ರ್ಯಾಲಿ ಫಾರ್ ರಿವರ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರ‍್ಯಾಲಿ ಫಾರ್ ರಿವರ್ಸ್ ಎಂಬುದು ಭಾರತದಲ್ಲಿ ಕಾಲೋಚಿತ ನದಿಗಳಾಗಿ ಮಾರ್ಪಟ್ಟಿರುವ ದೀರ್ಘಕಾಲಿಕ ನದಿಗಳನ್ನು ಉಳಿಸಲು ಸದ್ಗುರು ಪ್ರಾರಂಭಿಸಿದ ರಾಷ್ಟ್ರವ್ಯಾಪಿ ಚಳುವಳಿಯಾಗಿದೆ. ರ‍್ಯಾಲಿಯನ್ನು ಕೇವಲ ೩೦ ದಿನಗಳಲ್ಲಿ ೧೬೨ ದಶಲಕ್ಷಕ್ಕೂ ಹೆಚ್ಚು ಜನರು ಬೆಂಬಲಿಸಿದ್ದಾರೆ. ಆದ್ದರಿಂದ ಇದು ಇಂದು ವಿಶ್ವದ ಅತಿದೊಡ್ಡ ಪರಿಸರ ಚಳುವಳಿಯಾಗಿದೆ ಮತ್ತು ಕೇವಲ ೩೦ ದಿನಗಳ ಅವಧಿಯಲ್ಲಿ ಭಾರತೀಯ ಇತಿಹಾಸದಲ್ಲಿ ಇಷ್ಟು ದೊಡ್ಡ ಬೆಂಬಲವನ್ನು ಪಡೆದ ಏಕೈಕ ಚಳುವಳಿಯಾಗಿದೆ. ಅಭಿಯಾನವು ಕ್ರಿಯಾತ್ಮಕ ನೀತಿಯನ್ನು ರೂಪಿಸಿತು, ಇದು ಪರಿಸರ ವಿಜ್ಞಾನದ ವಿರುದ್ಧ ಆರ್ಥಿಕತೆಯನ್ನು ಹಾಕದೆ ಈ ಸವಾಲುಗಳಿಗೆ ಸಮಗ್ರ ಪರಿಹಾರವನ್ನು ನೀಡುತ್ತದೆ. ರ‍್ಯಾಲಿಯು ಇಶಾ ಪ್ರತಿಷ್ಠಾನದ ಪ್ರಮುಖ ಅಡಿಯಲ್ಲಿ ೨೦೧೮ ರಲ್ಲಿ ರಾಷ್ಟ್ರೀಯ ವಾಟರ್ ಅವಾರ್ಡ್ ಗೆದ್ದಿದೆ[೧]

ಭಾರತದ ಜನರ ಬೆಂಬಲ ಪಡೆಯಲು ನದಿಗಳ ರ‍್ಯಾಲಿ ಆಯೋಜಿಸಲಾಗಿದ್ದು, ಇದರಿಂದಾಗಿ ಈ ಕರೆ ಕೇಂದ್ರ ಸರ್ಕಾರವನ್ನು ತಲುಪುತ್ತದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಬಹುದು. ರ‍್ಯಾಲಿಯ ಕರೆ ಕೇಂದ್ರ ಸರ್ಕಾರವನ್ನು ತಲುಪಿ ಪ್ರತಿಷ್ಠಾನ ಸಿದ್ಧಪಡಿಸಿದ ರಾಷ್ಟ್ರೀಯ ನದಿ ನೀತಿಯ ಕರಡನ್ನು ಅಂಗೀಕರಿಸಿತು. ರಾಜ್ಯ ಸರ್ಕಾರಗಳೂ ಈ ಕರೆಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿದವು. ರ‍್ಯಾಲಿಯನ್ನು ಮುಖ್ಯವಾಗಿ ರೈತರ ಆತ್ಮಹತ್ಯೆಗಳನ್ನು ಕಡಿಮೆ ಮಾಡಲು, ಅವರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ನೀರಿನ ಮಟ್ಟವು ಕುಂಠಿತಗೊಳ್ಳುತ್ತಿರುವುದರಿಂದ ನೀರು ಹೆಚ್ಚು ಹೆಚ್ಚು ಅಮೂಲ್ಯವಾಗುತ್ತಿದ್ದು,ಭವಿಷ್ಯದ ಪೀಳಿಗೆಗೆ ನೀರಿನ ಅಭಾವ ಆಗದಂತೆ ಕಾಳಜಿ ವಹಿಸಲು ಮಾಡಲಾಗಿದೆ[೨]. ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸ್ಥಳೀಯ ರೈತರಿಗೆ ಬೆಳೆ ಆಧಾರಿತ ಕೃಷಿಯಿಂದ ಮರ ಆಧಾರಿತ ಕೃಷಿಗೆ ಸ್ಥಳಾಂತರಗೊಳ್ಳಲು, ತೋಟಗಾರಿಕೆ, ಹಣ್ಣಿನ ಮರಗಳ ಕೃಷಿ ಮತ್ತು ‍ಔಷಧೀಯ ಮರ ಆಧಾರಿತ ಕೃಷಿಯನ್ನು ಹೆಚ್ಚಿಸಲು ಈ ರ್ಯಾಲಿಯನ್ನು ಉದ್ದೇಶಿಸಲಾಗಿದೆ, ಇದರಿಂದಾಗಿ ರೈತರ ಆದಾಯ ಮತ್ತು ಬರ ಮತ್ತು ಪ್ರವಾಹ ಸ್ಥಿತಿ ಎಲ್ಲವನ್ನು ಸುಧಾರಿಸಬಹುದು.

