ವಿಷಯಕ್ಕೆ ಹೋಗು

ಜುಬುಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನಪ್ರೀಯ ಜನಪದ ಆಟಗಳಲ್ಲಿ ಜುಬುಲಿಯು ಒ‍ಂದು.ಈ ಆಟದಲ್ಲಿ ಪಲ್ಲೇಯಾಕಾರದ ವಸ್ತುವನ್ನು ಬಳಸುವುದರಿಂದ ಪರ್ಯಾಯವಾಗಿ ಪಲ್ಲೇಯಾಟ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬಹುತೇಕ ಕಡೆ ಆಟದ ಸ್ವರೂಪ ಒಂದೇ ಆಗಿದ್ದರೂ ಅದರ ಪ್ರದರ್ಶನಗಳಲ್ಲಿ ಭಿನ್ನತೆ ಇರುತ್ತದೆ.ಬಳಸುವ ವಸ್ತು ,ಕೋಣೆಗಳ ಸಂಖ್ಯೆಯಿಂದಾಗಿ ಭಿನ್ನತೆಗಳು ಕಂಡು ಬರುತ್ತವೆ[].ಇದು ಹುಡುಗಿಯರೇ ಆಡುವ ಆಟವಿದು.ಗಂಡು ಮಕ್ಕಳೂ ಆಡುವುಂಟು.ಆರು ವರ್ಷದಿಂದ ಹದಿನೆಂಟು ವರ್ಷದವರೆಗಿನ ಹುಡುಗಿಯರೇ ಈ ಆಟವನ್ನು ಇಷ್ಟ ಪಡುತ್ತಾರೆ.ಜುಬುಲಿ ಒಂದು ಹೊರಾಂಗಣ ಆಟ. ಹಾಗಾಗಿ ಇದು ಮನೆಯಂಗಳ,ಗದ್ದೆ ,ಮೈದಾನ,ರಸ್ತೆ ಬದಿ ಮೊದಲಾದ ಸ್ಥಳಗಳಲ್ಲಿ ಆಡುವ ಆಟವಾಗಿದೆ.ಆಟ ನಿರ್ಧಾರವಾದ ಬಳಿಕ ಆಟಗಾರರು ಜುಬುಲಿಯ ಕೊಣೇಯ ತಯಾರಿ,ಪಲ್ಲೆಯ ಹುಡುಕಾಟ,ನಿಯಮಗಳ ಚರ್ಚೆ,ಅದನ್ನು ವಿವರಿಸಿಕೊಳ್ಳುವುದನ್ನು ಮಡುತ್ತಾರೆ.ಈ ಆಟದಲ್ಲಿ ಪಲ್ಲೆ ಪ್ರಧಾನ.ಇದು ಒಂದು ಬಗೆಯ ಗಂಭೀರ ಆಟ.ಇಲ್ಲಿ ಇತರ ಜನಪದ ಆಟಗಳಾದ ಹುಲಿ-ದನ ಆಟಗಳಂತಲ್ಲ.ಇಲ್ಲಿ ಜಗಳ-ಟೀಕೆಗಳಿಗೆ ಅವಕಾಶವಿಲ್ಲ.ಸಹ ಆಟಗಾರರು ,ಆಟಗಾರರಲ್ಲದ ಪ್ರೇಕ್ಷಕರು ಈ ಆಟವನ್ನು ಆಸಕ್ತಿ ಮತ್ತು ಗಂಭೀರತೆಗಳಿಂದ ನೋಡುತ್ತಾರೆ.