ಗಟ್ಟಿಮೇಳ (ಧಾರಾವಾಹಿ)
ಗಟ್ಟಿಮೇಳ (ಧಾರಾವಾಹಿ) | |
---|---|
Gattimela Serial Title Card.jpg | |
ಶೈಲಿ | ಕೌಟುಂಬಿಕ, ನಾಟಕೀಯ |
ಬರೆದವರು | ನಿಶ್ಚಿತಾ ಶರತ್, ಸೃಜನ್ ರಾಘವೇಂದ್ರ |
ನಿರ್ದೇಶಕರು | ಯತೀಶ್ ಎನ್.ಎಂ.ಎಸ್.ಗೌಡ |
ನಟರು | ನಿಶಾ ರವಿಕೃಷ್ಣನ್ ರಕ್ಷ್ ಗೌಡ ಸುಧಾ ನರಸಿಂಹರಾಜು ಅಭಿಷೇಕ್ ದಾಸ್ ಅಶ್ವಿನಿ ಮತ್ತು ಇತರರು |
ನಿರೂಪಣಾ ಸಂಗೀತಕಾರ | ಮಣಿಕಾಂತ್ ಕದ್ರಿ |
ನಿರೂಪಣಾ ಗೀತೆ | ಗಟ್ಟಿಮೇಳ ಇದು ಗಟ್ಟಿಮೇಳ |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ಒಟ್ಟು ಸರಣಿಗಳು | 1 |
ಒಟ್ಟು ಸಂಚಿಕೆಗಳು | 1188 (13 ಅಕ್ಟೋಬರ್,2023 ರ ವರೆಗೆ) |
ನಿರ್ಮಾಣ | |
ಕಾರ್ಯನಿರ್ವಾಹಕ ನಿರ್ಮಾಪಕ(ರು) | ಗಣಪತಿ ಭಟ್ |
ನಿರ್ಮಾಪಕ(ರು) | ರಕ್ಷ್ - ಅನುಷಾ ಶಿವಪ್ರಸಾದ್ |
ಸಂಕಲನಕಾರರು | ಲೋಕೇಶ್ |
ಛಾಯಾಗ್ರಹಣ | ಕುಮಾರ್ ಮಂಡ್ಯ |
ಕ್ಯಾಮೆರಾ ಏರ್ಪಾಡು | ಬಹು ಕ್ಯಾಮೆರಾ |
ಸಮಯ | 20-22 ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | ಶ್ರೀ ಸಾಯಿ ಆಂಜನೇಯ ಕಂಪೆನಿ |
ಪ್ರಸಾರಣೆ | |
ಮೂಲ ವಾಹಿನಿ | ಝಿ ಕನ್ನಡ |
ಚಿತ್ರ ಶೈಲಿ | 576i SD 1080 HD |
Original airing | 11 ಮಾರ್ಚ್ 2019 - ಪ್ರಸ್ತುತ |
ಗಟ್ಟಿಮೇಳ ಎಂಬುದು 2019 ರ ಭಾರತೀಯ ಕನ್ನಡ ಭಾಷೆಯ ದೂರದರ್ಶನ ದೈನಂದಿನ ಧಾರಾವಾಹಿಯಾಗಿದ್ದು ಅದು ಝೀ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಈ ಧಾರಾವಾಹಿಯನ್ನು ಕೋರಮಂಗಲ ಅನಿಲ್ ನಿರ್ದೇಶಿಸಿದ್ದಾರೆ ಮತ್ತು ಜೋನಿ ಹರ್ಷ ನಿರ್ಮಿಸಿದ್ದಾರೆ. ಇದು ಮಾರ್ಚ್ 11, 2019 ರಂದು ಪ್ರಥಮ ಪ್ರದರ್ಶನಗೊಂಡಿದ್ದು, ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8:00ಕ್ಕೆ ಪ್ರಸಾರವಾಗುತ್ತದೆ. [೧] ಈ ಪ್ರದರ್ಶನವು ತಮಿಳು ಧಾರಾವಾಹಿ 'ಪೂವೇ ಪೂಚುದವ'ದ ರಿಮೇಕ್ ಆಗಿದೆ, ಇದು ಝೀ ತಮಿಳು ವಾಹಿನಿಯಲ್ಲಿ[೨] ಪ್ರಸಾರವಾಗಿತ್ತು. ಈ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ರಕ್ಷ್, ನಿಶಾ ರವಿಕೃಷ್ಣನ್ ನಟಿಸಿದ್ದಾರೆ. ಗಟ್ಟಿಮೇಳ 2020ರಲ್ಲಿ ಕನ್ನಡ ದೂರದರ್ಶನದಲ್ಲಿ ಅತಿಹೆಚ್ಚು ವೀಕ್ಷಿಸಿದ ದೈನಂದಿನ ಧಾರಾವಾಹಿಯಾಗಿದೆ. [೩]
ಪಾತ್ರವರ್ಗ
[ಬದಲಾಯಿಸಿ]- ವೇದಾಂತ್ ವಸಿಷ್ಠ ಪಾತ್ರದಲ್ಲಿ ರಕ್ಷ್ ಗೌಡ
- ಅಮೂಲ್ಯ ಮಂಜುನಾಥ್ ಆಗಿ ನಿಶಾ ರವಿಕೃಷ್ಣನ್
- ಪರಿಮಳ ಪಾತ್ರದಲ್ಲಿ ಸುಧಾ ನರಸಿಂಹರಾಜು
- ವಿಕ್ರಾಂತ್ ವಸಿಷ್ಠ ಪಾತ್ರದಲ್ಲಿ ಅಭಿಷೇಕ್ ದಾಸ್
- ಆರತಿ ಮಂಜುನಾಥ್ ಆಗಿ ಅಶ್ವಿನಿ
