ವಿಷಯಕ್ಕೆ ಹೋಗು

ಬೂರಾ ಸಕ್ಕರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೂರಾ ಸಕ್ಕರೆಯು (ಚೀನಿ) ಹರಳು ಸಕ್ಕರೆಯನ್ನು ಪುಡಿ ಸ್ಥಿತಿಗೆ ಬರುವಂತೆ ಬೀಸಿ ಉತ್ಪಾದಿಸಲಾದ ನುಣ್ಣಗೆ ರುಬ್ಬಿದ ಸಕ್ಕರೆ. ಅಂಟಿಕೊಳ್ಳುವುದನ್ನು ತಡೆಯಲು ಮತ್ತು ಹರಿವನ್ನು ಸುಧಾರಿಸಲು ಇದು ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಉಂಡೆ ನಿರೋಧಕ ಪದಾರ್ಥವನ್ನು ಹೊಂದಿರುತ್ತದೆ. ಬಹುತೇಕವೇಳೆ ಇದನ್ನು ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತದಾದರೂ, ಬೂರಾ ಸಕ್ಕರೆಯನ್ನು ಸಾಮಾನ್ಯ ಹರಳು ಸಕ್ಕರೆಯನ್ನು ಕಾಫಿ ಅರೆಯುವ ಯಂತ್ರದಲ್ಲಿ ಸಂಸ್ಕರಿಸಿ, ಅಥವಾ ಒರಳು ಮತ್ತು ಕುಟ್ಟಾಣಿಯಲ್ಲಿ ಕೈಯಿಂದ ಪುಡಿಪುಡಿಮಾಡಿಯೂ ತಯಾರಿಸಬಹುದು.

ಬೂರಾ ಸಕ್ಕರೆಯನ್ನು ಕೈಗಾರಿಕಾ ಆಹಾರ ಉತ್ಪಾದನೆಯಲ್ಲಿ ಬೇಗನೇ ಕರಗುವ ಸಕ್ಕರೆ ಬೇಕಾದಾಗ ಬಳಸಲಾಗುತ್ತದೆ. ಮನೆಯಲ್ಲಿ ಅಡುಗೆಮಾಡುವವರು ಇದನ್ನು ಮುಖ್ಯವಾಗಿ ಅಲಂಕರಣ ಅಥವಾ ಸಕ್ಕರೆ ಸಿಂಪಡಿಕೆ ಹಾಗೂ ಇತರ ಕೇಕ್ ಅಲಂಕಾರಗಳನ್ನು ಮಾಡಲು ಬಳಸುತ್ತಾರೆ. ಇದನ್ನು ಹಲವುವೇಳೆ ಬೇಕ್ ಮಾಡಿದ ಪದಾರ್ಥಗಳ ಮೇಲೆ ಸೂಕ್ಷ್ಮವಾದ ಸಿಹಿರುಚಿ ಹಾಗೂ ನಯವಾದ ಅಲಂಕಾರವನ್ನು ಸೇರಿಸಲು ಚಿಮುಕಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]