ವಿಷಯಕ್ಕೆ ಹೋಗು

ಕಾಠಿ ರೋಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಠಿ ರೋಲ್[]) ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಹುಟ್ಟಿಕೊಂಡ ಒಂದು ಬೀದಿ ಆಹಾರ ಖಾದ್ಯವಾಗಿದೆ. ಇದರ ಮೂಲ ರೂಪದಲ್ಲಿ, ಇದು ಲೋಹದ ಕೋಲಿನ ಮೇಲೆ ಬೇಯಿಸಲಾದ ಕಬಾಬ್ ಆಗಿದ್ದು ಇದನ್ನು ಪರಾಠಾದಲ್ಲಿ ಸುತ್ತಿರಲಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಅನೇಕ ರೂಪಗಳು ವಿಕಸನವಾಗಿವೆ ಮತ್ತು ಇವೆಲ್ಲವನ್ನು ಈಗ ಜಾತಿಸೂಚಕವಾದ ಹೆಸರಾದ ಕಾಠಿ ರೋಲ್ ಎಂದೇ ಕರೆಯಲಾಗುತ್ತದೆ. ಕಾಟಿ ರೋಲ್‍ಗಳು ಸಾಮಾನ್ಯವಾಗಿ ಕೊತ್ತಂಬರಿ ಚಟ್ನಿ, ಮೊಟ್ಟೆ ಮತ್ತು ಕೋಳಿಮಾಂಸವನ್ನು ಹೊಂದಿರುತ್ತವೆ ಆದರೆ ಬಗೆಗಳು ಬದಲಾಗಬಹುದು. ಅಂತರರಾಷ್ಟ್ರೀಯವಾಗಿ, ವಿಶೇಷವಾಗಿ ಕೆನಡಾ ಮತ್ತು ಅಮೇರಿಕದ ಭಾಗಗಳಲ್ಲಿ ಕಾಠಿ ರೋಲ್ ಜನಪ್ರಿಯ ತ್ವರಿತ ಖಾದ್ಯವಾಗಿದೆ ಮತ್ತು ಭಾರತೀಯ ರೆಸ್ಟೊರೆಂಟ್‍ಗಳಲ್ಲಿ ಕಂಡುಬರುತ್ತದೆ.

ಪರಾಠಾವನ್ನು ತಯಾರಿಸಲು ಮೊದಲು ಹಿಟ್ಟನ್ನು ಹಗ್ಗದಂತೆ ಉದ್ದವಾಗಿ ನಾದಿಕೊಂಡು ನಂತರ ದುಂಡು ಪ್ಯಾಟಿಯಾಗಿ ಸುತ್ತಲಾಗುತ್ತದೆ. ನಂತರ ಇದನ್ನು ಲಟ್ಟಣಿಗೆಯಿಂದ ಚಪ್ಪಟೆಯಾಗಿಸಿ ತವಾದ ಮೇಲೆ ಸ್ವಲ್ಪ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇವು ಅರೆಬೆಂದ ಪರಾಠಾಗಳಾಗಿದ್ದು ಬೇಕಾದಾಗ ಅವನ್ನು ತವಾದ ಮೇಲೆ ಮತ್ತೆ ಹಾಕಿ ಸಂಪೂರ್ಣವಾಗಿ ಬೇಯಿಸಲಾಗುತ್ತದೆ.

ಕಾಠಿ ಕಬಾಬ್‍ಗಳು ಮೂಲತಃ ಗೋಮಾಂಸದ್ದಾಗಿದ್ದವು, ಆದರೆ ಈಗ ಕೋಳಿಮಾಂಸ ಅಥವಾ ಕುರಿಮಾಂಸದ (ಕುರಿ) ತುಂಡುಗಳಿರುವ ಬಗೆಗಳಿವೆ. ಈ ತುಂಡುಗಳನ್ನು ಸಂಬಾರ ಪದಾರ್ಥಗಳಲ್ಲಿ ಊರುಹಾಕಿ ಕೆಂಡದ ಮೇಲೆ ಇರುವ ಲೋಹದ ಕೋಲುಗಳ ಮೇಲೆ ಬೇಯಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Shabdkosh.com. "kathi - Meaning in Bengali - kathi in Bengali - Shabdkosh | অভিধান : English Bengali Dictionary and Translation". www.shabdkosh.com. Retrieved 2016-05-01.