ಸಚಿವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ಸಂಘಟನೆಯ ಸಚಿವಾಲಯ ಎಂದರೆ ತನ್ನ ಕೇಂದ್ರ ಆಡಳಿತ ಅಥವಾ ಮುಖ್ಯ ಕಾರ್ಯದರ್ಶಿಯ ಕರ್ತವ್ಯಗಳನ್ನು ಪೂರೈಸುವ ವಿಭಾಗ. ಈ ಪದವನ್ನು ವಿಶೇಷವಾಗಿ ಸರಕಾರಗಳು ಮತ್ತು ವಿಶ್ವಸಂಸ್ಥೆಯಂತಹ ಅಂತರ ಸರ್ಕಾರಿ ಸಂಘಟನೆಗಳೊಂದಿಗೆ ಸಂಬಂಧಿಸಲಾಗುತ್ತದೆ.[೧] ಆದರೆ ಕೆಲವು ಸರ್ಕಾರೇತರ ಸಂಘಟನೆಗಳು ಕೂಡ ತಮ್ಮ ಆಡಳಿತ ವಿಭಾಗವನ್ನು ಸಚಿವಾಲಯ ಎಂದು ಹೆಸರಿಸುತ್ತವೆ. ಅಂತಹ ವಿಭಾಗವನ್ನು ಹೊಂದಿರುವ ಕಟ್ಟಡ ಅಥವಾ ಕಚೇರಿ ಸಂಕೀರ್ಣವನ್ನು ಕೂಡ ಸಚಿವಾಲಯ ಅಥವಾ ಸಚಿವಾಲಯ ಕಟ್ಟಡವೆಂದು ಹೆಸರಿಸಲಾಗುತ್ತದೆ.

ಕೆಲವು ಸಂದರ್ಭಗಳಲ್ಲಿ, ಸಚಿವಾಲಯವು ಅಧಿಕಾರಶಾಹಿ ಅಂಗವಾಗಿರುವುದಿಲ್ಲ. ಬದಲಾಗಿ ವಿಶಾಲ ಗುಂಪನ್ನು ಸಂಘಟಿಸಲು ಸಾಮೂಹಿಕವಾಗಿ ನೆರವಾಗುವ ತನ್ನ ಎಲ್ಲ ಸದಸ್ಯರಿಂದ ಕಾರ್ಯನಿರ್ವಹಿಸಲ್ಪಟ್ಟ ಒಂದು ನಿರ್ದಿಷ್ಟ ಸಂಘಟನೆಯನ್ನು ಒಳಗೊಂಡ ಅಂಗವಾಗಿರುತ್ತದೆ, ಉದಾಹರಣೆಗೆ ಅರಾಜಕತಾವಾದಿ ಒಕ್ಕೂಟಗಳ ಅಂತರರಾಷ್ಟ್ರೀಯದ ಸಚಿವಾಲಯ (ವಾಸ್ತವವಾಗಿ ಇದು ಅನಿಯಮಿತವಾಗಿ ತನ್ನ ಸದಸ್ಯ ಒಕ್ಕೂಟಗಳ ನಡುವೆ ಪರ್ಯಾಯವಾಗುವ ಕಚೇರಿ).

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಸಚಿವಾಲಯ&oldid=961147" ಇಂದ ಪಡೆಯಲ್ಪಟ್ಟಿದೆ