ಅಯಾಲು (ಕುದುರೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉದ್ದವಾದ ಅಯಾಲು ಇರುವ ಕುದುರೆ

ಕುದುರೆಗಳಲ್ಲಿ ಅಥವಾ ಇತರ ಕುದುರೆ ಜಾತಿಯ ಪ್ರಾಣಿಗಳಲ್ಲಿ, ಅಯಾಲು ಎಂದರೆ ಕುತ್ತಿಗೆಯ ಮೇಲಿನಿಂದ ಬೆಳೆಯುವ ಕೂದಲು. ಇದು ತಲೆಯಿಂದ ಭುಜಾಸ್ಥಿಯ ನಡುವಿನ ಏಣಿನವರೆಗೆ ಮುಟ್ಟುತ್ತದೆ, ಮತ್ತು ಇದು ಮುಂಜುಟ್ಟನ್ನು ಒಳಗೊಳ್ಳುತ್ತದೆ. ಇದು ಕುದುರೆಯ ಉಳಿದ ಕವಚಕ್ಕಿಂತ ಹೆಚ್ಚು ದಪ್ಪ ಹಾಗೂ ಹೆಚ್ಚು ಒರಟಾಗಿರುತ್ತದೆ, ಮತ್ತು ಕತ್ತನ್ನು ಹೆಚ್ಚುಕಡಿಮೆ ಮುಚ್ಚಲು ಸ್ವಾಭಾವಿಕವಾಗಿ ಬೆಳೆಯುತ್ತದೆ. ಆನುವಂಶಿಕತೆಯು ಪಾತ್ರವಹಿಸುತ್ತದೆ. ಹಾಗಾಗಿ ಕೆಲವು ಕುದುರೆಗಳು ಹೆಚ್ಚು ಉದ್ದ ಹಾಗೂ ಹೆಚ್ಚು ದಪ್ಪವಾದ ಅಯಾಲನ್ನು ಹೊಂದಿದ್ದರೆ, ಇತರ ಕುದುರೆಗಳು ಚಿಕ್ಕ ಮತ್ತು ಹೆಚ್ಚು ತೆಳುವಾದ ಅಯಾಲನ್ನು ಹೊಂದಿರುತ್ತವೆ. ಅಯಾಲು ಕುತ್ತಿಗೆಯನ್ನು ಬೆಚ್ಚಗಿಡುತ್ತದೆ, ಮತ್ತು ಪ್ರಾಣಿಯು ಮಳೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗದಿದ್ದರೆ ಪ್ರಾಯಶಃ ನೀರು ಕುತ್ತಿಗೆಯಿಂದ ಹರಿದುಹೋಗಲು ನೆರವಾಗುತ್ತದೆ ಎಂದು ನಂಬಲಾಗಿದೆ. ನೊಣಗಳ ವಿರುದ್ಧ ಬಾಲವು ಸಾಮಾನ್ಯವಾಗಿ ಮೊದಲ ರಕ್ಷಣೆಯಾದರೂ, ಅಯಾಲು ಕುದುರೆಯ ಮುಂಭಾಗಕ್ಕೆ ನೊಣಗಳಿಂದ ಸ್ವಲ್ಪ ರಕ್ಷಣೆಯನ್ನೂ ಒದಗಿಸುತ್ತದೆ.