- ಆದಿತಿ ಮಂಜುನಾಥ್ ಆಗಿ ಪ್ರಿಯಾ ಆಚಾರ್
- ಅಂಜಲಿ (ಅಂಜು) ಪಾತ್ರದಲ್ಲಿ ಮಹತಿ ಭಟ್
- ಸಾರ್ಥಕ್ ಅಶ್ವಥ್ ಪಾತ್ರದಲ್ಲಿ ಗಿರೀಶ್ ಬೆಟ್ಟಪ್ಪ
- ಆದ್ಯ ಸಾರ್ಥಕ್ ಆಗಿ ಅನ್ವಿತಾ ಸಾಗರ್
- ಸಾರಿಕಾ ಅಶ್ವಥ್ ಪಾತ್ರದಲ್ಲಿ ರಶ್ಮಿತಾ ಚಂಗಪ್ಪ
- ಸಾಹಿತ್ಯ ಆಗಿ ಶರಣ್ಯ ಶೆಟ್ಟಿ
- ಕಾಂತ ಆಗಿ ರವಿಚಂದ್ರ
- ಧ್ರುವ ಪಾತ್ರದಲ್ಲಿ ರಂಜನ್ ಸನತ್
- ಪರಮಾನಂದ ಪಾತ್ರದಲ್ಲಿ ಲಯ ಕೋಕಿಲಾ
ಜನಪ್ರಿಯತೆ
[ಬದಲಾಯಿಸಿ]ಈ ಧಾರಾವಾಹಿಯನ್ನು ದೂರದರ್ಶನ ಪ್ರೇಕ್ಷಕರು ವ್ಯಾಪಕವಾಗಿ ಸ್ವೀಕರಿಸಿದ್ದಾರೆ. ಈ ಧಾರಾವಾಹಿಯು ನಿಯಮಿತವಾಗಿ ಟಾಪ್ 5 ಕನ್ನಡ ಕಾರ್ಯಕ್ರಮಗಳ ಟಿಆರ್‌ಪಿ ರೇಟಿಂಗ್‌ನ ಅಗ್ರಸ್ಥಾನದಲ್ಲಿದೆ [೫] [೬] [೭] . COVID-19 ಕಾರಣ ೨೦೨೦ರಲ್ಲಿ ಮತ್ತು ೨೦೨೧ರ ಏಪ್ರಿಲ್, ಮೇ ತಿಂಗಳುಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿತ್ತು ಮತ್ತು ಶೂಟಿಂಗ್ ಸ್ಥಗಿತಗೊಂಡಿತ್ತು. ಈ ಸಮಯದಲ್ಲಿ, ಕನ್ನಡ ಚಲನಚಿತ್ರಗಳು ಅಗ್ರ ಸ್ಥಾನಗಳನ್ನು ಪಡೆದುಕೊಂಡಾಗ ಗಟ್ಟಿಮೇಳ ಧಾರಾವಾಹಿಯು ಬರುತ್ತಿದ್ದಏಕೈಕ ಸರಣಿಯಾಗಿದ್ದು, ಪುನರಾವರ್ತಿತ ಪ್ರಸಾರದ ಹೊರತಾಗಿಯೂ ಹೆಚ್ಚಿನ ಸಮಯದವರೆಗೆ ಟಾಪ್ 5 ಕನ್ನಡ ಕಾರ್ಯಕ್ರಮಗಳ ಪಟ್ಟಿಯಲ್ಲಿ ಉಳಿದಿತ್ತು. [೮]
ಉಲ್ಲೇಖಗಳು
[ಬದಲಾಯಿಸಿ]- ↑ "Zee Kannada launches latest fiction show 'Gattimela' - Exchange4media". Indian Advertising Media & Marketing News – exchange4media.
- ↑ "remake soap operas rule Kannada television". Times of India.
- ↑ "Gattimela continues to top the TRP charts; details inside - Times of India". The Times of India.
- ↑ "Aarthi To Sarika: 7 Supporting Gattimela Actors Who Helped In Making The Show A SUPERHIT". 8 October 2019.
- ↑ "trp-of-kannada-serials-this-week-february-2020-22nd-to-28-complete-list-gattimela-kannada-serial-is-on-top". 28 February 2020.
- ↑ https://timesofindia.indiatimes.com/tv/news/kannada/gattimela-continues-to-rule-the-trp-charts/articleshow/74509138.cms
- ↑ "jothe-jotheyali-fails-to-overtake-gattimela-in-trp". 15 March 2020.
- ↑ "ಆರ್ಕೈವ್ ನಕಲು". Archived from the original on 2020-07-08. Retrieved 2020-07-08.