ಸದಸ್ಯ:Priyankayk/ನನ್ನ ಪ್ರಯೋಗಪುಟ
ಗೀತಿಕ ಜಾಕರ್
[ಬದಲಾಯಿಸಿ]ಗೀತಿಕ ಜಾಕರ್ ಭಾರತದ ಕುಸ್ತಿ ವಿಭಾಗದ ಕ್ರೀಡಾಪಟು.
ಇವರು ೧೮ ಅಗಸ್ತ್ ೧೯೮೫ರಲ್ಲಿ ಹರಿಯಾಣದಲ್ಲಿ ಜನಿಸಿದರು.ಇವರು ಕ್ರೀಡಾ ಹಿನ್ನೆಲೆಯಿರುವ ಪರಿವಾರದಿಂದ ಬಂದವರಾಗಿದ್ದಾರೆ.ಇವರ ತಂದೆ ಸತ್ಯವೀರ್ ಸಿಂಗ್ ಜಾಕರ್ ಹರಿಯಾಣ ದಲ್ಲಿ ಕ್ರೀಡಾ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವರು. ಗೀತಿಕ ಜಾಕರ್ ರ ಸಾಧನೆಗೆ ಹರಿಯಾಣದ ಸರಕಾರದಿಂದ ಭೀಮ್ ಪ್ರಶಸ್ತಿ ದೊರಕಿದೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಇವರು ೧೩ನೇ ವಯಸ್ಸಿನಲ್ಲಿ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಲು ತೊಡಗಿದರು.ಇವರು ಪ್ರತಿಭಾವಂತ ವಿದ್ಯಾರ್ತಿಯೂ ಹೌದು.ಹರಿಯಾಣದಲ್ಲಿ ಎಗ್ಸಿಕ್ಯೂಟಿವ್ ಇಂಜಿನಿಯರ್ ಪದವಿಯಲ್ಲಿರುವ ಕಮಲದೀಪ್ ಸಿಂಗ್ ರಾನ ರವರನ್ನು ಮದುವೆಯಾದರು.
ಕ್ರೀಡಾ ಜೀವನ ಮತ್ತು ಪ್ರಶಸ್ತಿ
[ಬದಲಾಯಿಸಿ]೨೦೦೨ನೇ ಇಸವಿಯಲ್ಲಿ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ನಡೆದ ವರ್ಲ್ದ್ ರೆಸ್ಲಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದರು.ಇಲ್ಲಿಂದ ಇವರ ಅಂತರಾಸ್ಟ್ರೀಯ ಕ್ರೀಡಾ ಜೀವನ ಆರಂಭವಾಯಿತು.ಈ ಸ್ಪರ್ದೆಯಲ್ಲಿ ಇವರು ಕ್ವಾಟರ್ ಫ಼ೈನಲ್ ವರೆಗೆ ತಲುಪಿದರು.ಕೋಮನ್ ವೆಲ್ತ್ ಚಾಂಪಿಯನ್ ಶಿಪ್ ನ ೬೩ಕೆಜಿ ವಿಭಾಗದ ಕುಸ್ತಿಯಲ್ಲಿ ಇವರು ಚಿನ್ನದ ಪದಕ ಗೆದ್ದಿರುವರು.ಭಾರತ್ ಕೇಸರಿ ಎಂಬ ಬಿರುದು ಕೂಡ ಇವರ ಸಾಧನೆಗೆ ಲಭಿಸಿದೆ. [೧]೨೦೦೩ರಲ್ಲಿ ಲಂಡನಿನ ಕೆನಡದಲ್ಲಿ ನಡೆದ ಕೋಮನ್ ವೆಲ್ತ್ ಸ್ಪರ್ದೆಯಲ್ಲಿ ಚಿನ್ನದ ಪದಕ ಗೆದ್ದರು.ಲಿಥುವಾನಿಯ ದಲ್ಲಿ ನಡೆದ ವರ್ಲ್ದ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು.೨೦೦೫ರಲ್ಲಿ ನಡೆದ ಕೋಮನ್ ವೆಲ್ತ್ ಸ್ಪರ್ದೆಯಲ್ಲಿ ಚಿನ್ನದ ಪದಕ ಗೆದ್ದರು.ಕೋಮನ್ ವೆಲ್ತ್ ನ ಉತ್ತಮ ಕುಸ್ತಿಪಟು ಎಂಬ ಬಿರುದು ದೊರೆತ ಭಾರತದ ಮೊದಲ ಮಹಿಳೆ ಇವರಾಗಿದ್ದರೆ.೨೦೦೯ರಲ್ಲಿ ಇವರಿಗೆ ಕಲ್ಪನಾಚಾವ್ಲ ಎಕ್ಸಲೆನ್ಸ್ ಪ್ರಸಸ್ತಿ ದೊರೆತಿದೆ.೨೦೧೨ರಲ್ಲಿ ನಡೆದ ಸೀನಿಯರ್ ನೇಶನಲ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ತನ್ನದಾಗಿಸಿದ್ದಾರೆ.ಹಲವು ಏಶಿಯನ್ ಚಾಂಪಿಯನ್ ಶಿಪ್ ನಲ್ಲಿ ಇವರು ಭಾಗವಹಿಸಿದ್ದು ೨೦೧೩ರಲ್ಲಿ ದೆಹಲಿಯಲ್ಲಿ ನಡೆದ ಏಶಿಯನ್ ಚಾಂಪಿಯನ್ ಶಿಪ್ ನಲ್ಲಿ ತಾಮ್ರದ ಪದಕ ಗೆದ್ದರು.೨೦೧೪ರಲ್ಲಿ ನಡೆದ ಸ್ಕಾಟ್ಲೆಂಡ್ ನ ಗ್ಲಾಸ್ಗೌ ನಲ್ಲಿ ನಡೆದ ಕೋಮನ್ ವೆಲ್ತ್ ಗೇಮ್ಸ್ ನಲ್ಲಿ ಹಾಗು ಸೌತ್ ಕೊರಿಯಾದಲ್ಲಿ ನಡೆದ ಎಶಿಯನ್ ಗೇಮ್ಸ್ ನಲ್ಲಿ ಕ್ರಮವಾಗಿ ಬೆಳ್ಳಿ ಪದಕ ಮತ್ತು ತಾಮ್ರದ ಪದಕಗಳನ್ನು ತನ್ನದಾಗಿಸಿದ್ದಾರೆ. [೨]
ಉಲ್ಲೇಖ
[ಬದಲಾಯಿಸಿ]