ಮಣಿಕಟ್ಟು
ಗೋಚರ
ಮಾನವ ಅಂಗರಚನಾಶಾಸ್ತ್ರದಲ್ಲಿ, ಮಣಿಕಟ್ಟು ಎಂಬುದಕ್ಕೆ ಅನೇಕ ವ್ಯಾಖ್ಯಾನಗಳಿವೆ 1) ಮಣಿಬಂಧದ ಎಲುಬುಗಳು, ಕೈಯ ಹತ್ತಿರದ ಅಸ್ಥಿ ಭಾಗವನ್ನು ರೂಪಿಸುವ ಎಂಟು ಮೂಳೆಗಳ ಜಾಲಬಂಧ; (2) ಮಣಿಬಂಧದ ಕೀಲು ಅಥವಾ ರೇಡಿಯೊಕಾರ್ಪಲ್ ಕೀಲು, ರೇಡಿಯಸ್ ಹಾಗೂ ಕಾರ್ಪಸ್ ನಡುವಿನ ಕೀಲು (3) ಮುಂದೋಳಿನ ಮೂಳೆಗಳ ಅಂತ್ಯದ ಭಾಗಗಳು ಹಾಗೂ ಅಂಗೈ ಮೂಳೆಗಳ ಹತ್ತಿರದ ಭಾಗಗಳು ಸೇರಿದಂತೆ ಮಣಿಬಂಧವನ್ನು ಸುತ್ತುವರಿದಿರುವ ಶಾರೀರಿಕ ಪ್ರದೇಶ.
ಕಾರ್ಯ
[ಬದಲಾಯಿಸಿ]ಚಲನೆ
[ಬದಲಾಯಿಸಿ]ಕೈಯ ಬಾಹ್ಯ ಸ್ನಾಯುಗಳು ಮುಂದೋಳಿನಲ್ಲಿ ಸ್ಥಿತವಾಗಿರುತ್ತವೆ. ಇಲ್ಲಿ ಇವುಗಳ ಟೊಳ್ಳು ಭಾಗಗಳು ಹತ್ತಿರದ ಮಾಂಸಲ ವರ್ತುಲತೆಯನ್ನು ರೂಪಿಸುತ್ತವೆ. ಸಂಕೋಚನವಾದಾಗ, ಈ ಸ್ನಾಯುಗಳ ಬಹುತೇಕ ಸ್ನಾಯುರಜ್ಜುಗಳು ಅಂಗೈ ಮೇಲ್ಗಡೆ ಫ಼್ಲೆಕ್ಸರ್ ರೆಟಿನ್ಯಾಕ್ಯುಲಮ್ನ ಹಾಗೂ ಹಿಂಭಾಗದಲ್ಲಿ ಎಕ್ಸ್ಟೆನ್ಸರ್ ರೆಟಿನ್ಯಾಕ್ಯುಲಮ್ನ ಕೆಳಗೆ ಸಾಗುವ ಮೂಲಕ, ಮಣಿಕಟ್ಟಿನ ಸುತ್ತ ಬಿಗಿಯಾದ ಬಿಲ್ಲುಹೆದೆಗಳಂತೆ ನಿಂತುಕೊಳ್ಳುವುದು ತಡೆಯಲ್ಪಡುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Hand kinesiology at the University of Kansas Medical Center