಯವಾದುದು. ನಿರಂತರವಾಗಿ ಬದಲಾಗುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ವಾಸ್ತವಿಕತೆಯ ಆಧಾರದ ಮೇಲೆ ಸ್ತ್ರೀವಾದ ನಿಂತಿದೆ"
- ಪ್ರೀತಿ ಶುಭಚಂದ್ರ ಅವರ ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು ಕೃತಿಯಿಂದ.

ಸ್ತ್ರೀ ಪುರುಷರ ಸಂಬಂಧವನ್ನು ಸಿದ್ಧಉಪಮೆಗಳಿಂದ ಹೇಳುವ ಯಾವ ಬಗೆಯನ್ನು ಅವರು ಒಪ್ಪುವುದಿಲ್ಲ. 'ವೀಣೆ-ವೈಣಿಕ', 'ನದಿ-ಸಾಗರ' ಇಂತಹ ಹೋಲಿಕೆಗಳು ಮತ್ತೊಂದು ಬಗೆಯಲ್ಲಿ ಅಸಮಾನತೆಯನ್ನೇ ಮುಂದಿಡುತ್ತವೆ ಎಂಬುದು ಅವರ ನಿಲುವು. ಮಹಿಳಾವಾದವು ಪಠ್ಯಕ್ರಮದ ಭಾಗವಾಗಬೇಕು ಎಂಬುದು ಅವರ ಆಶಯ.[]

ಕೃತಿಗಳು

[ಬದಲಾಯಿಸಿ]
  • ಇಪ್ಪತ್ತನೇ ಶತಮಾನದ ವಚನ ಸಾಹಿತ್ಯ: ಒಂದು ಅಧ್ಯಯನ. - ಪಿ ಎಚ್. ಡಿ. ಸಂಶೋಧನಾ ಪ್ರಬಂಧ.
  • ಸೃಜನೆಯ ಮೂಡು .(ಮಹಿಳಾ ಕೇಂದ್ರಿತ ಲೇಖನಗಳ ಸಂಕಲನ)
  • ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು.
  • ಕನ್ನಡಿ-ಕೈದೀವಿಗೆ .(ಪುಸ್ತಕಗಳ ವಿಮರ್ಶಾ ಸಂಕಲನ).
  • ಸಾಕಾರದತ್ತ ಸಮಾನತೆಯ ಕನಸು. (ಮಹಿಳಾ ಪ್ರತಿರೋಧದ ನೆಲೆಗಳು ಸಂಪಾದಿತ ಕೃತಿ)
  • ಶಾಂತಿನಾಥ ದೇಸಾಯಿ (ಜೀವನ ಮತ್ತು ಸಾಧನೆ).
  • ಶ್ರೀಕುಂದ ಕುಂದಾಚಾರ್ಯರು.

ಪುರಸ್ಕಾರಗಳು

[ಬದಲಾಯಿಸಿ]
  • ಸಿದ್ದಯ್ಯ ಪುರಾಣಿಕ ಸ್ಮಾರಕ ಕಾವ್ಯಾನಂದ ಪ್ರಶಸ್ತಿ[]
  • ಪ್ರೊ. ಸ. ಸ. ಮಾಳವಾಡ ಪ್ರಶಸ್ತಿ[]
  • ಕನ್ನಡ ಸಾಹಿತ್ಯ ಪರಿಷತ್ತಿನ ಗೌರಮ್ಮ ಹಾರಳ್ಳಿ ದತ್ತಿ ಬಹುಮಾನ[]
  • ಶ್ರೀಮತಿ ಕಳಂತೆ ಅಕ್ಕಾ ಸ್ತ್ರೀ ಉನ್ನತಿ ಪ್ರಶಸ್ತಿ, ದಕ್ಷಿಣ ಭಾರತ ಜೈನ ಮಹಾಸಮ್ಮೇಳನ[]
  • ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ[]
  • ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ[]

ಉಲ್ಲೇಖಗಳು

[ಬದಲಾಯಿಸಿ]
  1. Manjunathaswamy K. (1 May 2016). "ಅಧ್ಯಯನ ಸಂಸ್ಥೆಯ ಮೊದಲ ಮಹಿಳಾ ನಿರ್ದೇಶಕಿ ಪ್ರೀತಿ ಶುಭಚಂದ್ರ" [Preethi Shubhachandra:The first female director of Kuvempu Institute of Kannada Studies]. Vijayakarnataka.com (in Kannada). Retrieved 15 September 2020.{{cite news}}: CS1 maint: unrecognized language (link)
  2. "ಸ್ತ್ರೀಪರ ಲೇಖಕಿ ಪ್ರೀತಿ ಶುಭಚಂದ್ರ". aayaama.com. Retrieved 16 September 2020.
  3. "ಯೋಚನೆಗಳಲ್ಲಿ ಬದಲಾವಣೆಯಾದರೆ ಮಹಿಳೆಯರ ಮೇಲಿನ ದೌರ್ಜನ್ಯ ಇಳಿಕೆಯಾಗುವುದು:ಪ್ರೀತಿ ಶುಭಚಂದ್ರ". The Hindu.
  4. "ಮಹಿಳಾವಾದ ಪಠ್ಯಕ್ರಮದ ಭಾಗವಾಗಬೇಕು:ಪ್ರೀತಿಶುಭಚಂದ್ರ". Prajavani.com. Archived from the original on 2016-06-24. Retrieved 2020-08-29.
  5. ೫.೦ ೫.೧ ೫.೨ ೫.೩ ೫.೪ "ಸಾಹಿತಿ ಪ್ರೀತಿ ಶುಭಚಂದ್ರ". bookbrahma.com. Retrieved 16 September 2020.
  6. "ಪ್ರೀತಿ ಶುಭಚಂದ್ರಗೆ ಗೊಮ್ಮಟೇಶ್ವರ ಪ್ರಶಸ್ತಿ". Deccanherald.com.