ಪರಿಚಯ[ಬದಲಾಯಿಸಿ]

ನದಿಗಳ ರ‍್ಯಾಲಿಯನ್ನು ಸೆಪ್ಟೆಂಬರ್ ೩, ೨೦೧೭ ರಂದು ಪ್ರಾರಂಭಿಸಲಾಯಿತು. ರ‍್ಯಾಲಿಯು ಅಕ್ಟೋಬರ್ ೨, ೨೦೧೭ ರವರೆಗೆ ಒಂದು ತಿಂಗಳವರೆಗೆ ನಡೆದಿತ್ತು. ಸದ್ಗುರು ತಮ್ಮ ಸ್ವಯಂಸೇವಕರೊಂದಿಗೆ ತಮಿಳುನಾಡಿನ ಕೊಯಮತ್ತೂರಿನಿಂದ ಪ್ರಾರಂಭಿಸಿ ಅಕ್ಟೋಬರ್ ೨ ರಂದು ನವದಿಲ್ಲಿಗೆ ತಲುಪಿದರು. ರಾಷ್ಟ್ರೀಯ ನದಿ ನೀತಿಯ ಕರಡನ್ನು[೩] ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಲಾಯಿತು. 'ನೀರು ಸೇವಿಸುವ ಪ್ರತಿಯೊಬ್ಬರೂ ಈ ಕಾರ್ಯಕ್ರಮಕ್ಕೆ ಸೇರಲು ಸ್ವಾಗತ!' ರ‍್ಯಾಲಿಗೆ ಎಲ್ಲರನ್ನೂ ಪ್ರಮಾಣೀಕರಿಸಲು ಸದ್ಗುರು ನೀಡಿದ ಕರೆ.


ವಾಘರಿ ನದಿ ಯೋಜನೆ[ಬದಲಾಯಿಸಿ]