ಈ ಆಟದಲ್ಲಿ ಪಲ್ಲೆ ಪ್ರಧಾನವಾದ್ದರಿಂದ ಅದರ ಆಯ್ಕೆಯಲ್ಲಿ ಹೆಚ್ಚು ಗಮನ ಹರಿಸುತ್ತಾರೆ.ಪರಿಸರದಲ್ಲಿ ದೊರೆಯುವ ಮಡಿಕೆ ಚೂರು,ಚಪ್ಪಡೆ ಕಲ್ಲು,ಹಂಚಿನ ತುಂಡುಗಳನ್ನೇ ಹೆಚ್ಚಾಗಿ ಬಳಸುತ್ತಾರೆ.ಜುಬುಲಿ ಕೋಣೆಗಳನ್ನು ಆಯಾತಾಕಾರದ ಗೆರೆಗಳ ಒಳಗಡೆ ರಚಿಸುತ್ತಾರೆ.ನಾಲ್ಕು ಕೋಣೆ,೮ ಕೋಣೆ,೧೦ ಕೋಣೆಗಳ ಆಟಗಳನ್ನು ಆಡುವುದುಂಟು.ಇದು ಕೆಲವೊಮ್ಮೆ ಆಟಗಾರರ ಸಂಖ್ಯೆಯನ್ನು ಹೊಂದಿಕೊಂಡು ಕೋಣೆಗಳ ಸಂಖ್ಯೆ ನಿರ್ಧಾರವಾಗುತ್ತದೆ.ಕೋಣೆಗಳಿಗೆ ಸಂಖ್ಯೆಗಳನ್ನೇ ಕೊಡುವುದು ಹೆಚ್ಚು.ಪ್ರದರ್ಷನಗಳಲ್ಲಿ ಬೇರೆ ಬೇರೆ ವಿಧ ಮತ್ತು ನಿಯಮಗಳಿರುತ್ತದೆ.ಮೊದಲನೇಯ ಕೋಣೆ ದೇವರ ಕೋಣೆ.ಇದರ ಹೊರಗೆ ಗೆರೆ ಹಾಕಿದ ನಿರ್ದಿಷ್ಟ ಜಾಗದಿಂದ ನಿಂತು ಮೊದಲನೆಯ ಕೋಣೆಗೆ ಪಲ್ಲೆ ಹಾಕಬೇಕು.ಪಲ್ಲೆ ಹಾಕಿದ ನಂತರ ಆರಂಭದ ಕೋಣೆಯಿಂದಲೇ ಪಲ್ಲೆಯನ್ನು ಹಾಕಿ ಆಟ ಆರಂಭಿಸಬೇಕು. ಟೊಂಕ ಹಾಕಿ ಹಾಕಿದ ಪಲ್ಲೆಯನ್ನು ಮೆಟ್ಟಬೇಕು. ನಂತರ ಟೊಂಕ ಹಾಕಿ ಪ್ರತಿಯೊಂದು ಕೋಣೆಗೂ ಪಲ್ಲೆಯನ್ನು ತಳ್ಳುತ್ತಾ ಮುಂದೆ ಹೋಗಬೇಕು. ಆದರೆ ಗೆರೆಗಳನ್ನು ಮುಟ್ಟಬಾರದು. ಎಲ್ಲಾ ಕೋಣೆಗಳಿಗೂ ಸಾಗಿದ ನಂತರ ೨,೩,೪ ಕೋಣೆಗಳಲ್ಲಿ ನಿಂತು ಇಡೀ ಆಟವನ್ನು ಪುನರಾವರ್ತನೆ ಮಾಡಿದರೆ ಒಂದು ಸುತ್ತಿನ ಆಟ ಮುಗಿಯುತ್ತದೆ. ಹೀಗೆ ಬೇರೆ ಬೇರೆ ನಿಯಮದಂತೆ ಹತ್ತು ಸುತ್ತಿನವರೆಗಿನ ಅಟವನ್ನು ಆಡುವುದುಂಟು[].

