ವಾಯವೀಯ ಬೇರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲದ ಮರ

ವಾಯವೀಯ ಬೇರುಗಳು ಎಂದರೆ ನೆಲದ ಮೇಲಿನ ಬೇರುಗಳು. ಇವು ಬಹುತೇಕ ಯಾವಾಗಲೂ ಅಸ್ಥಾನಿಕವಾಗಿರುತ್ತವೆ. ಇವು ವೈವಿಧ್ಯಮಯ ಸಸ್ಯ ಪ್ರಜಾತಿಗಳಲ್ಲಿ ಕಂಡುಬರುತ್ತವೆ, ಉದಾಹರಣೆಗೆ ಆರ್ಕೀಡ್‍ಗಳಂತಹ ಅಧಿಸಸ್ಯಗಳು, ಮ್ಯಾಂಗ್ರೋವ್‍ಗಳಂತಹ ಉಷ್ಣವಲಯದ ಕರಾವಳಿ ಜೌಗು ಮರಗಳು, ಉತ್ಪನ್ನದಾಯಕ ಆಲದ ಮರಗಳು, ಬಿಸಿ ಸಮಶೀತೋಷ್ಣ ವಲಯದ ಮಳೆಕಾಡು ರಾಟಾ ಮತ್ತು ನ್ಯೂ ಜೀಲಂಡ್‍ನ ಪೊಹುಟುಕಾವಾ ಮರಗಳು ಮತ್ತು ಕಾಮನ್ ಐವಿ ಹಾಗೂ ಪಾಯಿಸನ್ ಐವಿಯಂತಹ ಬಳ್ಳಿಗಳು.

"ನಿಗ್ರಾಹಕ ಸಸ್ಯಗಳು" (ಆಸರೆ ಬೇರು)[ಬದಲಾಯಿಸಿ]

ಆಲದ ಮರಗಳು ನಿಗ್ರಾಹಕ ಮರಗಳ ಉದಾಹರಣೆಯಾಗಿವೆ. ಇವು ತಮ್ಮ ಜೀವನವನ್ನು ಮತ್ತೊಂದು ಮರದ ಅಗ್ರಭಾಗದಲ್ಲಿ ಅಧಿಸಸ್ಯವಾಗಿ ಆರಂಭಿಸುತ್ತವೆ. ಇವುಗಳ ಬೇರುಗಳು (ಬಿಳಲುಗಳು) ಕೆಳಮುಖವಾಗಿ ಮತ್ತು ಆಶ್ರಯದಾತ ಸಸ್ಯದ ಸುತ್ತ ಬೆಳೆಯುತ್ತವೆ, ಒಮ್ಮೆ ನೆಲ ಮುಟ್ಟಿದ ಮೇಲೆ ಇವುಗಳ ಬೆಳವಣಿಗೆಯು ವೇಗಗೊಳ್ಳುತ್ತದೆ. ಕಾಲಾಂತರದಲ್ಲಿ, ಬೇರುಗಳು ಒಗ್ಗೂಡಿ ಹುಸಿಕಾಂಡದ ರಚನೆಯಾಗುತ್ತದೆ ಮತ್ತು ಇದು ಆಶ್ರಯದಾತ ಸಸ್ಯವನ್ನು ಅದುಮುತ್ತಿದೆ ಎಂಬ ನೋಟವನ್ನು ನೀಡಬಹುದು.[೧]

ಉಲ್ಲೇಖಗಳು[ಬದಲಾಯಿಸಿ]

  1. "Epiphytes - adaptations to an aerial habitat". Royal Botanic Gardens, Kew. Archived from the original on 2011-12-29. {{cite web}}: Unknown parameter |dead-url= ignored (help)