ಯವತ್ಮಾಲ್ ಪ್ರದೇಶದಲ್ಲಿ ವಾಘರಿ ನದಿಯ ಪುನರುಜ್ಜೀವನಕ್ಕಾಗಿ ನದಿಗಳ ರ್ಯಾಲಿಯೊಂದಿಗೆ ೪೧೫ ಕೋಟಿ ಯೋಜನೆಗೆ ಮಹಾರಾಷ್ಟ್ರದ ಕ್ಯಾಬಿನೆಟ್ ಅನುಮೋದನೆ ನೀಡಿದೆ. "ಮಾರ್ಚ್ ೫ ರ ಮಂಗಳವಾರ ಯವತ್ಮಾಲ್ನಲ್ಲಿ ವಾಘಾರಿ ನದಿಯ ಪುನರುಜ್ಜೀವನಗೊಳಿಸುವ ಪ್ರಾಯೋಗಿಕ ಯೋಜನೆಗೆ ಮಹಾರಾಷ್ಟ್ರ ಕ್ಯಾಬಿನೆಟ್ ಅನುಮೋದನೆ ನೀಡಿತು. ಯೋಜನಾ ಅನುಷ್ಠಾನಕ್ಕಾಗಿ ಕೃಷಿ ಇಲಾಖೆ ೪೧೫ ಕೋಟಿ ಅನುದಾನ ನೀಡಿದೆ. ಇದು ರ್ಯಾಲಿ ಫಾರ್ ರಿವರ್ಸ್ ಮತ್ತು ಇತರ ತಾಂತ್ರಿಕ ತಜ್ಞರಿಂದ ಪ್ರಾತಿನಿಧ್ಯವನ್ನು ಹೊಂದಿರುತ್ತದೆ "ರ್ಯಾಲಿ ಫಾರ್ ರಿವರ್ಸ್ ಕಮಿಟಿ[೪] ಹೇಳಿದರು. ಸಮೀಕ್ಷೆ ಪ್ರಕಾರ, 7 ವರ್ಷಗಳಲ್ಲಿ, 76% ರೈತರು ಮಹಾರಾಷ್ಟ್ರದಲ್ಲಿ ಸಾಲಭಾರದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ[೫]. ಮತ್ತು ಯವತ್ಮಾಲ್ ಪ್ರದೇಶದಲ್ಲಿನ ಆತ್ಮಹತ್ಯೆ ಪ್ರಕರಣಗಳು ವಾಘರಿ ನದಿ ಹರಿಯುವ ಸ್ಥಳದಲ್ಲಿ ಅತ್ಯಂತ ಕೆಟ್ಟದಾಗಿದೆ ಎಂದು ಕಂಡುಬಂದಿದೆ. ಹಾಗಾಗಿಯೆ ನದಿಗಳನ್ನು ಪುನರ್ಚೇತನಗೊಳಿಸುವ ಕಾರ್ಯವನ್ನು ಇಲ್ಲಿಂದಲೆ ಪ್ರಾರಂಭಿಸಲಾಗಿದೆ.


ಕಾವೇರಿ ಕೂಗು[ಬದಲಾಯಿಸಿ]

ಕಾವೇರಿ ಕೂಗು ಎಂಬುದು ಸದ್ಗುರುರವರಿಂದ ನದಿಗಳ ರ‍್ಯಾಲಿ ಅಡಿಯಲ್ಲಿ ಪ್ರಾರಂಭವಾದ ರಾಷ್ಟ್ರವ್ಯಾಪಿ ಚಳುವಳಿ. ಇಂತಹ ಅಭಿಯಾನವು ದೇಶದಲ್ಲೇ ಮೊದಲನೆಯದು. ಭಾರತದ ನದಿಗಳನ್ನು - ದೇಶದ ಜೀವಸೆಲೆಗಳನ್ನು ಹೇಗೆ ಪುನರುಜ್ಜೀವನಗೊಳಿಸಬಹುದು ಎಂಬುದರ ಮಾನದಂಡವನ್ನು ನಿಗದಿಪಡಿಸುತ್ತದೆ. ಇದು ಕಾವೇರಿ ನದಿಯ ಪುನರುಜ್ಜೀವನಕ್ಕೆ ನಾಂದಿ ಹಾಡಲಿದೆ ಮತ್ತು ೮೪ ದಶಲಕ್ಷ ಜನರ ಜೀವನವನ್ನು ಪರಿವರ್ತಿಸುತ್ತದೆ ಎಂದು ಈಶ ಫೌಂಡೇಶನ್ ಅವರು ತಿಳಿಸಿದ್ದಾರೆ.

ಈ ಯೋಜನೆಯು ಮುಖ್ಯವಾಗಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಸವಾದ ಪಾಂಡಿಚೆರಿ ರಾಜ್ಯಗಳ ಮೂಲಕ ಹರಿಯುವ ಕಾವೇರಿ ನದಿಯ ಜಲಾನಯನ ಪ್ರದೇಶವನ್ನು ಕೇಂದ್ರೀಕರಿಸಿದೆ. ಕಾವೇರಿ ನದಿ ಶತಮಾನಗಳಿಂದ ಈ ರಾಜ್ಯಗಳ ಜೀವನಾಡಿಯಾಗಿದೆ. ಮತ್ತು ನದಿಯನ್ನು ಅಜ್ಞಾತ ಸಮಯದಿಂದ ಪೂಜಿಸಲಾಗಿದೆ. ಆದರೆ ಇತ್ತೀಚಿನ ಒಂದು ದಶಕದಿಂದ ಈ ನದಿಯು ವಿವಾದದ ವಿಷಯವಾಗಿದೆ. ಏಕೆಂದರೆ ನದಿಯು ಒಂದು ವರ್ಷದಲ್ಲಿ ೬ ತಿಂಗಳಿಗಿಂತ ಹೆಚ್ಚು ಕಾಲ ಸಾಗರವನ್ನು ತಲುಪುವುದಿಲ್ಲ, ಮುಂಗಾರು ಮುಗಿದ ಕೆಲವೇ ತಿಂಗಳಲ್ಲಿ ಅದರ ನೀರು ಖಾಲಿಯಾಗುತ್ತದೆ. ಎರಡೂ ರಾಜ್ಯಗಳ ರೈತರು ವಿನಾಶಕ್ಕೀಡಾಗುತ್ತಿದ್ದಾರೆ. ಈ ಹಂತದಲ್ಲಿ ಕುಡಿಯುವ ನೀರು ಕೂಡ ವಿರಳವಾಗುವುದು, ಕಾವೇರಿ ನದಿಯ ನೀರಿನ ವಿವಾದಕ್ಕೆ ಕಾರಣವಾಗುತ್ತದೆ.

