ವಿಷಯಕ್ಕೆ ಹೋಗು

ಸ. ಜ. ನಾಗಲೋಟಿಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ. ಜ. ನಾಗಲೋಟಿಮಠ
ಜನನಜುಲೈ ೨೦, ೧೯೪೦
ಶಿರೋಳ, ಧಾರವಾಡ ಜಿಲ್ಲೆ
ಮರಣಅಕ್ಟೋಬರ್ ೨೪, ೨೦೦೬
ಬೆಳಗಾವಿ, ಬೆಳಗಾವಿ ಜಿಲ್ಲೆ
ವೃತ್ತಿವೈದ್ಯ, ಪ್ರಾಧ್ಯಾಪಕ, ಸಂಶೋಧನಾ ಪ್ರಬಂಧಕ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಕೆ.ಎಂ.ಸಿ. - ಹುಬ್ಬಳ್ಳಿ
ಪ್ರಮುಖ ಪ್ರಶಸ್ತಿ(ಗಳು)ಡಾ।।ಬಿ. ಸಿ. ರಾಯ್ ಪ್ರಶಸ್ತಿ
ಭಾರತದ ಶ್ರೇಷ್ಠ ಪೌರ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ತಂದೆಜಂಬಯ್ಯ

ಡಾ. ಸ. ಜ. ನಾಗಲೋಟಿಮಠರವರು ಕರ್ನಾಟಕದ ಖ್ಯಾತ ವೈದ್ಯರು ಹಾಗು ಸಾಹಿತಿಗಳು. ಸಜನಾ ಎಂದು ಖ್ಯಾತರಾಗಿರುವ ಇವರ ಪೂರ್ಣ ಹೆಸರು ಡಾ।।ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ.

ಜನನ ಹಾಗೂ ವಿದ್ಯಾಭ್ಯಾಸ

[ಬದಲಾಯಿಸಿ]

೨೦ ಜುಲೈ,೧೯೪೦ರಲ್ಲಿ ಜನಿಸಿದ ನಾಗಲೋಟಿಮಠರವರಿಗೆ ಜನಿಸಿದಾಗ ಸದಾಶಿವಯ್ಯ ಎಂದು ಹೆಸರಿಡಲಾಯಿತು.[] ಇವರ ತಂದೆ ಜಂಬಯ್ಯನವರು ನರಗುಂದ ತಾಲೂಕಿನ ಶಿರೋಳ ಗ್ರಾಮದವರು. ನಾಗಲೋಟಿಮಠರವರು ಪ್ರಾಥಮಿಕ ಹಾಗು ಪ್ರೌಡ ಶಿಕ್ಷಣವನ್ನು ಸದಾಶಿವ ಬನಹಟ್ಟಿಯಲ್ಲಿ ಪೂರೈಸಿದರು. ವೈದ್ಯ ಶಿಕ್ಷಣವನ್ನು ಇವರು ಹುಬ್ಬಳ್ಳಿಯ ಕೆ.ಎಂ.ಸಿ ಯಲ್ಲಿ ಪೂರೈಸಿದರು ಹಾಗು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು.

ಪ್ರಾಧ್ಯಾಪಕ ಹಾಗೂ ಪ್ರಬಂಧಕರಾಗಿ

[ಬದಲಾಯಿಸಿ]

ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ೨೦ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿ, ವಿಶ್ವಾದ್ಯಂತ ಮನ್ನಣೆಗಳಿಸಿದ್ದಾರೆ. ತಳ ಶೇಖರಣೆ ಜೀವಕೋಶ ವಿಜ್ಞಾನ (Sediment Cytology) ಹಾಗೂ ಸಾಂದರ್ಭಿಕ ಮಧುಮೇಹ (Secondary Diabetes) ಎಂಬ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೊತ್ತಮೊದಲ ಲೇಖನಗಳಿಗೆ ಕಾರಣಕರ್ತರಾಗಿದ್ದಾರೆ. ನಾಗಲೋಟಿಮಠರವರು ಹುಬ್ಬಳ್ಳಿಯ ಕಿಮಸ್ ನ ಪ್ರಥಮ ಅಧ್ಯಕ್ಷರಾಗಿದ್ದರು. ಇವರು ಭಾರತದಲ್ಲೇ ಅತಿ ದೊಡ್ಡ ದೇಹದ ಹರಳುಗಳ ವಸ್ತು ಸಂಗ್ರಹಾಲಯವನ್ನು ಬಿಜಾಪುರದಲ್ಲಿ ಸ್ಥಾಪಿಸಿದರು.[] ಬೆಳಗಾವಿಯಲ್ಲಿ ಇವರು ಸ್ಥಾಪಿಸಿರುವ ಪ್ಯಾಥಾಲಜಿ ಮ್ಯೂಸಿಯಂ ಕೂಡ ಪ್ರಸಿದ್ದವಾಗಿದೆ.

