ಮಕ್ಕಳ ಪಾಲನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಕ್ಕಳ ಪಾಲನೆ (ಮಕ್ಕಳ ಪೋಷಣೆ) ಎಂದರೆ ಶೈಶವಾವಸ್ಥೆಯಿಂದ ಪ್ರೌಢಾವಸ್ಥೆಯವರೆಗೆ ಒಂದು ಮಗುವಿನ ದೈಹಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಬೆಂಬಲಿಸುವ ಪ್ರಕ್ರಿಯೆ. ಮಕ್ಕಳ ಪಾಲನೆಯು ಒಂದು ಮಗುವನ್ನು ಪೋಷಿಸುವಲ್ಲಿನ ಜಟಿಲತೆಗಳನ್ನು ಸೂಚಿಸುತ್ತದೆ ಮತ್ತು ಪ್ರತ್ಯೇಕದೃಷ್ಟಿಯಿಂದ ಜೈವಿಕ ಸಂಬಂಧವನ್ನು ಸೂಚಿಸುವುದಿಲ್ಲ.[೧]

ಚರ್ಚೆಯಲ್ಲಿರುವ ಮಗುವಿಗೆ ರಕ್ತಸಂಬಂಧದಿಂದ ಹೆತ್ತವರಾಗಿರುವವರು ಅತ್ಯಂತ ಸಾಮಾನ್ಯವಾಗಿ ಮಕ್ಕಳ ಪಾಲನೆಯಲ್ಲಿ ರಕ್ಷಕರಾಗಿರುತ್ತಾರೆ. ಆದರೆ ಅಕ್ಕ/ಅಣ್ಣ, ಅಜ್ಜ/ಅಜ್ಜಿ, ದತ್ತು ಪೋಷಕ, ಚಿಕ್ಕಮ್ಮ/ದೊಡ್ಡಮ್ಮ, ಚಿಕ್ಕಪ್ಪ/ದೊಡ್ಡಪ್ಪ ಅಥವಾ ಅನ್ಯ ಕುಟುಂಬ ಸದಸ್ಯ, ಅಥವಾ ಕುಟುಂಬ ಸ್ನೇಹಿತರಂತಹ ಇತರರು ಕೂಡ ಪೋಷಕರು ಆಗಿರಬಹುದು.[೨] ಮಕ್ಕಳ ಪಾಲನೆಯಲ್ಲಿ ಸರಕಾರಗಳು ಮತ್ತು ಸಮಾಜವೂ ಪಾತ್ರವನ್ನು ಹೊಂದಿರಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Jane B. Brooks (28 September 2012). The Process of Parenting: Ninth Edition. McGraw-Hill Higher Education. ISBN 978-0-07-746918-4.
  2. Bernstein, Robert (20 February 2008). "Majority of Children Live With Two Biological Parents". Archived from the original on 20 April 2008. Retrieved 26 March 2009.