ಕಾವೇರಿ ಕೂಗು ಅಭಿಯಾನವು ಜುಲೈ ೨೦೧೯ ರ ಕೊನೆಯಲ್ಲಿ ಪ್ರಾರಂಭವಾಯಿತು. ಮರಗಳನ್ನು ನೆಡುವ ಪ್ರಾಥಮಿಕ ಕಾರ್ಯವು ೨೦೧೯ ರ ಸೆಪ್ಟೆಂಬರ್ ೩ ರಿಂದ ಪ್ರಾರಂಭವಾಗಲಿದೆ. ಈ ಅಭಿಯಾನವನ್ನು ನೇರವಾಗಿ ಹಳ್ಳಿಗಳು ಮತ್ತು ಸುತ್ತಮುತ್ತಲಿನ ಜನರನ್ನು ಸಂಪರ್ಕಿಸುವ ಮೂಲಕ ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಮ್, ಮತ್ತು ಯೂಟ್ಯೂಬ್, ಟ್ವಿಟ್ಟರ್ ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಶ್ರೇಣಿಯಲ್ಲಿ ಮತ್ತು ತಮ್ಮದೇ ಬ್ಲಾಗ್ ಮೂಲಕ ಜನರಿಗೆ ತಲುಪಿಸಲಾಗಿದೆ[೬]. ಕಾರ್ಯಕ್ರಮಗಳ ಪಟ್ಟಿಯನ್ನು ಪ್ರಚಾರಕ್ಕಾಗಿ ಹೊಂದಿಸಲಾಗಿದೆ. ಪ್ರತಿಷ್ಠಾನವು ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಿದೆ. ಈ ಯೋಜನೆಯು ೧೦ ವರ್ಷಗಳ ಕ್ರಿಯಾ ಯೋಜನೆಯಾಗಿದೆ. ಜನರ ಬೆಂಬಲವನ್ನು ಪಡೆಯಲು ಪ್ರತಿ ಮರಕ್ಕೆ ೪೨ ರೂಪಾಯಿಗಳನ್ನು ನೀಡಲು ಮತ್ತು (೮೦೦೦೯ ೮೦೦೦೯) ಒಂದು ಸಂಖ್ಯೆಗೆ ಮಿಸ್ಡ್ ಕರೆ ನೀಡುವ ಬಗ್ಗೆ ಈ ಅಭಿಯಾನವಾಗಿದೆ. ಒಂದು ಮರದಿಂದ ರಿಂದ ಲಕ್ಷಾಂತರ ಮರಗಳಿಗಾಗಿ ಕೊಡುಗೆ ನೀಡಬಹುದು. ಅಭಿಯಾನಕ್ಕಾಗಿ ಸ್ವಯಂಸೇವಕರನ್ನು ಪ್ರತಿಷ್ಠಾನವು ಸ್ವಾಗತಿಸುತ್ತದೆ. ಈ ಅಭಿಯಾನ ಮುಖ್ಯವಾಗಿ ಕಾವೇರಿ ನದಿ ಜಲಾನಯನ ಪ್ರದೇಶದ ಬಳಿ ಮರಗಳನ್ನು ನೆಡುವುದು ಮತ್ತು ರೈತರನ್ನು ಬೆಳೆ ಆಧಾರಿತ ಕೃಷಿಯಿಂದ ಮರ ಆಧಾರಿತ ತೋಟಕ್ಕೆ ಭಾಗಶಃ ತಿರುಗಿಸುವುದು. ರ್ಯಾಲಿಯು ಕೆಲವು ಸಾವಿರ ರೈತರನ್ನು ಮರ ಆಧಾರಿತ ಕೃಷಿಯತ್ತ ತಿರುಗಿಸುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಸದ್ಗುರು ಅವರ ಇನ್ನೂ ಆಳವಾದ ಆಲೋಚನೆ ಅಡಗಿದೆ, ಇದು ಬೇಯಿಸಿದ ಅಕ್ಕಿ (ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ತಿನ್ನುವ ಊಟ) ಅಥವಾ ಬೇಯಿಸಿದ ಇತರ ಆಹಾರಗಳಿಗಿಂತ ಕಚ್ಚಾ ಆಹಾರಗಳಿಗೆ ಬದಲಾಯಿಸಲು ಸೂಚಿಸುತ್ತದೆ. ಇದು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ ರೈತರು ಮರ ಆಧಾರಿತ ಕೃಷಿಗೆ ಬದಲಾಗಲು ಉತ್ತೇಜಿಸುತ್ತದೆ.