ಇವಲ್ಲದೇ ಸಂದರ್ಶಕ ಪ್ರಾಧ್ಯಾಪಕರಾಗಿ, ಸಂಶೋಧನಾ ಪ್ರಬಂಧಕರಾಗಿ ಅಮೆರಿಕಾ, ಫಿಲೆಡೆಲ್ಫಿಯಾ, ಸ್ಪೈನ್, ಆಸ್ಟ್ರೇಲಿಯಾ, ಜರ್ಮನಿ ಮುಂತಾದೆಡೆ ಪ್ರವಾಸ ಮಾಡಿ ಭಾರತದ ವೈದ್ಯಕೀಯ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಕರ್ನಾಟಕ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ನಾಡಿನಲ್ಲಿಯೇ ಪ್ರಸಿದ್ಧವಾದ ಬೆಳಗಾವಿ ವಿಜ್ಞಾನ ಸಂಸ್ಥೆಯ ಸಂಸ್ಥಾಪಕರು.[]

ಇವರು ದಿಕ್ಸೂಚಿ ಮಾಸಪತ್ರಿಕೆಯ ಗೌರವ ಸಲಹೆಗಾರರಾಗಿದ್ದರು.

ಕೃತಿಗಳು

[ಬದಲಾಯಿಸಿ]

ಸಜನಾರವರು ಸುಮಾರು ೪೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದರೆ. ಅವುಗಳಲ್ಲಿ ಕೆಲವು,

ಸ್ವಾಸ್ಥ್ಯ ಸಂಗಾತಿ ಪುಸ್ತಕದ ಮುಖಪುಟ
  • ಶ್ರೀಸಾಮಾನ್ಯ ಮತ್ತು ವೈದ್ಯ (ರೇಡಿಯೋ ಭಾಷಣಗಳ ಸಂಕಲನ)
  • ಸ್ವಾಸ್ಥ್ಯ ಸಂಗಾತಿ (೧೩ ಪತ್ರಿಕಾಲೇಖನಗಳ ಸಂಕಲನ)
  • ಬಾಳೆಹಣ್ಣು ಮತ್ತು ಬ್ಲಡ್ ಪ್ರೆಷರ್
  • ಬ್ರುಸೆಲ್ಲಾ ರೋಗ
  • ಕಳವು ಕಲಿಸುವ ದೇವರು - ೨೦೦೦
  • ಬಿಚ್ಚಿದ ಜೋಳಿಗೆ: ವೈದ್ಯನ ಆತ್ಮ ನಿವೇದನ - ೨೦೦೩
  • ಅನ್ನಮಾರ್ಗದಲ್ಲಿ ಅಪಘಾತಗಳು - ೧೯೮೯
  • ರಕ್ತದಾನ - ೧೯೭೬
  • ಸಜನಾ ಅಂಕಣ : ಆರೋಗ್ಯ ಕುರಿತ ವಿಚಾರಗಳು - ೨೦೦೮

ಪ್ರಶಸ್ತಿಗಳು

[ಬದಲಾಯಿಸಿ]
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಶ್ರೀಸಾಮಾನ್ಯ ಮತ್ತು ವೈದ್ಯ)
  • ಕುವೆಂಪು ವೈದ್ಯ ಸಾಹಿತ್ಯ ಪ್ರಶಸ್ತಿ (ಶ್ರೀಸಾಮಾನ್ಯ ಮತ್ತು ವೈದ್ಯ)
  • ಡಾ।।ಬಿ. ಸಿ. ರಾಯ್ ಪ್ರಶಸ್ತಿ
  • ಭಾರತದ ಶ್ರೇಷ್ಠ ಪೌರ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಚಾಳುಕ್ಯ ಪ್ರಶಸ್ತಿ

'ನಾಗಲೋಟಿಮಠ' ರವರು ೨೪ ಅಕ್ಟೋಬರ್,೨೦೦೬ರಲ್ಲಿ ಬೆಳಗಾವಿಯಲ್ಲಿ ಬಹು-ಅಂಗಾಂಗ ವೈಫಲ್ಯದಿಂದ ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ S.J. Nagalotimath dead, ದಿ ಹಿಂದೂ, OCTOBER 25, 2006
  2. "Dr. S.J. Nagalothimath Stone Museum". Archived from the original on 2020-10-11. Retrieved 2017-11-28.
  3. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ: ನಾಗಲೋಟಿಮಠ, ಸ ಜ