ವ್ಯುತ್ಪತ್ತಿಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯುತ್ಪತ್ತಿಶಾಸ್ತ್ರ ಶಬ್ದಗಳ ಇತಿಹಾಸದ ಅಧ್ಯಯನವಾಗಿದೆ. ಇದನ್ನು ವಿಸ್ತರಿಸಿದರೆ, "ಯಾವುದೇ ಶಬ್ದದ ವ್ಯುತ್ಪತ್ತಿ" ಎಂಬ ಪದಗುಚ್ಛದ ಅರ್ಥ ಆ ನಿರ್ದಿಷ್ಟ ಶಬ್ದ ಮೂಲ.

ದೀರ್ಘವಾದ ಬರವಣಿಗೆಯ ಇತಿಹಾಸವಿರುವ ಭಾಷೆಗಳಿಗೆ, ಮುಂಚಿನ ಕಾಲಗಳ ಅವಧಿಯಲ್ಲಿ ಶಬ್ದಗಳನ್ನು ಹೇಗೆ ಬಳಸಲಾಗುತ್ತಿತ್ತು, ಅವುಗಳು ಅರ್ಥ ಹಾಗೂ ರೂಪದಲ್ಲಿ ಹೇಗೆ ಅಭಿವೃದ್ಧಿಗೊಂಡವು, ಅಥವಾ ಅವುಗಳು ಭಾಷೆಯನ್ನು ಯಾವಾಗ ಹಾಗೂ ಹೇಗೆ ಪ್ರವೇಶಿಸಿದವು ಎಂಬ ಬಗ್ಗೆ ಜ್ಞಾನವನ್ನು ಸಂಗ್ರಹಿಸಲು ನಿರುಕ್ತಿಕಾರರು ಪಠ್ಯಗಳು, ಭಾಷೆಯ ಬಗ್ಗೆ ಇರುವ ಪಠ್ಯಗಳನ್ನು ಬಳಸಿಕೊಳ್ಳುತ್ತಾರೆ. ಯಾವುದೇ ನೇರವಾದ ಮಾಹಿತಿಯು ಲಭ್ಯವಿರುವುದಕ್ಕೆ ತುಂಬ ಹಳೆಯದಾದ ರೂಪಗಳ ಬಗ್ಗೆ ಇರುವ ಮಾಹಿತಿಯನ್ನು ಪುನರ್ನಿರ್ಮಾಣ ಮಾಡಲು ನಿರುಕ್ತಿಕಾರರು ತುಲನಾತ್ಮಕ ಭಾಷಾಶಾಸ್ತ್ರದ ವಿಧಾನಗಳನ್ನು ಕೂಡ ಅನ್ವಯಿಸುತ್ತಾರೆ.

ತುಲನಾತ್ಮಕ ವಿಧಾನ ಎಂದು ಕರೆಯಲ್ಪಡುವ ತಂತ್ರದಿಂದ ಸಂಬಂಧಿತ ಭಾಷೆಗಳನ್ನು ವಿಶ್ಲೇಷಿಸುವ ಮೂಲಕ, ಅವುಗಳ ಹಂಚಿಕೊಂಡ ಪಿತೃಭಾಷೆ ಮತ್ತು ಅದರ ಶಬ್ದಕೋಶದ ಬಗ್ಗೆ ಭಾಷಾಶಾಸ್ತ್ರಜ್ಞರು ತೀರ್ಮಾನಗಳನ್ನು ಮಾಡಬಲ್ಲರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]