ಆಟದ ವಿಧ

[ಬದಲಾಯಿಸಿ]

ಆಟದ ವಿಧಾನ

[ಬದಲಾಯಿಸಿ]

ಮೊದಲಿಗೆ ನಾಲ್ಕು ಚೌಕಾಕಾರಗಳ ಒಂದು ಅಂಕಣವನ್ನು ಹಾಕಿಕೊಳ್ಳುತ್ತಾರೆ. ನಂತರದಲ್ಲಿ ಅಂಕಣದ ಯಾವುದೇ ಒಂದು ಬದಿಯಿಂದ ಚಪ್ಪಟೆಯಾದ ಕಲ್ಲನ್ನು ಅಂಕಣದ ಮೊದಲ ಚೌಕಕ್ಕೆ ಹಾಕುವುದರ ಮೂಲಕ ಆಟವನ್ನು ಆರಂಭಿಸುತ್ತಾರೆ. ಮೊದಲ ಚೌಕಕ್ಕೆ ಹಾಕಿದಂತಹ ಕಲ್ಲನ್ನು ಒಂಟಿಕಾಲಿನಿಂದ ತುಳಿದು ಮುಂದಿನ ಚೌಕಕ್ಕೆ ಹಾಕುತ್ತಾರೆ. ನಂತರ ಎರಡು,ಮೂರು ಹೀಗೆ ನಾಲ್ಕನೇ ಚೌಕದಿಂದ ಹೊರಕ‍್ಕೆ ಹಾಕಿ ಅದನ್ನು ಎರಡು ಕಾಲಿನಿಂದ ತುಳಿದು ನಂತರದಲ್ಲಿ ಕೈಯಲ್ಲಿ ತೆಗೆದು ಕಲ್ಲನ್ನು ಮುಂದಿನ ಚೌಕಾಕಾರದ ಅಂಕಣಕ್ಕೆ ಹಾಕುವ ಮೂಲಕ ಆಟವನ್ನು ಮುಂದುವರಿಸುತ್ತಾರೆ.ನಂತರದಲ್ಲಿ ಎರಡನೇ ಸುತ್ತಿನಲ್ಲಿ ಕಪ್ಪೆನಾ ಕುಷಿನಾ ಎಂದು ಎದುರಾಳಿ ಬಳಿ ಕೇಳಿ. ಅವರು ಕಪ್ಪೆ ಎಂದರೆ ಮೊದಲ ಚೌಕಕ್ಕೆ ಹಾಕಿದ ಕಲ್ಲು ಕಾಣದಂತೆ ಎರಡು ಕಾಲಿನಿಂದ ಮುಚ್ಚುತ್ತಾರೆ. ನಂತರ ಮುಂದಿನ ಅಂಕಣಕ್ಕೆ ಕಲ್ಲನ್ನು ಕಾಲಿನಿಂದ ಮುಂದೂಡುತ್ತಾ ಆಟವನ್ನು ಮುಂದುವರೆಸುತ್ತಾರೆ.ಕುಷಿ ಎಂದು ಹೇಳಿದರೆ ಕಲ್ಲು ಎರಡು ಕಾಲುಗಳ ಮದ್ಯಭಾಗದಲ್ಲಿರುವಂತೆ ಆಟವನ್ನು ಆಡುತ್ತಾರೆ. ಮುಂದೆ ಆಟವನ್ನು ಕಲ್ಲನ್ನು ಒಂದು, ಎರಡು, ಮೂರು ಬೆರಳು,ಅಂಗೈ,ಕಣ್ಣು,ಹಣೆ ಮೇಲಿಟ್ಟು ಕಣ್ಣನ್ನು ಮುಚ್ಚಿ ಚೌಕಾಕಾರದ ಅಂಕಣದ ಮೇಲೆ ಹೋಗಿ ಅಂಕಣದಿಂದ ಕಲ್ಲನ್ನು ಹೊರಹಾಕುವ ಮೂಲಕ ಆಟವನ್ನು ಪೂರ್ಣಗೊಳಿಸುತ್ತಾರೆ. []

ನಿಯಮಗಳು

[ಬದಲಾಯಿಸಿ]
  • ಮೊದಲ ಸುತ್ತಿನ ಆಟವನ್ನು ಒಂಟಿಕಾಲಿನಲ್ಲಿ ಆಡಬೇಕು.
  • ಆಟ ಆಡುವಾಗ ಕಲ್ಲು ಗೆರೆಗೆ ತಾಗಿದರೆ ಆಟಗಾರನು ಆ ಸುತ್ತಿನಿಂದ ಹೊರಹೋಗುತ್ತಾರೆ.
  • ಕಲ್ಲನ್ನು ಅಂಕಣದಿಂದ ಹೊರಹಾಕಿದ ನಂತರ ಮೊದಲು ಕಾಲಿನಿಂದ ತುಳಿದು ನಂತರ ಕೈಯಿಂದ ಹೆಕ್ಕಿಕೊಳ್ಳತ್ತಾರೆ
  • ಕಲ್ಲನ್ನು ಅಂಕಣದೊಳಗೆ ಹಾಕುವಾಗ ಕಲ್ಲು ಗೆರೆಗೆ ತಾಗೆದರೆ ಆಟಗಾರ ಆ ಸುತ್ತಿನಿಂದ ಹೊರ ಉಳಿಯುತ್ತಾನೆ.

ಉಲ್ಲೇಖ

[ಬದಲಾಯಿಸಿ]
  1. ಗಣನಾಥ ಎಕ್ಕಾರು (೨೦೦೦). ತುಳುನಾಡಿನ ಜನಪದ ಆಟಗಳು. ಮಂಗಳೂರು: ಜ್ಞಾನೋದಯ ಪ್ರಕಾಶನ ಬೆಂಗಳೂರು. pp. ೨೪೮-೨೫೫.
  2. http://kanaja.in/?p=103277
  3. http://shodhganga.inflibnet.ac.in/bitstream/10603/131817/5/05_table%20of%20content.pdf


"https://kn.wikipedia.org/w/index.php?title=ಜುಬುಲಿ&oldid=1250660" ಇಂದ ಪಡೆಯಲ್ಪಟ್ಟಿದೆ