ಟಾಂಗ
ಗೋಚರ
ಟಾಂಗ ಎಂದರೆ ಒಂಟಿ ಕುದುರೆಯಿಂದ ಎಳೆಯಲ್ಪಡುವ ಲಘು ಗಾಡಿ ಅಥವಾ ಸಾರೋಟು. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಇದನ್ನು ಸಾರಿಗೆಗಾಗಿ ಬಳಸಲಾಗುತ್ತದೆ. ಗಾಡಿಯ ಮೇಲೆ ಮೇಲ್ಕಟ್ಟಿರುತ್ತದೆ ಮತ್ತು ಒಂದೇ ಜೊತೆ ದೊಡ್ಡ ಗಾಲಿಗಳಿರುತ್ತವೆ. ಪ್ರಯಾಣಿಕರು ತಮ್ಮ ಆಸನಗಳ ಮೇಲೆ ಕೂಡಲು ಹಿಂದಿನಿಂದ ಹತ್ತುತ್ತಾರೆ ಮತ್ತು ಚಾಲಕನು ಗಾಡಿಯ ಮುಂದಿನ ಭಾಗದಲ್ಲಿ ಕೂಡುತ್ತಾನೆ.[೧] ಸಾಮಾನು ಸರಂಜಾಮುಗಳಿಗಾಗಿ ಗಾಡಿಯ ಕೆಳಗೆ ಗಾಲಿಗಳ ನಡುವೆ ಸ್ವಲ್ಪ ಜಾಗವಿರುತ್ತದೆ. ಹಲವುವೇಳೆ ಈ ಜಾಗವನ್ನು ಕುದುರೆಗಳಿಗಾಗಿ ಹುಲ್ಲನ್ನು ಇಡಲು ಬಳಸಲಾಗುತ್ತದೆ.
ಮೋಟಾರು ವಾಹನಗಳು ಬರುವುದಕ್ಕೆ ಮುಂಚೆ ಟಾಂಗಗಳು ಜನಪ್ರಿಯವಾಗಿದ್ದವು ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ ಈಗಲೂ ಬಳಕೆಯಲ್ಲಿವೆ. ಸವಾರಿ ಮಾಡಲು ಮೋಜಾಗಿರುವುದರಿಂದ ಇವು ಸಾರಿಗೆಯ ಜನಪ್ರಿಯ ಸಾಧನವಾಗಿವೆ, ಮತ್ತು ಸಾಮಾನ್ಯವಾಗಿ ಟ್ಯಾಕ್ಸಿ ಅಥವಾ ಆಟೊರಿಕ್ಷಾಗಳಿಗಿಂತ ಕಡಿಮೆ ಬಾಡಿಗೆಯನ್ನು ಹೊಂದಿರುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ Gilbert, William H., Jr. (1944). Peoples of India. Washington: Smithsonian Institution. p. 16.
{{cite book}}
: CS1 maint: multiple names: authors list (link)