ವಿಷಯಕ್ಕೆ ಹೋಗು

ಕರ್ಪೂರಗೌರಂ ಕರುಣಾವತಾರಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವ ಯಜುರ್ ಮಂತ್ರ ಶಿವನನ್ನು ಕುರಿತ ಸಂಸ್ಕೃತ ಮಂತ್ರಗಳಲ್ಲಿ ಶಿವ ಯಜುರ್ ಮಂತ್ರ ಕೂಡ ಒಂದು.

ಶ್ಲೋಕ

[ಬದಲಾಯಿಸಿ]

ಕರ್ಪೂರಗೌರಂ ಕರುಣಾವತಾರಂ ಸಂಸಾರಸಾರಂ ಭುಜಗೇಂದ್ರಹಾರಂ|

ಸದಾವಸಂತಂ ಹೃದಯಾರವಿಂದೇ ಭವಂ ಭವಾನಿ ಸದಾ ನಮಾಮಿ ||

ಮಂದಾರಮಾಲಾ ಕುಲಿತಾಲಕಾಯೈ ಕಪಾಲಮಾಲಾಂಕೃತ ಶೇಖರಾಯ |

ದಿವ್ಯಾಂಬರಾಯೈ ಚ ದಿಗಂಬರಾಯ, ನಮಃ ಶಿವಾಯೈ ಚ ನಮಃ ಶಿವಾಯ ||


ಪದಗಳ ಅರ್ಥ

[ಬದಲಾಯಿಸಿ]

ಕರ್ಪೂರದಂತೆ ಪವಿತ್ರವಾದನೇ

ಕರುಣೆಯನ್ನೇ ಹೊತ್ತು ಅವತಾರ ತಳೆದವನೇ

ಪ್ರಪಂಚದ ಸಾರವೇ ಆದವನೇ
ಹಾವನ್ನು ಹಾರವಾಗಿ ಹೊಂದಿರುವವನೇ

ನನ್ನ ಹೃದಯಕಮಲದಲ್ಲಿ ಸದಾ ವಸಂತ ಋತುವನ್ನು ಉಂಟುಮಾಡುವವನೇ
ಭವಾನಿ ಮಾತೆಯ ಜೊತೆ ಇರುವ ನಿನಗೆ, ಸದಾ ನಮಸ್ಕಾರ ಮಾಡುವೆನು
ಮಂದಾರ ಪುಷ್ಪದ ಮಾಲೆಯನ್ನು ಧರಿಸಿ, ರುಂಡಗಳಿಂದ ಅಲಂಕಾರಗೊಂಡವನೇ
ದಿಗಂಬರನಾಗಿದ್ದರೂ, ದಿವ್ಯವಾಗಿ ಇರುವವನೇ, ಶಿವನೇ ನಿನಗೆ ನಮಸ್ಕಾರ, ಶಿವನೇ ನಿನಗೆ ನಮಸ್ಕಾರ,

ಹಿನ್ನೆಲೆ

[ಬದಲಾಯಿಸಿ]

ದಕ್ಷನ ೨೭ ಪುತ್ರಿಯರು ಒಂದೊಂದು ನಕ್ಷತ್ರಗಳಾಗಿರುತ್ತಾರೆ. ಎಲ್ಲರ ಪತಿಯೂ ಚಂದ್ರನೇ. ಅವರಲ್ಲಿ ರೋಹಿಣಿಯ ಬಗ್ಗೆ ಚಂದ್ರನಿಗೆ ಒಲವು ಹೆಚ್ಚು. ಅವರು ಎಲ್ಲರೂ ತಮ್ಮ ತಂದೆ ದಕ್ಷನ ಬಳಿ ದೂರು ಒಯ್ದಾಗ, ಚಂದ್ರನು ಕಾಣೆಯಾಗಲಿ ಎಂದು ದಕ್ಷನು ಶಾಪ ನೀಡುತ್ತಾನೆ. ದಕ್ಷನಿಂದ ಶಾಪ ಪಡೆದ ಚಂದ್ರನು, ಶಿವನನ್ನು ಕುರಿತು ೧೫ ದಿನ ಉಬ್ಬುತ್ತಾ, ೧೫ ದಿನ್ ಕುಗ್ಗುತ್ತಾ ಇರಲಿ ಎಂದು ಶಿವನು ಅನುಗ್ರಹ ಮಾಡುತ್ತಾನೆ.[] ಸೋಮವಾರ, ಈ ಮಂತ್ರವನ್ನು ಪಠಿಸಿ ಶಿವನನ್ನು ಪೂಜಿಸುವುದು ಶುಭಕರ ಎಂಬುದು ನಂಬಿಕೆ.

  • ಶ್ರೀ ಮಂಜುನಾಥ ಚಿತ್ರದಲ್ಲಿ ಈ ಮಂತ್ರವನ್ನು ಹಾಡಾಗಿ ಬಳಸಿಕೊಳ್ಳಲಾಗಿದೆ.
  • ದೇವೋಂಕೇ ದೇವ್ ಮಹಾದೇವ್ ಧಾರಾವಾಹಿಯಲ್ಲಿ ಈ ಮಂತ್ರವನ್ನು ಬಳಸಿದ್ದು, ಬಲು ಜನಪ್ರಿಯವಾಗಿತ್ತು.[]

ಉಲ್ಲೇಖಗಳು

[ಬದಲಾಯಿಸಿ]

[] [] []

  1. https://books.google.com/books?id=OuBzAAAACAAJ
  2. https://books.google.com/books?id=jj_JpunW_8YC&pg=PA3
  3. https://vedicfeed.com/karpur-gauram-karunavtaaram-shiva-yajur-mantra-aarati/