ತಲಕವೇರಿಯಿಂದ ತಿರುವರೂರುವರೆಗೆ ೨ ವಾರಗಳ ಮೋಟಾರ್‌ಸೈಕಲ್ ರ‍್ಯಾಲಿ ಮತ್ತು ಪ್ರಮುಖ ನಗರಗಳಲ್ಲಿ ಹಲವಾರು ದೊಡ್ಡ-ಪ್ರಮಾಣದ ಕಾರ್ಯಕ್ರಮಗಳು ಮತ್ತು ಕಾವೇರಿಯುದ್ದಕ್ಕೂ ಪಟ್ಟಣಗಳು ​​ಮತ್ತು ಹಳ್ಳಿಗಳಲ್ಲಿ ಸಾವಿರಾರು ಸಣ್ಣ ಕಾರ್ಯಕ್ರಮಗಳನ್ನು ಸದ್ಗುರು ನಡೆಸಲಿದ್ದಾರೆ. ಈ ಅಭಿಯಾನಕ್ಕೆ ಉತ್ತೇಜಿಸಲು ಗಿಡಗಳಿಗೆ ಅನುದಾನ ನೀಡಿದವರಿಗೆ ಬಿರುದು ಕೊದಲಾಗುತ್ತದೆ.

೧ ಅಥವಾ ಹೆಚ್ಚಿನ ಮರಗಳನ್ನು ನೆಟ್ಟು ಕಾವೇರಿ ಉಪಾಸಕರಾಗಿರಿ

೧೦+ ಮರಗಳನ್ನು ನೆಟ್ಟು ಕಾವೇರಿ ಶೂರರಾಗಿರಿ

೧೦೦+ ಮರಗಳನ್ನು ನೆಟ್ಟು ಕಾವೇರಿ ಮಿತ್ರರಾಗಿರಿ

೧೦೦೦+ ಮರಗಳನ್ನು ನೆಟ್ಟು ಕಾವೇರಿ ವೀರರಾಗಿರಿ

೧೦,೦೦೦+ ಒತ್ತಡವನ್ನು ನೆಟ್ಟು ಕಾವೇರಿ ಪರಮ್ವೀರರಾಗಿರಿ

೧೦೦,೦೦೦+ ಮರಗಳನ್ನು ನೆಟ್ಟು ಕಾವೇರಿ ರಕ್ಷಕರಾಗಿರಿ

೧ ಮಿಲಿಯನ್+ ಮರಗಳನ್ನು ನೆಟ್ಟು ಕಾವೇರಿ ಯೋಧರಾಗಿರಿ

೧೦ ಮಿಲಿಯನ್+ ಮರಗಳನ್ನು ನೆಟ್ಟು ಕಾವೇರಿ ನಾಯಕರಾಗಿರಿ[೭]

ಉದ್ದೇಶಿತ ಪರಿಣಾಮಗಳು

೧)ಕಾವೇರಿ ಕೂಗು ರೈತರಿಗೆ ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ಕಾವೇರಿ ಜಲಾನಯನ ಪ್ರದೇಶದಲ್ಲಿ ೨೪೨ ಕೋಟಿ ಮರಗಳನ್ನು ನೆಡಲು ಸಹಾಯ ಮಾಡುತ್ತದೆ.

೨)ಇದು ಮಣ್ಣಿನಲ್ಲಿರುವ ಸಾವಯವ ಅಂಶವನ್ನು ಪುನಃ ತುಂಬಿಸುತ್ತದೆ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಧಾರಣವನ್ನು ಅಂದಾಜು ೪೦ ಶೇಕಡ ಹೆಚ್ಚಿಸುತ್ತದೆ.

