ರುಮಾಲಿ ರೋಟಿ
ಮಂಡಾ ಎಂದೂ ಕರೆಯಲ್ಪಡುವ ರುಮಾಲಿ ರೋಟಿ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ತೆಳುವಾದ ಚಪಾತಿಯಂಥ ಖಾದ್ಯವಾಗಿದೆ. ಇದು ಭಾರತ ಮತ್ತು ಪಾಕಿಸ್ತಾನದ ಪಂಜಾಬ್ನಲ್ಲಿ ಜನಪ್ರಿಯವಾಗಿದೆ. ಇದನ್ನು ತಂದೂರಿ ಖಾದ್ಯಗಳೊಂದಿಗೆ ತಿನ್ನಲಾಗುತ್ತದೆ. ರುಮಾಲ್ ಶಬ್ದದ ಅರ್ಥ ಕರವಸ್ತ್ರ, ಮತ್ತು ಹಾಗಾಗಿ ರುಮಾಲಿ ರೋಟಿ ಎಂದರೆ ಕರವಸ್ತ್ರದಂಥ ಖಾದ್ಯ. ಪಂಜಾಬ್ನಲ್ಲಿ, ಇದನ್ನು ಲಂಬೂ ರೋಟಿ ಎಂದೂ ಕರೆಯಲಾಗುತ್ತದೆ. ಪಂಜಾಬಿಯಲ್ಲಿ ಲಂಬೂ ಶಬ್ದದ ಅರ್ಥ ಉದ್ದನೆಯ.
ಈ ಖಾದ್ಯವು ಬಹಳ ತೆಳು ಹಾಗೂ ಮಣಿಯುವಂಥದ್ದಾಗಿರುತ್ತದೆ. ಇದನ್ನು ಕರವಸ್ತ್ರದಂತೆ ಮಡಚಿ ಬಡಿಸಲಾಗುತ್ತದೆ.
ರುಮಾಲಿ ರೋಟಿಯನ್ನು ಸಾಮಾನ್ಯವಾಗಿ ಗೋಧಿ ಹಿಟ್ಟು ಮತ್ತು ಮೈದಾ ಹಿಟ್ಟಿನ ಸಂಯೋಜನೆಯೊಂದಿಗೆ ತಯಾರಿಸಲಾಗುತ್ತದೆ. ಇದನ್ನು ಕಡಾಯಿಯ ಪೀನ ಬದಿಯ ಮೇಲೆ ಬೇಯಿಸಲಾಗುತ್ತದೆ.
ಬೌದ್ಧ ಕಾಲದ ಉತ್ತರಾರ್ಧದಲ್ಲಿ, ಇಂದು ಮಂಡೆ ಅಥವಾ ಮಂಡಾ ಅಥವಾ ಪೂರಣ್ ಪೋಳಿ ಎಂದು ಪರಿಚಿತವಿರುವ ಮಂಡಕವು ಸಿಹಿಯಾದ ಬೇಳೆ ಪೇಸ್ಟ್ನ್ನು ತುಂಬಿಸಲಾದ ದೊಡ್ಡದಾದ ಪರಾಠಾ ಖಾದ್ಯವಾಗಿತ್ತು ಮತ್ತು ತಲೆಕೆಳಗಾಗಿಸಿದ ಬಾಣಲೆಯ ಮೇಲೆ ಬೇಯಿಸಲಾಗುತ್ತಿತ್ತು.[೧] ರುಮಾಲಿ ರೋಟಿ ಅದರ ಸಾದಾ ರೂಪವಾಗಿದೆ.
-
ರುಮಾಲಿ ರೋಟಿಯನ್ನು ತಯಾರಿಸುತ್ತಿರುವ ಬಾಣಸಿಗ
-
ರುಮಾಲಿ ರೋಟಿ
ಉಲ್ಲೇಖಗಳು
[ಬದಲಾಯಿಸಿ]- ↑ Achaya K. T. (1994). "Indian Food Tradition A Historical Companion". Retrieved 2019-01-31.