ವಿಷಯಕ್ಕೆ ಹೋಗು

ಜವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುದುರೆಯ ಬಾಲ

ಜವಿ (ಜಮಿ) ಎಂದರೆ ಕುದುರೆಗಳ ಅಯಾಲುಗಳು ಹಾಗೂ ಬಾಲಗಳ ಮೇಲೆ ಬೆಳೆಯುವ ಉದ್ದನೆಯ, ಒರಟು ಕೂದಲು. ಇದನ್ನು ಸಜ್ಜು, ಕುಂಚಗಳು, ಸಂಗೀತ ವಾದ್ಯಗಳ ಕಮಾನುಗಳು, ಕೂದಲಬಟ್ಟೆ ಎಂದು ಕರೆಯಲ್ಪಡುವ ಸವೆತ ತಡೆಯಬಲ್ಲ ಬಟ್ಟೆ, ಜವಿ ಗಾರೆ (ಹಿಂದೆ ನಿರ್ಮಾಣೋದ್ಯಮದಲ್ಲಿ ಬಳಸಲಾಗುತ್ತಿದ್ದ ಗೋಡೆ ಲೇಪನದ ವಸ್ತು ಮತ್ತು ಈಗ ಕೇವಲ ಹಳೆಯ ಕಟ್ಟಡಗಳಲ್ಲಿ ಕಂಡುಬರುತ್ತದೆ) ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತದೆ.

ಜವಿಯು ಬಹಳ ಬಿರುಸು ಅಥವಾ ಬಹಳ ನವಿರು ಹಾಗೂ ಮೆತುವಾಗಿರಬಹುದು; ಅಯಾಲಿನ ಕೂದಲು ಸಾಮಾನ್ಯವಾಗಿ ಬಾಲದ ಕೂದಲಿಗಿಂತ ಹೆಚ್ಚು ಮೃದು ಹಾಗೂ ಹೆಚ್ಚು ಗಿಡ್ಡವಿರುತ್ತದೆ. ಜವಿಯ ಸ್ಪರ್ಶವು ಕುದುರೆಯ ತಳಿ ಹಾಗೂ ನಿರ್ವಹಣೆಯಿಂದ ಪ್ರಭಾವಿತವಾಗಬಹುದು. ಇದರಲ್ಲಿ ಆಹಾರ ಅಥವಾ ವಾಯುಗುಣದಂತಹ ನೈಸರ್ಗಿಕ ಪರಿಸ್ಥಿತಿಗಳು ಸೇರಿರುತ್ತವೆ. ಸಂಸ್ಕರಣೆ ಕೂಡ ಗುಣಮಟ್ಟ ಹಾಗೂ ಸ್ಪರ್ಶದ ಮೇಲೆ ಪ್ರಭಾವ ಬೀರಬಹುದು.

ಜವಿಯು ಒಂದು ಪ್ರೋಟೀನ್ ಎಳೆಯಾಗಿದ್ದು ನೀರನ್ನು ನಿಧಾನವಾಗಿ ಹೀರಿಕೊಳ್ಳುತ್ತದೆ. ಆದರೆ ಇದಕ್ಕೆ ಪ್ರೋಟೀನ್ ಎಳೆಗಳಿಗೆ ಸೂಕ್ತವಾದ ಸಾಂಪ್ರದಾಯಿಕ ಬಣ್ಣಗಳನ್ನು ಬಳಸಿ ಪರಿಣಾಮಕಾರಿಯಾಗಿ ಬಣ್ಣ ಹಾಕಬಹುದು. ಇದನ್ನು ಫ಼ೆಲ್ಟಿನ ರೂಪಕೆ ತರಬಹುದು, ಆದರೆ ಸುಲಭವಾಗಿ ಅಲ್ಲ.[]

ಉಲ್ಲೇಖಗಳು

[ಬದಲಾಯಿಸಿ]
  1. Fröberg, Kerstin. "Horsehair as a Textile." 1998. Accessed December 8, 2010.


"https://kn.wikipedia.org/w/index.php?title=ಜವಿ&oldid=904270" ಇಂದ ಪಡೆಯಲ್ಪಟ್ಟಿದೆ