೩)ಮರಗಳು ರೈತರ ಆದಾಯವನ್ನು ೫-೭ ವರ್ಷಗಳಲ್ಲಿ ೩-೮ ಪಟ್ಟು ಹೆಚ್ಚಿಸುತ್ತದೆ.

ಅನುಯಾಯಿಗಳು[ಬದಲಾಯಿಸಿ]

ರ‍್ಯಾಲಿಗಾಗಿ ರಾಜಕಾರಣಿಗಳಿಂದ ಹಿಡಿದು ನಟರವರೆಗೆ, ವಿಜ್ಞಾನಿಗಳಿಂದ ಹಿಡಿದು ಉದ್ಯಮಿಗಳವರೆಗೆ, ಕ್ರೀಡಾಪಟುಗಳು, ವಿಶ್ವ ನಾಯಕರು ಮತ್ತು ಇನ್ನೂ ಅನೇಕ ಕ್ಷೇತ್ರಗಳಿಂದ ಬೆಂಬಲಿಸುವ ಜನರಿದ್ದಾರೆ ಮತ್ತು ಮುಖ್ಯವಾಗಿ ದೇಶಾದ್ಯಂತದ ಸಾಮಾನ್ಯ ಜನರು ಮತ್ತು ರೈತರು ಸಹ ರ‍್ಯಾಲಿಯನ್ನು ಬೆಂಬಲಿಸುತ್ತಿದ್ದಾರೆ[೮]. ನದಿ ರ‍್ಯಾಲಿಗೆ ಕೆಪಿಎಲ್ ಸಹ ಕೈಜೋಡಿಸಿದೆ.

ಪರಿಣಾಮಗಳು[ಬದಲಾಯಿಸಿ]

ನದಿಗಳ ರ್ಯಾಲಿಯ ಸದ್ಗುರು ಅವರನ್ನು ಸಂಯುಕ್ತ ರಾಷ್ಟ್ರದ ವಾಟರ್ ಆಕ್ಷನ್ ದಶಕದ[೯] ಅಂಗವಾಗಿ ಮಾರ್ಚ್ ೨೨, ೨೦೧೮ರ, ನೀರಿನ ದಿನದಂದು ಮಾತನಾಡಲು ಆಹ್ವಾನಿಸಲಾಯಿತು[೧೦].

'ಪರಿಸರ ಸಂರಕ್ಷಣೆಯು, ಆರ್ಥಿಕತೆಗೆ ವಿರುದ್ಧವಾಗಿರದೆ ಎರಡೂ ಒಗ್ಗೂಡಿ ಸಾಗುವುದೇ ಈ ಅಭಿಯಾನದ ನಿಜವಾದ ಯಶಸ್ಸು' ಎಂದು ಸದ್ಗುರು ಹೇಳುತ್ತಾರೆ

ಇದನ್ನೂ ಓದಿ[ಬದಲಾಯಿಸಿ]

ಈಶ ಪ್ರತಿಷ್ಠಾನ

ಉಲ್ಲೇಖಗಳು[ಬದಲಾಯಿಸಿ]

  1. http://cgwb.gov.in/CGWA/LIST%20WINNERS%20NATIONAL%20WATER%20AWARDS-2018.pdf
  2. https://www.ndtv.com/india-news/groundwater-depletion-in-india-major-concern-warns-report-2009947
  3. https://cdn.isha.ws/public/docs/pdir/RFR_RevitalizationOfRiversInIndia-Web.pdf
  4. https://isha.sadhguru.org/rally-for-rivers/415-crore-project-approved-cabinet-rally-rivers-revitalisation-waghari-river-yavatmal/
  5. https://www.hindustantimes.com/mumbai-news/in-7-years-76-farmers-committed-suicide-in-maharashtra-due-to-indebtedness-survey/story-EucqnXofEwItHqFtETLQDO.html
  6. https://www.ishaoutreach.org/en/cauvery-calling
  7. https://www.ishaoutreach.org/en/cauvery-calling?utm_campaign=aw-caca-search-conv-branded-kw-in-en&utm_medium=cpc&utm_source=google&utm_content=search-ad&utm_term=branded&gclid=EAIaIQobChMI2ve1mZGl5AIVjIRwCh1cnAWUEAAYASAAEgI0l_D_BwE
  8. https://isha.sadhguru.org/rally-for-rivers/supporters/
  9. https://www.un.org/sustainabledevelopment/water-action-decade/
  10. https://economictimes.indiatimes.com/news/politics-and-nation/sadhguru-calls-for-concerted-action-to-save-worlds-water-bodies/articleshow/63415016.cms?from=mdr